Patla Award 2023: ಹಿರಿಯ ಕಲಾವಿದ ಎಂ.ಎಲ್.ಸಾಮಗರಿಗೆ 2023ರ ಪಟ್ಲ ಪ್ರಶಸ್ತಿ; ಮೇ 28ಕ್ಕೆ ಅಡ್ಯಾರ್‌ನಲ್ಲಿ ಪಟ್ಲ ಸಂಭ್ರಮ
Patla Award 2023 announced: ಪ್ರತಿಷ್ಠಿತ ಪಟ್ಲ ಪ್ರಶಸ್ತಿ 2023ಕ್ಕೆ ಹಿರಿಯ ಯಕ್ಷಗಾನ ಕಲಾವಿದ ತಾಳೆ ಮದ್ದಲೆ ಅರ್ಥಧಾರಿ ತೆಂಕು- ಬಡಗಿನ ಕಲಾವಿದ ಎಂ ಎಲ್ ಸಾಮಗ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ ಶೆಟ್ಟಿ ತಿಳಿಸಿದರು.
ಮಂಗಳೂರು: ಪ್ರತಿಷ್ಠಿತ ಪಟ್ಲ ಪ್ರಶಸ್ತಿ 2023ಕ್ಕೆ ಹಿರಿಯ ಯಕ್ಷಗಾನ ಕಲಾವಿದ ತಾಳೆ ಮದ್ದಲೆ ಅರ್ಥಧಾರಿ ತೆಂಕು- ಬಡಗಿನ ಕಲಾವಿದ ಎಂ ಎಲ್ ಸಾಮಗ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ ಶೆಟ್ಟಿ ತಿಳಿಸಿದರು.
ಟ್ರೆಂಡಿಂಗ್ ಸುದ್ದಿ
ಅವರು, ಪತ್ತುಮುಡಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಆರನೇ ವರ್ಷದ ಯಕ್ಷಧ್ರುವ ಪಟ್ಲ ಸಂಭ್ರಮ 2023 ಸಮಾರಂಭವು ಮೇ 28 ರಂದು ಭಾನುವಾರ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿದೆ. ಪಟ್ಲ ಸಂಭ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ನ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ವಹಿಸಲಿದ್ದಾರೆ.
ಸಮಾರಂಭದಲ್ಲಿ ಸತ್ಪಾತ್ರ ಕಲಾವಿದರಿಗೆ ನೆರವು, ಅಪಘಾತ ವಿಮಾ ಯೋಜನೆ, ಕಲಾವಿದರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ, ವೈದ್ಯಕೀಯ, ರಕ್ತದಾನ ಶಿಬಿರ, ಹಾಗೂ ಯಕ್ಷಗಾನ ಮನರಂಜನಾ ಕಾರ್ಯಕ್ರಮ ನಡೆಯಲಿದೆ ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.
ಪಟ್ಲ ಫೌಂಡೇಶನ್ ಟ್ರಸ್ಟ್ ಕಲಾವಿದರ ಪಾಲಿಗೆ ಬೆಳಕಾಗಿ ಕೆಲಸ ಮಾಡುತ್ತಿದೆ. ಕಲಾವಿದರ ಕಷ್ಟಗಳಿಗೆ ಸ್ಪಂದಿಸುವ ಪಟ್ಲ ಟ್ರಸ್ಟ್ ಗೆ ಎಲ್ಲರ ಸಹಕಾರ ಅಗತ್ಯ, ಪಟ್ಲ ಫೌಂಡೇಶನ್ ನ ಎಲ್ಲ ಘಟಕಗಳು ಸಕ್ರಿಯವಾಗಿ ಕೆಲಸ ಮಾಡಿದಾಗ ಸಂಸ್ಥೆ ಉತ್ತಮ ರೀತಿಯಲ್ಲಿ ಬೆಳೆಯಲು ಸಾಧ್ಯ ಎಂದು ಪಟ್ಲ ಫೌಂಡೇಶನ್ ಟ್ರಸ್ಟ್ ನ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ತಿಳಿಸಿದರು.
ಪಟ್ಲ ಫೌಂಡೇಶನ್ ಟ್ರಸ್ಟ್ ಕಲಾವಿದರ ಬಗ್ಗೆ ಇಟ್ಟ ಕಾಳಜಿ ಮತ್ತು ಸಂಕಷ್ಟದಲ್ಲಿರುವ ಕಲಾವಿದರನ್ನು ಗುರುತಿಸಿ ನೆರವು ನೀಡುತ್ತಿರುವುದು ಮತ್ತು ಗೌರವಿಸುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ. ಇದು ನಿರಂತರ ನಡೆಯಲಿ, ಎಲ್ಲರ ಸಹಕಾರವೂ ಬೇಕು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಪ್ರತಿಷ್ಠಾನದ ಪರವಾಗಿ ಸುಂದರ ಶೆಟ್ಟಿ ಬೆಟ್ಟಂಪಾಡಿ ಟ್ರಸ್ಟಿಯಾಗಿ ನೇಮಕಗೊಂಡರು. ಎಂಆರ್ ಜಿ ಗ್ರೂಪ್ ಪಟ್ಲ ಟ್ರಸ್ಟ್‌ಗೆ 5 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದೆ. ಇದನ್ನು ಪ್ರಸಾದ್ ಶೆಟ್ಟಿ ಅವರು ಟ್ರಸ್ಟ್ ನ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.
ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಡಾ. ಗಣೇಶ್ ಎಚ್ ಕೆ, ಗಿರೀಶ್ ಎಂ ಶೆಟ್ಟಿ ಕಟೀಲು, ಸುಧಾಕರ ಪೂಂಜ, ಸವಣೂರು ಸೀತಾರಾಮ ರೈ, ಪಟ್ಲ ಮಹಾಬಲ ಶೆಟ್ಟಿ, ಪ್ರಸಾದ್ ಶೆಟ್ಟಿ, ಜಯರಾಮ ಶೇಖ, ಜಗನ್ನಾಥ ಶೆಟ್ಟಿ ಬಾಳ, ಚಿಕ್ಕಪ್ಪ ನಾಯ್ಕ್, ಕರುಣಾಕರ ರೈ, ಸಂತೋಷ್ ಶೆಟ್ಟಿ, ವಿಜಯ ಶೆಟ್ಟಿ, ಜಯಶೀಲ ಅಡ್ಯಂತಾಯ, ದಾಮೋದರ ರೈ, ಪೂರ್ಣಿಮಾ ಶೆಟ್ಟಿ, ಆರತಿ ಆಳ್ವ, ಅನಿತಾ ಪಿಂಟೋ, ಪ್ರದೀಪ್ ಆಳ್ವ, ರವಿ ಶೆಟ್ಟಿ ಅಶೋಕನಗರ ಮೊದಲಾದವರು ಹಾಜರಿದ್ದರು.
ಗಮನಾರ್ಹ ಸುದ್ದಿಗಳು
Long weekends in 2023: ಹೊಸ ವರ್ಷದ ಲಾಂಗ್ ವೀಕೆಂಡ್‌ಗಳ ಲಿಸ್ಟ್ ಇಲ್ಲಿದೆ; 15 ಕ್ಕೂ ಹೆಚ್ಚು ಪ್ರವಾಸ ಪ್ಲ್ಯಾನ್ ಮಾಡಬಹುದು ನೋಡಿ!
2023 Long Weekends List: ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದೀರಾ?, ಹೊಸ ವರ್ಷ ಬಹಳಷ್ಟು ಲಾಂಗ್ ವೀಕೆಂಡ್ ಸಿಗುತ್ತೆ. 15ಕ್ಕೂ ಹೆಚ್ಚು ಪ್ರವಾಸ ಆಯೋಜಿಸಬಹುದು. ಈಗಲೇ ಪ್ಲಾನ್ ಮಾಡಿಕೊಳ್ಳಿ. 2023ರ ಲಾಂಗ್ ವೀಕೆಂಡ್ ಪಟ್ಟಿಗೆ ಇಲ್ಲಿ ಕ್ಲಿಕ್ ಮಾಡಿ.
Year in review 2022: ಈ ವರ್ಷ ದೇಶ ಕಳೆದುಕೊಂಡ ಗಣ್ಯರಿವರು... ರಾಜಕೀಯ, ಉದ್ಯಮ ಕ್ಷೇತ್ರದಲ್ಲಿ ಮಡಿದವರ ವಿವರ ಇಲ್ಲಿದೆ
ಈ ವರ್ಷ ದೇಶದಲ್ಲಿ ಅನೇಕ ಬದಲಾವಣೆಗಳಾಗಿವೆ. ಕೋವಿಡ್ ಬಳಿಕ ನಿಧಾನವಾಗಿ ಅರ್ಥಿಕತೆ ಚೇತರಿಸಿದೆ. ಅದೇ ರೀತಿ ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಲವು ಬದಲಾವಣೆಗಳನ್ನು ದೇಶ ನೋಡಿದೆ. ಅದೇ ರೀತಿ, ದೇಶದಲ್ಲಿ ಹಲವಾರು ಉನ್ನತ ನಾಯಕರು ಈ ವರ್ಷ ಪ್ರಾಣವನ್ನು ಕಳೆದುಕೊಂಡಿದ್ದಾರೆ. ರಾಜಕೀಯ, ಉದ್ಯಮ, ಸಮಾಜ ಸೇವೆಯಲ್ಲಿ ತೊಡಗಿದ್ದ ದಿಗ್ಗಜರನ್ನು ದೇಶ ಕಳೆದುಕೊಂಡಿದೆ. ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ.