ಕನ್ನಡ ಸುದ್ದಿ  /  ಕರ್ನಾಟಕ  /  Pm Yoga Day Speech: ವಿಶ್ವ ಆರೋಗ್ಯಕ್ಕೆ ಯೋಗವೇ ದಿಕ್ಸೂಚಿ ಪ್ರಧಾನಿ ಮೋದಿ ಪ್ರತಿಪಾದನೆ

PM Yoga Day Speech: ವಿಶ್ವ ಆರೋಗ್ಯಕ್ಕೆ ಯೋಗವೇ ದಿಕ್ಸೂಚಿ ಪ್ರಧಾನಿ ಮೋದಿ ಪ್ರತಿಪಾದನೆ

ಮೈಸೂರಿನ ಅರಮನೆ ಆವರಣದಲ್ಲಿ ಎಂಟನೇ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಯೋಗವು ವಿಶ್ವ ಆರೋಗ್ಯದ ದಿಕ್ಸೂಚಿ ಎಂದು ಪ್ರತಿಪಾದಿಸಿದರು.

ಮೈಸೂರಿನಲ್ಲಿ ಎಂಟನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ “ಯೋಗ ಸಂದೇಶ” ರವಾನಿಸಿದರು.
ಮೈಸೂರಿನಲ್ಲಿ ಎಂಟನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ “ಯೋಗ ಸಂದೇಶ” ರವಾನಿಸಿದರು.

ಮೈಸೂರು: ಮೈಸೂರಿನಂತಹ ಭಾರತದ ಆಧ್ಯಾತ್ಮಿಕ ಕೇಂದ್ರಗಳು ಶತಮಾನಗಳಿಂದ ಪೋಷಿಸಿಕೊಂಡು ಬಂದಿರುವ ಯೋಗ ಶಕ್ತಿ ಇಂದು ವಿಶ್ವ ಆರೋಗ್ಯಕ್ಕೆ ದಿಕ್ಸೂಚಿಯಾಗಿದೆ. ಇಂದು ಯೋಗವು ಜಾಗತಿಕ ಸಹಕಾರಕ್ಕೆ ಪರಸ್ಪರ ಆಧಾರವಾಗುತ್ತಿದೆ. ಇಂದು ಯೋಗವು ಮನುಕುಲಕ್ಕೆ ಆರೋಗ್ಯಕರ ಜೀವನದ ವಿಶ್ವಾಸವನ್ನು ನೀಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. 

ಟ್ರೆಂಡಿಂಗ್​ ಸುದ್ದಿ

ಅವರು ಮೈಸೂರಿನ ಅರಮನೆ ಆವರಣದಲ್ಲಿ ಮಂಗಳವಾರ ಬೆಳಗ್ಗೆ ಎಂಟನೆ ಅಂತಾರಾಷ್ಟ್ರೀಯ ಯೋಗ ದಿನದ ಮುಖ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದರು.

ಯೋಗ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ಇದು ಇಡೀ ಮನುಷ್ಯ ಕುಲಕ್ಕೆ ಸಂಬಂಧಿಸಿದ್ದು.  ಯೋಗದಿಂದ ಶಾಂತಿ ಸಿಗುವುದೆಂಬ ಅಂಶವನ್ನು ಎಂಬುದನ್ನು ನಮ್ಮ ಪೂರ್ವಜರು, ಋಷಿಗಳು, ಪ್ರಾಜ್ಞರು ಪ್ರತಿಪಾದಿಸಿದ್ದಾರೆ. ಇಡೀ ಜಗತ್ತು ಶುರುವಾಗುವುದೇ ನಮ್ಮ ಶರೀರದಿಂದ ಎಂಬುದನ್ನು ನಮ್ಮ ಯೋಗಿಗಳು ಹೇಳುತ್ತ ಬಂದಿದ್ದಾರೆ. ಹೀಗಾಗಿ ಆರೋಗ್ಯ ಕಾಪಾಡಬೇಕಾದರೆ ಯೋಗ ಬೇಕೇ ಬೇಕು. ಮಾನವತೆಗಾಗಿ ಯೋಗವನ್ನು ಬದುಕಿನಲ್ಲಿ ಅಳವಡಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
ಗಾರ್ಡಿಯನ್ ರಿಂಗ್ ಆಫ್ ಯೋಗ

ಅಂತರಾಷ್ಟ್ರೀಯ ಮಟ್ಟದಲ್ಲಿಯೂ, ಈ ಬಾರಿ ನಾವು ವಿಶ್ವದಾದ್ಯಂತ "ಗಾರ್ಡಿಯನ್ ರಿಂಗ್ ಆಫ್ ಯೋಗ" ದ ಎಂಬ ವಿನೂತನ ಮಾದರಿಯಲ್ಲಿ ಯೋಗ ದಿನ ಆಚರಿಸುತ್ತಿದ್ದೇವೆ. ಜಗತ್ತಿನ 80 ವಿವಿಧ ರಾಷ್ಟ್ರಗಳು ಅಲ್ಲಿನ ಸೂರ್ಯೋದಯಕ್ಕೆ ಅನುಗುಣವಾಗಿ ಯೋಗ ದಿನವನ್ನು ಆಚರಿಸುತ್ತ ಬರುತ್ತವೆ. ಇದರ ಪ್ರಕಾರ, ಸೂರ್ಯೋದಯದೊಂದಿಗೆ, ಸೂರ್ಯನ ಚಲನೆಯೊಂದಿಗೆ, ಜನರು ವಿಶ್ವದ ವಿವಿಧ ದೇಶಗಳಲ್ಲಿ ಯೋಗ ದಿನ ಆಚರಣೆ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿವರಿಸಿದರು.

