ಕನ್ನಡ ಸುದ್ದಿ  /  ಕರ್ನಾಟಕ  /  Karnataka Election 2023: ಬಿಜೆಪಿ, ಕಾಂಗ್ರೆಸ್‌ನಿಂದ ಬಂಡಾಯವೆದ್ದು ಪಕ್ಷೇತರರಾಗಿ ಕಣಕ್ಕಿಳಿದ ಅಭ್ಯರ್ಥಿಗಳಿವರು

Karnataka Election 2023: ಬಿಜೆಪಿ, ಕಾಂಗ್ರೆಸ್‌ನಿಂದ ಬಂಡಾಯವೆದ್ದು ಪಕ್ಷೇತರರಾಗಿ ಕಣಕ್ಕಿಳಿದ ಅಭ್ಯರ್ಥಿಗಳಿವರು

ಬಂಡಾಯವೆದ್ದ ಹಲವು ಘಟಾನುಘಟಿ ನಾಯಕರು ಪಕ್ಷೇತರರಾಗಿ ಕಣಕ್ಕಿಳಿದಿದ್ದು, ರಾಜ್ಯದ ಗಮನ ಸೆಳೆದಿದೆ. ಅಲ್ಲದೆ ಹಲವು ಕ್ಷೇತ್ರಗಳಲ್ಲಿ ಬಂಡಾಯ ನಾಯಕರ ಪರ ಕಾರ್ಯಕರ್ತರ ಪ್ರಚಾರ ಜೋರಾಗಿ ನಡೆಯುತ್ತಿದೆ. ಬಂಡಾಯದ ಅಲೆಯಿಂದಾಗಿ ಮತವಿಭಜನೆಯಾಗಲಿದ್ದು, ಪ್ರಮುಖ ಪಕ್ಷಗಳಿಗೆ ಮತಗಳ ಕೊರತೆಯಾಗುವುದರ ಜೊತೆಗೆ, ಸೋಲಿನ ಭೀತಿಯೂ ಹೆಚ್ಚಾಗಲಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಉಳಿದಿವೆ. ಎರಡು ಪ್ರಬಲ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ಈಗಾಗಲೇ ಅಬ್ಬರದ ಪ್ರಚಾರಕ್ಕೆ ಧುಮುಕಿವೆ. ಈ ನಡುವೆ ಸ್ಥಳೀಯ ಪಕ್ಷ ಜೆಡಿಎಸ್‌, ರಾಷ್ಟ್ರೀಯ ಪಕ್ಷಗಳಿಗೆ ಸವಾಲೆಸೆಯಲು ಸಿದ್ಧವಾಗಿದೆ. ಆದರೆ, ಈ ಬಾರಿ ರಾಜ್ಯ ಚುನಾವಣೆಯಲ್ಲಿ ಮತ್ತೊಂದು ಟ್ವಿಸ್ಟ್‌ ಇದೆ. ರೋಚಕ ಹಣಾಹಣಿ ಹಾಗೂ ಸೋಲು ಗೆಲುವಿನ ಲೆಕ್ಕಾಚಾರ ಈ ಮೂರು ಪಕ್ಷಗಳ ನಡುವೆ ಮಾತ್ರವಲ್ಲ. ಘಟಾನುಘಟಿ ನಾಯಕರಿಗೆ ಪ್ರಬಲ ಪೈಪೋಟಿ ನೀಡಲು ಪಕ್ಷೇತರ ಅಭ್ಯರ್ಥಿಗಳು ಒಂಟಿ ಕಾಲಲ್ಲಿ ನಿಂತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರಾಷ್ಟ್ರೀಯ ಪಕ್ಷಗಳು ಟಿಕೆಟ್‌ ಘೋಷಿಸಿದ ಬೆನ್ನಲ್ಲೇ, ಟಿಕೆಟ್‌ ವಂಚಿತ ಹಲವು ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿತು. ಇವರಲ್ಲಿ ಪ್ರಬಲ ನಾಯಕರು ಕೂಡಾ ಸೇರಿದ್ದಾರೆ. ಈ ನಡುವೆ ಬಂಡಾಯವೆದ್ದ ಹಲವು ಧುರೀಣರು ಹಾಗೂ ಯುವ ನಾಯಕರು ಪಕ್ಷಾಂತರದ ಮೊರೆ ಹೋಗಿದ್ದಾರೆ. ಸದ್ಯ ರಾಜ್ಯದಲ್ಲಿ ಟಿಕೆಟ್‌ ಸಿಗದೆ ಪಕ್ಷೇತರರಾಗಿ ಕಣಕ್ಕಿಳಿದು, ರಾಷ್ಟ್ರೀಯ ಪಕ್ಷಗಳಿಗೆ ಪ್ರಮುಖ ಸವಾಲಾಗಿರುವ ಅಭ್ಯರ್ಥಿಗಳ ವಿವರ ಇಲ್ಲಿದೆ.

