ಕನ್ನಡ ಸುದ್ದಿ  /  ಜೀವನಶೈಲಿ  /  Wspd 2022: ಇಂದು ವಿಶ್ವ ಆತ್ಮಹತ್ಯೆ ತಡೆದಿನ, ಥೀಮ್‌, ಮಹತ್ವ; ಕ್ರಿಯೆ ಮೂಲಕ ಭರವಸೆ ಹುಟ್ಟಿಸಿ

WSPD 2022: ಇಂದು ವಿಶ್ವ ಆತ್ಮಹತ್ಯೆ ತಡೆದಿನ, ಥೀಮ್‌, ಮಹತ್ವ; ಕ್ರಿಯೆ ಮೂಲಕ ಭರವಸೆ ಹುಟ್ಟಿಸಿ

World Suicide Prevention Day 2022 (WSPD 2022): ಇಂದು ವಿಶ್ವ ಆತ್ಮಹತ್ಯೆ ತಡೆ ದಿನ. ಕ್ರಿಯೆಯ ಮೂಲಕ ಭರವಸೆ ಮೂಡಿಸಿ (Creating Hope Through Action) ಈ ಸಲದ ಥೀಮ್.‌ ಇದನ್ನು HTಕನ್ನಡದ ಜತೆಗೆ ವಿವರಿಸಿದ್ದಾರೆ ಬೆಂಗಳೂರಿನ ರಾಜಾಜಿನಗರದ ಇಎಸ್‌ಐಸಿ ಮಾಡೆಲ್‌ ಹಾಸ್ಪಿಟಲ್‌ ಮತ್ತು ಮಡಿಕಲ್‌ ಕಾಲೇಜ್‌, ಪಿಜಿಐಎಂಎಸ್‌ಆರ್‌ನ ಡೀನ್‌ ಡಾ.ಸಂಧ್ಯಾ. ಆರ್‌.

ಇಂದು ವಿಶ್ವ ಆತ್ಮಹತ್ಯೆ ತಡೆ ದಿನ. ಕ್ರಿಯೆಯ ಮೂಲಕ ಭರವಸೆ ಮೂಡಿಸಿ (Creating Hope Through Action) ಎಂಬುದು ಈ ಸಲದ ಥೀಮ್.‌
ಇಂದು ವಿಶ್ವ ಆತ್ಮಹತ್ಯೆ ತಡೆ ದಿನ. ಕ್ರಿಯೆಯ ಮೂಲಕ ಭರವಸೆ ಮೂಡಿಸಿ (Creating Hope Through Action) ಎಂಬುದು ಈ ಸಲದ ಥೀಮ್.‌ (unsplash)

ವಿಶ್ವ ಆತ್ಮಹತ್ಯೆ ತಡೆ ದಿನ (World Suicide Prevention Day 2022 ) ಆಚರಣೆಗೆ ನಿರ್ದಿಷ್ಟ ಹಿನ್ನೆಲೆ ಇಲ್ಲ. ಈ ಆಚರಣೆಯಲ್ಲಿ 2003ರಲ್ಲಿ ಇಂಟರ್‌ನ್ಯಾಷನಲ್‌ ಅಸೋಸಿಯೇಷನ್‌ ಫಾರ್‌ ಸೂಸೈಡ್‌ ಪ್ರಿವೆನ್ಶನ್‌ ( International Association for Suicide Prevention) ಪ್ರಾರಂಭ ಮಾಡಿತು. ವಿಶ್ವ ಆರೋಗ್ಯ ಸಂಸ್ಥೆ ( World Health Organization (WHO))ಯ ಸಹಭಾಗಿತ್ವವೂ ಇದಕ್ಕೆ ಸಿಕ್ಕಿತು. ಪ್ರತಿ ವರ್ಷ ಸೆಪ್ಟೆಂಬರ್ 10ರಂದು ಈ ದಿನ ಆಚರಿಸಲಾಗುತ್ತಿದೆ. ಆತ್ಮಹತ್ಯೆ ತಡೆಯುವ ಏಕೈಕ ಸಂದೇಶ ಹೊಂದಿರುವ ಈ ದಿನಾಚರಣೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ಸಂಘಟನೆಗಳು, ಸರ್ಕಾರಗಳು ಮತ್ತು ಪ್ರತಿಯೊಬ್ಬರೂ ಪ್ರಯತ್ನಿಸುವ ದಿನಾಚರಣೆ ಇದು.

ಟ್ರೆಂಡಿಂಗ್​ ಸುದ್ದಿ

ಈ ಸಲದ ಥೀಮ್‌ ಏನು?

