ಕರ್ನಾಟಕದಲ್ಲಿ 2025 ರ ರಜೆಗಳು: 2025ರ ಸಾರ್ವತ್ರಿಕ, ಪರಿಮಿತ ರಜಾ ದಿನಗಳ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ; ಮುಂದಿನ ವರ್ಷ 19 ಸರ್ಕಾರಿ ರಜೆ
ಕರ್ನಾಟಕದಲ್ಲಿ 2025 ರ ರಜೆಗಳು: 2025ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದ ಬಳಿಕ 2025ರಲ್ಲಿ 19 ಸಾರ್ವತ್ರಿಕ ರಜಾ ದಿನಗಳ ಇರಲಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಕರ್ನಾಟಕದಲ್ಲಿ 2025 ರ ರಜೆಗಳು: ಹೊಸ ವರ್ಷ ಆರಂಭಕ್ಕೆ ಇನ್ನ ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ ಕರ್ನಾಟಕ ಸರ್ಕಾರ 2025ನೇ ಸಾಲಿನ ಸರ್ಕಾರಿ ರಜೆಗಳ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಗುರುವಾರ (ನವೆಂಬರ್ 14) ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆಯ ನಂತರ 2025ರ ಸಾರ್ವತ್ರಿಕ ಮತ್ತು ಪರಿಮಿತ ರಜೆಗಳ ಪಟ್ಟಿ ಬಿಡುಗಡೆ ಮಾಡಿದೆ. ಒಟ್ಟು 19 ಸಾರ್ವತ್ರಿಕ ರಜೆಗಳು ಹಾಗೂ 20 ಪರಿಮಿತ ರಜೆಗಳಿವೆ.
ಭಾನುವಾರಗಳಂದು ಕೆಲವು ಪ್ರಮುಖ ರಾಷ್ಟ್ರೀಯ ಹಾಗೂ ಧಾರ್ಮಿಕ ಹಬ್ಬಗಳಿವೆ. ಬರುವ ಜನವರಿ 26ರ ಗಣರಾಜ್ಯೋತ್ಸವ, ಮಾರ್ಚ್ 30ರ ಯುಗಾದಿ, ಜುಲೈ 6ರ ಮೊಹರಂ ಹಾಗೂ ನವೆಂಬರ್ 8ರಂದು ಕನಕದಾಸ ಜಯಂತಿ ಬಂದಿದೆ. ಇನ್ನೂ ಪರಿಮಿತ ರಜೆಗಳ ಪೈಕಿ ಕೆಲವು ಭಾನುವಾರ ಬಂದಿವೆ. ಏಪ್ರಿಲ್ 6 ರಂದು ರಾಮನವಮಿ, ಸೆಪ್ಟೆಂಬರ್ 7 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಆಗಸ್ಟ್ 8ರ ಋಗ್ ಉಪಾಕರ್ಮ ಮತ್ತು ಯಜುರ್ ಉಪಾಕರ್ಮ ಎರಡನೇ ಶನಿವಾರ ಬಂದಿದೆ.
ಸಾರ್ವತ್ರಿಕ ರಜಾ ದಿನಗಳು
- ಜನವರಿ 14: ಮಕರ ಸಂಕ್ರಾಂತಿ
- ಫೆಬ್ರವರಿ 28: ಮಹಾ ಶಿವರಾತ್ರಿ
- ಮಾರ್ಚ್ 31: ರಂಜಾನ್
- ಏಪ್ರಿಲ್ 10: ಮಹಾವೀರ ಜಯಂತಿ
- ಏಪ್ರಿಲ್ 14: ಡಾ ಬಿಆರ್ ಅಂಬೇಡ್ಕರ್ ಜಯಂತಿ
- ಏಪ್ರಿಲ್ 18: ಗುಡ್ ಫ್ರೈಡೇ
- ಏಪ್ರಿಲ್ 30: ಬಸವ ಜಯಂತಿ
- ಮೇ 1: ಕಾರ್ಮಿಕರ ದಿನಾಚರಣೆ
