ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Modi: ಪ್ರಾದೇಶಿಕ ಭಾಷೆಗಳಲ್ಲಿ ನ್ಯಾಯ ವಿವರ ಒದಗಿಸುವ ಸುಪ್ರೀಂ ಕೋರ್ಟ್ ಪ್ರಯತ್ನವನ್ನು ಶ್ಲಾಘಿಸಿದ ಪ್ರಧಾನಿ ಮೋದಿ; ಸ್ಪಂದಿಸಿದ ಸಿಜೆಐ

PM Modi: ಪ್ರಾದೇಶಿಕ ಭಾಷೆಗಳಲ್ಲಿ ನ್ಯಾಯ ವಿವರ ಒದಗಿಸುವ ಸುಪ್ರೀಂ ಕೋರ್ಟ್ ಪ್ರಯತ್ನವನ್ನು ಶ್ಲಾಘಿಸಿದ ಪ್ರಧಾನಿ ಮೋದಿ; ಸ್ಪಂದಿಸಿದ ಸಿಜೆಐ

PM Modi: ಸುಪ್ರೀಂ ಕೋರ್ಟ್ ತೀರ್ಪುಗಳನ್ನು 2023ರ ಜನವರಿಯಲ್ಲಿ ಹಿಂದಿ, ತಮಿಳು, ಗುಜರಾತಿ ಮತ್ತು ಒಡಿಯಾ ಎಂಬ ನಾಲ್ಕು ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸುವುದನ್ನು ಶುರುಮಾಡುವುದಾಗಿ ಹೇಳಿದೆ. ನಾಗರಿಕರಿಗೆನ್ಯಾಯದತಿಳಿವಳಿಕೆಪಡೆಯಲು ಇದುಸಹಾಯಮಾಡುತ್ತದೆಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಪ್ರಧಾನಿಯವರ ಮೆಚ್ಚುಗೆ ನುಡಿಗೆ ಸ್ಪಂದಿಸಿ ಕೈಮುಗಿದರು.
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಪ್ರಧಾನಿಯವರ ಮೆಚ್ಚುಗೆ ನುಡಿಗೆ ಸ್ಪಂದಿಸಿ ಕೈಮುಗಿದರು.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಾದೇಶಿಕ ಭಾಷೆಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. ಸುಪ್ರೀಂ ಕೋರ್ಟ್ ತನ್ನ ತೀರ್ಪುಗಳ ಕಾರ್ಯಾತ್ಮಕ ಭಾಗಗಳನ್ನು ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸುವ ಪ್ರಯತ್ನ ನಡೆಸಿರುವುದನ್ನು ಶ್ಲಾಘಿಸಿದರು. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಈ ಮೆಚ್ಚುಗೆಗೆ ಕೈ ಜೋಡಿಸಿ ಕೃತಜ್ಞತೆ ಸೂಚಿಸಿದರು.

ಟ್ರೆಂಡಿಂಗ್​ ಸುದ್ದಿ

ಸುಪ್ರೀಂ ಕೋರ್ಟ್ ತೀರ್ಪುಗಳನ್ನು 2023ರ ಜನವರಿಯಲ್ಲಿ ಹಿಂದಿ, ತಮಿಳು, ಗುಜರಾತಿ ಮತ್ತು ಒಡಿಯಾ ಎಂಬ ನಾಲ್ಕು ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸುವುದನ್ನು ಶುರುಮಾಡುವುದಾಗಿ ಹೇಳಿದೆ. ಪ್ರಾದೇಶಿಕ ಭಾಷೆಗಳಿಗೆ ಅನುವಾದವು ನಾಗರಿಕರಿಗೆ ನ್ಯಾಯದ ತಿಳಿವಳಿಕೆ ಪಡೆಯಲು ಸಹಾಯ ಮಾಡುತ್ತದೆ. ನಾನು ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳುತ್ತೇನೆ. ಈಗ ತೀರ್ಪಿನ ಆಪರೇಟಿವ್ ಭಾಗವನ್ನು ದಾವೆದಾರರು ಮಾತನಾಡುವ ಭಾಷೆಯಲ್ಲಿ ಅನುವಾದಿಸಲಾಗುವುದು. ಮಾತೃಭಾಷೆಯ ಪ್ರಸ್ತುತತೆ ಹೆಚ್ಚುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು.