ಪಕ್ಷೇತರರಾಗಿ ಕಣಕ್ಕಿಳಿಯುತ್ತಿರುವ ಬಿಜೆಪಿ ಬಂಡಾಯ ಅಭ್ಯರ್ಥಿಗಳು

ಬಿಜೆಪಿ ಬಂಡಾಯ ಅಭ್ಯರ್ಥಿಗಳು (ಪಕ್ಷೇತರ)ಕ್ಷೇತ್ರಬಿಜೆಪಿ ಅಭ್ಯರ್ಥಿಗಳು
ಅರುಣ್‌ ಕುಮಾರ್‌ ಪುತ್ತಿಲಪುತ್ತೂರುಆಶಾ ತಿಮ್ಮಪ್ಪ
ಹೂಡಿ ವಿಜಯ್‌ ಕುಮಾರ್‌ಮಾಲೂರುಕೆ ಎಸ್‌ ಮಂಜುನಾಥ್‌ ಗೌಡ
ವಿಶ್ವನಾಥ್‌ ಪಾಟಿಲ್ಬೈಲಹೊಂಗಲಜಗದೀಶ್‌ ಮೆಟಗೂಡ
ಮಲ್ಲಿಕಾರ್ಜುನ್‌ ಚರಂತಿಮಠಬಾಗಲಕೋಟೆವೀರಣ್ಣ ಚರಂತಿಮಠ
ನಿತಿನ್‌ ಗುತ್ತೇದಾರ್ಅಫ್ಜಲ್ಪುರಮಾಲಿಕಯ್ಯ ಗುತ್ತೇದಾರ್
ಎಸ್‌ಐ ಚಿಕ್ಕನಗೌಡರ್ಕುಂದಗೋಳಎಂಆರ್‌ಪಾಟಿಲ್
ಎಂಪಿ ಸುನಿಲ್ಗುಂಡ್ಲುಪೇಟೆಸಿಎಸ್‌ ನಿರಂಜನ್‌ ಕುಮಾರ್
ಬಿಎಂ ಮಲ್ಲಿಕಾರ್ಜುನ್ನಾಗಮಂಗಲಸುಧಾ ಶಿವರಾಮೇಗೌಡ
ಕೃಷ್ಣಯ್ಯ ಶೆಟ್ಟಿಗಾಂಧಿನಗರಎಆರ್ ಸಪ್ತಗಿರಿಗೌಡ
ಕೆಟಿ ಕುಮಾರಸ್ವಾಮಿಚಳ್ಳಕೆರೆಅನಿಲ್‌ ಕುಮಾರ್ ಆರ್
ಮಾಡಾಳ್‌ ಮಲ್ಲಿಕಾರ್ಜುನಚನ್ನಗಿರಿಎಚ್‌ಎಸ್‌ ಶಿವಕುಮಾರ್
ಗೂಳಿಕಟ್ಟಿ ಡಿ ಶೇಖರ್ಹೊಸದುರ್ಗಎಸ್‌ ಲಿಂಗಮೂರ್ತಿ
ಸೊಗಡು ಶಿವಣ್ಣತುಮಕೂರು ನಗರಜಿಬಿ ಜ್ಯೀತಿ ಗಣೇಶ್
ಕೆಎಂ ಮುನಿಯಪ್ಪಕೊರಟಗೆರೆಬಿಎಚ್‌ ಅನಿಲ್‌ ಕುಮಾರ್

