ಕನ್ನಡ ಸುದ್ದಿ  /  Karnataka  /  Tumakuru News If The 7th Pay Commission Is Implemented The Auradkar Report Is Not Required Home Minister Parameshwar Prs

G Parameshwar: 7ನೇ ವೇತನ ಆಯೋಗ ಜಾರಿ ಮಾಡಿದರೆ, ಔರಾದ್ಕರ್ ವರದಿ ಪ್ರತ್ಯೇಕವಾಗಿ ಅವಶ್ಯಕತೆ ಇಲ್ಲ; ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ

ಅನವಶ್ಯಕವಾದ ಯೋಜನೆ, ಕಾರ್ಯಕ್ರಮ ಇದ್ದರೆ ಅದನ್ನು ಸ್ಥಗಿತ ಮಾಡುತ್ತೇವೆ. ಎಲ್ಲಾ ಯೋಜನೆಗಳ ಡಿಪಿಆರ್ ಮಾಡುವಾಗ ಎಚ್ಚರಿಕೆಯಿಂದ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಗೃಹ ಸಚಿವ ಡಾ.ಜಿ ಪರಮೇಶ್ವರ್ (Home Minister G Parameshwar) ಹೇಳಿದ್ದಾರೆ.

ಗೃಹ ಸಚಿವ ಡಾ ಜಿ ಪರಮೇಶ್ವರ್​
ಗೃಹ ಸಚಿವ ಡಾ ಜಿ ಪರಮೇಶ್ವರ್​

ತುಮಕೂರು: ನಮ್ಮ ನಾಯಕರಾದ ಸಿದ್ದರಾಮಯ್ಯ (CM Siddaramaiah), ಡಿಕೆ ಶಿವಕುಮಾರ್​ (DCM DK Shivakumar) ಅವರು ಚುನಾವಣೆ ವೇಳೆ ಕೊಟ್ಟಿದ್ದ ಭರವಸೆಯಂತೆ ನಮ್ಮ ಗ್ಯಾರಂಟಿಗಳನ್ನು ಅನುಷ್ಠಾನ ಅನುಷ್ಠಾನ ಮಾಡೋದಕ್ಕೆ ಆರಂಭ ಮಾಡುತ್ತೇವೆ. ಹಣಕಾಸು ವ್ಯಯ ಆಗದೆ ಜನರ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ (Home Minister G Parameshwar) ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ಸಂಪನ್ಮೂಲಗಳ ಕ್ರೂಡೀಕರಣದ ಪ್ರಶ್ನೆ ಎಲ್ಲರೂ ಎತ್ತಿದ್ರು, ವಿರೋಧ ಪಕ್ಷದವರು ಇದನ್ನು ಒಂದು ಅಸ್ತ್ರವಾಗಿ ಪ್ರಯೋಗ ಮಾಡಿದ್ರು. ಅನವಶ್ಯಕವಾದ ಯೋಜನೆ, ಕಾರ್ಯಕ್ರಮ ಇದ್ದರೆ ಅದನ್ನು ಸ್ಥಗಿತ ಮಾಡುತ್ತೇವೆ. ಎಲ್ಲಾ ಯೋಜನೆಗಳ ಡಿಪಿಆರ್ ಮಾಡುವಾಗ ಎಚ್ಚರಿಕೆಯಿಂದ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ, ಅಭಿವೃದ್ಧಿ ಕುಂಠಿತವಾಗದ ರೀತಿಯಲ್ಲಿ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ನಿಗಮ ಮಂಡಳಿ ಅಗತ್ಯ ಇದ್ದರೆ ಅದನ್ನು ಪರಿಶೀಲನೆ ಮಾಡುತ್ತೇವೆ. ಜನಪರ ಆಡಳಿತ ಕೊಡುತ್ತೇವೆ ಎಂದಿದ್ದೇವೆ. ಬೆಲೆ ಏರಿಕೆ ವಿರುದ್ಧ ಜನ ಕಾಂಗ್ರೆಸ್​​ಗೆ ಮತ ಹಾಕಿದ್ದಾರೆ. ಅದನ್ನು ಗಮನ ಇಟ್ಟುಕೊಂಡು ಆಡಳಿತ ನಡೆಸುತ್ತೇವೆ. ನಾವು ಐದು ವರ್ಷದವರೆಗೂ ಈ ಗ್ಯಾರಂಟಿ ಮುಂದುವರೆಸುತ್ತೇವೆ ಎಂದು ತಿಳಿಸಿದ್ದಾರೆ ಗೃಹ ಸಚಿವರು.

