ಕನ್ನಡ ಸುದ್ದಿ  /  ಜೀವನಶೈಲಿ  /  Breakfast Recipe: ಮಕ್ಕಳಿಗೂ ಕೊಡಬಹುದಾದ ಸಂಪೂರ್ಣ ಪ್ರೋಟೀನ್​​​​​​​ಯುಕ್ತ ರೆಸಿಪಿ...ಮಾಡೋದು ಹೇಗೆ ನೋಡಿ

Breakfast recipe: ಮಕ್ಕಳಿಗೂ ಕೊಡಬಹುದಾದ ಸಂಪೂರ್ಣ ಪ್ರೋಟೀನ್​​​​​​​ಯುಕ್ತ ರೆಸಿಪಿ...ಮಾಡೋದು ಹೇಗೆ ನೋಡಿ

ಸಂಪೂರ್ಣ ಗೋಧಿ ಬ್ರೆಡ್, ಮೊಟ್ಟೆ ಮತ್ತು ತರಕಾರಿಗಳ ಈ ಪವರ್ ಪ್ಯಾಕ್​​​​​​​​​​​ ಊಟವು ನಿಮಗೆ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ, ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಮೆದುಳಿನ ಕಾರ್ಯವನ್ನು ಕೂಡಾ ಸುಧಾರಿಸುತ್ತದೆ.

ವೀಟ್ ಬ್ರೆಡ್ ಆಮ್ಲೆಟ್
ವೀಟ್ ಬ್ರೆಡ್ ಆಮ್ಲೆಟ್

ನೀವು ಎಂದಾದರೂ ಬ್ರೇಕ್​ ಫಾಸ್ಟ್​​​​ ತಿನ್ನದೆ ದಿನವನ್ನು ಪ್ರಾರಂಭಿಸಿದ್ದೀರಾ..? ಹೌದು, ಎಂದಾದರೆ ಮತ್ತೆ ಆ ರೀತಿ ತಪ್ಪು ಮಾಡಬೇಡಿ. ಏಕೆಂದರೆ ಬೆಳಗಿನ ಉಪಾಹಾರವು ದಿನದ ಪ್ರಮುಖ ಊಟವಾಗಿದೆ. ಯಾವುದೇ ಕಾರಣಕ್ಕೂ ಇದನ್ನು ತಪ್ಪಿಸಬೇಡಿ. ದಿನವಿಡೀ ನಿಮ್ಮ ಮೆದುಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಮತ್ತು ನಿಮ್ಮನ್ನು ಸಕ್ರಿಯವಾಗಿರಿಸಲು ಉಪಹಾರವನ್ನು ತಿನ್ನುವುದು ಅತ್ಯಗತ್ಯ. ರಾತ್ರಿ ಮಲಗಿದ ನಂತರ 10-12 ಗಂಟೆಗಳ ಕಾಲ ದೇಹಕ್ಕೆ ಆಹಾರದ ಪೂರೈಕೆ ಇಲ್ಲದ ಕಾರಣ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಬೆಳಗಿನ ಉಪಾಹಾರ ಮುಖ್ಯವಾಗಿದೆ. ಆದ್ದರಿಂದ ಪೌಷ್ಟಿಕ ಉಪಹಾರವನ್ನು ಸೇವಿಸುವುದು ಉತ್ತಮ.

ಟ್ರೆಂಡಿಂಗ್​ ಸುದ್ದಿ

ನಿಮಗಾಗಿ ನಾವು ಒಂದೊಳ್ಳೆ ಉಪಹಾರ ರೆಸಿಪಿಯನ್ನು ಪರಿಚಯಿಸುತ್ತೇವೆ ಇದು ಮಾಡಲು ಕೂಡಾ ಬಹಳ ಸುಲಭ. ಇದನ್ನು ವೀಟ್​​​​​​​ ಬ್ರೆಡ್ ಆಮ್ಲೆಟ್ ಎಂದೂ ಕರೆಯಲಾಗುತ್ತದೆ. ಸಂಪೂರ್ಣ ಗೋಧಿ ಬ್ರೆಡ್, ಮೊಟ್ಟೆ ಮತ್ತು ತರಕಾರಿಗಳ ಈ ಪವರ್ ಪ್ಯಾಕ್​​​​​​​​​​​ ಊಟವು ನಿಮಗೆ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ, ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಮೆದುಳಿನ ಕಾರ್ಯವನ್ನು ಕೂಡಾ ಸುಧಾರಿಸುತ್ತದೆ. ವೀಟ್ ಬ್ರೆಟ್ ಆಮ್ಲೆಟ್ ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆ ನೋಡೋಣ.

