ಕನ್ನಡ ಸುದ್ದಿ  /  Photo Gallery  /  Famous Personalities Died In 2022 In India

Year in review 2022: ಈ ವರ್ಷ ದೇಶ ಕಳೆದುಕೊಂಡ ಗಣ್ಯರಿವರು... ರಾಜಕೀಯ, ಉದ್ಯಮ ಕ್ಷೇತ್ರದಲ್ಲಿ ಮಡಿದವರ ವಿವರ ಇಲ್ಲಿದೆ

  • ಈ ವರ್ಷ ದೇಶದಲ್ಲಿ ಅನೇಕ ಬದಲಾವಣೆಗಳಾಗಿವೆ. ಕೋವಿಡ್‌ ಬಳಿಕ ನಿಧಾನವಾಗಿ ಅರ್ಥಿಕತೆ ಚೇತರಿಸಿದೆ. ಅದೇ ರೀತಿ ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಲವು ಬದಲಾವಣೆಗಳನ್ನು ದೇಶ ನೋಡಿದೆ. ಅದೇ ರೀತಿ, ದೇಶದಲ್ಲಿ ಹಲವಾರು ಉನ್ನತ ನಾಯಕರು ಈ ವರ್ಷ ಪ್ರಾಣವನ್ನು ಕಳೆದುಕೊಂಡಿದ್ದಾರೆ. ರಾಜಕೀಯ, ಉದ್ಯಮ, ಸಮಾಜ ಸೇವೆಯಲ್ಲಿ ತೊಡಗಿದ್ದ ದಿಗ್ಗಜರನ್ನು ದೇಶ ಕಳೆದುಕೊಂಡಿದೆ.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್‌ ಯಾದವ್‌, ಉದ್ಯಮಿ ಸೈರಸ್‌ ಮಿಸ್ತ್ರಿ, ಹೂಡಿಕೆ ಚತುರ ರಾಕೇಶ್ ಜುಂಜುನ್ವಾಲಾ ಸೇರಿದಂತೆ ಹಲವು ಗಣ್ಯರು ಈ ವರ್ಷ ನಮ್ಮನ್ನಗಲಿದ್ದಾರೆ. ಈ ವರ್ಷ ದೇಶದಲ್ಲಿ ಮಡಿದ ಹತ್ತು ಉನ್ನರ ನಾಯಕರ ವಿವರ ಇಲ್ಲಿದೆ. (ಈ ಪಟ್ಟಿಯಲ್ಲಿ ಕರ್ನಾಟಕದಲ್ಲಿ ಮಡಿದ ಗಣ್ಯರನ್ನು ಹೊರತುಪಡಿಸಿ, ಉಳಿದ ಪ್ರಮುಖರ ವಿವರ ಮಾತ್ರ ಕೊಡಲಾಗಿದೆ. ರಾಜ್ಯದಲ್ಲಿ ಮಡಿದ ನಾಯಕರ ಮತ್ತೊಂದು ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು)
icon

(1 / 11)

ಮುಲಾಯಂ ಸಿಂಗ್‌ ಯಾದವ್‌: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್‌ ಯಾದವ್‌ ಅವರು ಅಕ್ಟೋಬರ್‌ 10ರಂದು ನಿಧನರಾದರು. ಮುಲಾಯಂ ಸಿಂಗ್‌ ಯಾದವ್‌ ಅವರು 1932ರ ನವೆಂಬರ್‌ 22ರಂದು ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಸೈಫೈ ಗ್ರಾಮದಲ್ಲಿ ಜನಿಸಿದ್ದರು. ಮೊದಲ ಬಾರಿಗೆ 1989ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಒಟ್ಟು ಮೂರು ಬಾರಿ ಉತ್ತರ ಪ್ರದೇಶದ ಸಿಎಂ ಆಗಿದ್ದ ಹಿರಿಮೆ ಇವರದ್ದು. ಇವರು 1996-98ರಲ್ಲಿ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
icon

(2 / 11)