ಯೋಗ ಜೀವನ ಮಾರ್ಗ

ಪ್ರಪಂಚದ ಜನರಿಗೆ ಇಂದು ಇದು ಯೋಗ. ನಮಗೆ ಇದು ಜೀವನದ ಒಂದು ಭಾಗವೇ ಆಗಿದೆ. ಆದರೆ ಯೋಗವು ಈಗ ಜೀವನ ಮಾರ್ಗವಾಗಿದೆ. ನಾವು ಎಷ್ಟೇ ಒತ್ತಡದಲ್ಲಿದ್ದರೂ, ಕೆಲವು ನಿಮಿಷಗಳ ಧ್ಯಾನ ಮಾಡಿದರೆ ಸಾಕು ನಮಗೆ ವಿಶ್ರಾಂತಿ ಸಿಗುತ್ತದೆ. ನಮ್ಮ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ನಾವು ಯೋಗವನ್ನು ಹೆಚ್ಚುವರಿ ಕೆಲಸ ಎಂದು ತೆಗೆದುಕೊಳ್ಳಬೇಕಾಗಿಲ್ಲ. ನಮಗೂ ಯೋಗ ಗೊತ್ತಿರಬೇಕು. ಯೋಗ ನಮ್ಮ ಬದುಕಾಗಬೇಕು. ಯೋಗ ಸಾಧಕರಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

ಮಾನವೀಯತೆಗಾಗಿ ಯೋಗ ಯಾಕೆ ಎಂದರೆ..

ಯೋಗ ಈಗ ಜಾಗತಿಕ ಹಬ್ಬವಾಗಿ ಬದಲಾಗಿದೆ. ಯೋಗವು ಯಾವುದೇ ವ್ಯಕ್ತಿಗೆ ಸೀಮಿತವಲ್ಲ. ಇದು ಇಡೀ ಮಾನವಕುಲಕ್ಕೆ ಅಗತ್ಯವಾದುದು. ಆದ್ದರಿಂದ, ಈ ಬಾರಿಯ ಅಂತರಾಷ್ಟ್ರೀಯ ಯೋಗ ದಿನದ ಥೀಮ್ - ಮಾನವೀಯತೆಗಾಗಿ ಯೋಗ ಎಂಬುದನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ವಿಶ್ವಶಾಂತಿಗಾಗಿ ಯೋಗ 

ಯೋಗವು ನಮಗೆ ಶಾಂತಿಯನ್ನು ಒದಗಿಸುತ್ತದೆ. ಯೋಗದಿಂದ ಸಿಗುವ ಶಾಂತಿಯು ಕೇವಲ ವ್ಯಕ್ತಿಗಳಿಗೆ ಮಾತ್ರ ಸೀಮಿತವಲ್ಲ. ಯೋಗದಿಂದ ನಮ್ಮ ಸಮಾಜಕ್ಕೂ ಶಾಂತಿ ಸಿಗುತ್ತದೆ. ಯೋಗವು ನಮ್ಮ ರಾಷ್ಟ್ರಗಳಿಗೆ ಮತ್ತು ಜಗತ್ತಿಗೂ ಶಾಂತಿಯನ್ನು ತರುತ್ತದೆ. ಅಲ್ಲದೆ, ಯೋಗವು ನಮ್ಮ ವಿಶ್ವ ಶಾಂತಿಗೆ ಬುನಾದಿಯನ್ನು ಒದಗಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಯೋಗ ಜೀವನ ಮಾರ್ಗ

ಪ್ರಪಂಚದ ಜನರಿಗೆ ಇಂದು ಇದು ಯೋಗ. ನಮಗೆ ಇದು ಜೀವನದ ಒಂದು ಭಾಗವೇ ಆಗಿದೆ. ಆದರೆ ಯೋಗವು ಈಗ ಜೀವನ ಮಾರ್ಗವಾಗಿದೆ. ನಾವು ಎಷ್ಟೇ ಒತ್ತಡದಲ್ಲಿದ್ದರೂ, ಕೆಲವು ನಿಮಿಷಗಳ ಧ್ಯಾನ ಮಾಡಿದರೆ ಸಾಕು ನಮಗೆ ವಿಶ್ರಾಂತಿ ಸಿಗುತ್ತದೆ. ನಮ್ಮ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ನಾವು ಯೋಗವನ್ನು ಹೆಚ್ಚುವರಿ ಕೆಲಸ ಎಂದು ತೆಗೆದುಕೊಳ್ಳಬೇಕಾಗಿಲ್ಲ. ನಮಗೂ ಯೋಗ ಗೊತ್ತಿರಬೇಕು. ಯೋಗ ನಮ್ಮ ಬದುಕಾಗಬೇಕು. ಯೋಗ ಸಾಧಕರಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

IPL_Entry_Point

ವಿಭಾಗ