ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Lok Sabha Election 2024: ಲೋಕಸಭೆ ಚುನಾವಣೆಯ 2ನೇ ಹಂತದಲ್ಲಿ ಶೇ 61 ರಷ್ಟು ಮತದಾನ; ತ್ರಿಪುರಾಗೆ ಅಗ್ರ ಸ್ಥಾನ

Lok Sabha Election 2024: ಲೋಕಸಭೆ ಚುನಾವಣೆಯ 2ನೇ ಹಂತದಲ್ಲಿ ಶೇ 61 ರಷ್ಟು ಮತದಾನ; ತ್ರಿಪುರಾಗೆ ಅಗ್ರ ಸ್ಥಾನ

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮುಕ್ತಾಯವಾಗಿದ್ದು, ಶೇಕಡಾ 61 ರಷ್ಟು ವೋಟಿಂಗ್ ನಡೆದಿದೆ. ಈ ಪೈಕಿ ತ್ರಿಪುರಾದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.

ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಶೇಕಡಾ 61 ರಷ್ಟು ಮತದಾನವಾಗಿದೆ. ಈ ಪೈಕಿ ತ್ರಿಪುರಾದಲ್ಲಿ ