ಕನ್ನಡ ಸುದ್ದಿ  /  ಜೀವನಶೈಲಿ  /  Love Brain: ಪ್ರೀತಿ ಮಾಡೋರೇ ಹುಷಾರ್‌, ನಿಮ್ಮನ್ನು ಕಾಡಬಹುದು ಲವ್‌ ಬ್ರೈನ್‌ ಸಮಸ್ಯೆ; ಚೀನಾದ 18 ವರ್ಷದ ಹುಡುಗಿಯ ವಿಚಿತ್ರ ಪ್ರೇಮಕಥೆಯಿದು

Love Brain: ಪ್ರೀತಿ ಮಾಡೋರೇ ಹುಷಾರ್‌, ನಿಮ್ಮನ್ನು ಕಾಡಬಹುದು ಲವ್‌ ಬ್ರೈನ್‌ ಸಮಸ್ಯೆ; ಚೀನಾದ 18 ವರ್ಷದ ಹುಡುಗಿಯ ವಿಚಿತ್ರ ಪ್ರೇಮಕಥೆಯಿದು

ಚೀನಾದ ಹುಡುಗಿಯೊಬ್ಬಳು ತನ್ನ ಪ್ರಿಯಕರನಿಗೆ ಒಂದೇ ದಿನಕ್ಕೆ 100 ಬಾರಿ ಕರೆ ಮಾಡಿದ್ದಾಳೆ. ಅವನು ಉತ್ತರಿಸದಿದ್ದಾಗ ಬಾಲ್ಕನಿಯಿಂದ ಹಾರುವ ಬೆದರಿಕೆ ಹಾಕಿದ್ದಾಳೆ. ಆಕೆ ಲವ್‌ ಬ್ರೈನ್‌ ಎಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಏನಿದು ಲವ್‌ ಬ್ರೈನ್‌, ಪ್ರೀತಿ ಮಾಡೋರು ತಿಳಿಯಲೇಬೇಕಾದ ವಿಚಾರವಿದು.

ಪ್ರೀತಿ ಮಾಡೋರೇ ಹುಷಾರ್‌, ನಿಮ್ಮನ್ನು ಕಾಡಬಹುದು ಲವ್‌ ಬ್ರೈನ್‌ ಸಮಸ್ಯೆ
ಪ್ರೀತಿ ಮಾಡೋರೇ ಹುಷಾರ್‌, ನಿಮ್ಮನ್ನು ಕಾಡಬಹುದು ಲವ್‌ ಬ್ರೈನ್‌ ಸಮಸ್ಯೆ

ಪ್ರೀತಿಯಲ್ಲಿ ಬಿದ್ದವರಿಗೆ ಪ್ರಪಂಚದ ಅರಿವೇ ಇರುವುದಿಲ್ಲ ಎಂದು ಹೇಳುತ್ತಾರೆ. ಅವರಿಗೆ ತಾವೇನು ಮಾಡುತ್ತಿದ್ದೇವೆ ಎಂಬುದರ ಪರಿಜ್ಞಾನ ಇರುವುದಿಲ್ಲ. ಈ ಪ್ರೀತಿ-ಪ್ರೇಮದ ಹುಚ್ಚು ಅತಿಯಾದ್ರೆ ಮನುಷ್ಯ ಏನೂ ಬೇಕಾದ್ರೂ ಆಗಬಹುದು, ಈಗ ಪ್ರೀತಿಗೆ ಸಂಬಂಧಿಸಿದ ಮಾನಸಿಕ ಸಮಸ್ಯೆಯೊಂದು ಚೀನಾದಲ್ಲಿ ಪತ್ತೆಯಾಗಿದೆ. ಅದಕ್ಕೆ ʼಲವ್‌ ಬ್ರೈನ್ʼ ಎಂದು ಹೆಸರಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಚೀನಾದ 18 ವರ್ಷ ಚೀನಾದ ಹುಡುಗಿಯೊಬ್ಬಳು ತನ್ನ ಪ್ರಿಯಕರನಿಗೆ ದಿನಕ್ಕೆ 100 ಬಾರಿ ಕರೆ ಮಾಡಿದ್ದಾಳೆ. ಇದು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅಲ್ಲದೇ ಆ ಹುಡುಗಿಯು ಲವ್‌ ಬ್ರೈನ್‌ ಸಮಸ್ಯೆಯಿಂದ ಬಳಲುತ್ತಿದ್ದಾಳೆ ಎಂದು ಹೇಳಲಾಗುತ್ತಿದೆ.

ನೈಋತ್ಯ ಚೀನಾದ ಸಿಚುವಾನ್‌ ಪ್ರಾಂತ್ಯದ ಕ್ಸಿಯಾಯು ಎಂಬ ಎಂಬ ಹೆಸರಿನ ಹುಡುಗಿ ಈ ಗೀಳು ರೋಗದಿಂದ ಬಳಸಲುತ್ತಿದ್ದಾಳೆ. ಇದು ಅವಳ ಮಾನಸಿಕ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ, ಮಾತ್ರವಲ್ಲ ಅವಳ ಪ್ರಿಯಕರ ಬದುಕು ಕೂಡ ನೆಮ್ಮದಿ ಇಲ್ಲದಂತಾಗಿದೆ ಎಂದು ಚೀನಾ ಮಾಧ್ಯಮ ಯುಯೆನಿ ವರದಿ ಮಾಡಿದೆ.

ಕ್ಸಿಯಾಯುವಲ್ಲಿ ಈ ಆತಂಕಕಾರಿ ನಡವಳಿಕೆಯು ಕಾಲೇಜಿನ ಮೊದಲ ವರ್ಷದಿಂದಲೇ ಆರಂಭವಾಗಿತ್ತು ಎಂದು ಚೀನಾದ ಚೆಂಗ್ಡುವಿನ 4th ಪೀಪಲ್ಸ್‌ ಆಸ್ಪತ್ರೆಯ ವೈದ್ಯರಾದ ಡು ನಾ ಅವರು ಹೇಳಿದ್ದಾರೆ.

ಏನಿದು ಘಟನೆ?

ಕ್ಸಿಯಾಯು ಹಾಗೂ ಅವಳ ಪ್ರಿಯಕರ ನಡುವೆ ಪ್ರೀತಿ ಮೂಡುತ್ತದೆ. ಅವರಿಬ್ಬರ ನಡುವೆ ನಿಕಟ ಸಂಬಂಧ ಏರ್ಪಡುತ್ತದೆ. ಆದರೆ ಪ್ರೀತಿ ಆರಂಭವಾದ ಸ್ವಲ್ಪ ದಿನದಲ್ಲೇ ಪ್ರಿಯಕರನಿಗೆ ಉಸಿರು ಕಟ್ಟುವಂತೆ ಅನುಭವವಾಗುತ್ತದೆ. ಯಾಕೆಂದರೆ ಕ್ಸಿಯಾಯು ತನ್ನ ಪ್ರಿಯಕರನ ಮೇಲೆ ಅತಿಯಾಗಿ ಅವಲಂಬಿತಳಾಗುತ್ತಾಳೆ. ಆಕೆಗೆ ಅವನು ಸದಾ ತನ್ನ ಜೊತೆಗೆ ಇರಬೇಕು ಎಂಬ ಭಾವನೆ ಬೆಳೆಯುತ್ತದೆ. ಅವನ ಮೇಲೆ ಹೆಚ್ಚು ಅವಲಂಬಿತಳಾಗುತ್ತಾಳೆ.

ಅವಳು ಕೇವಲ ಅವನು ತನ್ನ ಜೊತೆಗೆ ಇರಬೇಕು ಎಂದು ಬಯಸುವುದು ಮಾತ್ರವಲ್ಲ, ರಾತ್ರಿ ಹಗಲು ತನ್ನ ಮಸೇಜ್‌ಗೆ ರಿಪ್ಲೇ ಮಾಡಬೇಕು ಎಂದು ಬಯಸುತ್ತಿದ್ದಳು. ಒಟ್ಟಾರೆ ತನ್ನ ಪ್ರಪಂಚದಲ್ಲಿ ಮಾತ್ರ ಅವನಿರಬೇಕು ಎಂದು ಭಾವನೆ ಅವಳದ್ದಾಗಿತ್ತು.

ಡಾ. ಡು ಅವರ ಪ್ರಕಾರ ʼಅವಳ ಪ್ರಿಯಕರ ಎಂಥದ್ದೇ ಸಂದರ್ಭದಲ್ಲಿ ಇರಲಿ ಇವಳ ಮೆಸೇಜ್‌, ಕಾಲ್‌ಗೆ ರಿಪ್ಲೇ ಮಾಡಲೇಬೇಕಿತ್ತು. ಅದನ್ನು ಅವಳು ಬಯಸುತ್ತಿದ್ದಳು ಕೂಡʼ.