ವಿಶ್ವ ಆತ್ಮಹತ್ಯೆ ತಡೆ ದಿನಕ್ಕೆ ಈ ಸಲ ವಿಶೇಷ ಥೀಮ್‌ ಇಲ್ಲ. ಆದರೆ, ಕಳೆದ ವರ್ಷವೇ ಘೋಷಣೆ ಮಾಡಿದ ಥೀಮ್‌ ಈ ಸಲಕ್ಕೂ ಅನ್ವಯ. ಇದರ ಪ್ರಕಾರ, 2021ರಿಂದ 2023ರ ತನಕ "ಕ್ರಿಯೆಯ ಮೂಲಕ ಭರವಸೆ ಮೂಡಿಸಿ" (Creating Hope Through Action) ಎಂಬ ಥೀಮ್‌ ಇರಿಸಿಕೊಳ್ಳಲಾಗಿದೆ.

ಥೀಮ್‌ ಅನ್ನು ನಾವು ಅರ್ಥಮಾಡಿಕೊಳ್ಳಬೇಕಾದ್ದು ಹೇಗೆ?

"ಕ್ರಿಯೆಯ ಮೂಲಕ ಭರವಸೆ ಮೂಡಿಸಿ" (Creating Hope Through Action). ಇದರ ಪ್ರಕಾರ, ಕ್ರಿಯೆ ಎಂದರೆ ಏನು? ಅದು ತುಂಬಾ ಸರಳ. ಆದರೆ ಸ್ವಲ್ಪ ಎಚ್ಚರಿಕೆ ಬೇಕು. ಅಂದರೆ, ಆತ್ಮಹತ್ಯೆ ಸನ್ನಿವೇಶಕ್ಕೆ ಜಾರಿದ ವ್ಯಕ್ತಿಯ ಜತೆಗೆ ವ್ಯವಹರಿಸುವಾಗ, ವ್ಯವಹರಿಸುವ ಪ್ರತಿಯೊಬ್ಬರು ಕೂಡ ಡಾಕ್ಟರ್‌ ರೀತಿಯಲ್ಲೇ ವರ್ತಿಸಬೇಕಾಗುತ್ತದೆ. ಡಾಕ್ಟರ್‌ಗಳಂತೆಯೇ ಇರಬೇಕಾಗುತ್ತದೆ. ಇವರನ್ನು ಫಸ್ಟ್‌ ಏಯ್ಡ್‌ ಪೀಪಲ್‌ ಎಂದೂ ಕರೆಯುತ್ತಾರೆ. ಯಾಕೆ ಅಂತೀರಾ?

ಯಾಕೆ ಅಂದರೆ, ಹಾರ್ಟ್‌ ಅಟ್ಯಾಕ್‌, ಬ್ರೇನ್‌ ಸ್ಟ್ರೋಕ್‌ ಕೇಸ್‌ಗಳಲ್ಲಿ ಇರುವಂತೆಯೇ ಸೂಸೈಡ್‌ ಕೇಸ್‌ಗಳಲ್ಲೂ ಗೋಲ್ಡನ್‌ ಹವರ್‌ (Golden Hour) ಅಂತ ಒಂದು ಇದೆ. ಆತ್ಮಹತ್ಯೆಯ ಸನ್ನಿವೇಶಕ್ಕೆ ಜಾರಿದ ವ್ಯಕ್ತಿಯ ಜತೆಗೆ ಸಂಪರ್ಕದಲ್ಲಿದ್ದು ಅವರಲ್ಲಿ ಭರವಸೆ ಹುಟ್ಟಿಸಿ ಅವರನ್ನು ಸೂಸೈಡ್‌ನಿಂದ ಬಚಾವ್‌ ಮಾಡಬೇಕು.

ಆ ಕ್ಷಣಕ್ಕೆ ಆ ಟೈಮ್‌ಗೆ ಅವರು ಏನಾದರೂ ಸೂಸೈಡ್‌ ಆಲೋಚನೆಯಿಂದ ತಪ್ಪಿಸಿಕೊಂಡು ಬಿಟ್ಟರೆ ಅವರು ಜೀವಂತವಾಗಿ ಆರಾಮವಾಗಿ ಇರುವಂತಹ ಚಾನ್ಸಸ್‌ ಜಾಸ್ತಿ ಇರುತ್ತೆ. ಸೂಸೈಡ್‌ ಆಲೋಚನೆ ಬಂದ ಆ ಟೈಮಲ್ಲಿ ಅಂತಹ ವ್ಯಕ್ತಿಗೆ ಇನ್ನು ತನಗೆ ಏನೂ ಇಲ್ಲ. ಇದು ಎಂಡ್‌ ಅಂತ ಅನಿಸಿರುತ್ತೆ. ಆ ಗೋಲ್ಡನ್‌ ಹವರ್‌ನಲ್ಲಿ ಯಾರಾದರೂ ಒಬ್ಬರು ಅವರಿಗೆ ಒಂದು ಚೂರು ಮೋರಲ್‌ ಸಪೋರ್ಟ್‌ ಕೊಟ್ರೂ ಬೇಕಾದಷ್ಟಾಯಿತು. ಆ ಸಪೋರ್ಟ್‌ ಕೊಡುವುದೇ ಆಕ್ಷನ್‌ ಅರ್ಥಾತ್‌ ಕ್ರಿಯೆ.