ಹಾಲಿನ ಪ್ರೋತ್ಸಾಹ ಧನ 7 ರೂಪಾಯಿಗೆ ಹೆಚ್ಚಿಸುತ್ತೇವೆ. ಬೆಂಗಳೂರಿನ ಹಾಲು ಒಕ್ಕೂಟದವರು, ಅವರ ಸ್ವತಃ ನಿರ್ಧಾರದಿಂದ 1.50 ರೂ. ಕಡಿತಗೊಳಿಸಿದ್ದಾರೆ. ಅದು ಸರ್ಕಾರದ ನಿರ್ಧಾರ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜುಲೈ ತಿಂಗಳಿನಲ್ಲಿ ಸಿಎಂ ಬಜೆಟ್ ಮಂಡನೆ ಮಾಡುತ್ತಾರೆ. ಬಜೆಟ್‌ನಲ್ಲಿ ಎತ್ತಿನಹೊಳೆ ಯೋಜನೆ ಬಗ್ಗೆ ಅನುದಾನ ಮೀಸಲು ಇಡಲಾಗುವುದು. ಯೋಜನೆ ಮುಗಿಸಲು ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

ಔರಾದ್ಕರ್ ವರದಿ ಜಾರಿ (Auradkar Committee report) ಬಗ್ಗೆ ಪರಿಶೀಲನೆ ಮಾಡುತ್ತೇನೆ. 7ನೇ ವೇತನ ಆಯೋಗ ಜಾರಿ (7th Pay Commission) ಮಾಡಿದರೆ, ಔರಾದ್ಕರ್ ವರದಿ ಪ್ರತ್ಯೇಕವಾಗಿ ಜಾರಿ ಮಾಡುವ ಅವಶ್ಯಕತೆ ಇಲ್ಲ, ಸದ್ಯ 15 ಸಾವಿರ ಪೊಲೀಸ್ ಪೇದೆಗಳ ನೇಮಕ ಮಾಡಲಾಗುತ್ತದೆ ಎಂದ ಅವರು, ಪಿಎಸ್‌ಐ ನೇಮಕಾತಿ ಹಗರಣ (PSI exam scam) ವಿಚಾರದ ಬಗ್ಗೆ ಪ್ರಸ್ತಾಪಿಸಿದರು.

ಈ ಪ್ರಕರಣದಲ್ಲಿ ತನಿಖೆ ಕಾನೂನು ಪ್ರಕಾರ ನಡೆಯುತ್ತಿದೆ. 53 ಜನರು ತಪ್ಪಿತಸ್ಥರು ಎಂಬುದು ಕಂಡು ಬಂದಿದೆ. ಮರು ಪರೀಕ್ಷೆ ಮಾಡಬಾರದು ಎಂದು ಕೋರ್ಟ್ ತಡೆ ನೀಡಿದೆ. ಕಾನೂನು ತಜ್ಞರ ಸಲಹೆ ಪಡೆದು ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ವಿದ್ಯಾರ್ಥಿಗಳಿಂದ ಶುಭಾಶಯ ಸಲ್ಲಿಕೆ

ಡಾ.ಜಿ ಪರಮೇಶ್ವರ್ ಅವರು ಗೃಹ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ಆಗಮಿಸಿದಾಗ ವಿದ್ಯಾರ್ಥಿಗಳು ಹರ್ಷೊದ್ಘಾರ ವ್ಯಕ್ತಪಡಿಸಿದರು.

IPL_Entry_Point