ಕನ್ನಡ ಸುದ್ದಿ  /  Karnataka  /  Horticulture Training 10 Months Horticulture Training For Farmers And Farmers' Children In Bangalore Details Here

Horticulture Training: ಬೆಂಗಳೂರಲ್ಲಿ ರೈತರಿಗೆ, ರೈತರ ಮಕ್ಕಳಿಗಾಗಿ 10 ತಿಂಗಳ ತೋಟಗಾರಿಕೆ ತರಬೇತಿ; ಯಾವಾಗ - ಎಲ್ಲಿ? ಅರ್ಹತೆ, ಮಾನದಂಡ ಏನು

Horticulture Training: ತೋಟಗಾರಿಕೆಯಲ್ಲಿ ಆಸಕ್ತಿ ಇದೆಯೇ? ತೋಟಗಾರಿಕಾ ಪ್ರಾಯೋಗಿಕ ತರಬೇತಿ ಪಡೆಯುವುದಕ್ಕೆ ಅವಕಾಶ ಇರುವಂತಹ 10 ತಿಂಗಳ ತೋಟಗಾರಿಕೆ ತರಬೇತಿ ಬೆಂಗಳೂರಿನ ತೋಟಗಾರಿಕಾ ಕೇಂದ್ರದಲ್ಲಿ ಮೇ ತಿಂಗಳಿಂದ ಶುರುವಾಗುತ್ತಿದೆ. ಇದರ ವಿವರ ಇಲ್ಲಿದೆ.

ತೋಟಗಾರಿಕೆ (ಸಾಂಕೇತಿಕ ಚಿತ್ರ)
ತೋಟಗಾರಿಕೆ (ಸಾಂಕೇತಿಕ ಚಿತ್ರ) (unsplash)

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಲಾಲ್‍ಬಾಗ್‍ನ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಮೇ 2ರಿಂದ 2024ರ ಫೆಬ್ರವರಿ 29ರ ತನಕ ನಡೆಯಲಿರುವ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ತೋಟಗಾರಿಕೆ ಕೇಂದ್ರ ಆಹ್ವಾನಿಸಿದೆ.

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿನ ಅರ್ಹ ಅಭ್ಯರ್ಥಿಗಳು ಈ ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 1,750 ರೂಪಾಯಿ ಶಿಷ್ಯ ವೇತನ (ಮಾಜಿ ಸೈನಿಕರನ್ನು ಹೊರತುಪಡಿಸಿ) ಸಿಗಲಿದೆ.

ಅರ್ಹತೆ ಮತ್ತು ವಯೋಮಿತಿ

ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕನ್ನಡ ವಿಷಯದೊಂದಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 33 ವರ್ಷ, ಮಾಜಿ ಸೈನಿಕರಿಗೆ 33 ರಿಂದ ಗರಿಷ್ಠ 65 ವರ್ಷ ಇತರರಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ವಯೋಮಿತಿ ಇರುತ್ತದೆ.

ಈ ತರಬೇತಿಯು ರೈತರ ಮಕ್ಕಳಿಗಾಗಿ ಇರುವುದರಿಂದ ಅಭ್ಯರ್ಥಿಯ ತಂದೆ ಅಥವಾ ಪಾಲಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು. ಈ ಬಗ್ಗೆ ಪಹಣಿ ನೀಡುವುದು ಕಡ್ಡಾಯ. ಮಾಜಿ ಸೈನಿಕರು ಪ್ರವೇಶ ಪಡೆಯಲು ಇಚ್ಛಿಸಿದಲ್ಲಿ ಮೇಲೆ ತಿಳಿಸಿದ ವಿವರಗಳೊಂದಿಗೆ ಇತರೆ ದಾಖಲೆಗಳಾದ ಡಿಸ್‌ಚಾರ್ಜ್‌ ಬುಕ್‌ ಕಾಪಿ, ಪರ್ಸನಲ್‌ ಪೆನ್ಶನ್‌ ಆರ್ಡರ್‌ ಕಾಪಿ, ಎಕ್ಸ್‌ ಸರ್ವೀಸ್‌ಮ್ಯಾನ್‌ ಐಡಿ ಕಾರ್ಡ್‌ ಕಾಪಿಗಳನ್ನು ಸಲ್ಲಿಸಬೇಕು.