ನಂತರ, ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಡಿವೈ ಚಂದ್ರಚೂಡ್ ಅವರು ಪ್ರಧಾನಿ ಮೋದಿಯವರ ಭಾಷಣದ ಅಂಶಗಳನ್ನು ಪ್ರಸ್ತಾಪಿಸಿ ಮಾತನಾಡಿದರು. "ಪ್ರಧಾನಿ ಇಂದು ಕೆಂಪು ಕೋಟೆಯಲ್ಲಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ತೀರ್ಪುಗಳನ್ನು ಭಾಷಾಂತರಿಸುವುದಕ್ಕೆ ಸುಪ್ರೀಂ ಕೋರ್ಟ್‌ನ ಪ್ರಯತ್ನಗಳನ್ನು ಪ್ರಸ್ತಾಪಿಸಿದರು. ಇಲ್ಲಿಯವರೆಗೆ, 9,423 ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸಲಾಗಿದೆ" ಎಂದು ಹೇಳಿದರು.

ಹೈಕೋರ್ಟ್‍ಗಳೂ ಆರಂಭಿಸಿವೆ ಭಾಷಾಂತರ ಕಾರ್ಯ

ಹಲವಾರು ಉಚ್ಚ ನ್ಯಾಯಾಲಯಗಳು ಇಂಗ್ಲಿಷ್ ಜೊತೆಗೆ ಪ್ರಾದೇಶಿಕವಾಗಿ ಮಾತನಾಡುವ ಭಾಷೆಗಳಲ್ಲಿ ಕಾನೂನು ನಿರ್ಧಾರ, ತೀರ್ಪುಗಳನ್ನು ನೀಡುವ ಅಭ್ಯಾಸವನ್ನು ಪ್ರಾರಂಭಿಸಿವೆ. ಈ ಹಿಂದೆ, ಸುಪ್ರೀಂ ಕೋರ್ಟ್ 2019 ರಲ್ಲಿ ತನ್ನ ತೀರ್ಪುಗಳನ್ನು ನೀಡಲು ಒಂಬತ್ತು ವಿಭಿನ್ನ ಪ್ರಾದೇಶಿಕ ಭಾಷೆಗಳನ್ನು ಆಯ್ಕೆ ಮಾಡಿತ್ತು. ಈ ನಿರ್ಧಾರವು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಮನ್ನಣೆ ಮತ್ತು ಪ್ರಶಂಸೆಯನ್ನು ಪಡೆದಿತ್ತು.

ಈ ಹಿಂದೆ ಮುಂಬೈನಲ್ಲಿ ಸಿಜೆಐ ಚಂದ್ರಚೂಡ್ ಕೂಡ "ಮುಂದಿನ ಹೆಜ್ಜೆ... ಸುಪ್ರೀಂ ಕೋರ್ಟ್‌ನ ತೀರ್ಪುಗಳ ಅನುವಾದಿತ ಪ್ರತಿಗಳನ್ನು ಪ್ರತಿ ಭಾರತೀಯ ಭಾಷೆಯಲ್ಲಿ ಒದಗಿಸುವುದು" ಎಂದು ಹೇಳಿದ್ದರು. ಸಿಜೆಐ ಅವರ ಇದೇ ಪ್ರಯತ್ನಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.

“ಇತ್ತೀಚಿನ ಸಮಾರಂಭವೊಂದರಲ್ಲಿ, ಸಿಜೆಐ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪುಗಳು ಲಭ್ಯವಾಗುವಂತೆ ಕೆಲಸ ಮಾಡುವ ಅಗತ್ಯದ ಬಗ್ಗೆ ಮಾತನಾಡಿದರು. ಅದಕ್ಕೆ ತಂತ್ರಜ್ಞಾನವನ್ನೂ ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಇದು ಶ್ಲಾಘನೀಯ ಚಿಂತನೆಯಾಗಿದೆ, ಇದು ಅನೇಕ ಜನರಿಗೆ, ವಿಶೇಷವಾಗಿ ಯುವಕರಿಗೆ ಸಹಾಯ ಮಾಡುತ್ತದೆ, ”ಎಂದು ಸಿಜೆಐ ಅವರ ವೀಡಿಯೊದ ಭಾಗವನ್ನು ಹಂಚಿಕೊಂಡು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು.

IPL_Entry_Point