ಕನ್ನಡ ಸುದ್ದಿ  /  ಕರ್ನಾಟಕ  /  Forcible Religious Conversions: ಬಲವಂತದ ಧಾರ್ಮಿಕ ಮತಾಂತರ ದಾವೆಗಳ ವಿಚಾರಣೆಗೆ ಪಂಚ ಸದಸ್ಯ ಪೀಠ ರಚನೆ ಆಗ್ರಹಿಸಿ ಮನವಿ; ಸೋಮವಾರ ವಿಚಾರಣೆ

Forcible religious conversions: ಬಲವಂತದ ಧಾರ್ಮಿಕ ಮತಾಂತರ ದಾವೆಗಳ ವಿಚಾರಣೆಗೆ ಪಂಚ ಸದಸ್ಯ ಪೀಠ ರಚನೆ ಆಗ್ರಹಿಸಿ ಮನವಿ; ಸೋಮವಾರ ವಿಚಾರಣೆ

Forcible religious conversions: ಬಲವಂತದ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಾಳೆ (ಸೋಮವಾರ) ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ನೇತೃತ್ವದ ತ್ರಿಸದಸ್ಯ ಪೀಠ ಕೈಗೆತ್ತಿಕೊಳ್ಳಲಿದೆ. ಅರ್ಜಿದಾರರ ಪೈಕಿ ಒಬ್ಬರಾದ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಹೊಸ ಅರ್ಜಿಯನ್ನು ಸಲ್ಲಿಸಿದ್ದು, ಹೊಸ ಪೀಠ ರಚನೆಗೆ ಮನವಿ ಮಾಡಿದ್ದಾರೆ.

ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌

ನವದೆಹಲಿ: ಬಲವಂತದ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ವಿಷಯಗಳು ಸಂವಿಧಾನದ ವ್ಯಾಖ್ಯಾನವನ್ನು ಒಳಗೊಂಡಿರುವ ಕಾರಣ ಐವರು ನ್ಯಾಯಮೂರ್ತಿಗಳ ವಿಸ್ತೃತ ಪೀಠದಿಂದ ಈ ದಾವೆಗಳ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿ ಸುಪ್ರೀಂ ಕೋರ್ಟ್‌ಗೆ ಹೊಸ ಅರ್ಜಿ ಸಲ್ಲಿಕೆಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಬಲವಂತದ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಾಳೆ (ಸೋಮವಾರ) ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ನೇತೃತ್ವದ ತ್ರಿಸದಸ್ಯ ಪೀಠ ಕೈಗೆತ್ತಿಕೊಳ್ಳಲಿದೆ. ಅಂತರ್‌ಧರ್ಮೀಯ ವಿವಾಹಗಳಿಂದಾಗಿ ಧಾರ್ಮಿಕ ಮತಾಂತರವನ್ನು ನಿಯಂತ್ರಿಸುವ ಹಲವಾರು ರಾಜ್ಯಗಳ ಮತಾಂತರ ವಿರೋಧಿ ಕಾನೂನುಗಳ ವಿರುದ್ಧ ದಾವೆಗಳೂ ಇದರಲ್ಲಿ ಒಳಗೊಂಡಿವೆ.

ಅರ್ಜಿದಾರರ ಪೈಕಿ ಒಬ್ಬರಾದ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಹೊಸ ಅರ್ಜಿಯನ್ನು ಸಲ್ಲಿಸಿದ್ದಾರೆ. ಸಂವಿಧಾನದ ವ್ಯಾಖ್ಯಾನದ ಅಗತ್ಯವಿರುವ ಕಾನೂನುಗಳ ಹಲವಾರು ಪ್ರಶ್ನೆಗಳಿರುವ ಕಾರಣ ಅರ್ಜಿಗಳನ್ನು ದೊಡ್ಡ ಪೀಠಕ್ಕೆ ವರ್ಗಾಯಿಸಬೇಕು ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಸಂವಿಧಾನದ ಪರಿಚ್ಛೇದ 25 (1) ಅನ್ನು ವ್ಯಾಖ್ಯಾನಿಸುವ ಈ ನ್ಯಾಯಾಲಯದ ಹಿಂದಿನ ತೀರ್ಪುಗಳು "ಪ್ರೊಪಗೇಟ್‌" ಎಂಬ ಪದವನ್ನು ಎತ್ತಿಹಿಡಿದಿರುವುದರಿಂದ ಮತಾಂತರಗೊಳ್ಳುವ ಅರ್ಹತೆಯನ್ನು ಒಳಗೊಂಡಿರುತ್ತದೆಯೇ ಎಂಬ ಪ್ರಶ್ನೆಗಳನ್ನು ಅವರು ಎತ್ತಿದ್ದಾರೆ.

ಧಾರ್ಮಿಕ ಸಮುದಾಯಗಳು ಇತರ ಧಾರ್ಮಿಕ ಸಮುದಾಯಗಳ ದುರ್ಬಲ ವರ್ಗವನ್ನು ಪರಿವರ್ತಿಸಲು ಪ್ರಯತ್ನಿಸುತ್ತಿರುವ ಕಾರಣ ಮತ್ತು "ಒಂಬತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ (ಲಡಾಖ್, ಲಕ್ಷದ್ವೀಪ, ಕಾಶ್ಮೀರ, ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯಮಣಿಪುರ, ಸಿಕ್ಕಿಂ, ಅರುಣಾಚಲ ಪ್ರದೇಶ) ಮತ್ತು ಭಾರತದ ಸುಮಾರು 200 ಜಿಲ್ಲೆಗಳು ಸಾಕ್ಷಿಯಾಗಿರುವಂತೆ ಜನಸಂಖ್ಯಾ ಬದಲಾವಣೆಗಳನ್ನು ಮಾಡಲು ಪ್ರಯತ್ನಿಸುತ್ತಿರುವ ಕಾರಣ ಇದು ಕೋಮು ಸಂಘರ್ಷಕ್ಕೆ ಕಾರಣವಾಗಬಾರದು" ಎಂದು ಅರ್ಜಿಯಲ್ಲಿ ಹೇಳಲಾಗಿದೆ.

