HD Kumaraswamy: ನಿಮ್ಮಿಂದಲೇ ನಾವು ಉಳಿಯೋಕೆ ಸಾಧ್ಯ ಎಂದು ರೈತರು ಹೇಳುತ್ತಿದ್ದಾರೆ, ಈ ಬಾರಿ ನಾನೇ ಮುಖ್ಯಮಂತ್ರಿ; ಹೆಚ್‌ ಡಿ ಕುಮಾರಸ್ವಾಮಿ
ಕನ್ನಡ ಸುದ್ದಿ  /  ಕರ್ನಾಟಕ  /  Hd Kumaraswamy: ನಿಮ್ಮಿಂದಲೇ ನಾವು ಉಳಿಯೋಕೆ ಸಾಧ್ಯ ಎಂದು ರೈತರು ಹೇಳುತ್ತಿದ್ದಾರೆ, ಈ ಬಾರಿ ನಾನೇ ಮುಖ್ಯಮಂತ್ರಿ; ಹೆಚ್‌ ಡಿ ಕುಮಾರಸ್ವಾಮಿ

HD Kumaraswamy: ನಿಮ್ಮಿಂದಲೇ ನಾವು ಉಳಿಯೋಕೆ ಸಾಧ್ಯ ಎಂದು ರೈತರು ಹೇಳುತ್ತಿದ್ದಾರೆ, ಈ ಬಾರಿ ನಾನೇ ಮುಖ್ಯಮಂತ್ರಿ; ಹೆಚ್‌ ಡಿ ಕುಮಾರಸ್ವಾಮಿ

ನನ್ನನ್ನು ಬಿಟ್ಟು ಬೇರೆ ಯಾರೂ ಮುಖ್ಯಮಂತ್ರಿ ಆಗುವುದಿಲ್ಲ. ಇದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಏಕೆಂದರೆ ಈ ನಾಡಿನಲ್ಲಿ ದೇವರ ಆಶೀರ್ವಾದ, ಗುರುಹಿರಿಯರ ಆಶೀರ್ವಾದ ಜನತಾ ದಳದ ಮೇಲಿದೆ.

ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ

ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಭ್ಯರ್ಥಿಗಳ ಮತಬೇಟೆಯೂ ಜೋರಾಗಿದೆ. ರಾಜಕೀಯ ನಾಯಕರು, ಅಭ್ಯರ್ಥಿಗಳು ಎಲ್ಲಾ ಜಿಲ್ಲೆಗಳಿಗೂ ತೆರಳಿ ರೋಡ್‌ ಶೋ ನಡೆಸುತ್ತಿದ್ದಾರೆ. ಈ ನಡುವೆ ಮಾಜಿ ಸಿಎಂ ಕುಮಾರಸ್ವಾಮಿ, ಈ ಬಾರಿ ಮುಖ್ಯಮಂತ್ರಿ ಆಗೋದು ನಾನೇ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಬುಧವಾರ ಮಾಜಿ ಸಿಎಂ ಹೆಚ್‌. ಡಿ. ಕುಮಾರಸ್ವಾಮಿ ತಮ್ಮ ಬೆಂಬಲಿಗರೊಂದಿಗೆ ಶಿವಮೊಗ್ಗದಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ನನ್ನನ್ನು ಬಿಟ್ಟು ಬೇರೆ ಯಾರೂ ಮುಖ್ಯಮಂತ್ರಿ ಆಗುವುದಿಲ್ಲ. ಇದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಏಕೆಂದರೆ ಈ ನಾಡಿನಲ್ಲಿ ದೇವರ ಆಶೀರ್ವಾದ, ಗುರುಹಿರಿಯರ ಆಶೀರ್ವಾದ ಜನತಾದಳದ ಮೇಲಿದೆ. ಈ ನಾಡಿನ ರೈತರ ಸಾಲ ಮನ್ನಾ ಮಾಡಿಕೊಟ್ಟೆ, ರೈತರು ಉಳಿದರೆ ನಿನ್ನಂದಲೇ ಉಳಿಯೋಕೆ ಸಾಧ್ಯ ಎಂದು ಉತ್ತರ ಕರ್ನಾಟಕದ ರೈತರು ಹೇಳುತ್ತಿದ್ದಾರೆ. ರಾಜ್ಯದ ಜನರಿಗಾಗಿ ನಾನು ಪಂಚರತ್ನ ರಥಯಾತ್ರೆ ನಡೆಸಿದ್ದೇನೆ. ರಾಜ್ಯದ ಎಲ್ಲಾ ಕಡೆ ಏಕಾಂಗಿ ಹೋರಾಟ ಮಾಡುತ್ತಿದ್ದೇನೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಜೆಡಿಎಸ್‌ ಬಲ ಹೆಚ್ಚಾಗಿದೆ.

