Onion Pickle Recipe: ಈರುಳ್ಳಿ ಉಪ್ಪಿನಕಾಯಿ ಟೇಸ್ಟ್ ಮಾಡಿದ್ದೀರಾ? ಹೊಟ್ಟೆ ಹಸಿವಿಗೂ ಇದು ಒಳ್ಳೇ ರೆಸಿಪಿ, ಮಾಡುವ ಸರಳ ವಿಧಾನ ಇಲ್ಲಿದೆ..
ಚಿತ್ರಾನ್ನಾಕ್ಕೂ ಬೇಕು, ಉಪ್ಪಿಟ್ಟಿಗೂ ಈರುಳ್ಳಿ ಬೇಕು. ಸಲಾಡ್ ಆಗಿ ಈರುಳ್ಳಿಯನ್ನು ಬಳಸಲಾಗುತ್ತದೆ. ಅದರಲ್ಲೂ ನಾನ್‌ವೆಜ್ ಊಟ ಇದ್ದರೆ ಅಲ್ಲಿ ಹಸಿ ಈರುಳ್ಳಿ ಬೇಕೇ ಬೇಕು. ಹೀಗೆ ಎಲ್ಲದರಲ್ಲಿಯೂ ಸ್ಥಾನ ಪಡೆದಿರುವ ಈ ಈರುಳ್ಳಿಯ ಉಪ್ಪಿನಕಾಯಿಯನ್ನು ನೀವು ಎಂದಾದರೂ ಸೇವಿಸಿದ್ದೀರಾ?
ಈರುಳ್ಳಿ ಅಡುಗೆ ಮನೆಯಲ್ಲಿರುವ ಪ್ರಮುಖ ತರಕಾರಿ. ಹತ್ತು ಹಲವು ಔಷಧಿಯ ಗುಣಗಳೂ ಈ ಪದಾರ್ಥದಲ್ಲಿವೆ. ಬಹುತೇಕ ಅಡುಗೆಗಳಿಗೆ ಈರುಳ್ಳಿ ಇರದಿದ್ದರೆ ಅದು ಅಪೂರ್ಣ. ಚಿತ್ರಾನ್ನಾಕ್ಕೂ ಬೇಕು, ಉಪ್ಪಿಟ್ಟಿಗೂ ಈರುಳ್ಳಿ ಬೇಕು. ಸಲಾಡ್ ಆಗಿ ಈರುಳ್ಳಿಯನ್ನು ಬಳಸಲಾಗುತ್ತದೆ. ಅದರಲ್ಲೂ ನಾನ್‌ವೆಜ್ ಊಟ ಇದ್ದರೆ ಅಲ್ಲಿ ಹಸಿ ಈರುಳ್ಳಿ ಬೇಕೇ ಬೇಕು. ಹೀಗೆ ಎಲ್ಲದರಲ್ಲಿಯೂ ಸ್ಥಾನ ಪಡೆದಿರುವ ಈ ಈರುಳ್ಳಿಯ ಉಪ್ಪಿನಕಾಯಿಯನ್ನು ನೀವು ಎಂದಾದರೂ ಸೇವಿಸಿದ್ದೀರಾ? ಸಹಜವಾಗಿ ಇಲ್ಲ ಎಂಬ ಉತ್ತರ ಬರಬಹುದು. ಇದೀಗ ಫಟಾಫಟ್ ಮಾಡುವ ಈರುಳ್ಳಿ ಉಪ್ಪಿನಕಾಯಿ ರೆಸಿಪಿ ಇಲ್ಲಿದೆ ನೋಡಿ. ಹೊಟ್ಟೆ ಹಸಿವಾಗದೆ ಇರುವವರು ಈರುಳ್ಳಿ ಉಪ್ಪಿನಕಾಯಿಯನ್ನು ಬಳಸುತ್ತ ಬಂದರೆ, ಚೆನ್ನಾಗಿ ಹಸಿವಾಗುವಂತೆ ಮಾಡುತ್ತದೆ. ಮತ್ತಿನ್ನೇಕೆ ತಡ, ಈ ರೆಸಿಪಿ ಮಾಡಲು ಬೇಕಾಗುವ ಸಾಮಾಗ್ರಿ ಮತ್ತು ವಿಧಾನ ತಿಳಿಯೋಣ ಬನ್ನಿ.
ಈರುಳ್ಳಿ ಉಪ್ಪಿನಕಾಯಿಗೆ ಬೇಕಾಗುವ ಸಾಮಾಗ್ರಿಗಳು..
1 ಕೆಜಿ ಈರುಳ್ಳಿ -
3 ಟೀ ಚಮಚ ಸೋಂಪು
ಕೆಂಪು ಮೆಣಸಿನ ಕಾಯಿ
1 ಟೀ ಚಮಚ ಇಂಗು
ರುಚಿಗೆ ತಕ್ಕಷ್ಟು ಉಪ್ಪು
2 ಕಪ್ ಬಿಸಿ ನೀರು
1 ಕಪ್ ವಿನೆಗರ್
ಕರಿಮೆಣಸು
ಕರಿಬೇವು ಎಲೆ
2 ಟೀ ಚಮಚ ಅಡುಗೆ ಎಣ್ಣೆ
ಈರುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನ..
