ಕನ್ನಡ ಸುದ್ದಿ  /  ಕರ್ನಾಟಕ  /  Karnataka Election 2023: ಲೂಟಿ ಮಾಡಿದ ದುಡ್ಡಿನಲ್ಲಿ ಸಾಮ್ರಾಜ್ಯ ಕಟ್ಟುವ ಬದಲು ಮೀನಿಗೆ ಗಾಳ ಹಾಕುವುದು ಉತ್ತಮ; ಪ್ರಮೋದ್ ಮಧ್ವರಾಜ್

Karnataka Election 2023: ಲೂಟಿ ಮಾಡಿದ ದುಡ್ಡಿನಲ್ಲಿ ಸಾಮ್ರಾಜ್ಯ ಕಟ್ಟುವ ಬದಲು ಮೀನಿಗೆ ಗಾಳ ಹಾಕುವುದು ಉತ್ತಮ; ಪ್ರಮೋದ್ ಮಧ್ವರಾಜ್

Karwar News: ಬಿಜೆಪಿ ಮುಖಂಡ ಪ್ರಮೋದ್‌ ಮಧ್ವರಾಜ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡದೇ ಇರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ʼಅಧಿಕಾರದ ಆಸೆಗೆ ಬಿಜೆಪಿಗೆ ಹೋದ ಮಧ್ವರಾಜ್‌ ಅವರಿಗೆ ಟಿಕೆಟ್‌ ಸಿಗಲಿಲ್ಲ, ಇನ್ನು ಮೀನಿಗೆ ಗಾಳ ಹಾಕಿಕೊಂಡು ಇರುವುದು ಉತ್ತಮʼ ಎಂದಿದ್ದರು. ಈ ಹೇಳಿಕೆಗೆ ಪ್ರಮೋದ್ ಮಧ್ವರಾಜ್ ತಿರುಗೇಟು ನೀಡಿದ್ದಾರೆ.

ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್
ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್

ಕಾರವಾರ: ʼಲೂಟಿ ಮಾಡಿ ಸಾಮ್ರಾಜ್ಯ ಕಟ್ಟುವ ಬದಲು ಪ್ರಾಮಾಣಿಕವಾಗಿ ಮೀನಿಗೆ ಗಾಳ ಹಾಕಿಕೊಂಡು ಇರುವುದು ಉತ್ತಮ. ಮೀನುಗಾರರು ಸಾವಿರಾರು ವರ್ಷಗಳಿಂದ ಗಾಳ ಹಾಕಿ ಮೀನು ಹಿಡಿಯುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್ ಎಲ್ಲಿಂದ ಎಲ್ಲಿಗೆ ಬಂದಿದ್ದಾರೆ ಎಂಬುದನ್ನು ನೋಡಲಿʼ ಎಂದು ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಡಿಕೆಶಿಗೆ ಎದಿರೇಟು ನೀಡಿದರು.

ಕೆಲ ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ʼಬಿಜೆಪಿ ಪಕ್ಷಕ್ಕೆ ಸೇರಿದ್ದ ಪ್ರಮೋದ್ ಅವರಿಗೆ ಅಲ್ಲಿ ಟಿಕೆಟ್ ದೊರಕಲಿಲ್ಲ. ಅಧಿಕಾರದ ಆಸೆಗೆ ಪ್ರಮೋದ್ ಅಲ್ಲಿಗೆ ಹೋಗಿದ್ದರು, ಆದರೆ ಟಿಕೆಟ್ ಕೊಡಲಿಲ್ಲ. ಇನ್ನು ಮೀನಿಗೆ ಗಾಳ ಹಾಕಿಕೊಂಡು ಇರುವುದು ಉತ್ತಮʼ ಎಂದು ಮಧ್ವರಾಜ್‌ ವಿರುದ್ಧ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದರು.

ಡಿಕೆಶಿ ಮಾತಿಗೆ ಪ್ರಮೋದ್ ಮಧ್ವರಾಜ್ ಕಾರವಾರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ್ದಾರೆ.

ʼಡಿ.ಕೆ. ಶಿವಕುಮಾರ್ ಅವರು 1989ರಲ್ಲಿ ಮೊದಲ ಬಾರಿ ಶಾಸಕರಾಗಿದ್ದ ಸಂದರ್ಭ ನನ್ನ ತಾಯಿ ಮನೋರಮಾ ಮಧ್ವರಾಜ್ ಸಚಿವೆಯಾಗಿದ್ದರು. ಆಗ ಡಿಕೆಶಿ ನನ್ನ ಸ್ನೇಹಿತರಾಗಿದ್ದರು. ಆಗ ಅವರ ಆರ್ಥಿಕ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಗಮನಿಸಬೇಕು. ಲೂಟಿ ಮಾಡಿದ ದುಡ್ಡು, ಅದರಲ್ಲಿ ಸಾಮ್ರಾಜ್ಯ ಕಟ್ಟುವ ಬದಲು ಪ್ರಾಮಾಣಿಕವಾಗಿ ಮೀನಿಗೆ ಗಾಳ ಹಾಕಿ ಹಿಡಿದು ಜೀವನ ಸಾಗಿಸುವುದೇ ಉತ್ತಮವಾದ ವೃತ್ತಿಯಲ್ಲವೇʼ ಎಂದು ಕೇಳಿದ ಪ್ರಮೋದ್, ನಾನು ಬಿಜೆಪಿಯಲ್ಲಿ ಯಾವುದೇ ಅಧಿಕಾರದ ಆಸೆಗೆ ಬಂದವನಲ್ಲ ಎಂದಿದ್ದಾರೆ.

