Kalburgi news: ಫ್ಲಾಟ್‌ಫಾರಂ ಅದಲು ಬದಲು: ಕಲಬುರಗಿಯಲ್ಲಿ ಪ್ರಯಾಣಿಕರನ್ನು ಬಿಟ್ಟು ಹೋದ ಹುಬ್ಬಳ್ಳಿ-ಸಿಕಂದರಾಬಾದ್ ಎಕ್ಸ್‌ಪ್ರೆಸ್‌ ರೈಲು!
ಕನ್ನಡ ಸುದ್ದಿ  /  ಕರ್ನಾಟಕ  /  Kalburgi News: ಫ್ಲಾಟ್‌ಫಾರಂ ಅದಲು ಬದಲು: ಕಲಬುರಗಿಯಲ್ಲಿ ಪ್ರಯಾಣಿಕರನ್ನು ಬಿಟ್ಟು ಹೋದ ಹುಬ್ಬಳ್ಳಿ-ಸಿಕಂದರಾಬಾದ್ ಎಕ್ಸ್‌ಪ್ರೆಸ್‌ ರೈಲು!

Kalburgi news: ಫ್ಲಾಟ್‌ಫಾರಂ ಅದಲು ಬದಲು: ಕಲಬುರಗಿಯಲ್ಲಿ ಪ್ರಯಾಣಿಕರನ್ನು ಬಿಟ್ಟು ಹೋದ ಹುಬ್ಬಳ್ಳಿ-ಸಿಕಂದರಾಬಾದ್ ಎಕ್ಸ್‌ಪ್ರೆಸ್‌ ರೈಲು!

ತೆಲಂಗಾಣದ ಸಿಕಂದರಾಬಾದ್ ಗೆ ತೆರಳಲು ಕಲಬುರಗಿ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದ ನೂರಾರು ಪ್ರಯಾಣಿಕರನ್ನು ಹುಬ್ಬಳ್ಳಿ-ಸಿಕಂದರಾಬಾದ್ ಎಕ್ಸ್‌ಪ್ರೆಸ್‌ ರೈಲು ಬಿಟ್ಟು ಹೋಗಿದೆ. ಇದರಿಂದ ಸಿಟ್ಟಿಗೆದ್ದ ಪ್ರಯಾಣಿಕರು ಸ್ಟೇಷನ್ ಮಾಸ್ತರ್‌ ಜತೆ ಜಗಳವಾಡಿ ಮತ್ತೊಂದು ರೈಲಿನಲ್ಲಿ ಕಳುಹಿಸಿ ಕೊಟ್ಟ ಬಳಿಕ ಪ್ರಕರಣ ಸುಖಾಂತ್ಯ ಕಂಡಿದೆ.

ಕಲಬುರಗಿಯಲ್ಲಿ ಫ್ಲಾಟಂಫಾರಂ ಬದಲಾಗಿದ್ದನ್ನು ಸಿಬ್ಬಂದಿ ಪ್ರಕಟಿಸದೇ ಹೈದ್ರಾಬಾದ್‌ಗೆ ಹೋಗಬೇಕಿದ್ದ ಪ್ರಯಾಣಿಕರು ಪರದಾಡಿ ನಂತರ ಪರ್ಯಾಯ ವ್ಯವಸ್ಥೆಯಿಂದ ತೆರಳುವಂತಾಯಿತು.
ಕಲಬುರಗಿಯಲ್ಲಿ ಫ್ಲಾಟಂಫಾರಂ ಬದಲಾಗಿದ್ದನ್ನು ಸಿಬ್ಬಂದಿ ಪ್ರಕಟಿಸದೇ ಹೈದ್ರಾಬಾದ್‌ಗೆ ಹೋಗಬೇಕಿದ್ದ ಪ್ರಯಾಣಿಕರು ಪರದಾಡಿ ನಂತರ ಪರ್ಯಾಯ ವ್ಯವಸ್ಥೆಯಿಂದ ತೆರಳುವಂತಾಯಿತು.

ಕಲಬುರಗಿ: ಕಲಬುರಗಿ ರೈಲು ನಿಲ್ದಾಣದ ಸಿಬ್ಬಂದಿಗಳ ಅಚ್ಛಾತುರ್ಯದಿಂದಾಗಿ ಕಲ್ಬುರ್ಗಿಯಿಂದ ಹೈದರಾಬಾದಿಗೆ ತೆರಳಬೇಕಾಗಿದ್ದ ಹಲವಾರು ಪ್ರಯಾಣಿಕರು ರೈಲು ಸಿಗದೇ ಪರದಾಟ ಅನುಭವಿಸಿದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

ತೆಲಂಗಾಣದ ಸಿಕಂದರಾಬಾದ್ ಗೆ ತೆರಳಲು ಇಲ್ಲಿನ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದ ನೂರಾರು ಪ್ರಯಾಣಿಕರನ್ನು ಹುಬ್ಬಳ್ಳಿ-ಸಿಕಂದರಾಬಾದ್ ಎಕ್ಸ್‌ಪ್ರೆಸ್‌ ರೈಲು ಬಿಟ್ಟು ಹೋಗಿದೆ. ಇದರಿಂದ ಸಿಟ್ಟಿಗೆದ್ದ ಪ್ರಯಾಣಿಕರು ಸ್ಟೇಷನ್ ಮಾಸ್ತರ ಜತೆ ಜಗಳವಾಡಿ ಮತ್ತೊಂದು ರೈಲಿನಲ್ಲಿ ಕಳುಹಿಸಿ ಕೊಟ್ಟ ಬಳಿಕ ಪ್ರಕರಣ ಸುಖಾಂತ್ಯ ಕಂಡಿದೆ.