ಬಿಜೆಪಿ ಪಕ್ಷ ಅಮಾಯಕ ಮಕ್ಕಳೊಂದಿಗೆ ರಕ್ತದೋಕುಳಿ ಆಡಿ ರಾಜಕೀಯ ಲಾಭ ಪಡೆದಿದೆ. ಶಿವಮೊಗ್ಗ, ರಾಷ್ಟ್ರಕವಿ ಕುವೆಂಪು ಜನಿಸಿದ ಪವಿತ್ರ ಸ್ಥಳ. ಈ ನೆಲದಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎಂಬ ಸಂದೇಶವನ್ನು ಬಿಜೆಪಿ ಉಳಿಸುವ ಕೆಲಸ ಮಾಡಿಲ್ಲ. ಇದೆಲ್ಲದಕ್ಕೂ ಇತಿಶ್ರೀ ಹಾಡುವ ಸಮಯ ಬಂದಿದೆ. ಆದ್ದರಿಂದ ನೀವೆಲ್ಲರೂ ನಮ್ಮ ಅಭ್ಯರ್ಥಿ ಆಯನೂರು ಮಂಜುನಾಥ್‌ ಅವರಿಗೆ ಓಟು ನೀಡಿ ಗೆಲ್ಲಿಸಬೇಕು ಎಂದು ಹೆಚ್‌ಡಿಕೆ ಮನವಿ ಮಾಡಿದ್ದಾರೆ.

ಹೆಚ್‌ಡಿಕೆ ಮಾತಿಗೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಈ ಬಾರಿ ಕುಮಾರಸ್ವಾಮಿ ಮತ್ತೆ ಸಿಎಂ ಆಗುವುದಿಲ್ಲ. ಅಧಿಕಾರ ಕೊಟ್ಟರೂ ಅದನ್ನು ಅವರಿಂದ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಮತ್ತೆ ಅವರು ಹೇಗೆ ಸಿಎಂ ಆಗ್ತಾರೆ? ಎಂದು ಟಾಂಗ್‌ ಕೊಟ್ಟಿದ್ದಾರೆ.

ಚುನಾವಣೆ ಕುರಿತ ಮತ್ತಷ್ಟು ಸುದ್ದಿಗಳು

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಆನ್‌ಲೈನ್‌ ಬೆಟ್ಟಿಂಗ್‌ ದಂಧೆ ಸಂಪೂರ್ಣ ಬಂದ್‌, ಹೆಚ್‌ಡಿ ಕುಮಾರಸ್ವಾಮಿ ಭರವಸೆ

ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election)ಗೆ ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಿದ್ದುಬಂಡಿ ಪರ ಇಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಪ್ರಚಾರ ಮಾಡಿದ್ದಾರೆ. " ಬೆಟ್ಟಿಂಗ್ ದಂಧೆಯಿಂದಾಗಿ ಹಳ್ಳಿಯ ಮಕ್ಕಳು ಬೀದಿಪಾಲಾಗುತ್ತಿದ್ದಾರೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಆನ್ಲೈನ್ ಬೆಟ್ಟಿಂಗ್ ದಂಧೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು" ಎಂದು ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ

ಜನತಾ ಪ್ರಣಾಳಿಕೆ ಬಿಡುಗಡೆ ಮಾಡಿದ ಜೆಡಿಎಸ್‌; ಪಂಚರತ್ನ ಯೋಜನೆಯ ವಿಸ್ತೃತ ನೋಟ ಮತ್ತು ಇತರೆ ಹೈಲೈಟ್ಸ್

ಕರ್ನಾಟಕ ವಿಧಾನಸಭಾ ಚುನಾವಣೆ 2023 (Karnataka Assembly Election 2023)ರ ಮತದಾನದ ದಿನಕ್ಕೆ ದಿನಗಣನೆ ಶುರುವಾಗಿದೆ. ಪ್ರಚಾರ ಕಣ ರಂಗೇರತೊಡಗಿದೆ. ಜೆಡಿಎಸ್‌ ತನ್ನ ಪ್ರಣಾಳಿಕೆ (JDS Manifesto) ಯನ್ನು ಇಂದು (ಏ.27) ಬಿಡುಗಡೆ ಮಾಡಿದೆ. ಪ್ರಣಾಳಿಕೆ ಬಗ್ಗೆ ತಿಳಿಯಲು ಈ ಲಿಂಕ್‌ ಕ್ಲಿಕ್‌ ಮಾಡಿ

Whats_app_banner