ಕಾಂಗ್ರೆಸ್‌ ತಲೆಬುಡವಿಲ್ಲದ ಪಕ್ಷ

ಕಾರವಾರದಲ್ಲಿ ನಡೆದ ಪ್ರಚಾರ ಸಭೆಗಳಲ್ಲಿ ಮಾತನಾಡಿದ ಪ್ರಮೋದ್ ಮಧ್ವರಾಜ್, ʼಕಾಂಗ್ರೆಸ್ ಪಕ್ಷಕ್ಕೆ ತಲೆಯೂ ಇಲ್ಲ, ಬುಡವೂ ಇಲ್ಲ. ಬಿಜೆಪಿ ಕಾರ್ಯಕರ್ತರ ಪಕ್ಷವಾದರೆ, ಕಾಂಗ್ರೆಸ್‌ಗೆ ಕೇಂದ್ರದಲ್ಲೂ ಸರಿಯಾದ ನಾಯಕರಿಲ್ಲ, ಬೂತ್ ಮಟ್ಟದಲ್ಲೂ ಸರಿಯಾದ ನಾಯಕರು, ಕಾರ್ಯಕರ್ತರಿಲ್ಲʼ ಎಂದು ಲೇವಡಿ ಮಾಡಿದ್ದಾರೆ.

ʼನಾನು ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದೆ. ಬಿಜೆಪಿ ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡಿಯುತ್ತಿರುವುದನ್ನು ಕಂಡು ಅಭಿಮಾನ ಉಕ್ಕಿತು. ಎದುರಾಳಿ ಪಕ್ಷದಲ್ಲಿ ಎಷ್ಟೇ ಬಲಿಷ್ಠ ಅಭ್ಯರ್ಥಿ ಇದ್ದರು ಆತನನ್ನು ಸೋಲಿಸುವ ಶಕ್ತಿ ಬಿಜೆಪಿ ಕಾರ್ಯಕರ್ತನಿಗಿದೆʼ ಎಂದ ಪ್ರಮೋದ್, ʼಕೋವಿಡ್ ಸಂದರ್ಭ ಜಗತ್ತು ನರಳುತ್ತಿದ್ದ ಸಂದರ್ಭ ಭಾರತದಲ್ಲಿ ಮೋದಿಯವರು ಕೋವಿಡ್ ನಿಭಾಯಿಸಿದ ರೀತಿ ಉಲ್ಲೇಖನೀಯ ಅದನ್ನು ಮೆಚ್ಚಿ ನಾನು ಬಿಜೆಪಿಗೆ ಬಂದಿದ್ದೇನೆʼ ಎಂದರು.

ಕಾರ್ಯಕರ್ತರ ಆಕ್ರೋಶ

ಮಾಜಾಳಿ ಎಂಬಲ್ಲಿ ಪ್ರಮೋದ್ ಪ್ರಚಾರದ ವೇಳೆ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ್ ಅವರು ತಮ್ಮ ಗ್ರಾಮಕ್ಕೆ ಬರಲಿಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತವಾಯಿತು. ಚುನಾವಣೆಯಲ್ಲಿ ಗೆದ್ದು, ಶಾಸಕರಾದ ಮೇಲೆ ಒಮ್ಮೆಯೂ ಬಂದಿಲ್ಲ ಎಂದು ಸ್ಥಳೀಯರು ಒಟ್ಟುಗೂಡಿ ನಾಯಕರ ಬಳಿ ಅಹವಾಲು ತೋಡಿಕೊಂಡರು. ಬಳಿಕ ಪ್ರಮೋದ್ ಮಧ್ವರಾಜ್ ಮತ್ತಿತರ ನಾಯಕರು ಆಕ್ರೋಶಗೊಂಡಿರುವ ನಾಯಕರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರು.

ವರದಿ: ಹರೀಶ್‌ ಮಾಂಬಾಡಿ ಮಂಗಳೂರು

ಇದನ್ನೂ ಓದಿ

Karnataka Election: ಕರ್ನಾಟಕ ಚುನಾವಣೆ; ಇಂದಿನಿಂದ ನೋಂದಾಯಿತ ವಿಶೇಷ ಚೇತನರು, 80 ವರ್ಷ ಮೇಲ್ಪಟ್ಟ ಹಿರಿಯರಿಂದ ಮತದಾನ

ರಾಜ್ಯದಲ್ಲಿ ಇಂದಿನಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ನೋಂದಾಯಿತ ವಿಶೇಷ ಚೇತನರು, 80 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ ಪತ್ರಕರ್ತರು ಇಂದು ತಾವು ಇರುವ ಸ್ಥಳದಿಂದಲೇ ಮತದಾನ ಮಾಡಲಿದ್ದಾರೆ.

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ (Central Election Commission) ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections) ಮನೆಯಲ್ಲಿಂದಲೇ ಮತದಾನ (Vote from Home) ಮಾಡುವುದಕ್ಕೆ ಅವಕಾಶ ನೀಡಿದ್ದು, ಇಂದು ನೋಂದಾಯಿತ ವಿಶೇಷ ಚೇತನರು(Specially Disabled Persons), 80 ವರ್ಷ ಮೇಲ್ಪಟ್ಟ ವೃದ್ಧರು (Seniors Above 80 Years) ಹಾಗೂ ಪತ್ರಕರ್ತರು (Journalists) ಮತದಾನ (Voting) ಮಾಡುತ್ತಿದ್ದಾರೆ.

IPL_Entry_Point