ಅಭ್ಯರ್ಥಿಗಳು ತೋಟದ ಕೆಲಸಗಳನ್ನು ಮಾಡುವಷ್ಟು ದೃಢಕಾಯರಾಗಿರಬೇಕು. ತರಬೇತಿಗೆ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ 2 ಡೋಸ್ ಕೋವಿಡ್ ಲಸಿಕೆಯನ್ನು ಪಡೆದಿರುವ ಬಗ್ಗೆ ಪ್ರಮಾಣ ಪತ್ರವನ್ನು ಸಲ್ಲಿಸುವುದು.

ಅರ್ಜಿ ಪಡೆಯುವುದು ಎಲ್ಲಿ- ಸಲ್ಲಿಸಬೇಕಾದ್ದು ಎಲ್ಲಿ?

ಅರ್ಜಿಗಳನ್ನು ಆಯಾ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) / ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ) ರವರ ಕಚೇರಿಯಲ್ಲಿ ಅಥವಾ ಇಲಾಖೆಯ ವೆಬ್‌ಸೈಟ್ https://horticulture dir.karnataka.gov.in ನಲ್ಲಿ ಮಾಚ್ 23ರಿಂದ ಏಪ್ರಿಲ್ 12 ರ ವರೆಗೆ ಪಡೆಯಬಹುದು.

ಸಾಮಾನ್ಯ ಅಭ್ಯರ್ಥಿಗಳಿಗೆ 30 ರೂಪಾಯಿ ಮತ್ತು ಮಾಜಿ ಸೈನಿಕರು/ಪರಿಶಿಷ್ಟ ಜಾತಿ / ಪಂಗಡದ ಅಭ್ಯರ್ಥಿಗಳಿಗೆ 15 ರೂಪಾಯಿ ಮೌಲ್ಯದ ಇಂಡಿಯನ್ ಪೋಸ್ಟಲ್ ಆರ್ಡರ್ (IPO) / ಡಿಮ್ಯಾಂಡ್ ಡ್ರಾಫ್ಟ್ (DD)‌ ಅನ್ನು ಆಯಾ ಜಿಲ್ಲೆಗಳ ತೋಟಗಾರಿಕೆ ಉಪ ನಿರ್ದೇಶಕರು (ಜಿಲ್ಲಾ ಪಂಚಾಯತ್) ಇವರ ಹೆಸರಿನಲ್ಲಿ ಪಡೆದು, ಅರ್ಜಿ ಜತೆಗೆ ಲಗತ್ತಿಸಬೇಕು. ಅಭ್ಯರ್ಥಿಗಳನ್ನು ಏಪ್ರಿಲ್ 15 ರಂದು ಸಂದರ್ಶನದ ಮುಖಾಂತರ ಆಯ್ಕೆ ಮಾಡಲಾಗುವುದು.

ಭರ್ತಿ ಮಾಡಿದ ಅರ್ಜಿಗಳನ್ನು ಸಂಬಂಧಿಸಿದ ದಾಖಲಾತಿಗಳೊಂದಿಗೆ ಏಪ್ರಿಲ್ 12 ಸಂಜೆ 5.00 ಗಂಟೆಯೊಳಗೆ ಆಯಾ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) / ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ) ರವರ ಕಚೇರಿಯಲ್ಲಿ ಸಲ್ಲಿಸಬೇಕು.

ಗಮನಿಸಬೇಕಾದ ದಿನಾಂಕಗಳು

ತೋಟಗಾರಿಕೆ ತರಬೇತಿ ಅವಧಿ 10 ತಿಂಗಳು

02.05.2023ರಿಂದ 29.02.2024

ಅರ್ಜಿ ಪಡೆಯಬಹುದಾದ ಅವಧಿ

23.03.2023 ರಿಂದ 12.04.2023

ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ

12.04.2023 ಸಂಜೆ 5 ಗಂಟೆ ಒಳಗೆ

ನೇರ ಸಂದರ್ಶನ

15.04.2023

ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) / ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಅಥವಾ ತೋಟಗಾರಿಕೆ ತರಬೇತಿ ಕೇಂದ್ರ, ಲಾಲ್ ಬಾಗ್, ಬೆಂಗಳೂರು, ದೂರವಾಣಿ ಸಂಖ್ಯೆ 080-22240444 / 9741560256/8197792966 ಸಂಪರ್ಕಿಸಬಹುದು.

IPL_Entry_Point