ಆ ಆಕ್ಷನ್‌ ಯಾವ ಧಾಟಿಯಲ್ಲಿ ಇರಬೇಕು ಎಂದರೆ ಹೋಪ್‌ ಅರ್ಥಾತ್‌ ಭರವಸೆ ಮೂಡಿಸುವಂತೆ ಇರಬೇಕು. ಕ್ರಿಯೇಟ್‌ ಹೋಪ್‌ ಥ್ರೂ ಆಕ್ಷನ್‌ ಎಂದರೆ ಇದುವೇ.

ಸರಿ, ಈ ಒಂದು ಭರವಸೆಯನ್ನು ಮೂಡಿಸಬೇಕು ನಿಜ. ಆದರೆ, ಆ ಭರವಸೆಯನ್ನು ಯಾವ ರೀತಿ ಮೂಡಿಸಬಹುದು? ಇದು ಜಸ್ಟ್‌ ಒಂದು ಮೋರಲ್‌ ಸಪೋರ್ಟ್‌. ಆ ಹೊತ್ತಿನಲ್ಲಿ ಅವರ ಜತೆಗೆ ಇರುವುದು ಅಷ್ಟೆ. ಅವರ ಮಾತುಗಳನ್ನು ಕೇಳುವುದಲ್ಲ, ಆಲಿಸಬೇಕು. ಕೇಳುವುದು ಎಂದರೇನು? ಆಲಿಸುವುದು ಎಂದರೇನು?

ಕೇಳುವುದು ಎಂದರೆ ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಬಿಟ್ಟು ಬಿಡೋದು. ಅಂದರೆ ಅದಕ್ಕೆ ಅಷ್ಟೇ ಮಹತ್ವ ಅಂತ. ಆದರೆ, ಆಲಿಸುವುದು ಹಾಗಲ್ಲ. ಅವರು ಹೇಳುವ ಮಾತುಗಳನ್ನು ಆಲಿಸಿಕೊಂಡು ಅರ್ಥಮಾಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಏನು ಆಕ್ಷನ್‌ ತೆಗೆದುಕೊಳ್ಳಬಹುದು ಎಂದು ಸಲಹೆ ನೀಡಬಹುದು.

ಆದರೆ, ಸೂಸೈಡ್‌ನಂತಹ ಸನ್ನಿವೇಶದಲ್ಲಿರುವ ವ್ಯಕ್ತಿಗೆ ಸಲಹೆ ನೀಡುವುದಕ್ಕಿಂತ ಹೆಚ್ಚಾಗಿ ಅವರ ಮಾತುಗಳನ್ನು ಸಿಂಪಲ್‌ ಆಗಿ ಆಲಿಸುವುದು ಅಗತ್ಯ. ಅಂದರೆ ಬೇಷರತ್‌ ಆಲಿಸುವಿಕೆ ಇಲ್ಲಿ ಮುಖ್ಯವಾಗುತ್ತದೆ. ಸುಮ್ನೆ ಕೇಳಬೇಕು. ಎಲ್ಲದಕ್ಕೂ ಹೌದಪ್ಪ, ಆಯ್ತು ಎನ್ನುತ್ತ ಮೋರಲ್‌ ಸಪೋರ್ಟ್‌ ಕೊಡುತ್ತ ಹೋಗಬೇಕು.

ಎಲ್ಲರಿಗೂ ಫೈನಾನ್ಶಿಯಲ್‌ ಪ್ರಾಬ್ಲೆಮ್‌ ಇದ್ದೇ ಇರುತ್ತದೆ. ಅದಕ್ಕೆ ಪರಿಹಾರ ಕೊಡುವುದು ಸಾಧ್ಯವಿಲ್ಲ. ಆದರೆ, ಆ ಪ್ರಾಬ್ಲಮ್‌ ಇದೆ. ಅದನ್ನು ಆಲಿಸುವವರಾಗಿ ಅರ್ಥ ಮಾಡಿಕೊಳ್ಳಬೇಕು. ಅದುವೇ ಮೋರಲ್‌ ಸಪೋರ್ಟ್‌. ಅದುವೇ ಆಕ್ಷನ್‌. ಈ ರೀತಿ ಮಾಡಿದಾಗ ಮಾತ್ರ ಕ್ರಿಯೆಗಳ ಮೂಲಕ ಭರವಸೆ ಮೂಡಿಸಲು ಸಾಧ್ಯ ಎಂಬುದೇ ಥೀಮ್‌ನ ಅರ್ಥ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.