ಮಧ್ಯಮ ಗಾತ್ರದ ಈರುಳ್ಳಿಗಳನ್ನು ಸಿಪ್ಪೆ ಬಿಡಿಸಿ, ದುಂಡಗಿನ ಆಕಾರಗಳಾಗಿ ತುಂಡು ಮಾಡಿಟ್ಟುಕೊಳ್ಳಿ. ಬಳಿಕ ನೀರಿನಲ್ಲಿ ಅವುಗಳನ್ನು ಚೆನ್ನಾಗಿ ತೊಳೆಯಿರಿ.
ಹಾಗೆ ತೊಳೆದ ಈರುಳ್ಳಿಗಳನ್ನು ಒಂದು ಗಾಜಿನ ಬಾಟಲ್‌ನಲ್ಲಿ ಸುರಿಯಿರಿ. ಯಾವುದೇ ಕಾರಣಕ್ಕೂ ಸ್ಟೀಲ್ ಅಥವಾ ಪ್ಲಾಸ್ಟಿಕ್ ಜಾರ್ ಬಳಸಬೇಡಿ.
ಈಗ ಒಂದು ಬೌಲ್ ತೆಗೆದುಕೊಂಡು, ಅದಕ್ಕೆ ಒಂದು ಟೀ ಚಮಚ ವಿನೇಗರ್ ಮತ್ತು ಬಿಸಿ ನೀರನ್ನು ಸೇರಿಸಿ. ಈರುಳ್ಳಿಯ ಪ್ರಮಾಣದ ಮೇಲೆ ಇವೆರಡನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು.
ಹಾಗೆ ಸಿದ್ಧವಾದ ವಿನೇಗರ್ ಮಿಶ್ರಿತ ನೀರಿಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಇಂಗು ಬೆರೆಸಿ ಮುಚ್ಚಳ ಮುಚ್ಚಿ.
ಅದಕ್ಕೆ ಕರಿಬೇವಿನ ಎಲೆ, ಎರಡು ಚಮಚ ಎಣ್ಣೆ ಹಾಕಿ, ಚೆನ್ನಾಗಿ ಕಲಕಿ.
ಬೇಕಾದಷ್ಟು ಕರಿಮೆಣಸಿನ ಕಾಳು ಅಥವಾ ಖಾರ ಬಯಸುವವರು ಸೀಳಿದ ಕೆಂಪು ಮೆಣಸಿನಕಾಯಿಗಳನ್ನು ಸಹ ಸೇರಿಸಿಕೊಳ್ಳಬಹುದು.
ಚಕ್ಕೆ, ಲವಂಗವನ್ನೂ ಈ ವೇಳೆ ಸೇರಿಸಿಕೊಳ್ಳಬಹುದು. ಗಾಜಿನ ಬಾಟಲಿಯ ಮುಚ್ಚಳ ಮುಚ್ಚಿ ಚೆನ್ನಾಗಿ ಮಿಶ್ರಣ ಮಾಡಿ. ಆ ಮಿಶ್ರಣವನ್ನು ಮುಂದಿನ ಎರಡು ದಿನಗಳ ಕಾಲ ಹಾಗೇ ಇಡಿ.
ಈ ಮಿಶ್ರಣವನ್ನು ಮತ್ತೆ ಎರಡು ದಿನ ಹಾಗೇ ಇಟ್ಟು, ತದನಂತರ ಬಳಕೆ ಮಾಡಬಹುದು. ಫ್ರಿಡ್ಜ್ ನಲ್ಲಿ ಶೇಖರಿಸಿ ಸೇವಿಸಿ.
ಈರುಳ್ಳಿಯಲ್ಲಿದೆ ಪೋಷಕಾಂಶಗಳ ಆಗರ
ಈರುಳ್ಳಿ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಈರುಳ್ಳಿಯನ್ನು ಸೇರಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದು ವಿಟಮಿನ್ ಎ, ಸಿ ಮತ್ತು ಇ ಗುಣಗಳನ್ನು ಹೊಂದಿದೆ. ಈರುಳ್ಳಿಯಲ್ಲಿ ಸೋಡಿಯಂ, ಪೊಟ್ಯಾಸಿಯಮ್, ಫೋಲೇಟ್‌ಗಳು, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಫಾಸ್ಪರಸ್‌ನಂತಹ ಖನಿಜಗಳು ಸಮೃದ್ಧವಾಗಿವೆ. ಈರುಳ್ಳಿಯಲ್ಲಿರುವ ಪೋಷಕಾಂಶಗಳು ಹಸಿವನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ನೀವು ಕಡಿಮೆ ತೂಕ ಹೊಂದಿದ್ದರೆ, ಈರುಳ್ಳಿ ಉಪ್ಪಿನಕಾಯಿ ತೂಕವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ.