ಕನ್ನಡ ಸುದ್ದಿ  /  ಕರ್ನಾಟಕ  /  ಸ್ಮಾರ್ಟ್ ಆಗಲಿದೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ; ಎರಡು ಪ್ಲಾಟ್ ಫಾರ್ಮ್ ಕಾಮಗಾರಿ ಅಂತಿಮ ಹಂತದಲ್ಲಿ

ಸ್ಮಾರ್ಟ್ ಆಗಲಿದೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ; ಎರಡು ಪ್ಲಾಟ್ ಫಾರ್ಮ್ ಕಾಮಗಾರಿ ಅಂತಿಮ ಹಂತದಲ್ಲಿ

ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್ ನಂಬರ್ 4 ಮತ್ತು 5ರ ಕೆಲಸ ಕಾರ್ಯಗಳು ನಡೆಯುತ್ತಿವೆ. ಫೆಬ್ರವರಿಯಲ್ಲಿ ಈ ಕೆಲಸ ಮುಗಿಯಬೇಕಿತ್ತು. ಆದರೆ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಮೆಗಾ ಲೈನ್ ಮತ್ತು ವಿದ್ಯುತ್ ಕೆಲಸ ಕಾರ್ಯಗಳಿಂದಾಗಿ ಸೆಪ್ಟೆಂಬರ್ ಎರಡನೇ ವಾರದೊಳಗೆ ಈ ಕೆಲಸಗಳು ಮುಗಿಯುವ ನಿರೀಕ್ಷೆ ಇದೆ.

ಸ್ಮಾರ್ಟ್ ಆಗಲಿದೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ; ಎರಡು ಪ್ಲಾಟ್ ಫಾರ್ಮ್ ಕಾಮಗಾರಿ ಅಂತಿಮ ಹಂತದಲ್ಲಿ
ಸ್ಮಾರ್ಟ್ ಆಗಲಿದೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ; ಎರಡು ಪ್ಲಾಟ್ ಫಾರ್ಮ್ ಕಾಮಗಾರಿ ಅಂತಿಮ ಹಂತದಲ್ಲಿ

ಮಂಗಳೂರು: ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಎರಡು ಹೆಚ್ಚುವರಿ ಪ್ಲಾಟ್ ಫಾರ್ಮ್ ಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಇದು ಪೂರ್ಣಗೊಂಡರೆ, ಪ್ರಯಾಣಿಕರಿಗೂ ಅನುಕೂಲವಾಗಲಿದೆ. ಸಿಗ್ನಲ್ ಕೆಲಸ ಸಹಿತ ಇತರ ಕೆಲಸಗಳು ವೇಗ ಪಡೆದುಕೊಳ್ಳುತ್ತಿದೆ. ಈಗಾಗಲೇ ರೈಲ್ವೆ ಯಾತ್ರಿ ಸಮಿತಿಯು ಮಂಗಳೂರು ಜಂಕ್ಷನ್ ನಲ್ಲಿ ಕೊನೆಗೊಳ್ಳುತ್ತಿದ್ದ ಮೂರು ರೈಲುಗಳ ಗಮ್ಯಸ್ಥಾನವನ್ನು ಮಂಗಳೂರು ಸೆಂಟ್ರಲ್ ಗೂ ವಿಸ್ತರಿಸಬೇಕು ಎಂಬ ಮನವಿಯನ್ನು ನೀಡಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಮಂಗಳೂರು ಹೊರವಲಯದ ಕಂಕನಾಡಿಯಲ್ಲಿ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣವಿದ್ದು, ಮಂಗಳೂರು ಸಿಟಿಯೊಳಗೆ ಅಂದರೆ, ಅತ್ತಾವರದಲ್ಲಿ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣವಿದೆ. ಹೀಗಾಗಿ ಮಂಗಳೂರಿಗೆ ಬರುವ ರೈಲುಗಳೆಲ್ಲವೂ ಮಂಗಳೂರು ಸೆಂಟ್ರಲ್ ಗೆ ಬಂದರೆ, ನಗರವಾಸಿಗಳಿಗೂ ಅನುಕೂಲವಾಗಲಿದೆ ಎಂಬುದು ಪ್ರಯಾಣಿಕರ ಮನವಿ.

ಟ್ರೆಂಡಿಂಗ್​ ಸುದ್ದಿ

ಇದೀಗ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್ ನಂಬರ್ 4 ಮತ್ತು 5ರ ಕೆಲಸ ಕಾರ್ಯಗಳು ನಡೆಯುತ್ತಿವೆ. ಫೆಬ್ರವರಿಯಲ್ಲಿ ಈ ಕೆಲಸ ಮುಗಿಯಬೇಕಿತ್ತು. ಆದರೆ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಮೆಗಾ ಲೈನ್ ಮತ್ತು ವಿದ್ಯುತ್ ಕೆಲಸ ಕಾರ್ಯಗಳಿಂದಾಗಿ ಸೆಪ್ಟೆಂಬರ್ ಎರಡನೇ ವಾರದೊಳಗೆ ಈ ಕೆಲಸಗಳು ಮುಗಿಯುವ ನಿರೀಕ್ಷೆ ಇದೆ. ರೈಲ್ವೆಯವರು ಈಗಾಗಲೇ ಸಿವಿಲ್ ಕೆಲಸಗಳನ್ನು ಮಾಡಿ ಮುಗಿಸಿದ್ದಾರೆ. ಪ್ಲಾಟ್ ಫಾರ್ಮ್ ನ ಲ್ಲಿ ಎಲೆಕ್ಟ್ರಿಕ್ ರೈಲುಗಳಿಗೆ ಅನುಕೂಲವಾಗುವಂಥ ಓವರ್ ಹೆಡ್ ಎಲೆಕ್ಟ್ರಿಕಲ್ ಇಕ್ವಿಪ್ ಮೆಂಟ್ (ಒಎಚ್ ಇ)ಯನ್ನು ಸ್ಥಾಪಿಸಲಾಗಿದೆ.

