ಕನ್ನಡ ಸುದ್ದಿ  /  ಜೀವನಶೈಲಿ  /  Pcos And Gut Health: ಪಿಸಿಒಎಸ್‌ಗೂ, ಕರುಳಿನ ಆರೋಗ್ಯಕ್ಕೂ ಇದೆ ಸಂಬಂಧ! ಹಾರ್ಮೋನ್‌ ಅಸಮತೋಲನಕ್ಕೆ ಈ ಅಭ್ಯಾಸಗಳೂ ಕಾರಣವಿರಬಹುದು

PCOS and gut health: ಪಿಸಿಒಎಸ್‌ಗೂ, ಕರುಳಿನ ಆರೋಗ್ಯಕ್ಕೂ ಇದೆ ಸಂಬಂಧ! ಹಾರ್ಮೋನ್‌ ಅಸಮತೋಲನಕ್ಕೆ ಈ ಅಭ್ಯಾಸಗಳೂ ಕಾರಣವಿರಬಹುದು

PCOS and gut health: ಪಿಸಿಒಎಸ್‌ ಸಮಸ್ಯೆಗೂ, ಕರುಳಿನ ಆರೋಗ್ಯಕ್ಕೂ ಸಂಬಂಧವಿದೆ ಎಂದರೆ ನಂಬಲೇಬೇಕು. ಆ ಕಾರಣಕ್ಕೆ ಈ ಕೆಲವು ಅನಾರೋಗ್ಯಕರ ಅಭ್ಯಾಸಗಳಿಗೆ ಕಡಿವಾಣ ಹಾಕುವುದು ಅವಶ್ಯ. ಇದರಿಂದ ಹಾರ್ಮೋನುಗಳ ಅಸಮತೋಲನವನ್ನು ನಿಯಂತ್ರಿಸಬಹುದು.

ಪಿಸಿಒಡಿ
ಪಿಸಿಒಡಿ

ಇತ್ತೀಚಿನ ಮಹಿಳೆಯರಲ್ಲಿ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚುತ್ತಿವೆ. ಅವುಗಳಲ್ಲಿ ಪಿಸಿಒಡಿ ಕೂಡ ಒಂದು. ಅಂಡ್ರೋಜೆನ್‌, ಇನ್ಸುಲಿನ್‌ ಹಾಗೂ ಪ್ರೊಜೆಸ್ಟೆರಾನ್‌ ಎಂಬ ಮೂರು ಹಾರ್ಮೂನ್‌ಗಳ ವ್ಯತ್ಯಯದಿಂದ ಈ ಸಮಸ್ಯೆ ಉಂಟಾಗುತ್ತದೆ. ಈಸ್ಟ್ರೊಜೆನ್, ಆಂಡ್ರೊಜೆನ್, ಇನ್ಸುಲಿನ್ ಮತ್ತು ಇತರ ಹಾರ್ಮೋನುಗಳೊಂದಿಗೆ ಸಂವಹನ ನಡೆಸುವ ಮೂಲಕ ಕರುಳಿನ ಮೈಕ್ರೋಬಯೋಟಾವು ಮಹಿಳೆಯ ಜೀವನದುದ್ದಕ್ಕೂ ಸಂತಾನೋತ್ಪತ್ತಿ ಅಂತಃಸ್ರಾವಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕರುಳಿನ ಸೂಕ್ಷ್ಮಜೀವಿಗಳ ಸಂಯೋಜನೆಯಲ್ಲಿನ ಅಸಮತೋಲನವು ಹಲವಾರು ರೋಗಗಳು ಮತ್ತು ಗರ್ಭಧಾರಣೆಯ ತೊಡಕುಗಳು, ಪಿಸಿಒಎಸ್, ಎಂಡೊಮೆಟ್ರಿಯೊಸಿಸ್ ಹಾಗೂ ಇತರ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾನಿಕಾರಕ ಬ್ಯಾಕ್ಟೀರಿಯಾಗಳ ಅನುಪಾತದಲ್ಲಿನ ಹೆಚ್ಚಳವು ಈ ಸಮಸ್ಯೆಗಳಿಗೆ ಕಾರಣವಾಗಬಹುದು. ಇದನ್ನು ಗಟ್‌ ಡಿಸ್ಬಯೋಸಿಸ್‌ ಎಂದೂ ಕರೆಯಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಪಿಸಿಒಎಸ್‌ನಿಂದ ಬಳಲುತ್ತಿರುವವರು ಪರ್ಮಿಯಬಲ್ ಗಟ್ ಲೈನಿಂಗ್ ಅನ್ನು ಹೊಂದಿರುತ್ತಾರೆ, ಅಂದರೆ ಕರುಳಿನ ತಡೆಗೋಡೆಗಳ ಮೂಲಕ ಹಾರ್ಮೋನುಗಳಿಗೆ ಹಾನಿಕಾರಕ ಅಂಶಗಳ ಸೋರಿಕೆಗೆ ಕಾರಣವಾಗಬಹುದು. ಡಿಸ್ಬಯೋಸಿಸ್ ಮತ್ತು ಕರುಳಿನ ಪ್ರವೇಶಸಾಧ್ಯತೆ ಎರಡೂ ಪಿಸಿಒಎಸ್ ಇರುವವರಲ್ಲಿ ಕಂಡುಬರುವ ಕರುಳಿನ ಸ್ಥಿತಿಗಳಾಗಿವೆ.

ಪೌಷ್ಟಿಕ ತಜ್ಞೆ ತನಿಶಾ ಬಾವಾ ಹಿಂದೂಸ್ತಾನ್‌ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಕರುಳಿನ ಆರೋಗ್ಯಕ್ಕೆ ತೊಂದರೆ ಉಂಟು ಮಾಡುವ ಅಭ್ಯಾಸಗಳು ಹಾಗೂ ಇದರಿಂದ ಪಿಸಿಒಡಿ ಸಮಸ್ಯೆ ಉಂಟಾಗಲು ಕಾರಣ ಹೇಗೆ ಎಂಬುದನ್ನುತಿಳಿಸಿದ್ದಾರೆ.

ಗ್ಲೈಸೆಮಿಕ್‌ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳು

ಸಕ್ಕರೆ ಹಾಗೂ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳಲ್ಲಿ ಹೆಚ್ಚಿನ ಆಹಾರವು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಿದಾಗ ಮೇದೋಜೀಕರಣ ಗ್ರಂಥಿಯಿಂದ ಇನ್ಸುಲಿನ್‌ ಸ್ರವಿಕೆಯಾಗುತ್ತದೆ. ಇದು ಸಕ್ಕರೆಯ ಅಂಶವನ್ನೇ ಶಕ್ತಿಯಾಗಿ ಬಳಸಿಕೊಳ್ಳುತ್ತದೆ. ಸಕ್ಕರೆ ಹಾಗೂ ಸಂಸ್ಕರಿಸಿದ ಧಾನ್ಯಗಳ ಅತಿಯಾದ ಸೇವನೆಯಿಂದಾಗಿ ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚುವುದು ಮಾತ್ರವಲ್ಲ ಈ ಪರಿವರ್ತನೆಗೆ ಕಾರಣವಾಗುವ ಜೀವಕೋಶಗಳು ಪಿಸಿಒಎಸ್‌ಗೆ ಕಾರಣವಾಗುವ ಇನ್ಸುಲಿನ್‌ ನಿರೋಧಕವಾಗಿರುತ್ತವೆ.

