ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Independence Day: 2 ದಶಕಗಳ ಬಳಿಕ ಜಮ್ಮು ಕಾಶ್ಮೀರದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ; ಬಕ್ಷಿ ಸ್ಟೇಡಿಯಂನಲ್ಲಿ ಸೇರಿದ್ದರು ಸಾವಿರಾರು ಮಂದಿ

Independence Day: 2 ದಶಕಗಳ ಬಳಿಕ ಜಮ್ಮು ಕಾಶ್ಮೀರದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ; ಬಕ್ಷಿ ಸ್ಟೇಡಿಯಂನಲ್ಲಿ ಸೇರಿದ್ದರು ಸಾವಿರಾರು ಮಂದಿ

ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಸಂದರ್ಭದಲ್ಲಿ ಮುಳ್ಳು ತಂತಿಗಳು, ಬ್ಯಾರಿಕೇಡ್‌ಗಳನ್ನು ಅಳವಡಿಸುವ ಮೂಲಕ ಜುಮ್ಮು-ಕಾಶ್ಮೀರದಲ್ಲಿ ಭದ್ರತೆ ಒದಗಿಸಲಾಗುತ್ತಿತ್ತು. ಆದರೆ ನಿನ್ನೆ (ಆಗಸ್ಟ್‌ 15) ಈ ರೀತಿಯ ಯಾವುದೇ ದೃಶ್ಯಗಳು ಕಂಡು ಬಂದಿರಲಿಲ್ಲ. 2 ದಶಕಗಳ ಬಳಿಕ ಜಮ್ಮು ಕಾಶ್ಮೀರದಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿತ್ತು.

ಶ್ರೀನಗರದ ಲಾಲ್‌ಚೌಕ್‌ನಲ್ಲಿ ಸಾವಿರಾರು ಮಂದಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಭಾಗವಹಿಸಿದ್ದರು
ಶ್ರೀನಗರದ ಲಾಲ್‌ಚೌಕ್‌ನಲ್ಲಿ ಸಾವಿರಾರು ಮಂದಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಭಾಗವಹಿಸಿದ್ದರು (PTI)

ಜುಮ್ಮು-ಕಾಶ್ಮೀರ: ಭಾರತವು ನಿನ್ನೆ (ಆಗಸ್ಟ್‌ 15) 77ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿದೆ. ಎರಡು ದಶಕಗಳ ನಂತರ ಜುಮ್ಮು ಕಾಶ್ಮೀರದಲ್ಲಿ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಇಲ್ಲಿನ ಬಕ್ಷಿ ಸ್ಟೇಡಿಯಂನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಾವಿರಾರು ಕಾಶ್ಮೀರಿಗಳು ನೆರೆದಿದ್ದರು. ಭಯೋತ್ಪಾದಕ ದಾಳಿ ಬೆದರಿಕೆಯಿಂದ ಈ ಹಿಂದೆ ವಿಧಿಸಲಾಗಿದ್ದು ಜನ ಸಂಚಾರದ ಮೇಲಿನ ನಿರ್ಬಂಧಗಳನ್ನು ಅಧಿಕಾರಿಗಳು ಸಡಿಲಗೊಳಿಸಿದ್ದರು.

ಟ್ರೆಂಡಿಂಗ್​ ಸುದ್ದಿ

ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಸಂದರ್ಭದಲ್ಲಿ ಕನ್ಸರ್ಟಿನಾ ವೈರ್‌ಗಳು (ಮುಳ್ಳು ತಂತಿಗಳು), ಬ್ಯಾರಿಕೇಡ್‌ಗಳನ್ನು ಅಳವಡಿಸುವ ಮೂಲಕ ಜುಮ್ಮು-ಕಾಶ್ಮೀರದಲ್ಲಿ ಭದ್ರತೆ ಒದಗಿಸಲಾಗುತ್ತಿತ್ತು. ಆದರೆ ನಿನ್ನೆ ಈ ರೀತಿ ಯಾವುದೇ ಕನ್ಸರ್ಟಿನಾ ವೈರ್‌ ಹಾಗೂ ಬ್ಯಾರಿಕೇಡ್‌ ಇರಲಿಲ್ಲ. ಇದು ಜಮ್ಮು ಕಾಶ್ಮೀರದ 1.5 ಮಿಲಿಯನ್‌ ನಿವಾಸಿಗಳಿಗೆ ಅಚ್ಚರ ಮೂಡಿಸಿತ್ತು.

ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದ ನಾಗರಿಕರು

ಭಾರತದ ರಾಷ್ಟ್ರಧ್ವಜವನ್ನು ಹಿಡಿದ ಪುರುಷರು ಹಾಗೂ ಮಹಿಳೆಯರು ಬಕ್ಷಿ ಸ್ಟೇಡಿಯಂನಲ್ಲಿ ನೆರೆದಿದ್ದರು. ಮಕ್ಕಳೂ ಸಹ ಧ್ವಜವನ್ನು ಹಿಡಿದು ಸಂಭ್ರಮಿಸಿದ್ದು, ವಿಶೇಷವಾಗಿತ್ತು. 2003ರ ಸ್ವಾತಂತ್ರ್ಯ ದಿನಾಚರಣೆಗೆ ಇಷ್ಟೊಂದು ಮಂದಿ ಸೇರಿದ್ದು ಇದೇ ಮೊದಲು. 2003ರಲ್ಲಿ 20,000 ಮಂದಿ ಸೇರಿದ್ದರು.

ಸ್ಟೇಡಿಯಂ ಇಕ್ಕೆಲಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ನೆರೆದಿದ್ದ ಜನರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಕಳೆದ 33 ವರ್ಷಗಳಿಂದ ಜನರು ಮನೆಯಲ್ಲೇ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದರು. ಆದರೆ ನಿನ್ನೆ ಸಂಪೂರ್ಣ ಚಿತ್ರಣ ಬದಲಾಗಿತ್ತು. ಧ್ವಜಾರೋಹಣ ಸಮಾರಂಭಕ್ಕಾಗಿ ಬೆಳಿಗ್ಗೆ ಬೇಗನೆ ಹಲವು ಶಾಲೆಗಳು ಸಿದ್ಧತೆ ನಡೆಸಿದ್ದವು, ಲಾಲ್‌ಚೌಕ್‌ನ ಸೇರಿದಂತೆ ನಗರದ ಕೆಲವು ಪ್ರದೇಶಗಳಲ್ಲಿ ಅಂಗಡಿ ಮಾಲೀಕರು ಜನರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ʼಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತ ಪಡಿಸಿಕೊಳ್ಳಲು ಸಾಕಷ್ಟು ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಬಕ್ಷಿ ಮೈದಾನ ಬಳಿ ವಾಹನಗಳ ತಪಾಸಣೆ ಮಾಡಲಾಗಿತ್ತು. ಆದರೆ ನಗರದ ಬಹುತೇಕ ಕಡೆ ಸಂಚಾರ ಮುಕ್ತವಾಗಿತ್ತುʼ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ ಎಂದು ದಿ ಟೆಲಿಗ್ರಾಫ್‌ ವರದಿ ಮಾಡಿದೆ.

ಸತತವಾಗಿ ಮೂರನೇ ವರ್ಷವೂ ಸ್ವಾತಂತ್ರ್ಯ ದಿನದಂದು ಮೊಬೈಲ್‌ ಹಾಗೂ ಇಂಟರ್ನೆಟ್‌ ಸೇವೆ ಸ್ಥಗಿತಗೊಂಡಿರಲಿಲ್ಲ. ಸಾಮಾನ್ಯವಾಗಿ ಆಗಸ್ಟ್‌ 15 ಹಾಗೂ ಜನವರಿ 26 ರಂದು ಜುಮ್ಮು ಕಾಶ್ಮೀರದಲ್ಲಿ ಮೊಬೈಲ್‌ ಇಂಟರ್‌ನೆಟ್‌ ಸ್ಥಗಿತಗೊಳಿಸಲಾಗುತ್ತದೆ.

