ಕನ್ನಡ ಸುದ್ದಿ  /  ಕರ್ನಾಟಕ  /  Karwar News: ಅಂಕೋಲಾ ಬಳಿ ಸಮುದ್ರದಲ್ಲಿ ಸಿಲುಕಿದ್ದ 27 ಮೀನುಗಾರರು, ಬೋಟ್‌ ರಕ್ಷಣೆ

Karwar News: ಅಂಕೋಲಾ ಬಳಿ ಸಮುದ್ರದಲ್ಲಿ ಸಿಲುಕಿದ್ದ 27 ಮೀನುಗಾರರು, ಬೋಟ್‌ ರಕ್ಷಣೆ

Coast guard operation ಗೋವಾ( Goa) ಮೂಲದ ಬೋಟ್‌ ಒಂದು ಉತ್ತರ ಕನ್ನಡದ ಅಂಕೋಲಾ( Ankola) ಬಳಿ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕೋಸ್ಟ್‌ ಗಾರ್ಡ್‌( Coast Guard) ಸಿಬ್ಬಂದಿ ಮೀನುಗಾರರು ಹಾಗೂ ಬೋಟ್‌ ಅನ್ನು ರಕ್ಷಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಸಮೀಪ ಸಮುದ್ರದಲ್ಲಿ ಸಿಲುಕಿದ್ದ ಗೋವಾದ ದೋಣಿ ಹಾಗೂ ಮೀನುಗಾರರನ್ನು ರಕ್ಷಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಸಮೀಪ ಸಮುದ್ರದಲ್ಲಿ ಸಿಲುಕಿದ್ದ ಗೋವಾದ ದೋಣಿ ಹಾಗೂ ಮೀನುಗಾರರನ್ನು ರಕ್ಷಿಸಲಾಗಿದೆ.

ಕಾರವಾರ: ಒಂದು ವಾರದಿಂದ ಕರ್ನಾಟಕದ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ದಾರಿ ತಪ್ಪಿ ಅಪಾಯದಲ್ಲಿದ್ದ 27 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕದ ಕೋಸ್ಟ್ ಗಾರ್ಡ್ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದ ಬೋಟ್‌ನ್ನು ಅನ್ನು ಪತ್ತೆ ಮಾಡಿ ಅದರಡಿ ಸಿಲುಕಿದ್ದವರನ್ನು ಪತ್ತೆ ಮಾಡುವಲ್ಲಿ ಮಂಗಳವಾರ ಯಶಸ್ವಿಯಾಗಿದ್ದಾರೆ.

ಗೋವಾದ ಪಣಜಿ ಮೂಲದ ಕ್ರಿಸ್ಟೋ ರೇ ಹೆಸರಿನ ಮೀನುಗಾರಿಕಾ ಬೋಟು ನವೆಂಬರ್ 27ರಿಂದ ನಾಪತ್ತೆಯಾಗಿತ್ತು. ಹವಾಮಾನ ವೈಪರಿತ್ಯದಿಂದ ಇಂಜಿನ್‌ನಲ್ಲಿ ಸಮಸ್ಯೆಯಾಗಿ ದಾರಿ ತಪ್ಪಿದ್ದ ಮೀನುಗಾರಿಕಾ ಬೋಟನ್ನು ಅಂಕೋಲಾದ ಬೇಲಿಕೇರಿ ಬಂದರಿನಿಂದ 30 ನಾಟಿಕಲ್ ಮೈಲ್ ದೂರದಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಪತ್ತೆ ಮಾಡಿದ್ದಾರೆ.

ಬೋಟಿನಲ್ಲಿ 27 ಮಂದಿ ಮೀನುಗಾರರು ಇದ್ದು ಅದೇ ಬೋಟ್ ಮೂಲಕ ಎಲ್ಲರನ್ನು ಸುರಕ್ಷಿತವಾಗಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಬೇಲಿಕೇರಿ ಬಂದರಿಗೆ ಕರೆತಂದಿದ್ದಾರೆ. ಬಳಿಕ ಅಲ್ಲಿಂದ ಅವರನ್ನು ಸುರಕ್ಷಿತವಾಗಿ ಗೋವಾಕ್ಕೆ ಕಳುಹಿಸಿಕೊಡಲಾಗಿದೆ.

ಬೋಟ್ ಎಂಜಿನ್ ಸಮಸ್ಯೆಯಿಂದಾಗಿ ಮೀನುಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಸದ್ಯ ಕೋಸ್ಟ್‌ಗಾರ್ಡ್ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಪತ್ತೆ ಮಾಡಿ ರಕ್ಷಣೆ ಮಾಡಿದ್ದರಿಂದ ಮೀನುಗಾರರು ನಿಟ್ಟುಸಿರುಬಿಟ್ಟಿದ್ದಾರೆ.

IPL_Entry_Point

ವಿಭಾಗ