ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Narendra Modi: ಭಾರತ ವಿಶ್ವದ ಅಗ್ರ 3ನೇ ಆರ್ಥಿಕತೆಯಾಗಲಿದೆ ಎಂದ ಪ್ರಧಾನಿ ನರೇಂದ್ರ ಮೋದಿ, ಜಗತ್ತಿನ ಬಲಿಷ್ಠ ಆರ್ಥಿಕತೆಯಾಗುವತ್ತ ದಾಪುಗಾಲು

Narendra Modi: ಭಾರತ ವಿಶ್ವದ ಅಗ್ರ 3ನೇ ಆರ್ಥಿಕತೆಯಾಗಲಿದೆ ಎಂದ ಪ್ರಧಾನಿ ನರೇಂದ್ರ ಮೋದಿ, ಜಗತ್ತಿನ ಬಲಿಷ್ಠ ಆರ್ಥಿಕತೆಯಾಗುವತ್ತ ದಾಪುಗಾಲು

Independence Day Narendra Modi Speach: ಭಾರತವು 2014ರಲ್ಲಿ ವಿಶ್ವದ 10ನೇ ದೊಡ್ಡ ಆರ್ಥಿಕತೆಯಾಗಿತ್ತು. ಈಗ ಭಾರತ ಅಗ್ರ 5ನೇ ಸ್ಥಾನದಲ್ಲಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತವು ಜಗತ್ತಿನ ಅಗ್ರ ಮೂರನೇ ಆರ್ಥಿಕ ಶಕ್ತಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Narendra Modi:  ಭಾರತ ವಿಶ್ವದ ಅಗ್ರ 3ನೇ ಆರ್ಥಿಕತೆಯಾಗಲಿದೆ  ಎಂದ ಪ್ರಧಾನಿ ನರೇಂದ್ರ ಮೋದಿ,
Narendra Modi: ಭಾರತ ವಿಶ್ವದ ಅಗ್ರ 3ನೇ ಆರ್ಥಿಕತೆಯಾಗಲಿದೆ ಎಂದ ಪ್ರಧಾನಿ ನರೇಂದ್ರ ಮೋದಿ,

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಕೆಂಪುಕೋಟೆಯಲ್ಲಿ ಇಂದು ಭಾರತದ 77 ಸ್ವಾತಂತ್ರ್ಯ ದಿನದಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದು, ಹಲವು ಪ್ರಮುಖ ವಿಚಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಇಂದಿನ ಭಾಷಣದಲ್ಲಿ ಭಾರತದವು ಜಗತ್ತಿನ ಪ್ರಮುಖ ಆರ್ಥಿಕತೆಯಾಗುವತ್ತ ದಾಪುಗಾಲಿಡುತ್ತಿರುವುದರ ಕುರಿತು ಹೇಳಿದ್ದಾರೆ. "ಭಾರತವು 2014ರಲ್ಲಿ ವಿಶ್ವದ 10ನೇ ದೊಡ್ಡ ಆರ್ಥಿಕತೆಯಾಗಿತ್ತು. ಈಗ ಭಾರತ ಅಗ್ರ 5ನೇ ಸ್ಥಾನದಲ್ಲಿದೆ" ಎಂದು ಅವರು ಹೇಳಿದ್ದಾರೆ. "ಮುಂದಿನ ಐದು ವರ್ಷದಲ್ಲಿ ಭಾರತವು ಜಗತ್ತಿನ ಅಗ್ರ ಮೂರನೇ ದೇಶವಾಗಿ ಪ್ರಗತಿ ಕಾಣಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

"ನಾವು ಅಧಿಕಾರಕ್ಕೆ ಬರುವ ಸಮಯದಲ್ಲಿ ಅಂದರೆ 2014ರಲ್ಲಿ ಭಾರತವು ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಅಗ್ರ 10ನೇ ಸ್ಥಾನದಲ್ಲಿತ್ತು. ಇಂದು 140 ಕೋಟಿ ಭಾರತೀಯರ ಪರಿಶ್ರಮದ ಫಲವಾಗಿ ನಾವು ಜಗತ್ತಿನ 5ನೇ ಅಗ್ರ ಆರ್ಥಿಕತೆಯಾಗಿದ್ದೇವೆ. ಇದು ಸುಲಭವಾಗಿ ಆಗಿರುವಂತಹದ್ದಲ್ಲ. ನಾವು ದೇಶದ ಭ್ರಷ್ಟಾಚಾರವನ್ನು ನಿಯಂತ್ರಿಸಿರುವುದರ ಫಲವಿದು, ಸೋರಿಕೆ ನಿಲ್ಲಿಸಿರುವುದರ ಫಲವಿದು, ಈ ಮೂಲಕ ನಾವು ಸದೃಢ ಆರ್ಥಿಕತೆಯಾಗಿ ಪ್ರಗತಿ ಕಾಣುತ್ತಿದ್ದೇವೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