ಉತ್ತಮ ಕೊಬ್ಬಿನಾಂಶ ಪ್ರಮಾಣ ಕಡಿಮೆ ಇರುವ ಆಹಾರ

ದೇಹದಲ್ಲಿನ ಕೊಬ್ಬಿನ ಕಾರಣದಿಂದ ಹಾರ್ಮೋನುಗಳು ಉತ್ಪತ್ತಿಯಾಗುತ್ತದೆ. ಹಾಗಾಗಿ ಉತ್ತಮ ಕೊಬ್ಬಿನಾಂಶ ಇರುವ ಆಹಾರ ಸೇವನೆ ಹಾರ್ಮೋನುಗಳ ಆರೋಗ್ಯಕ್ಕೆ ಬಹಳ ಮುಖ್ಯ. ಒಂದು ವೇಳೆ ಉತ್ತಮ ಕೊಬ್ಬಿನಾಂಶ ಇರುವ ಆಹಾರ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿದರೆ ಹಾರ್ಮೋನ್‌ಗಳ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಗರ್ಭನಿರೋಧಕಗಳು

ಇಂದಿನ ಜೀವನಶೈಲಿಯಲ್ಲಿ ಹಲವು ಮಹಿಳೆಯರು ಗರ್ಭನಿರೋಧಕ ಔಷಧಿಗಳು ಸೇವಿಸುತ್ತಾರೆ. ಈ ಮಾತ್ರೆಗಳ ಸೇವನೆಯನ್ನು ನಿಲ್ಲಿಸಿದಾಗ ಆಂಡ್ರೋಜೆನ್‌ ಮಟ್ಟದಲ್ಲಿ ಏರಿಕೆಯಾಗುತ್ತದೆ. ಗರ್ಭನಿರೋಧಕ ಔಷಧಿಗಳು ಪಿಟ್ಯೂಟರಿ ಗ್ರಂಥಿ ಹಾಗೂ ಅಂಡಾಶಯಗಳ ನಡುವಿನ ಸಂಪರ್ಕವನ್ನು ಕಡಿಮೆ ಮಾಡುತ್ತದೆ. ಆ ಕಾರಣದಿಂದ ಈ ಮಾತ್ರೆಯನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದಾಗ ಪುನಃ ಪಿಸಿಒಎಸ್‌ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಅಧಿಕ ಹಾಗೂ ದೀರ್ಘಕಾಲದ ಒತ್ತಡ

ಮಹಿಳೆಯರಲ್ಲಿ ಒತ್ತಡ ಹೆಚ್ಚಿದಾಗ ಕಾರ್ಟಿಸೋಲ್‌ ಹಾಗೂ ಡಿಎಚ್‌ಇಎಯ ಸ್ರವಿಸುವಿಕೆಯ ಪ್ರಮಾಣವೂ ಹೆಚ್ಚುತ್ತದೆ. ಇದು ಮೂತ್ರಜನಂಕಾಗದ ಪಿಸಿಒಎಸ್‌ಗೆ ಕಾರಣವಾಗಬಹುದು.

ಉರಿಯೂತಕ್ಕೆ ಕಾರಣವಾಗುವ ಆಹಾರ ಪದಾರ್ಥಗಳು

ಸಕ್ಕರೆ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು, ಉರಿಯೂತಕ್ಕೆ ಕಾರಣವಾಗುವ ಎಣ್ಣೆಗಳು, ಗುಣಮಟ್ಟದ ನಿದ್ದೆ ಇವು ಕರುಳಿನ ಲೋಳೆಪೊರೆಯಲ್ಲಿ ತೀವ್ರತರದ ಉರಿಯೂತವನ್ನು ಉಂಟು ಮಾಡಬಹುದು. ಇದು ಪಿಸಿಒಎಸ್‌ನಂತಹ ಸಮಸ್ಯೆಗಳಿಗೂ ಕಾರಣವಾಗಬಹುದು, ಜೊತೆಗೆ ಹಾರ್ಮೋನ್‌ಗಳ ಆರೋಗ್ಯಕ್ಕೂ ತೊಂದರೆ ಉಂಟು ಮಾಡಬಹುದು.

ವಿಭಾಗ