"ಪ್ರೊಪಗೇಟ್‌"ಎಂಬ ಪದವನ್ನು ಭ್ರಾತೃತ್ವ, ಏಕತೆ, ಘನತೆ ಮತ್ತು ರಾಷ್ಟ್ರೀಯ ಏಕತೆಗೆ ಹಾನಿಯಾಗದ ರೀತಿಯಲ್ಲಿ ಅರ್ಥೈಸಬೇಕೇ ...," ಎಂಬುದು ಉಪಾಧ್ಯಾಯ ಅವರ ತಾಜಾ ಮನವಿ.

ಇನ್ನೊಂದು ಅರ್ಜಿಯಲ್ಲಿ ಉಪಾಧ್ಯಾಯ ಅವರು, ಜನವರಿ 9 ರ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿದ್ದಾರೆ. ಇದರಲ್ಲಿ ಸುಪ್ರೀಂ ಕೋರ್ಟ್ ಈ ವಿಷಯವನ್ನು ಮೂಲ ಶೀರ್ಷಿಕೆಗೆ "ಇನ್ ರಿ: ದಿ ಇಶ್ಯೂ ಆಫ್ ರಿಲಿಜಿಯಸ್ ಕನ್ವರ್ಶನ್" ಶೀರ್ಷಿಕೆಯಡಿಯಲ್ಲಿ ಪಟ್ಟಿ ಮಾಡುವಂತೆ ಸೂಚಿಸಿತ್ತು.

ಜನವರಿ 16 ರಂದು, ಹಲವಾರು ರಾಜ್ಯಗಳ ಮತಾಂತರ ವಿರೋಧಿ ಕಾನೂನುಗಳನ್ನು ಪ್ರಶ್ನಿಸುವ ಕಕ್ಷಿದಾರರಿಗೆ ಈ ವಿಷಯದ ಮೇಲಿನ ಪ್ರಕರಣಗಳನ್ನು ವಿವಿಧ ಹೈಕೋರ್ಟ್‌ಗಳಿಂದ ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಲು ಸಾಮಾನ್ಯ ಅರ್ಜಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಕೇಳಿಕೊಂಡಿತು.

ಒಬ್ಬ ಕಕ್ಷಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಗೆ ಎಲ್ಲ ಅರ್ಜಿಗಳನ್ನು ಹೈಕೋರ್ಟ್‌ಗಳಿಂದ ಉನ್ನತ ನ್ಯಾಯಾಲಯಕ್ಕೆ ವರ್ಗಾಯಿಸಲು ಸಾಮಾನ್ಯ ಅರ್ಜಿಯನ್ನು ಸಲ್ಲಿಸುವಂತೆ ಅದು ಸೂಚಿಸಿತ್ತು.

ಉಪಾಧ್ಯಾಯ ಅವರು ಸಲ್ಲಿಸಿದ ಅರ್ಜಿಗಳಲ್ಲಿ ಪೈಕಿ ಒಂದರಲ್ಲಿ ಕ್ರೈಸ್ತರು ಮತ್ತು ಮುಸ್ಲಿಮರ ಅವಹೇಳನವಿದೆ ಎಂದು ಹಿರಿಯ ವಕೀಲ ದುಷ್ಯಂತ್ ದವೆ ಸಲ್ಲಿಸಿದ್ದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ ಮತ್ತು ಉಪಾಧ್ಯಾಯ ಪರವಾಗಿ ಹಾಜರಾದ ಹಿರಿಯ ವಕೀಲ ಅರವಿಂದ್ ದಾತಾರ್ ಅವುಗಳನ್ನು ("ಆಕ್ಷೇಪಾರ್ಹ ಭಾಗಗಳು") ಅಳಿಸಲು ಔಪಚಾರಿಕ ಮನವಿಯನ್ನು ಸಲ್ಲಿಸುವಂತೆ ಕೇಳಿದೆ. ಆದಾಗ್ಯೂ, ಅವರು ಆಪಾದಿತ ವಿಷಯಗಳಿಗೆ ಆದ್ಯತೆ ನೀಡುತ್ತಿಲ್ಲ ಎಂದು ದಾತಾರ್ ಸ್ಪಷ್ಟಪಡಿಸಲು ಪ್ರಯತ್ನಿಸಿದ್ದರು.

ಆಪಾದಿತ "ಬಲವಂತದ ಧಾರ್ಮಿಕ ಮತಾಂತರಗಳ" ವಿರುದ್ಧ ಉಪಾಧ್ಯಾಯ ಸಲ್ಲಿಸಿದ ಮನವಿಯನ್ನು ಇತ್ತೀಚೆಗೆ ಸಿಜೆಐ ನೇತೃತ್ವದ ಪೀಠಕ್ಕೆ ವರ್ಗಾಯಿಸುವ ಮೊದಲು ನ್ಯಾಯಮೂರ್ತಿ ಎಂಆರ್ ಶಾ ನೇತೃತ್ವದ ಮತ್ತೊಂದು ಪೀಠವು ಈ ಹಿಂದೆ ವಿಚಾರಣೆ ನಡೆಸುತ್ತಿತ್ತು.

IPL_Entry_Point