ಕನ್ನಡ ಸುದ್ದಿ  /  ಕರ್ನಾಟಕ  /  Highway Toll: ದೊಡ್ಡಬಳ್ಳಾಪುರ- ಹೊಸಕೋಟೆ ನಡುವೆ ಹೆದ್ದಾರಿ ಸಂಚಾರಕ್ಕೆ ಶುಲ್ಕ:ನ.17 ರಿಂದ ಜಾರಿ

Highway Toll: ದೊಡ್ಡಬಳ್ಳಾಪುರ- ಹೊಸಕೋಟೆ ನಡುವೆ ಹೆದ್ದಾರಿ ಸಂಚಾರಕ್ಕೆ ಶುಲ್ಕ:ನ.17 ರಿಂದ ಜಾರಿ

NH Toll ದೊಡ್ಡಬಳ್ಳಾಪುರ( Doddaballapur) ಹೊಸಕೋಟೆ ( Hosakote) ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ( National Highway) ಟೋಲ್‌ ಸಂಗ್ರಹ ಶುರುವಾಗಲಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ-ದೊಡ್ಡಬಳ್ಳಾಪುರ ನಡುವೆ ರಸ್ತೆ ಟೋಲ್‌ ಈ ವಾರವೇ ಶುರುವಾಗಲಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ-ದೊಡ್ಡಬಳ್ಳಾಪುರ ನಡುವೆ ರಸ್ತೆ ಟೋಲ್‌ ಈ ವಾರವೇ ಶುರುವಾಗಲಿದೆ.

ಬೆಂಗಳೂರು: ಇನ್ನು ಮುಂದೆ ದೊಡ್ಡಬಳ್ಳಾಪುರದಿಂದ ಹೊಸಕೋಟೆಗೆ ಸಂಚರಿಸಲು ರಾಷ್ಟ್ರೀಯ ಹೆದ್ದಾರಿ ಬಳಸಿದರೆ ಶುಲ್ಕ ಪಾವತಿಸಬೇಕು.

ಟ್ರೆಂಡಿಂಗ್​ ಸುದ್ದಿ

ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯದ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ( NHAI) ಅಧಿಸೂಚನೆ ಹೊರಡಿಸಿದೆ. ಇದು ನವೆಂಬರ್‌ 17 ರಿಂದ ಜಾರಿಗೆ ಬರಲಿದೆ.

ದೊಡ್ಡಬಳ್ಳಾಪುರ ಬೈಪಾಸ್‌ನಿಂದ ಆರಂಭಗೊಂಡು ಹೊಸಕೋಟೆ ವರೆಗಿನ ನಾಲ್ಕು ಪಥ ರಸ್ತೆಯ 47 ಕಿ.ಮಿ.ನಿಂದ 76.150 ಕಿ.ಮಿ ವರೆಗೆ ಬಳಕೆದಾರರಿಗೆ ನಲ್ಲೂರು ದೇವನಹಳ್ಳಿ ಸುಂಕ ವಸೂಲಾತಿ ಕೇಂದ್ರದಲ್ಲಿ ಶುಲ್ಕ ಸಂಗ್ರಹ ಮಾಡಲಾಗುತ್ತದೆ. ಇದು 2024ರ ಮಾರ್ಚ್‌31 ರವರೆಗೆ ಜಾರಿಯಲ್ಲಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕ ರಾಜ್ಯದ ಎನ್‌ಎಚ್‌ 648ರ ಕಿ.ಮಿ. 34.15 ಕಿ.ಮಿ ಉದ್ದದ ಟೋಲಿಂಗ್‌ ರಸ್ತೆಯನ್ನು ಹೊಂದಿದ್ದು, ಇದಕ್ಕೆ ಶುಲ್ಕ ನಿಗದಿಪಡಿಸಲು ಈಗಾಗಲೇ ಅನುಮೋದನೆ ನೀಡಲಾಗಿದೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.

ಕಾರು, ಜೀಪು, ವ್ಯಾನು, ಲಘು ಮೋಟಾರು ವಾಹನಗಳಿಗೆ ಏಕಮುಖ ಸಂಚಾರಕ್ಕೆ 70 ರೂ. ಹಾಗೂ ಅದೇ ದಿನ ಮರಳಿ ಬಂದರೆ 105 ರೂ. ಪಾವತಿಸಬೇಕು. ಇದೇ ಒಂದೇ ತಿಂಗಳಲ್ಲಿ 50 ಸಂಚರಿಸುವ ಮಾಸಿಕ ಪಾಸ್‌ಗೆ 2375 ರೂ. ನಿಗದಿ ಮಾಡಲಾಗಿದೆ. ಜಿಲ್ಲೆಯ ಒಳಗೆ ನೋಂದಣಿ ಆಗಿರುವ ವಾಣಿಜ್ಯ ವಾನಹಗಳಿಗಾಗಿ ಶುಲ್ಕ 35 ರೂ. ಪಾವತಿಸುವಂತೆ ಸೂಚಿಸಲಾಗಿದೆ.

ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನಗಳು ಹಾಗೂ ಮಿನಿ ಬಸ್‌ಗಳಿಗೆ ಏಕಮುಖ ಸಂಚಾರಕ್ಕೆ 115 ರೂ. ಹಾಗೂ ಅದೇ ದಿನ ಮರಳಿ ಬಂದರೆ 175 ರೂ. ಹಾಗೂ ಮಾಸಿಕ ಪಾಸ್‌ ರೂಪದಲ್ಲಿ3835 ರೂ. ಪಾವತಿಸಬೇಕು.ಜಿಲ್ಲೆಯ ಒಳಗೆ ನೋಂದಣಿ ಆಗಿರುವ ವಾಣಿಜ್ಯ ವಾನಹಗಳಿಗಾಗಿ ಶುಲ್ಕ 60 ರೂ. ಪಾವತಿಸುವಂತೆ ಸೂಚಿಸಲಾಗಿದೆ.

ಬಸ್‌ ಅಥವಾ ಟ್ರಕ್‌ಗಳಿಗೆ ಏಕ ಮುಖ ಸಂಚಾರಕ್ಕೆ 240 ರೂ. ಅದೇ ದಿನ ಮರಳಿ ಬಂದರೆ 360 ರೂ. ಪಾವತಿಸಬೇಕು, ಮಾಸಿಕ 8040 ರೂ. ಪಾವತಿ ಮಾಡಬೇಕು. ಜಿಲ್ಲೆಯ ಒಳಗೆ ನೊಂದಣಿ ಮಾಡಿಸಿಕೊಂಡಿರುವ ವಾಣಿಜ್ಯ ವಾಹನಗಳಿಗೆ120 ರೂ. ನಿಗದಿಪಡಿಸಲಾಗಿದೆ.

ಮೂರು ಆಕ್ಸೆಲ್‌ ವಾಣಿಜ್ಯ ವಾಹನ ಏಕಮುಖ ಸಂಚಾರಕ್ಕೆ 265 ರೂ. ಅದೇ ದಿನ ವಾಪಾಸ್‌ ಬಂದರೆ 360 ರೂ. ಪಾವತಿ ಮಾಡಬೇಕು. ಮಾಸಿಕ ಪಾವತಿಗೆ 8770 ರೂ. ಜಿಲ್ಲೆಯ ಒಳಗೆ ನೋಂದಣಿ ಆಗಿರುವ ವಾಣಿಜ್ಯ ವಾಹನಗಳ ಶುಲ್ಕ 130 ರೂ. ನಿಗದಿಪಡಿಸಿದೆ.

ಭಾರೀ ನಿರ್ಮಾಣದ ಯಂತ್ರಗಳಿಗೆ ಒಂದು ಬಾರಿ ಸಂಚಾರಕ್ಕೆ 380 ರೂ. ಅದೇ ದಿನ ವಾಪಾಸ್‌ಗೆ 565 ರೂ. ಪಾವತಿಸಬೇಕು. ಮಾಸಿಕ 12605 ರೂ. ಹಾಗೂ ಜಿಲ್ಲೆಯ ಒಳಗೆ ನೊಂದಣಿಯಾದ ವಾಹನಗಳಿಗೆ 130 ರೂ. ನಿಗದಿಪಡಿಸಲಾಗಿದೆ.

IPL_Entry_Point