APL Card: ಎಪಿಎಲ್ಎ ಕಾರ್ಡ್ ಪಡೆಯಲು ಯಾರು ಅರ್ಹರು? ಎಪಿಎಲ್ ಪಡಿತರ ಕಾರ್ಡ್ ಪಡೆಯುವುದು ಹೇಗೆ? ಇಲ್ಲಿದೆ ವಿವರ
ನಿಮ್ಮ ಬಳಿ ಎಪಿಎಲ್ ಪಡಿತರ ಕಾರ್ಡ್ ಇಲ್ಲವೇ, ಹೊಸದಾಗಿ ಕಾರ್ಡ್ ಪಡೆಯಬೇಕೇ. ಅದಕ್ಕೆ ನೀವೇನು ಮಾಡಬೇಕು ಎನ್ನುವುದಕ್ಕೆ ಇಲ್ಲಿದೆ ವಿವರವಾದ ಮಾಹಿತಿ.
ನಿಮ್ಮ ಬಳಿ ಎಪಿಎಲ್ ಪಡಿತರ ಕಾರ್ಡ್ ಇಲ್ಲವೇ, ಹೊಸದಾಗಿ ಕಾರ್ಡ್ ಪಡೆಯಬೇಕೇ. ಅದಕ್ಕೆ ನೀವೇನು ಮಾಡಬೇಕು ಎನ್ನುವುದಕ್ಕೆ ಇಲ್ಲಿದೆ ವಿವರವಾದ ಮಾಹಿತಿ.
ಯಾರು ಅರ್ಹರು..
ಕರ್ನಾಟಕದ ಯಾವುದೇ ವ್ಯಕ್ತಿ ಬಡತನ ರೇಖೆಗಿಂತ ಮೇಲಿರುವ (ಎಪಿಎಲ್) ಪಡಿತರ ಕಾರ್ಡ್ ಪಡೆಯಲು ಅರ್ಹರು.
ಮನೆಯಲ್ಲಿರುವವರು ಕಾರ್ಡ್‌ಗೆ ಹೆಸರು ಸೇರಿಸಬಹುದು.ಮನೆಯ ಒಬ್ಬರ ಹೆಸರಿನಲ್ಲಿ ಅರ್ಜಿ ಕೊಟ್ಟರೆ ಸಾಕು.
ಮೊದಲು ಯಾವುದೇ ಸರ್ಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಆನ್ ಲೈನ್ ಸೆಂಟರ್ ಅಥವಾ ಕರ್ನಾಟಕ ಸರ್ಕಾರ ಒನ್ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.
ಒಂದು ವರ್ಷದ ಮೇಲ್ಪಟ್ಟು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಹೆಸರು ನೀಡಿರುವ ಎಲ್ಲರೂ ಹೋಗಬೇಕು.
ಆದರೆ ಬಿಪಿಎಲ್ ಕಾರ್ಡ್‌ನಂತೆ ಇಲ್ಲಿ ಎಲ್ಲರೂ ಬಯೋಮೆಟ್ರಿಕ್ ಬೇಡ. ಆಧಾರ್ ಕಾರ್ಡ್‌ನಲ್ಲಿರುವಂತೆಯೇ ಮಾಹಿತಿಯನ್ನು ದಾಖಲಿಸಿ ಆಹಾರ ಇಲಾಖೆಯ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಆಗ ಬರುವ ಒಟಿಪಿಯನ್ನು ಕಡ್ಡಾಯವಾಗಿ ನೀಡಬೇಕು.
ಏನೇನು ದಾಖಲೆ ಬೇಕು?
ಆಧಾರ್‌ಗೋಸ್ಕರ ಅರ್ಜಿಯೊಂದಿಗೆ ಒಬ್ಬರ ಪಾಸ್‌ಪೋರ್ಟ್ ಅಳತೆಯ ಒಂದು ಫೋಟೋ, ಮನೆಯ ಎಲ್ಲರ ಆಧಾರ್ ಕಾರ್ಡ್. ಮನೆಯಲ್ಲಿ ಉದ್ಯೋಗದಲ್ಲಿರುವವ ವಿವರ, ಆದಾಯದ ವಿವರ, ಗ್ಯಾಸ್ ಸಂಪರ್ಕ ಚೀಟಿ, ವಿದ್ಯುತ್ ಬಿಲ್, ಮನೆ ದಾಖಲೆಗಳು, ಬಾಡಿಗೆಇದ್ದರೆ ಬಾಡಿಗೆ ಕರಾರು ಹಾಗೂ ಬಾಡಿಗೆ ತುಂಬಿದ ಬಿಲ್‌ಗಳ ದಾಖಲೆಗಳನ್ನು ಸಲ್ಲಿಸಬೇಕು. ನೀವು ವಾಸವಿರುವ ನಗರ ಪ್ರದೇಶ ವಾದರೆ ವಾರ್ಡ್, ಗ್ರಾಮೀಣ ಪ್ರದೇಶವಾದರೆ ಪಂಚಾಯಿತಿ ಮಾಹಿತಿಯನ್ನು ತುಂಬಬೇಕು.