10 ಸಾವಿರಕ್ಕೂ ಅಧಿಕ ಮಂದಿ ಭಾಗಿ

ತ್ರಿವರ್ಣ ಧ್ವಜ ಹಾರಿಸುತ್ತಿರುವ ಸಾವಿರಾರು ನಾಗರೀಕರು ಇಲ್ಲಿನ ಬಕ್ಷಿ ಕ್ರೀಡಾಂಗಣದಲ್ಲಿ ನಡೆದ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೋಡಲು ಬಂದಿದ್ದರು. ಎಷ್ಟು ಜನ ಭಾಗವಹಿಸಿದ್ದರೂ ಎಂಬ ಬಗ್ಗೆ ನಿಖರ ಮಾಹಿತಿ ನೀಡಿದೇ ಇದ್ದರೂ 10,000 ಜನರು ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ʼಯಾವುದೇ ನಿರ್ಬಂಧಗಳಿಲ್ಲದೆ, ಯಾವುದೇ ವಿಶೇಷ ಬಸ್‌ ಪಾಸ್‌ಗಳಿಲ್ಲದೆ ಜನರನ್ನು ಪ್ರವೇಶಕ್ಕೆ ಅನುಮತಿ ನೀಡಿದ್ದು ನಿಜಕ್ಕೂ ಖುಷಿ ನೀಡಿತು. ಇದು ಯಾವಾಗಲೂ ಹೀಗೆ ಇರಬೇಕುʼ ಎಂದು ಬಕ್ಷಿ ಸ್ಟೇಡಿಯಂನಲ್ಲಿದ್ದ ಯುವಕ ಅಬಿದ್‌ ಹುಸೇನ್‌ ಪಿಟಿಐಗೆ ತಿಳಿಸಿದ್ದಾರೆ.

ʼನಾನು ಸ್ವಾತಂತ್ರ್ಯೋತ್ಸವ ಮೆರವಣಿಗೆ ನೋಡಲು ಬಹಳ ವರ್ಷಗಳಿಂದ ಕಾಯುತ್ತಿದೆ. ನನಗೆ ಒಂದು ಅವಕಾಶ ಸಿಗಲಿ ಎಂದು ಕಾಯುತ್ತಿದೆ. ಹಾಗಾಗಿ ಈ ಬಾರಿ ಖುಷಿಯಿಂದ ಅಷ್ಟು ದೂರದಿಂದ ಬಂದಿದ್ದೇನೆʼ ಎಂದು ಗಂದರ್‌ಬಾಲ್‌ ಜಿಲ್ಲೆಯಿಂದ ಬಕ್ಷಿ ಕ್ರೀಡಾಂಗಣಕ್ಕೆ ಬಂದ ಶಾಯಿಸ್ತಾ ಬಾನು ಹೇಳುತ್ತಾರೆ.

ಜಮ್ಮು ಮತ್ತು ಕಾಶ್ಮೀರ ಆಡಳಿತವು ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೇಳಿಕೊಂಡಿತ್ತು. ಮಾತ್ರವಲ್ಲ ನಿಖರ ದಾಖಲೆ ತೋರಿಸಬೇಕು ಎಂದು ಹೇಳಲಾಗಿತ್ತು.

ಐದು ವರ್ಷಗಳ ನಂತರ ಮತ್ತೆ ಬಕ್ಷಿ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆದ ಕಾರಣ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರು.

ನವೀಕರಣ ಮತ್ತು ಉನ್ನತೀಕರಣಗೊಳಿಸುವ ಸಲುವಾಗಿ 2018ರಲ್ಲಿ ಬಕ್ಷಿ ಸ್ಟೇಡಿಯಂ ಅನ್ನು ಮುಚ್ಚಲಾಗಿತ್ತು. ಅಲ್ಲದೇ ಪರೇಡ್‌ ಅನ್ನು ಸೋನಾವರ್‌ನಲ್ಲಿರುವ ಶೇರ್‌-ಎ-ಕಾಶ್ಮೀರ್‌ ಕ್ರಿಕೆಟ್‌ ಸ್ಟೇಡಿಯಂಗೆ ಸ್ಥಳಾಂತರಿಸಲಾಗಿತ್ತು.

IPL_Entry_Point