ಇನ್ನು, ಪಾಲಕ್ಕಾಡ್ ರೈಲ್ವೆ ಡಿವಿಜನ್ ವತಿಯಿಂದ ಮೆಗಾ ಲೈನ್ ಕೆಲಸ ಕಾರ್ಯಗಳು ನಡೆಯಲಿದ್ದು, ಇಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ವ್ಯವಸ್ಥೆಗೆ ಪೂರಕವಾಗಲಿದೆ. ಈಗಾಗಲೇ ಇರುವ ಮೂರು ಪ್ಲಾಟ್ ಫಾರ್ಮ್ ಗಳಲ್ಲಿರುವ ಸಿಸ್ಟಮ್ ಗಳೊಂದಿಗೆ ಈ ಎರಡು ಹೆಚ್ಚುವರಿ ಪ್ಲಾಟ್ ಫಾರ್ಮ್ ಗಳ ವ್ಯವಸ್ಥೆಗಳನ್ನು ಜೋಡಿಸಬೇಕಾಗುತ್ತದೆ. ಇಲೆಕ್ಟ್ರಾನಿಕ್ ಸಿಗ್ನಲಿಂಗ್ ಮತ್ತು ಟೆಲಿಕಮ್ಯೂನಿಕೇಷನ್ ವ್ಯವಸ್ಥೆಯ ಕಾರ್ಯಗಳು ಆಗಬೇಕಾಗಿದೆ. ಇದನ್ನು ಮಂಗಳೂರು ಜಂಕ್ಷನ್, ಮುಂಬೈ, ಬೆಂಗಳೂರು ಮತ್ತು ಕಾಸರಗೋಡಿಗೆ ಹೋಗುವ ಲೈನ್ ಗಳಿಗೆ ಲಿಂಕ್ ಕೊಡುವ ಕಾರ್ಯವೂ ನಡೆಯಬೇಕಾಗಿದೆ.

ಎರಡು ದಶಕಗಳ ಹಿಂದಿನ ಬೇಡಿಕೆ

ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ಪ್ಲಾಟ್ ಫಾರ್ಮ್ ಗಳ ಬೇಡಿಕೆ ಇಂದು ನಿನ್ನೆಯದಲ್ಲ. ಇದಕ್ಕೆ ಎರಡು ದಶಕಗಳ ಇತಿಹಾಸವಿದೆ ಎಂದು ಹೇಳುತ್ತಾರೆ ಹೋರಾಟಗಾರ ಹನುಮಂತ ಕಾಮತ್. 2016-17ಕ್ಕೆ ಮಂಡಿಸಲಾದ ರೈಲ್ವೆ ಬಜೆಟ್ ನಲ್ಲಿ ಈ ಪ್ಲಾಟ್ ಫಾರ್ಮ್ ಗಳು ಮಂಜೂರುಗೊಂಡವು. ಕೆಲಸ ಸೆಪ್ಟೆಂಬರ್ 2022ರಲ್ಲಿ ಆರಂಭಗೊಂಡವು. 2023ರ ಬಜೆಟ್ ನಲ್ಲಿ 4.76 ಕೋಟಿ ರೂಗಳನ್ನು ಇದಕ್ಕಾಗಿ ಮೀಸಲಿರಿಸಲಾಗಿತ್ತು.

ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಮುಂಬೈ ಸಿಎಸ್ ಎಂಟಿ ಯಿಂದ ಮಂಗಳೂರು ಜಂಕ್ಷನ್ ಸೂಪರ್ ಫಾಸ್ಟ್ ರೈಲು ಮತ್ತು ವಿಜಯಪುರ ಮಂಗಳೂರು ಜಂಕ್ಷನ್ ಎಕ್ಸ್ ಪ್ರೆಸ್ ಸ್ಪೆಶಲ್ ಹಾಗೂ ಯಶವಂತಪುರ ಮಂಗಳೂರು ಜಂಕ್ಷನ್ ಮೂಲಕ ತೆರಳುವ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲನ್ನು ಮಂಗಳೂರು ಸೆಂಟ್ರಲ್ ವರೆಗೂ ವಿಸ್ತರಿಸಬೇಕು ಎಂಬ ವಿಚಾರವನ್ನು ಆಗಾಗ್ಗೆ ಸಂದರ್ಭ ಬಂದಾಗಲೆಲ್ಲಾ ಮಂಡಿಸುತ್ತಿತ್ತು. ಇದರ ಅಧ್ಯಕ್ಷ, ಹೋರಾಟಗಾರ ಹನುಮಂತ ಕಾಮತ್ ಅವರು ಹೇಳುವಂತೆ ಮಂಗಳೂರು ಸೆಂಟ್ರಲ್ ರಾಮೇಶ್ವರಂ, ಮಂಗಳೂರು ಸೆಂಟ್ರಲ್ ಭಾವನಗರ ವೀಕ್ಲಿ ಎಕ್ಸ್ ಪ್ರರೆಸ್ ರೈಲನ್ನೂ ಆರಂಭಿಸಬೇಕು ಎಂದು ಒತ್ತಾಯಿಸಲಾಗಿದೆ. ಇದು ಈಗಾಗಲೇ ಮಂಜೂರುಗೊಂಡರೂ ಓಡಾಟ ಆರಂಭಗೊಂಡಿಲ್ಲ ಎಂದಿದ್ದಾರೆ.

(ವರದಿ: ಹರೀಶ್‌ ಮಾಂಬಾಡಿ)

IPL_Entry_Point