ಕನ್ನಡ ಸುದ್ದಿ  /  ಜೀವನಶೈಲಿ  /  Agarbatti Benefits: ದೇವರ ಪೂಜೆಗಷ್ಟೇ ಅಲ್ಲ, ಮನೆಯಲ್ಲಿ ಅಗರಬತ್ತಿ ಹಚ್ಚುವುದರಿಂದ ದೇಹ, ಮನಸ್ಸಿಗೆ ಇಷ್ಟೆಲ್ಲಾ ಪ್ರಯೋಜನಗಳಿವೆ

Agarbatti Benefits: ದೇವರ ಪೂಜೆಗಷ್ಟೇ ಅಲ್ಲ, ಮನೆಯಲ್ಲಿ ಅಗರಬತ್ತಿ ಹಚ್ಚುವುದರಿಂದ ದೇಹ, ಮನಸ್ಸಿಗೆ ಇಷ್ಟೆಲ್ಲಾ ಪ್ರಯೋಜನಗಳಿವೆ

ಅಗರಬತ್ತಿ ಇಲ್ಲದ ಹಿಂದೂಗಳ ಮನೆಯಿರುವುದು ಬಹುಶಃ ವಿರಳ. ಮನೆಗಳಲ್ಲಿ ದಿನ ಬೆಳಗಾದ್ರೆ ದೇವರಿಗೆ ಅಗರಬತ್ತಿ ಹಚ್ಚುವುದು ವಾಡಿಕೆ. ಅಗರಬತ್ತಿಯನ್ನು ಬೆಳಗಿಸುವ ಪ್ರಕ್ರಿಯೆಯು ಸಂಪ್ರದಾಯವನ್ನು ಮೀರಿ ವಿಸ್ತರಿಸಿದೆ. ಇದು ಧಾರ್ಮಿಕ ವಿಚಾರಗಳಿಗೆ ಮಾತ್ರವಲ್ಲದೆ, ಹಲವು ಪ್ರಯೋಜನಗಳನ್ನು ಸಹ ಹೊಂದಿದೆ. ಈ ಕುರಿತ ಮಾಹಿತಿ ಇಲ್ಲಿದೆ (ಬರಹ: ಪ್ರಿಯಾಂಕ ಗೌಡ)

ಮನೆಯಲ್ಲಿ ಅಗರಬತ್ತಿ ಹಚ್ಚುವುದರಿಂದ ದೇಹ, ಮನಸ್ಸಿಗೆ ಇಷ್ಟೆಲ್ಲಾ ಪ್ರಯೋಜನಗಳಿವೆ
ಮನೆಯಲ್ಲಿ ಅಗರಬತ್ತಿ ಹಚ್ಚುವುದರಿಂದ ದೇಹ, ಮನಸ್ಸಿಗೆ ಇಷ್ಟೆಲ್ಲಾ ಪ್ರಯೋಜನಗಳಿವೆ

ಭಾರತೀಯರು ಅದರಲ್ಲೂ ಹಿಂದೂಗಳ ಮನೆಗಳಲ್ಲಿ ಅಗರಬತ್ತಿಗೆ ಮಹತ್ವದ ಸ್ಥಾನಮಾನವಿದೆ. ಹಲವು ತಲೆಮಾರುಗಳಿಂದ ಅಗರಬತ್ತಿಗಳು ತನ್ನದೇ ಆದ ಪ್ರಾಮುಖ್ಯವನ್ನು ಹೊಂದಿವೆ. ಅಗರಬತ್ತಿಯನ್ನು ಬೆಳಗಿಸುವ ಪ್ರಕ್ರಿಯೆಯು ಸಂಪ್ರದಾಯವನ್ನು ಮೀರಿ ವಿಸ್ತರಿಸಿದೆ. ಇದರ ಮಹತ್ವವು ಕಾಲಾನಂತರದಲ್ಲಿ ವಿಕಸನಗೊಂಡಿದ್ದು, ಇದು ಬಹುಮುಖಿ ಪ್ರಯೋಜನಗಳನ್ನು ಹೊಂದಿದೆ. ಒತ್ತಡ ಕಡಿಮೆ ಮಾಡುವುದು, ಆತಂಕ ನಿವಾರಣೆ, ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುವುದು ಮತ್ತು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವವರೆಗೆ ಅಗರಬತ್ತಿಯು ಹಲವಾರು ಉಪಯೋಗಗಳನ್ನು ಹೊಂದಿದೆ.

ಅಗರಬತ್ತಿಯ 6 ಉಪಯೋಗಗಳು ಇಲ್ಲಿವೆ

1. ಸಕರಾತ್ಮಕ ಭಾವನೆ ಮೂಡುತ್ತದೆ: ದೇವರಿಗೆ ಪ್ರತಿನಿತ್ಯ ಎರಡು ಅಗರಬತ್ತಿಯ ಕಡ್ಡಿಗಳನ್ನು ಬೆಳಗಿಸಲಾಗುತ್ತದೆ. ಇದರಿಂದ ಸುಗಂಧ ಹೊರಹೊಮ್ಮುತ್ತದೆ. ಇದು ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಪರಿವರ್ತಿಸುವ ಶಕ್ತಿಯನ್ನು ಸಹ ಹೊಂದಿದೆ. ಜನರು ಪ್ರತಿನಿತ್ಯ ಮುಂಜಾನೆ ಅಥವಾ ಸಂಜೆ ಅಗರಬತ್ತಿಯನ್ನು ಬೆಳಗಿಸುವುದು ವಾಡಿಕೆ. ಕೇವಲ ಧಾರ್ಮಿಕ ಉದ್ದೇಶಗಳಿಗಾಗಿ ಮಾತ್ರವಲ್ಲದೆ ಅಗರಬತ್ತಿಯು ಸಕಾರಾತ್ಮಕ ಭಾವನೆಯನ್ನು ತುಂಬುತ್ತದೆ.

