ಕನ್ನಡ ಸುದ್ದಿ  /  ಜೀವನಶೈಲಿ  /  Viral Post: ಹೆಣ್ಣು ಹೊರೆ ಎಂಬ ಭಾವನೆ ತೊಡೆದುಹಾಕಲು ದೊಡ್ಡ ಜನಾಂದೋಲನವೇ ನಡೆಯಬೇಕು: ಬಿಎಂ ಹನೀಫ್‌

Viral Post: ಹೆಣ್ಣು ಹೊರೆ ಎಂಬ ಭಾವನೆ ತೊಡೆದುಹಾಕಲು ದೊಡ್ಡ ಜನಾಂದೋಲನವೇ ನಡೆಯಬೇಕು: ಬಿಎಂ ಹನೀಫ್‌

Facebook Post: ಕೆಲವು ದಿನಗಳ ಹಿಂದಷ್ಟೇ ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಸುದ್ದಿ ದೊಡ್ಡ ಸದ್ದು ಮಾಡಿತ್ತು. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ತೀರಾ ಕಡಿಮೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಬಿಎಂ ಹನೀಫ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಪತ್ರಕರ್ತ ಬಿಎಂ ಹನೀಫ್‌ ಬರಹ
ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಪತ್ರಕರ್ತ ಬಿಎಂ ಹನೀಫ್‌ ಬರಹ

Facebook Post: ಕರ್ನಾಟಕದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ತೀವ್ರ ಇಳಿಮುಖವಾಗುತ್ತಿದೆ ಎನ್ನುವುದು ವರ್ಷದ ಕೊನೆಗೆ ವಿಧಾನ ಸಭೆ ಅಧಿವೇಶನದಲ್ಲಿ ಮಂಡಿಸಲಾದ ವರದಿಯೊಂದರಲ್ಲಿ ಬಯಲಾದ ಸತ್ಯ. 2021 ರಲ್ಲಿ ಗಂಡು-ಹೆಣ್ಣಿನ ಜನಸಂಖ್ಯೆಯ ಅನುಪಾತ 1000- 947 ಇತ್ತು. ಅಂದರೆ ಸಾವಿರ ಗಂಡಿಗೆ 947 ಹೆಣ್ಣು. 2022 ರಲ್ಲಿ ಈ ಅನುಪಾತ 1000 - 929 ಕ್ಕೆ ಕುಸಿದಿದೆ! ಅಂದರೆ 1000 ಗಂಡಸರಿಗೆ 929 ಮಹಿಳೆಯರು!

ಟ್ರೆಂಡಿಂಗ್​ ಸುದ್ದಿ

46.15 ಲಕ್ಷ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ

ಕರ್ನಾಟಕದ ಜನಸಂಖ್ಯೆ ಆರೂವರೆ ಕೋಟಿ ಎಂದು ಲೆಕ್ಕ ಹಾಕಿದರೆ, ಒಟ್ಟು ಜನಸಂಖ್ಯೆಯಲ್ಲಿ ಗಂಡಸರಿಗಿಂತ 46.15 ಲಕ್ಷ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇದೆ! 46.15 ಲಕ್ಷ ಗಂಡಸರು, ಕರ್ನಾಟಕದವರನ್ನೇ ಮದುವೆ ಆಗಬೇಕು ಎಂದರೆ ಸಾಧ್ಯವಿಲ್ಲ. ಹೊರ ರಾಜ್ಯದವರನ್ನು ಹುಡುಕಬೇಕು. ಅಂತರರಾಜ್ಯ ಮತ್ತು ಅಂತರದೇಶೀಯ ಮದುವೆಗಳು ಹೆಚ್ಚಾಗಬೇಕು. ಭಾರತದ ಜನಸಂಖ್ಯೆಯಲ್ಲಿ ಗಂಡು ಮತ್ತು ಹೆಣ್ಣಿನ ಅನುಪಾತ 2022-23 ರಲ್ಲಿ 1000 ಗಂಡಿಗೆ 933 ಹೆಣ್ಣು ಎಂದು ದಾಖಲಾಗಿದೆ. ಅಂದರೆ ಅಲ್ಲೂ 1000 ಗಂಡಸರಿಗೆ 67 ಹೆಣ್ಣುಮಕ್ಕಳ ಕೊರತೆ ಇದೆ. 2022 ರಲ್ಲಿ ಭಾರತದ ಒಟ್ಟು ಜನಸಂಖ್ಯೆ 142 ಕೋಟಿ ಎಂದು ಲೆಕ್ಕ ಹಾಕಿದರೆ ಎಷ್ಟು ಹೆಣ್ಣುಮಕ್ಕಳ ಕೊರತೆ ಇದೆ ಎಂದು ನೀವೇ ಲೆಕ್ಕ ಹಾಕಿ!