ಸೈರಸ್‌ ಮಿಸ್ತ್ರಿ: ಟಾಟಾ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ಸೈರಸ್‌ ಮಿಸ್ತ್ರಿ, ಸೆಪ್ಟೆಂಬರ್‌ 4ರಂದು ಕಾರು ಅಪಘಾತದಲ್ಲಿ ನಿಧನರಾದರು. ಮುಂಬೈ ಸಮೀಪ ಪಾಲ್‌ಘರ್‌ನಲ್ಲಿ ಸೈರಸ್‌ ಮಿಸ್ತ್ರಿ ಅವರ ಕಾರು ಅಪಘಾತವಾಗಿ, ಸೈರಸ್‌ ಮಿಸ್ತ್ರಿ ಸ್ಥಳದಲ್ಲೇ ಅಸುನೀಗಿದ್ದರು. ರತನ್ ಟಾಟಾ ನಿವೃತ್ತಿ ಬಳಿಕ ಸೈರಸ್‌ ಮಿಸ್ತ್ರಿ ಅವರು ಟಾಟಾ ಸಮೂಹ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಬಳಿಕ ನಡೆದ ಆಂತರಿಕ ಕಚ್ಚಾಟದ ಪರಿಣಾಮ ಸೈರಸ್‌ ಮಿಸ್ತ್ರಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
icon

(3 / 11)

ವಿಕ್ರಂ ಕಿರ್ಲೊಸ್ಕರ್‌: ಭಾರತದ ವಾಹನೋದ್ಯಮದ ದಿಗ್ಗಜರಲ್ಲಿ ಒಬ್ಬರಾದ ಟೊಯೊಟಾ ಕಿರ್ಲ್ಕೋಸ್ಕರ್‌ ಮೋಟಾರ್ ಕಂಪನಿಯ ಉಪಾಧ್ಯಕ್ಷ ವಿಕ್ರಂ ಕಿರ್ಲ್ಕೋಸ್ಕರ್‌ ಹೃದಯಾಘಾತದಿಂದ ನವೆಂಬರ್‌ 30ರಂದು ನಿಧನರಾದರು. ವಿಕ್ರಮ್ ಕಿರ್ಲೋಸ್ಕರ್ ಅವರು ಕಿರ್ಲೋಸ್ಕರ್ ಗ್ರೂಪ್‌ನ ನಾಲ್ಕನೇ ತಲೆಮಾರಿನ ಮುಖ್ಯಸ್ಥರು. ಇವರು ಕಿರ್ಲೋಸ್ಕರ್ ಸಿಸ್ಟಮ್ಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್‌ ಲಿಮಿಟೆಡ್‌ನ ಉಪಾಧ್ಯಕ್ಷರೂ ಆಗಿದ್ದರು. 
icon

(4 / 11)

ರಾಕೇಶ್ ಜುಂಜುನ್ವಾಲಾ: ಹೂಡಿಕೆ ಚತುರ ಎಂದೇ ಕರೆಯಲ್ಪಡುತ್ತಿದ್ದ ದೇಶದ ಖ್ಯಾತ ಹೂಡಿಕೆದಾರ ಮತ್ತು ಉದ್ಯಮಿ ರಾಕೇಶ್ ಜುಂಜುನ್ವಾಲಾ ಹೃದಯಾಘಾತದಿಂದ ನಿಧನರಾದರು. ಮುಂಬಯಿನ ಖಾಸಗಿ ಆಸ್ಪತ್ರೆಯಲ್ಲಿ 62 ವರ್ಷದ ರಾಕೇಶ್ ಆಗಸ್ಟ್‌ 14ರಂದು ಕೊನೆಯುಸಿರೆಳೆದರು. ರಾಕೇಶ್ ಜುಂಜುನ್ವಾಲಾ ಮಾಲೀಕತ್ವದ ಹೊಸ ವಿಮಾನಯಾನ ಸಂಸ್ಥೆ 'ಆಕಾಶ್ ಏರ್', ಅವರ ನಿಧನಕ್ಕಿಂತ ಕೆಲವು ದಿನಗಳ ಹಿಂದಷ್ಟೇ ತನ್ನ ವಾಣಿಜ್ಯ ಕಾರ್ಯಾಚರಣೆ ಆರಂಭಿಸಿತ್ತು. ರಾಕೇಶ್ ಅವರನ್ನು ಭಾರತದ ವಾರೆನ್ ಬಫೆಟ್‌ ಎಂದೂ ಕರೆಯಲಾಗುತ್ತಿತ್ತು. ಷೇರು ಮಾರುಕಟ್ಟೆ ಬಗ್ಗೆ ಅವರು ಹೊಂದಿದ್ದ ಅಪಾರ ಜ್ಞಾನ ಅವರನ್ನು ದೇಶ-ವಿದೇಶಗಳಲ್ಲೂ ಖ್ಯಾತನಾಮರನ್ನಾಗಿಸಿತ್ತು.
icon