ಸಿಬ್ಬಂದಿ ಯಡವಟ್ಟು

ಹುಬ್ಬಳ್ಳಿಯಿಂದ ಶನಿವಾರ ರಾತ್ರಿ 9ಕ್ಕೆ ಹೊರಟಿದ್ದ ರೈಲು ಭಾನುವಾರ ‌ಬೆಳಿಗ್ಗೆ 6.15ಕ್ಕೆ ಕಲಬುರಗಿ ನಿಲ್ದಾಣಕ್ಕೆ ಬರಬೇಕಿತ್ತು. ರೈಲು ಬರಲಿದೆ ಎಂದು ಪ್ರಯಾಣಿಕರು ಪ್ಲಾಟ್ ಫಾರಂ ಸಂಖ್ಯೆ 1ರಲ್ಲಿ ಕಾಯುತ್ತಿದ್ದರು. ಆದರೆ ರೈಲು ನಿಲ್ದಾಣದ ಸಿಬ್ಬಂದಿ ರೈಲು ಯಾವ ಪ್ಲಾಟ್ ಫಾರ್ಮನಲ್ಲಿ ಬರುತ್ತದೆ ಎನ್ನುವ ಮಾಹಿತಿ ನೀಡಿರಲಿಲ್ಲ.

ಹೈದ್ರಾಬಾದಿಗೆ ಪ್ರಯಾಣಿಸುವ ಪ್ರಯಾಣಿಕರು ನಂ. 1ರಲ್ಲಿ ನಿಂತಿದ್ದರು. ಆದರೆ, ಸಮಯಕ್ಕೆ ಸರಿಯಾಗಿ ಬಂದ ರೈಲು ಮತ್ತೊಂದು ಪ್ಲಾಟ್ ಫಾರಂನಲ್ಲಿ ನಿಂತು ತೆರಳಿದೆ. ಇದರಿಂದಾಗಿ ಮುಂಗಡ ಟಿಕೆಟ್ ಬುಕ್ ಮಾಡಿ ಕಾಯುತ್ತಿದ್ದ ನಿಂತಿದ್ದ ಪ್ರಯಾಣಿಕರಿಗೆ ಸಿಟ್ಟು ಬಂದಿದೆ. ಕೊನೆಗೆ ಪ್ರಯಾಣಿಕರು ರೈಲ್ವೆ ಸ್ಟೇಷನ್ ಮ್ಯಾನೇಜರ್ ಕಚೇರಿಗೆ ತೆರಳಿ ವಾಗ್ವಾದ ನಡೆಸಿದರು.

ಪ್ರಯಾಣಿಕ ರೆಹಮಾನ್ ಪಟೇಲ್ ಹೇಳುವಂತೆ, ರೈಲು ಬೆಳಿಗ್ಗೆ 6.32ಕ್ಕೆ ಬರಲಿದೆ ಎಂದು ಫಲಕದಲ್ಲಿ ತೋರಿಸುತ್ತಿತ್ತು. ಆದರೆ, ಎಷ್ಟು ಹೊತ್ತಾದರೂ ಬರಲಿಲ್ಲ. ಆ ಮೇಲೆ ರೈಲ್ವೆ ‌ಸಿಬ್ಬಂದಿ ನಂತರ ಬಂದ ಹುಸೇನ್ ಸಾಗರ್ ರೈಲಿನ ಬಗ್ಗೆ ಮಾಹಿತಿ ಅನೌನ್ಸ್ ಮಾಡಿದ ಬಳಿಕವಷ್ಟೇ ನಮ್ಮ ರೈಲು ಹೋಗಿರುವುದು ಗೊತ್ತಾಯಿತು. ಸುಮಾರು 60 ಜನ ಹುಬ್ಬಳ್ಳಿ-ಸಿಕಂದರಾಬಾದ್ ರೈಲಿನಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಿದ್ದರು. ಸಕಾಲಕ್ಕೆ ಮೈಕ್ ನಲ್ಲಿ ಮಾಹಿತಿ ನೀಡದೇ ಇದ್ದುದರಿಂದ ಈ ಅಚಾತುರ್ಯ ಸಂಭವಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪರ್ಯಾಯ ವ್ಯವಸ್ಥೆ

ಈ ವಿಷಯ ಸ್ಟೇಷನ್ ಮಾಸ್ತರ್ ಪಿ.ಎ. ನರಗುಂದಕರ್,ಗೆ ತಿಳಿದಾಗ ವಿಷಾದ ವ್ಯಕ್ತಪಡಿಸಿ, ಎಲ್ಲ ಪ್ರಯಾಣಿಕರನ್ನು ಹುಸೇನ್ ಸಾಗರ್ ರೈಲಿನಲ್ಲಿ ಕಳುಹಿಸಿಕೊಟ್ಟರು‌. ಇದರಿಂದ ಮೂರು ಗಂಟೆ ಪ್ರಯಾಣ ವಿಳಂಬವಾಯಿತು.

(ವರದಿ: ಎಸ್.ಬಿ.ರೆಡ್ಡಿ ಕಲಬುರಗಿ)

Whats_app_banner