- ಮೇ 7: ಬಕ್ರೀದ್
- ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ
- ಆಗಸ್ಟ್ 27: ವರಸಿದ್ಧಿ ವಿನಾಯಕ ವ್ರತ
- ಸೆಪ್ಟೆಂಬರ್ 5: ಈದ್ ಮಿಲಾದ್
- ಅಕ್ಟೋಬರ್ 1: ಮಹಾನವಮಿ, ಆಯುಧ ಪೂಜೆ, ವಿಜಯದಶಮಿ
- ಅಕ್ಟೋಬರ್ 2: ಗಾಂಧಿ ಜಯಂತಿ
- ಅಕ್ಟೋಬರ್ 7: ವರ್ಷಮಿ ವಾಲ್ಮೀಕಿ ಜಯಂತಿ
- ಅಕ್ಟೋಬರ್ 20: ನರಕ ಚತುರ್ದಶಿ
- ಅಕ್ಟೋಬರ್ 22: ಬಲಿಪಾಡ್ಯಮಿ, ದೀಪಾವಳಿ
- ನವೆಂಬರ್ 1: ಕನ್ನಡ ರಾಜ್ಯೋತ್ಸವ
- ಡಿಸೆಂಬರ್ 25: ಕ್ರಿಸ್ ಮಸ್
ಪರಿಮಿತ ರಜೆಗಳು
- ಜನವರಿ 1: ಹೊಸ ವರ್ಷಾರಂಭ
- ಫೆಬ್ರವರಿ 6: ಮಧ್ವ ನವಮಿ
- ಫೆಬ್ರವರಿ 14: ಶಬ್ ಎ ಬರಾತ್
- ಮಾರ್ಚ್ 13 ಹೋಳಿ ಹಬ್ಬ
- ಮಾರ್ಚ್ 27 ಶಬ್ ಎ ಖದರ್
- ಮಾರ್ಚ್ 28 ಜುಮತ್ ಉಲ್ ವಿದಾ
- ಏಪ್ರಿಲ್ 2 ದೇವರ ದಾಸಿಮಯ್ಯ ಜಯಂತಿ
- ಏಪ್ರಿಲ್ 19 ಹೋಲಿ ಸ್ಯಾಟರ್ ಡೇ
- ಮೇ 2 ಶಂಕರಾಚಾರ್ಯ ಮತ್ತು ರಾಮಾನುಜಾಚಾರ್ಯ ಜಯಂತಿ
- ಮೇ 12 ಬುದ್ಧ ಪೂರ್ಣಿಮಾ
- ಆಗಸ್ಟ್ 8 ವರಮಹಾಲಕ್ಷ್ಮಿ ವ್ರತ
- ಆಗಸ್ಟ್ 16 ಶ್ರೀಕೃಷ್ಣ ಜನ್ಮಾಷ್ಟಮಿ
- ಆಗಸ್ಟ್ 26 ಸ್ವರ್ಣಗೌರಿ ವ್ರತ
- ಸೆಪ್ಟೆಂಬರ್ 6 ಅನಂತಪದ್ಮನಾಭ ವ್ರತ
- ಸೆಪ್ಟೆಂಬರ್ 8 ಕನ್ಯಾ ಮರಿಯಂ ಜಯಂತಿ
- ಸೆಪ್ಟೆಂಬರ್ 17 ವಿಶ್ವಕರ್ಮ ಜಯಂತಿ
- ಆಕ್ಟೋಬರ್ 18 ತುಲಾ ಸಂಕ್ರಮಣ
- ನವೆಂಬರ್ 5 ಗುರುನಾನಕ್ ಜಯಂತಿ
- ಡಿಸೆಂಬರ್ 5 ಹುತ್ತರಿ ಹಬ್ಬ
- ಡಿಸೆಂಬರ್ 24 ಕ್ರಿಸ್ ಮಸ್ ಈವ್
ಭಾನುವಾರ ಬರುವ ಹಬ್ಬಗಳನ್ನು ಪಟ್ಟಿಯಲ್ಲಿ ಸೇರಿಸಿಲ್ಲ. ಏಪ್ರಿಲ್ 6 ರಂದು ರಾಮನವಮಿ, ಸೆಪ್ಟೆಂಬರ್ 7 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಆಗಸ್ಟ್ 8ರ ಋಗ್ ಉಪಾಕರ್ಮ ಮತ್ತು ಯಜುರ್ ಉಪಾಕರ್ಮ ಎರಡನೇ ಶನಿವಾರ ಬಂದಿದೆ. ಕರ್ನಾಟಕ ಸರ್ಕಾರ ಘೋಷಿಸಿರುವ 2025ರ ಸಾಲಿನ ಅಧಿಕೃತ ರಜಾ ಪಟ್ಟಿ ಇದಾಗಿದೆ. ಗುರುವಾರ (ನವೆಂಬರ್ 14) ನಡೆದ ಸಚಿವ ಸಂಪುಟದ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದರು.
ವಿಭಾಗ