(5 / 11)

ವೈ ಕೆ ಅಲಘ್: ಖ್ಯಾತ ಅರ್ಥಶಾಸ್ತ್ರಜ್ಞ, ಮಾಜಿ ಕೇಂದ್ರ ಸಚಿವ ಮತ್ತು ಅಹಮದಾಬಾದ್‌ನ ಸರ್ದಾರ್ ಪಟೇಲ್ ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ ಅಂಡ್ ಸೋಶಿಯಲ್ ರಿಸರ್ಚ್ (ಎಸ್‌ಪಿಐಎಸ್‌ಆರ್) ನ ವಿಶ್ರಾಂತ ಪ್ರಾಧ್ಯಾಪಕ ಯೋಗಿಂದರ್ ಕೆ ಅಲಘ್ ಅವರು ಡಿಸೆಂಬರ್‌ 6ರಂದು ನಿಧನರಾದರು. ಇವರು 1996-98 ರವರೆಗೆ ಅವರು ಕೇಂದ್ರ ಸರ್ಕಾರದಲ್ಲಿ ವಿದ್ಯುತ್, ಯೋಜನೆ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವರಾಗಿ ಕಾರ್ಯನಿರ್ವಹಿಸಿದರು. ಯೋಗಿಂದರ್ ಕೆ ಅಲಘ್ ಅವರು ಯೋಜನಾ ಆಯೋಗದ ಸದಸ್ಯರೂ ಆಗಿದ್ದರು.
icon

(6 / 11)

ಪಲ್ಲೋನ್ಜಿ ಮಿಸ್ತ್ರಿ: ಶಾಪೂರ್ಜಿ ಪಲ್ಲೋನ್ಜಿ ಸಮೂಹದ ಅಧ್ಯಕ್ಷ, ಬಿಲಿಯನೇರ್ ಕೈಗಾರಿಕೋದ್ಯಮಿ ಪಲ್ಲೋನ್ಜಿ ಮಿಸ್ತ್ರಿ ಜೂನ್‌ 28ರಂದು ಮುಂಬೈನಲ್ಲಿ ನಿಧನರಾದರು. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ ಮಿಸ್ತ್ರಿ 29 ಶತಕೋಟಿ ಡಾಲರ್‌ ನಿವ್ವಳ ಸಂಪತ್ತು ಹೊಂದಿದ್ದರು. ಭಾರತದ ಅತಿ ಶ್ರೀಮಂತರಲ್ಲಿ ಮಿಸ್ತ್ರಿ ಒಬ್ಬರು. ಅವರ ಹೆಚ್ಚಿನ ಕುಟುಂಬ ಸಂಪತ್ತಿನ ಮೂಲ ಟಾಟಾ ಸನ್ಸ್‌ನ ಅತಿದೊಡ್ಡ ಮೈನಾರಿಟಿ ಪಾಲು. ಶಾಪೂರ್ಜಿ ಪಲ್ಲೋನ್ಜಿ ಸಮೂಹವು ಇಂಜಿನಿಯರಿಂಗ್ ಮತ್ತು ನಿರ್ಮಾಣ, ಮೂಲಸೌಕರ್ಯ, ರಿಯಲ್ ಎಸ್ಟೇಟ್, ನೀರು, ಇಂಧನ ಮತ್ತು ಹಣಕಾಸು ಸೇವೆಗಳಲ್ಲಿ ಅಸ್ತಿತ್ವವನ್ನು ಹೊಂದಿದೆ. 
icon

(7 / 11)