2. ಧ್ಯಾನ ಮತ್ತು ಯೋಗ: ಅಗರಬತ್ತಿಯು ಧ್ಯಾನ ಮತ್ತು ಯೋಗ ಅಭ್ಯಾಸಗಳಿಗೆ ಅದರ ಬಳಕೆಯನ್ನು ವಿಸ್ತರಿಸುತ್ತದೆ. ಯೋಗದ ಸ್ಥಳಗಳಲ್ಲಿ ಶಕ್ತಿಯ ಹರಿವಿಗೆ ಅಗರಬತ್ತಿಯನ್ನು ಹಚ್ಚುವುದರಿಂದ ಒಳಿತಾಗುತ್ತದೆ. ಯೋಗ ಮಾಡುವಾಗ, ಅಗರಬತ್ತಿಯನ್ನು ಬೆಳಗಿಸುವುದರಿಂದ ಧನಾತ್ಮಕ ಚಿಂತನೆಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

3. ಅರೋಮಾಥೆರಪಿ ಮತ್ತು ಯೋಗಕ್ಷೇಮ: ಅರೋಮಾಥೆರಪಿಯು ಅಗರಬತ್ತಿಯಲ್ಲಿ ನಿಕಟ ಮಿತ್ರನನ್ನು ಕಂಡುಕೊಳ್ಳುತ್ತದೆ. ಅಗರಬತ್ತಿಯಿಂದ ಹೊರಹೊಮ್ಮುವ ಸುಗಂಧವು ವ್ಯಕ್ತಿಯ ಒಟ್ಟಾರೆ ಯೋಗಕ್ಷೇಮಕ್ಕೆ ಪರಿಣಾಮಕಾರಿ ಕೊಡುಗೆ ನೀಡುತ್ತದೆ. ಕೆಲವು ಅಗರಬತ್ತಿ ಸುಗಂಧವು ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ನೀಡುವ ಸಾಮರ್ಥ್ಯವನ್ನು ಹೊಂದಿದೆ.

4. ಉತ್ತಮ ನಿದ್ದೆ: ಮಲಗುವ ಮುನ್ನ ಎರಡು ಅಗರಬತ್ತಿ ಕಡ್ಡಿಗಳನ್ನು ಬೆಳಗಿಸುವುದರಿಂದ ನಿಮ್ಮ ಕೋಣೆಯು ಸುಗಂಧದ ಪರಿಮಳದಿಂದ ತುಂಬುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿರುವವರು ಈ ರೀತಿ ಮಾಡಿದ್ರೆ ನಿದ್ರಾಹೀನತೆ ದೂರವಾಗುತ್ತದೆ. ಇದರಿಂದ ದಿನಪೂರ್ತಿ ನೀವು ಚೈತನ್ಯದಿಂದ ಇರುವಿರಿ.

5. ಆತ್ಮಾವಲೋಕನ: ಅಗರಬತ್ತಿ ಸುಗಂಧವು ಜೀವನದ ಪ್ರಯಾಣದ ಆಳವಾದ ಅನ್ವೇಷಣೆಗೆ ಅನುವು ಮಾಡಿಕೊಡುವ ನೆನಪುಗಳನ್ನು ಹುಟ್ಟುಹಾಕುವ ವಿಶಿಷ್ಟ ಶಕ್ತಿಯನ್ನು ಹೊಂದಿದೆ. ಪ್ರಶಾಂತವಾದ, ಉಲ್ಲಾಸಕರ ವಾತಾವರಣದಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವಲ್ಲಿ ನೀವು ಸಂತೋಷವನ್ನು ಅನುಭವಿಸಬಹುದು.

6. ಗಮನ ಮತ್ತು ಸೃಜನಶೀಲತೆ: ನಿಮ್ಮ ಆಲೋಚನೆಯಲ್ಲಿ ಸ್ಪಷ್ಟತೆಯನ್ನು ಸಕ್ರಿಯಗೊಳಿಸುವ ಮೂಲಕ ಸುಗಂಧವು ಸೃಜನಶೀಲತೆಯನ್ನು ಉತ್ತೇಜಿಸುತ್ತದೆ. ದಿನನಿತ್ಯ ಅಗರಬತ್ತಿಯನ್ನು ಹಚ್ಚುವುದರಿಂದ ಆಸಕ್ತಿದಾಯಕ ವಿಷಯಗಳಲ್ಲಿ ನಿಮ್ಮ ಗಮನವನ್ನು ಕೇಂದ್ರಿಕರಿಸಲು ಕೂಡ ಸಾಧ್ಯವಾಗುತ್ತದೆ.

ಅಗರಬತ್ತಿಗಳು ಮನಸ್ಸು, ದೇಹ ಮತ್ತು ಆತ್ಮಕ್ಕೆ ಅಸಂಖ್ಯಾತ ಪ್ರಯೋಜನಗಳನ್ನು ನೀಡುತ್ತವೆ. ಅದು ಆತ್ಮಾವಲೋಕನವನ್ನು ಬೆಳೆಸಲಿ, ಸೃಜನಶೀಲತೆಯನ್ನು ಹೆಚ್ಚಿಸಲಿ ಅಥವಾ ವಿಶ್ರಾಂತಿಯನ್ನು ಉತ್ತೇಜಿಸುತ್ತಿರಲಿ, ಅವು ನಮ್ಮ ದೈನಂದಿನ ಜೀವನವನ್ನು ಆಳವಾಗಿ ಉತ್ಕೃಷ್ಟಗೊಳಿಸಬಹುದು.