ಕಾರ್ಡ್ ಹೇಗೆ ಪಡೆಯುವುದು
ಈ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ ಅರ್ಜಿಯೊಂದಿಗೆ ದಾಖಲೆಗಳನ್ನು ಲಗತ್ತಿಸಿ ನಿಮ್ಮ ಸಮೀಪದ ಆಹಾರ ಕಚೇರಿಗೆ ಸಲ್ಲಿಬಹುದು. ನಿಮ್ಮ ಪ್ರದೇಶದ ಆಹಾರ ಇನ್ಸ್‌ಪೆಕ್ಟರ್ ಅವರಿಗೆ ಈ ದಾಖಲೆಗಳು ತಲುಪಲಿವೆ. ಬಳಿಕ ಆಹಾರ ಇಲಾಖೆಯ ಸಿಬ್ಬಂದಿ ದಾಖಲೆ ಪರಿಶೀಲಿಸಿ ಹದಿನೈದು ದಿನದಲ್ಲಿ ಎಪಿಎಲ್ ಕಾರ್ಡ್ ಅನ್ನು ವಿತರಿಸುತ್ತಾರೆ. ಬಳಿಕ ನಿಮ್ಮ ವಾಸ ಪ್ರದೇಶದ ಪಡಿತರ ಅಂಗಡಿ ವ್ಯಾಪ್ತಿಗೆ ಹೆಸರನ್ನು ಸೇರಿಸಲಾಗುತ್ತದೆ. ಅಲ್ಲಿಂದ ಪ್ರತಿ ತಿಂಗಳು ಪಡಿತರ ಪಡೆದುಕೊಳ್ಳಬಹುದು.
ಬಿಪಿಎಲ್ ಕಾರ್ಡ್ ಪಡೆಯಲು ಆದಾಯ ಮಿತಿ ಇದ್ದರೆ ಎಪಿಎಲ್ ಕಾರ್ಡ್‌ಗೆ ಆದಾಯ ಮಿತಿ ಇಲ್ಲ. ಇದು ಗುರುತಿನ ಚೀಟಿಯ ರೀತಿಯೂ ಕೆಲಸ ಮಾಡುವುದರಿಂದ ಎಲ್ಲರೂ ಎಪಿಎಲ್ ಕಾರ್ಡ್ ಪಡೆದುಕೊಳ್ಳಲು ಅವಕಾಶವಿದೆ.
ವರ್ಗವಾದರೆ ಅಥವಾ ಕಳೆದರೆ
ವರ್ಗಾವಣೆ ಆಗಿದ್ದರೆ ಈಗಿರುವ ಆಹಾರ ಇಲಾಖೆಯಲ್ಲಿ ಕಾರ್ಡ್ ನೀಡಿ ಹೊಸ ಪ್ರದೇಶದ ವಿಳಾಸ ಅಧರಿಸಿ ಕಾರ್ಡ್ ಪಡೆದುಕೊಳ್ಳಬಹುದು. ಇದಕ್ಕೆ ಹೊಸದಾಗಿ ಅರ್ಜಿ ಸಲ್ಲಿಸುವ ಪ್ರಮೇಯವಿರುವುದಿಲ್ಲ.
ಇನ್ನು ಕಾರ್ಡ್ ಕಳೆದು ಹೋಗಿದ್ದರೆ ಹಿಂದಿನಂತೆ ಪೊಲೀಸ್ ಠಾಣೆಗೆ ನೀಡುವ ಅಗತ್ಯವಿಲ್ಲ. ನಿಮ್ಮ ಆಧಾರ್ ನಂಬರ್ ಆಧರಿಸಿಯೇ ಕಾರ್ಡ್ ಸಿದ್ದವಾಗುವುದರಿಂದ ಕಾರ್ಡ್ ನಂಬರ್ ನೀಡಿ ಹೊಸ ಕಾರ್ಡ್ ಮುದ್ರಣ ಪ್ರತಿ ತೆಗೆದುಕೊಳ್ಳಬಹುದು.
ಕಾರ್ಡ್‌ಗೆ ಹೊಸದಾಗಿ ಯಾರದಾದರೂ ಹೆಸರು ಸೇರಿಸುವುದಿದ್ದರೂ ಆನ್‌ಲೈನ್ ಸೆಂಟರ್‌ನಲ್ಲಿ ವಿವರ ನೀಡಿದರೆ ಹಿಂದೆ ಇದ್ದ ಕಾರ್ಡ್‌ಗ ಮಾಹಿತಿ ಅಪ್ಡೇಟ್ ಮಾಡಲು ಅವಕಾಶವಿದೆ.
ಮನೆಯಿಂದಲೂ ಪಡೆಯಿರಿ
ಎಪಿಎಲ್ ಕಾರ್ಡ್ ಪಡೆಯಲು ಬಯೋ ಮೆಟ್ರಿಕ್ ಕಡ್ಡಾಯವಿಲ್ಲವಾದ್ದರಿಂದ ನೀವು ಮನೆಯಲ್ಲೇ ಕುಳಿತು ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
ಎಪಿಎಲ್ ಕಾರ್ಡ್ ಪಡೆಯಲು ಬಳಸಬಹುದಾದ ವೆಬ್‌ಸೈಟ್ ವಿಳಾಸ;
ಸಂಪರ್ಕ ಸಂಖ್ಯೆಗಳು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
ಸಹಾಯವಾಣಿ ಸಂಖ್ಯೆ 1800 425 9339
ಆಯುಕ್ತರ ಕಚೇರಿ 080 - 22262187
ಜಂಟಿ ನಿರ್ದೇಶಕರ ಕಚೇರಿ 080 - 22354857
ಆಯಾ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳ ಸಂಪರ್ಕ ಸಂಖ್ಯೆ ವೆಬ್‌ಸೈಟ್‌ನಲ್ಲಿ ಲಭ್ಯ.
=================
ವಿಭಾಗ