ಬೇಕಾಗುವ ಪದಾರ್ಥಗಳು

ಹೋಲ್ ವೀಟ್ ಬ್ರೆಡ್​​​​ - 2

ಮೊಟ್ಟೆಗಳು - 2

ಎಣ್ಣೆ - 2 ಟೀ ಸ್ಪೂನ್

ಹಸಿ ಮೆಣಸಿನಕಾಯಿ - 1

ಈರುಳ್ಳಿ - 1

ಚಿಕ್ಕ ಕ್ಯಾಪ್ಸಿಕಂ - 1

ಕರಿ ಮೆಣಸಿನ ಪುಡಿ - ರುಚಿಗೆ ತಕ್ಕಷ್ಟು

ಕೋಸು - ಸ್ವಲ್ಪ

ಕ್ಯಾರೆಟ್​ - ಅರ್ಧ

ಬೀನ್ಸ್ - 4

ಟೊಮ್ಯಾಟೋ - 1

ಲೆಟ್ಯೂಸ್ - 1

ಉಪ್ಪು - ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ಎಲ್ಲಾ ತರಕಾರಿಗಳನ್ನು ತೊಳೆದು ಸಣ್ಣದಾಗಿ ಕತ್ತರಿಸಿಕೊಳ್ಳಿ, ಹಸಿಮೆಣಸಿನಕಾಯಿ ಹಾಗೂ ಈರುಳ್ಳಿಯನ್ನು ಕೂಡಾ ಸಣ್ಣಗೆ ಹೆಚ್ಚಿಕೊಳ್ಳಿ

ಎಲ್ಲಾ ತರಕಾರಿಗಳನ್ನು ಸ್ವಲ್ಪ ಎಣ್ಣೆಯೊಂದಿಗೆ ಫ್ರೈ ಮಾಡಿ, ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ

ಒಂದು ಬೌಲ್​​​​​ನಲ್ಲಿ ಮೊಟ್ಟೆಯನ್ನು ಒಡೆದು ಚೆನ್ನಾಗಿ ಬೀಟ್ ಮಾಡಿಕೊಳ್ಳಿ

ಇದಕ್ಕೆ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕರಿಮೆಣಸಿನ ಪುಡಿ, ಉಪ್ಪು, ಈರುಳ್ಳಿ, ಕ್ಯಾಪ್ಸಿಕಂ ಸೇರಿಸಿ ಮಿಕ್ಸ್ ಮಾಡಿ

ತವಾ ಬಿಸಿ ಮಾಡಿ ಸ್ವಲ್ಪ ಎಣ್ಣೆ ಸವರಿ ಬ್ರೆಡ್​ ರೋಸ್ಟ್ ಮಾಡಿ ಒಂದು ಪ್ಲೇಟ್​​​ಗೆ ತೆಗೆದಿಡಿ

ಮತ್ತಷ್ಟು ಎಣ್ಣೆ ಬಿಸಿ ಮಾಡಿ ಮೊಟ್ಟೆ ಮಿಶ್ರಣವನ್ನು ಹರಡಿ, ಒಂದು ಕಡೆ ಕುಕ್ ಆದ ನಂತರ ಆಮ್ಲೆಟನ್ನು ತಿರುವಿ

ಇದರ ಮೇಲೆ ರೋಸ್ಟ್ ಮಾಡಿದ ಬ್ರೆಡ್ ಇಟ್ಟು, ಆಮ್ಲೆಟನ್ನು ಫೋಲ್ಡ್ ಮಾಡಿ

ಆಮ್ಲೆಟನ್ನು ಮಧ್ಯದಲ್ಲಿ ಕತ್ತರಿಸಿ ಸರ್ವಿಂಗ್ ಪ್ಲೇಟ್​​ಗೆ ವರ್ಗಾಯಿಸಿ, ರೋಸ್ಟ್ ಮಾಡಿದ ತರಕಾರಿ ಜೊತೆ ಸರ್ವ್ ಮಾಡಿ

ತರಕಾರಿ, ಗೋಧಿ, ಮೊಟ್ಟೆಯಂತಹ ಪೋಷಕಾಂಶಗಳಿಂದ ತುಂಬಿದ ಈ ಪ್ರೋಟೀನ್​​​ಯುಕ್ತ ಬ್ರೇಕ್ ಫಾಸ್ಟ್ ನಿಮಗೆ ಹಾಗೂ ನಿಮ್ಮ ಮನೆಯವರಿಗೆ ಖಂಡಿತ ಇಷ್ಟವಾಗುತ್ತದೆ.

ವಿಭಾಗ