ಭ್ರೂಣಹತ್ಯೆ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು

ಇದು ಕೇವಲ ಮದುವೆಯ ಪ್ರಶ್ನೆ ಅಲ್ಲ. ನಾವು ಬಹುತೇಕ ಗಂಡಸರು ಹೆಣ್ಣನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತೇವೆ.‌ ನಮ್ಮ ಈ property concept ಮತ್ತು feudal mentalityಗೆ ಸಹಸ್ರಾರು ವರ್ಷಗಳ ಇತಿಹಾಸವೇ ಇದೆ. ಹೆಣ್ಣುಮಕ್ಕಳೇ ಇಲ್ಲದ ಸಂಸಾರವನ್ನು ಊಹಿಸಿ. ನಿಜಕ್ಕೂ ಅದೊಂದು ಮರುಭೂಮಿಯ ಪಯಣ. ನಮ್ಮ ಸಮಾಜದ ಅಂತಃಕರಣವನ್ನು, ಪ್ರೀತಿಯ ಅಂತಃ ಸತ್ವವನ್ನು ಈಗಲೂ ನೀರು ಹನಿಸಿ ಕಾಪಾಡಿಕೊಂಡು ಬಂದಿರುವವರು ಹೆಣ್ಣು ಮಕ್ಕಳು. ಹೆಣ್ಣನ್ನು ಭ್ರೂಣದಲ್ಲೇ ಕಿತ್ತೆಸೆಯುವ ದುರುಳರಿಗೆ ಕಠಿಣಾತಿ ಕಠಿಣ ಶಿಕ್ಷೆ ವಿಧಿಸಲು ಕಾನೂನನ್ನೇ ಬದಲಿಸಬೇಕಿದೆ.

ಕೇಂದ್ರ ಸರ್ಕಾರದ ಅಂದಾಜು ಲೆಕ್ಕಾಚಾರದ ಪ್ರಕಾರ, 2023 ರಲ್ಲಿ ಪರಿಸ್ಥಿತಿ ಸುಧಾರಿಸಲಿದೆ. ದೇಶದಲ್ಲಿ ಗಂಡಿಗಿಂತ ಹೆಣ್ಣುಗಳ ಸಂಖ್ಯೆ ಜಾಸ್ತಿ ಆಗಲಿದೆ. 1000 ಗಂಡುಗಳಿಗೆ 1020 ಹೆಣ್ಣು ಮಕ್ಕಳ ಸಂಖ್ಯೆ ಇರಲಿದೆ. 2021 ರಲ್ಲಿ ಅಗಬೇಕಾಗಿದ್ದ ಜನಗಣತಿ‌ ಇನ್ನೂ ಆಗಿಲ್ಲ. 2024 ರಲ್ಲಿ ಜನಗಣತಿ ಆದರೆ ನಿಖರ ಲೆಕ್ಕ ಗೊತ್ತಾಗಬಹುದು.

ಕರ್ನಾಟಕದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ತೀವ್ರ ಇಳಿಕೆಯಾಗಲು ಮುಖ್ಯ ಕಾರಣ ಹೆಣ್ಣು ಭ್ರೂಣ ಹತ್ಯೆ ಹೆಚ್ಚುತ್ತಿರುವುದು. ಕೇವಲ ಪೊಲೀಸರು ದಾಳಿ ಮಾಡಿ ದಲ್ಲಾಳಿಗಳನ್ನೂ, ಕಳ್ಳ ವೈದ್ಯರನ್ನೂ ಬಂಧಿಸಿದರೆ ಸಾಲದು. ಜನರ ಮನಸ್ಸಿನಲ್ಲಿ ಹೆಣ್ಣೊಂದು ಹೊರೆ ಎಂದಿರುವ ಭಾವನೆಗಳನ್ನು ಕಿತ್ತು ಹಾಕಲು ದೊಡ್ಡ ಜನಾಂದೋಲನವೇ ನಡೆಯಬೇಕು.

ಇನ್ನಷ್ಟು ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳನ್ನು ಓದಲು ಕ್ಲಿಕ್‌ ಮಾಡಿ