ಕಿಯ್ಸಾಯುವಿನ ವಿಡಿಯೊವೊಂದು ವೈರಲ್‌ ಆಗಿದ್ದು ಅದರಲ್ಲಿ ಆಕೆ ತನ್ನ ಪ್ರಿಯಕರಿಗೆ ವೀಚಾಟ್‌ ಕ್ಯಾಮೆರಾ ಆನ್‌ ಮಾಡುವಂತೆ ಪದೇ ಪದೇ ಮೆಸೇಜ್‌ ಕಳುಹಿಸುತ್ತಿರುವುದನ್ನು ಕಾಣಬಹುದು. ಅವನು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ. ಅವಳು ಅವನಿಗೆ ವಿಡಿಯೊ ಕಾಲ್‌ ಮಾಡುತ್ತಾಳೆ. ಅವಳು ಅದನ್ನೂ ನಿರ್ಲಕ್ಷ್ಯ ಮಾಡುತ್ತಾನೆ.

ಒಂದು ದಿನ ಆಕೆ ತನ್ನ ಪ್ರಿಯಕರನಿಗೆ 100ಕ್ಕೂ ಹೆಚ್ಚು ಬಾರಿ ಕರೆ ಮಾಡುತ್ತಾಳೆ. ಆದರೆ ಅವನು ಕಾಲ್‌ ರಿಸೀವ್‌ ಮಾಡುವುದಿಲ್ಲ. ಇದರಿಂದ ಕೋಪಗೊಂಡ ಆಕೆ ಮನೆಯ ಮನೆಯಲ್ಲಿರುವ ವಸ್ತುಗಳನ್ನೆಲ್ಲಾ ಎಸೆದು, ಎಲ್ಲಾ ವಸ್ತುಗಳನ್ನ ಒಡೆದು ಹಾಕ್ತಾಳೆ.

ಅಷ್ಟೇ ಅಲ್ಲ ಆಕೆ ಬಾಲ್ಕನಿಯಿಂದ ಜಿಗಿಯುತ್ತೇನೆ ಎಂದು ಬೆದರಿಕೆ ಕೂಡ ಹಾಕುತ್ತಾಳೆ. ಆಗ ಅಲ್ಲಿಗೆ ಬರುವ ಪ್ರಿಯಕರ ಪೊಲೀಸರಿಗೆ ಕರೆ ಮಾಡುತ್ತಾರೆ. ಪೊಲೀಸರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಆಗ ಆಕೆ ಮಾನಸಿಕ ಸಮಸ್ಯೆಯೊಂದರಿಂದ ಬಳಲುತ್ತಿರುವುದು ಅರಿವಿಗೆ ಬರುತ್ತದೆ. ಇದಕ್ಕೆ ಆಡುಮಾತಿನಲ್ಲಿ ವೈದ್ಯರು ʼಲವ್‌ ಬ್ರೈನ್‌ʼ ಎಂದು ಹೆಸರಿಡುತ್ತಾರೆ.

ಲವ್‌ ಬ್ರೈನ್‌ಗೆ ಕಾರಣ?

ಇದು ಕೂಡ ಆತಂಕ, ಖಿನ್ನತೆ, ಬೈಪೊಲಾರ್‌ ಡಿಸಾರ್ಡರ್‌ನಂತೆ ಒಂದು ರೀತಿಯ ಮಾನಸಿಕ ಕಾಯಿಲೆ ಎಂದು ವೈದ್ಯರಾದ ಡು ನಾ ಹೇಳುತ್ತಾರೆ.

ಕ್ಸಿಯಾಯುಗೆ ಇರುವ ಅನಾರೋಗ್ಯದ ಕಾರಣವನ್ನು ಡಾ ಡು ಬಹಿರಂಗ ಪಡಿಸಿಲ್ಲ. ಆದರೆ ಬಾಲ್ಯದಲ್ಲಿ ತಮ್ಮ ಹೆತ್ತವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರದ ಜನರು ಇಂತಹ ಸಮಸ್ಯೆಯನ್ನು ಎದುರಿಸಬಹುದು ಎಂದು ಅವರು ಹೇಳುತ್ತಾರೆ.

ವೈದ್ಯರ ಪ್ರಕಾರ ಈ ಲವ್‌ ಬ್ರೈನ್‌ ಸಮಸ್ಯೆ ಸೌಮ್ಯ ರೂಪದಲ್ಲಿದ್ದರೆ ಯಾವುದೇ ತೊಂದರೆ ಇಲ್ಲ. ಆಗ ಇದು ಅವರ ಜೀವನದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ತಮ್ಮ ಭಾವನೆಗಳನ್ನು ನಿರ್ವಹಿಸಲು ಕಲಿಯುವ ಮೂಲಕ ಇದನ್ನು ತಾವಾಗಿಯೇ ಚೇತರಿಸಿಕೊಳ್ಳಬಹುದು.

ಆದರೆ ಈ ಸಮಸ್ಯೆ ತೀವ್ರ ಸ್ವರೂಪದಲ್ಲಿದ್ದರೆ ಅಂತಹ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ.