ಕನ್ನಡ ಸುದ್ದಿ  /  ಜೀವನಶೈಲಿ  /  ಪುರುಷರ ಖಿನ್ನತೆಗೆ 7 ಕಾರಣಗಳಿವು; ಯಾರಲ್ಲೂ ಹೇಳಿಕೊಳ್ಳಲಾಗದ ಈ ಸಮಸ್ಯೆಯಿಂದ ಹೊರಬರಲು ಹೀಗೆ ಮಾಡಿ

ಪುರುಷರ ಖಿನ್ನತೆಗೆ 7 ಕಾರಣಗಳಿವು; ಯಾರಲ್ಲೂ ಹೇಳಿಕೊಳ್ಳಲಾಗದ ಈ ಸಮಸ್ಯೆಯಿಂದ ಹೊರಬರಲು ಹೀಗೆ ಮಾಡಿ

ಪುರುಷರು ತಮ್ಮೊಳಗಿನ ನೋವುಗಳನ್ನು ಸಾಮಾನ್ಯವಾಗಿ ಯಾರೊಂದಿಗೂ ಹೆಚ್ಚಾಗಿ ಹಂಚಿಕೊಳ್ಳುವುದಿಲ್ಲ. ಸಮಸ್ಯೆಗಳನ್ನ ಬಹಿರಂಗವಾಗಿ ಹೇಳಿಕೊಳ್ಳದೆ ಖಿನ್ನತೆಗೆ ಒಳಗಾಗುತ್ತಾರೆ. ಇದಕ್ಕೆ ಪ್ರಮುಖವಾದ ಕಾರಣ ಹಾಗೂ ಖಿನ್ನತೆಯ ಲಕ್ಷಣಗಳನ್ನು ತಿಳಿಯಿರಿ.

ಪುರುಷರು ಖಿನ್ನತೆಗೆ ಒಳಗಾಗಲು ಪ್ರಮುಖವಾಗಿ ಕಾರಣವಾಗುವ 7 ಅಂಶಗಳನ್ನು ತಿಳಿಯಿರಿ
ಪುರುಷರು ಖಿನ್ನತೆಗೆ ಒಳಗಾಗಲು ಪ್ರಮುಖವಾಗಿ ಕಾರಣವಾಗುವ 7 ಅಂಶಗಳನ್ನು ತಿಳಿಯಿರಿ

ಮಹಿಳೆಯರಿಗೆ ಏನೇ ಸಮಸ್ಯೆಯಾದರೂ ತಮ್ಮ ಸಂಗಾತಿಯೊಂದಿಗೆ ಇಲ್ಲವೇ ಸಂಬಂಧಿಕರೊಂದಿಗೆ ಹೇಳಿಕೊಂಡು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಇಂಥ ವಿಚಾರದಲ್ಲಿ ಪುರುಷರು ಸ್ವಲ್ಪ ಭಿನ್ನವಾಗಿರುತ್ತಾರೆ. ಪುರುಷರು ತಮ್ಮ ಸಮಸ್ಯೆಗಳನ್ನು ಅಷ್ಟು ಬೇಗ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ಮರೆಮಾಚುವ ಮೂಲಕ ತಮ್ಮೊಳಗೆ ಹೋರಾಟವನ್ನು ಮಾಡುತ್ತಾರೆ. ಇದು ಕಡಿಮೆ ರೋಗನಿರ್ಣಯ ಹಾಗೂ ಖಿನ್ನತೆಗೆ (Depression in Men) ಕಾರಣವಾಗುತ್ತದೆ ಎಂದು ತಜ್ಞರು ವೈದ್ಯರು ಹೇಳುತ್ತಾರೆ. ಪುರುಷರಲ್ಲಿನ ಖಿನ್ನತೆಯ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಪರಿಹಾರದ ಮೊದಲ ಹಂತವಾಗಿದೆ.

ಟ್ರೆಂಡಿಂಗ್​ ಸುದ್ದಿ

ಖಿನ್ನತೆ ಒಂದು ಮಾನಸಿಕ ಆರೋಗ್ಯ ಸಮಸ್ಯೆಯಾಗಿದ್ದು, ಲಿಂಗ ಭೇದಭಾವ ಇಲ್ಲದೆ ಯಾರಿಗೂ ಬೇಕಾದರೂ ಬರುತ್ತದೆ. ಅದರಲ್ಲೂ ಇತ್ತೀಚೆಗೆ ಸರ್ವೇ ಸಾಮಾನ್ಯವಾದ ಮಾನಸಿಕ ಕಾಯಿಲೆಯಾಗಿದೆ. ಮಹಿಳೆಯರಿಗಿಂತ ಪುರುಷರು ವಿಭಿನ್ನವಾದ ಖಿನ್ನತೆಯನ್ನು ಅನುಭವಿಸುತ್ತಾರೆ. ಹೀಗಾಗಿ ಪುರುಷರಲ್ಲಿ ಖಿನ್ನತೆಯ ಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ಕೊಡಿಸುವುದು ತುಂಬಾ ಮುಖ್ಯವಾಗಿರುತ್ತದೆ. ಪುರುಷರಲ್ಲಿನ ಖಿನ್ನತೆಯ 7 ಲಕ್ಷಣಗಳನ್ನು ಇಲ್ಲಿ ನೀಡಲಾಗಿದೆ.

ಕೋಪ ಮತ್ತು ಕಿರಿಕಿರಿ: ಪುರುಷರು ಮತ್ತು ಮಹಿಳೆಯರಲ್ಲಿ ದುಃಖವು ಖಿನ್ನತೆಯ ಸಾಮಾನ್ಯ ಲಕ್ಷಣವಾಗಿದೆ. ಆದರೆ ಮಹಿಳೆಯರು ಬೇಗ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಪುರುಷರು ಎಷ್ಟೇ ದುಃಖವಾದರೂ ಅದನ್ನು ವ್ಯಕ್ತಪಡಿಸುವುದು ತೀರಾ ಕಡಿಮೆ. ಹೀಗೆ ದುಃಖವನ್ನು ನಿಯಂತ್ರಿಸಿಕೊಳ್ಳುವುದರಿಂದ ಕೂಡಲೇ ಕೋಪಗೊಳುತ್ತಾರೆ. ಇದು ಅವರಿಗೆ ಕಿರಿಕಿರಿ ಉಂಟು ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.

ದೈಹಿಕ ಸಮಸ್ಯೆಗಳು: ಖಿನ್ನತೆಯಿಂದ ಬಳಲುವ ಪುರುಷರಿಗೆ ಸ್ಪಷ್ಟಕಾರಣವಿಲ್ಲದೆ ತಲೆನೋವು, ಜೀರ್ಣಕ್ರಿಯೆ ಸಮಸ್ಯೆ ಅಥವಾ ದೀರ್ಘಕಾಲದ ನೋವಿನ ದೈಹಿಕ ಲಕ್ಷಣಗಳು ಕಂಡುಬರುತ್ತವೆ. ಏಕೆಂದರೆ ಖಿನ್ನತೆಯು ನೋವಿನ ಗ್ರಹಿಕೆಯನ್ನು ಉಲ್ಭಣಗೊಳಿಸುತ್ತದೆ. ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ.

ಅಪಾಯ ಸನ್ನಿವೇಶಗಳನ್ನು ಎದುರಿಸುವ ಸ್ವಭಾವ: ಕೆಲ ಪುರುಷರ ಖಿನ್ನತೆಯನ್ನು ಎದುರಿಸಲು ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಅಜಾಗರೂಕ ಚಾಲನೆ, ಮಾದಕ ವ್ಯಸನ, ಅತಿಯಾದ ಜೂಜು ಸೇರಿದಂತೆ ಹಲವು ಅಪಾಯಕಾರಿ ಅಭ್ಯಾಸಗಳಿಗೆ ಅಂಟಿಕೊಂಡರುತ್ತಾರೆ. ಇವು ಖಿನ್ನತೆಯನ್ನು ಕಡಿಮೆ ಮಾಡುವ ಬದಲು ಮತ್ತಷ್ಚು ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತವೆ.

ಸಾಮಾಜಿಕ ಹಿಂತೆಗೆದುಕೊಳ್ಳುವಿಕೆ: ಖಿನ್ನತೆಗೊಳಾಗುವ ಪುರುಷರು ಸಾಮಾನ್ಯವಾಗಿ ತಮ್ಮನ್ನು ಪ್ರತ್ಯೇಕಿಸಿಕೊಳ್ಳಲು ಬಯಸುತ್ತಾರೆ. ತಮ್ಮ ಭಾವನೆ ಹಾಗೂ ಹೋರಾಟಗಳ ಕುರಿತ ಚರ್ಚೆಯನ್ನು ತಪ್ಪಿಸಿಕೊಳ್ಳಲು ಬಾಹ್ಯ ಸಂವಹನಗಳಲ್ಲಿ ಭಾಗವಹಿಸುವುದಿಲ್ಲ. ಇದು ಒಂಟಿತನ ಮತ್ತು ಪ್ರತ್ಯೇಕತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಸಮಯ ಮೀರಿ ಕೆಲಸದಲ್ಲಿ ತೊಡಗುವುದು: ಭಾವನಾತ್ಮಕ ನೋವಿನಿಂದ ದೂರವಿರಲು ಕೆಲವು ಪುರುಷರು ನಿಯಂತ್ರಣದ ಪ್ರಜ್ಞೆಯನ್ನು ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ ಇರುತ್ತಾರೆ. ಕೆಲವರಂತೂ ತಮ್ಮ ಕೆಲಸದಲ್ಲಿ ಸಂಪೂರ್ಣವಾಗಿ ಮಿತಿ ಮೀರಿದ ಮಟ್ಟಕ್ಕೆ ಹೋಗುತ್ತಾರೆ. ಕೆಲಸದ ಮೇಲಿನ ಈ ತೀವ್ರವಾದ ತೊಡಗಿಸಿಕೊಳ್ಳುವಿಕೆ ಆರಂಭದಲ್ಲಿ ಪರಿಹಾರವಾಗಿ ಕಾಣಬಹದು, ಆದರೆ ಮುಂದೊಂದು ದಿನ ಕೆಲಸವೇ ಮಾಡದ ಸ್ಥಿತಿಗೆ ತಲುವ ಸಾಧ್ಯತೆಗಳಿರುತ್ತವೆ.

ನಿದ್ರೆಯ ಸಮಸ್ಯೆ: ನಿದ್ರಾಹೀನತೆಯು ಪುರುಷರಲ್ಲಿ ಖಿನ್ನತೆಗೆ ಪ್ರಮುಖ ಕಾರಣವಾಗಿರುತ್ತದೆ. ಇಡೀ ರಾತ್ರಿ ನಿದ್ರೆ ಬಾರದೆ ಹಾಸಿಗೆಯಲ್ಲಿ ಹೊರಳಾಡುತ್ತಾರೆ. ನಿದ್ರೆ ಇಲ್ಲದೆ ರಾತ್ರಿಗಳನ್ನ ಕಳೆಯುತ್ತಾರೆ. ಆದರೆ ಕೆಲವೊಂದು ಪ್ರಕರಣಗಳಲ್ಲಿ ಖಿನ್ನತೆಗೆ ಒಳಗಾಗಿರುವ ಪುರುಷರು ಹೆಚ್ಚು ನಿದ್ರೆ ಮಾಡುತ್ತಾರೆ. ಆ ಮೂಲಕ ಖಿನ್ನತೆಯನ್ನು ನಿಭಾಯಿಸಬಹದು ಎಂದು ವೈದ್ಯರು ಹೇಳುತ್ತಾರೆ.

ಖುಷಿಯನ್ನು ಕಳೆದುಕೊಳ್ಳುವುದು: ಒಮ್ಮೆ ಆನಂದಿಸಿದ್ದನ್ನು ಮತ್ತೆ ಆನಂದಿಸಲು ಸಾಧ್ಯವಾಗದಿರುವುದು ಖಿನ್ನತೆಯ ವಿಶಿಷ್ಟ ಲಕ್ಷಣವಾಗಿದೆ. ಇದರಿಂದಾಗಿ ಪುರುಷರು ತಮ್ಮ ಹವ್ಯಾಸಗಳು, ಕ್ರೀಡೆ ಹಾಗೂ ಕೆಲಸದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವ ಬಹಳಷ್ಟು ಸಾಧ್ಯತೆಗಳಿರುತ್ತವೆ. ಪ್ರೇರಣೆ ಮತ್ತು ಉತ್ಸಾಹವನ್ನು ಹುಡುಕಾಡಲು ಹೆಣಗಾಡುತ್ತಾರೆ.

ಈ ಎಲ್ಲಾ ಸಮಸ್ಯೆಗಳಿಂದ ಹೊರ ಬರಬೇಕಾದರೆ ಸರಿಯಾದ ಸಮಯಕ್ಕೆ ಊಟ, ನಿದ್ದೆ, ಮನರಂಜನೆ, ಕುಟುಂಬದ ಜೊತೆ ಕಾಲ ಕಳೆಯುವುದು ಸೇರಿದಂತೆ ನೆಮ್ಮದಿಯ ಹಾದಿಯನ್ನು ಕಂಡುಕೊಳ್ಳಬೇಕು. ಸಾಲ, ಹೊಸ ಸವಾಲುಗಳನ್ನು ಎದುರಿಸಲುವ ಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಜಿದ್ದಿಗೆ ಬಿದ್ದವರಂತೆ ಬೇರೊಬ್ಬರ ಜೀವನಕ್ಕೆ ತಮ್ಮನ್ನು ಹೋಲಿಸಿಕೊಂಡು ಬದುಕುವುದು ಮೊದಲು ಬಿಡಬೇಕು. ಹೀಗೆ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡಾಗ ಖಿನ್ನತೆಯಿಂದ ಖಂಡಿತವಾಗಿ ಹೊರಬರಲು ಸಾಧ್ಯವಾಗುತ್ತದೆ.