"ರಾಷ್ಟ್ರವೇ ಮೊದಲು ಎನ್ನುವುದು ನಮ್ಮ ರಾಜಕೀಯದ ಮೂಲಮಂತ್ರವಾಗಿತ್ತು. 2014 ಮತ್ತು 2019ರಲ್ಲಿ ಜನರು ನಮಗೆ ದೇಶದ ಸುಧಾರಣೆಗೆ ಅಧಿಕಾರ ನೀಡಿದರು. ನಮ್ಮ ದೇಶ ಪ್ರಗತಿ ಕಾಣಲು ಜನರು ನಿರ್ಧರಿಸಿದರು. ಸದೃಢ ಸರಕಾರ ರಚಿಸಲು ಜನರು ಅವಕಾಶ ನೀಡಿದರು. ಈ ಮೂಲಕ ಅಸ್ಥಿರ ಶಕೆಗೆ ಅಂತ್ಯ ಹಾಡಿದರು" ಎಂದು ಮೋದಿ ಹೇಳಿದ್ದಾರೆ.

"2047 ರಲ್ಲಿ ದೇಶವು 100 ವರ್ಷಗಳ ಸ್ವಾತಂತ್ರ್ಯ ದಿನವನ್ನು ಆಚರಿಸುವ ಸಮಯದಲ್ಲಿ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂದು ನಾನು ನಂಬಿದ್ದೇನೆ. ನನ್ನ ದೇಶದ ಸಾಮರ್ಥ್ಯ ಮತ್ತು ಲಭ್ಯವಿರುವ ಸಂಪನ್ಮೂಲಗಳ ಆಧಾರದ ಮೇಲೆ ನಾನು ಇದನ್ನು ಹೇಳುತ್ತೇನೆ. ಈ ಸಮಯದಲ್ಲಿ ಭಾರತವು ಭ್ರಷ್ಟಾಚಾರ, ವಂಶರಾಜಕೀಯ ಮತ್ತು ತುಷ್ಟೀಕರಣ ಎಂಬ ಮೂರು ಅನಿಷ್ಠಗಳ ವಿರುದ್ಧ ಹೋರಾಡುವ ಅಗತ್ಯವಿದೆ" ಎಂದು ಮೋದಿ ಹೇಳಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಭಾರತವು ಜಗತ್ತಿನ ಅಗ್ರ ಮೂರನೇ ಆರ್ಥಿಕ ಶಕ್ತಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

"ಭಾರತ ಏನು ನಿರ್ಧರಿಸಿತ್ತೋ ಆ ಕೆಲಸ ಪೂರ್ಣಗೊಳ್ಳುತ್ತದೆ. ನಮ್ಮ ಟ್ರ್ಯಾಕ್‌ ರೆಕಾರ್ಡ್‌ ಇದೇ ಹೇಳುತ್ತದೆ. ಹೊಸ ಸಂಸತ್‌ ಕಟ್ಟಡ ನಿರ್ಮಿಸಬೇಕೆಂದು 25 ವರ್ಷಗಳಲ್ಲಿ ಚರ್ಚಿಸಲಾಗಿದೆ. ಇದು ಮೋದಿ ಸರಕಾರವಾಗಿದೆ. ನಿಗದಿತ ಗುರಿಯೊಂದಿಗೆ ಕೆಲಸ ಪೂರ್ಣಗೊಳಿಸುವ ಸರಕಾರವಾಗಿದೆ. ಇದು ನವಭಾರತ, ಇದು ಆತ್ಮಸ್ಥೈರ್ಯ ತುಂಬಿರುವ ಭಾರತ..." ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

ಜಗತ್ತಿನ ಪ್ರಮುಖ ಆರ್ಥಿಕತೆಗಳು

ಅಮೆರಿಕ, ಚೀನಾ, ಜಪಾನ್‌, ಜರ್ಮನಿ, ಭಾರತ, ಇಂಗ್ಲೆಂಡ್‌, ಫ್ರಾನ್ಸ್‌, ರಷ್ಯಾ, ಕೆನಡಾ, ಇಟಲಿಗಳು ಈಗ ವಿಶ್ವದ ಅಗ್ರ ಆರ್ಥಿಕತೆಗಳಾಗಿವೆ. ಮುಂದಿನ ಐದು ವರ್ಷಗಳಲ್ಲಿ ಅಮೆರಿಕ ಮತ್ತು ಚೀನಾದ ನಂತರದ ಸ್ಥಾನವನ್ನು ಭಾರತ ಪಡೆಯುವ ನಿರೀಕ್ಷೆಯಿದೆ.

IPL_Entry_Point