ಬಂಡಾಯವೆದ್ದ ಕಾಂಗ್ರೆಸ್‌ ಅಭ್ಯರ್ಥಿಗಳು

ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು‌ (ಪಕ್ಷೇತರ)ಕ್ಷೇತ್ರಕಾಂಗ್ರೆಸ್‌ ಅಭ್ಯರ್ಥಿಗಳು
ಟಿ ಮಂಜುನಾಥ್ಹೊಸದುರ್ಗಬಿಜಿ ಗೋವಿಂದಪ್ಪ
ಪಾಂಡುರಂಗ ಗರಗ್ಹೊಸದುರ್ಗಬಿಜಿ ಗೋವಿಂದಪ್ಪ
ಸೌಭಾಗ್ಯ ಬಸವರಾಜನ್ಚಿತ್ರದುರ್ಗಕೆಸಿ ವೀರೇಂದ್ರ
ರಾಮಕೃಷ್ಣ ದೊಡ್ಡಮನಿಶಿರಹಟ್ಟಿಸುಜಾತ ಎನ್‌ ದೊಡ್ಡಮನಿ
ಮುಜೀಬುದ್ದಿನ್ರಾಯಚೂರುಮೊಹಮ್ಮದ್‌ ಶಲಮ್
ಚಂದ್ರ ಸಿಂಗ್ಬೀದರ್‌ ದಕ್ಷಿಣಅಶೋಕ್‌ ಕೇಣಿ
ಶಂಭು ಕಲ್ಲೊಲಿಕರ್ರಾಯಭಾಗಮಹಾವೀರ್‌ ಲಕ್ಷ್ಮಣ ಮೊಹಿತೆ
ಭೀಮಪ್ಪ ಗಡದ್ಅರಭಾವಿಅರವಿಂದ್‌ ಮಹಾದೇವರಾವ್‌ ದಳವಾಯಿ 
ಸತಿಶ್‌ ಬಂಡಿವಡ್ಡರ್ಮುಧೋಳಆರ್‌ಬಿ ತಿಮ್ನಾಪುರ್
ಎಚ್‌ ಪಿ ರಾಜೇಶಜಗಳೂರುಬಿ ದೇವೇಂದ್ರಪ್ಪ
ಲತಾ ಮಲ್ಲಿಕಾರ್ಜುನ್ಹರಪನಹಳ್ಳಿಎನ್‌ ಕೊಟ್ರೇಶ್
ಸವಿತಾ ಮಲ್ಲೇಶ್‌ ನಾಯ್ಕ್ಮಯಕೊಂಡಕೆಎಸ್‌ ಬಸವರಾಜು
ಎಚ್‌ಎಂ ಗೋಪಿಕೃಷ್ಣತರೀಕೆರೆಜಿಹೆಚ್‌ ಶ್ರೀನಿವಾಸ್
ಬಿಬಿ ರಾಮಸ್ವಾಮಿ ಗೌಡಕುಣಿಗಲ್ಎಚ್‌ಡಿ ರಂಗನಾಥ್
ಪುಟ್ಟಸ್ವಾಮಿ ಗೌಡಗೌರಿಬಿದನೂರುಎನ್‌ಎಚ್‌ ಶಿವಶಂಕರರೆಡ್ಡಿ
ಮಿಥುನ್‌ ರೆಡ್ಡಿಬಗೇಪಲ್ಲಿಎಸ್‌ಎನ್‌ ಸುಬ್ಬಾರೆಡ್ಡಿ
ಪುಟ್ಟೂ ಅಂಜಿನಪ್ಪಶಿಡ್ಲಘಟ್ಟಬಿವಿ ರಾಜೀವ್‌ಗೌಡ
ಎಂಟಿ ಕೃಷ್ಣೇ ಗೌಡಅರಕಲಗೂಡುಎಚ್‌ಪಿ ಶರೀಧರ್‌ ಗೌಡ
ಯೂಸುಫ್‌ ಶರೀಫ್‌ (ಕೆಜಿಎಫ್‌ ಬಾಬು)ಚಿಕ್ಕಪೇಟೆಆರ್‌ವಿ ದೇವರಾಜ್

ಸದ್ಯ ಪ್ರಮುಖ ಬಂಡಾಯವೆದ್ದ ಹಲವು ಘಟಾನುಘಟಿ ನಾಯಕರು ಪಕ್ಷೇತರರಾಗಿ ಕಣಕ್ಕಿಳಿದಿದ್ದು, ರಾಜ್ಯದ ಗಮನ ಸೆಳೆದಿದೆ. ಅಲ್ಲದೆ ಹಲವು ಕ್ಷೇತ್ರಗಳಲ್ಲಿ ಬಂಡಾಯ ನಾಯಕರ ಪರ ಕಾರ್ಯಕರ್ತರ ಪ್ರಚಾರ ನಡೆಯುತ್ತಿದೆ. ಬಂಡಾಯದ ಅಲೆಯಿಂದಾಗಿ ಮತವಿಭಜನೆಯಾಗಲಿದ್ದು, ಪ್ರಮುಖ ಪಕ್ಷಗಳಿಗೆ ಮತಗಳ ಕೊರತೆಯಾಗುವುದರ ಜೊತೆಗೆ, ಸೋಲಿನ ಭೀತಿಯೂ ಹೆಚ್ಚಾಗಲಿದೆ.

IPL_Entry_Point