ಹೇಮಾನಂದ ಬಿಸ್ವಾಲ್: ಒಡಿಶಾದ ಮೊದಲ ಬುಡಕಟ್ಟು ಮುಖ್ಯಮಂತ್ರಿ ಮತ್ತು ರಾಜ್ಯದ ಕೊನೆಯ ಕಾಂಗ್ರೆಸ್ ಮುಖ್ಯಮಂತ್ರಿ ಹೇಮಾನಂದ ಬಿಸ್ವಾಲ್ ಅವರು ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಫೆಬ್ರವರಿ 25ರಂದು ನಿಧನರಾದರು. ಬುಡಕಟ್ಟು ಜನಾಂಗದ ಬಿಸ್ವಾಲ್ ಅವರು 1989 ರಿಂದ 1990ವರೆಗೆ ಮತ್ತು 1999ರಿಂದ 2000ರವರೆಗೆ ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
icon

(8 / 11)

ಅಭಿಜಿತ್ ಸೇನ್: ಯೋಜನಾ ಆಯೋಗ ಸೇರಿದಂತೆ ವಿವಿಧ ನೀತಿ ನಿರೂಪಣಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಭಾರತದ ಪ್ರಖರ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾದ ಅಭಿಜಿತ್ ಸೇನ್, ಆಗಸ್ಟ್ 28ರಂದು ಹೃದಯಾಘಾತದಿಂದ ನಿಧನರಾದರು. 14 ನೇ ಹಣಕಾಸು ಆಯೋಗ ಸೇರಿದಂತೆ ವಿವಿಧ ನೀತಿ ನಿರೂಪಣಾ ಸಂಸ್ಥೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
icon

(9 / 11)

ಇಳಾ ಭಟ್‌: ಸ್ವಯಂ ಉದ್ಯೋಗಿ ಮಹಿಳಾ ಸಂಘದ (SEWA) ಸಂಸ್ಥಾಪಕಿ, ಗಾಂಧಿವಾದಿ, ಮಹಿಳಾ ಹಕ್ಕುಗಳ ಕಾರ್ಯಕರ್ತೆ, ಪದ್ಮಭೂಷಣ ಪುರಸ್ಕೃತೆ ಇಳಾ ಭಟ್‌ (89) ನವೆಂಬರ್‌ 2 ರಂದು ನಿಧನರಾದರು. ಇವರು ಸ್ಥಾಪಿಸಿರುವ ಸೇವಾ ಸಂಘವು ಹದಿನೆಂಟು ರಾಜ್ಯಗಳಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಶಾಖೆಗಳನ್ನು ಹೊಂದಿವೆ. ಅನೌಪಚಾರಿಕ ವಲಯದ 21 ಲಕ್ಷಕ್ಕೂ ಹೆಚ್ಚು ಬಡವರು, ಸ್ವಯಂ ಉದ್ಯೋಗಿ ಮಹಿಳಾ ಕಾರ್ಮಿಕರನ್ನು ಸದಸ್ಯರಾಗಿ ಹೊಂದಿರುವ ಸೇವಾ ಸಂಸ್ಥೆಯು ಮಹಿಳಾ ಸಬಲೀಕರಣಕ್ಕಾಗಿ ಪ್ರಯತ್ನಿಸುತ್ತಿದೆ. ಇವರು 1989ರವರೆಗೆ ರಾಜ್ಯ ಸಭೆಯ ಸಂಸದರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಶ್ವ ಬ್ಯಾಂಕ್‌ನಂತಹ ಹಲವು ಹಣಕಾಸು ಸಂಸ್ಥೆಗಳಿಗೆ ಸಲಹೆಗಾರರಾಗಿದ್ದರು.
icon

(10 / 11)

ಜಮ್ಶೆಡ್ ಜೆ ಇರಾನಿ: 'ಭಾರತದ ಉಕ್ಕಿನ ಮನುಷ್ಯ' ಎಂದೇ ಕರೆಯಲ್ಪಡುವ ಜಮ್ಶೆಡ್ ಜೆ ಇರಾನಿ ಅಕ್ಟೋಬರ್‌ 31ರಂದು ನಿಧನರಾದರು. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ ಇರಾನಿ ಅವರು ನಾಲ್ಕು ದಶಕಗಳ ಕಾಲದ ವೃತ್ತಿಜೀವನದಲ್ಲಿ ಟಾಟಾ ಗ್ರೂಪ್ ಕಂಪನಿಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
icon

(11 / 11)

IPL_Entry_Point

ಇತರ ಗ್ಯಾಲರಿಗಳು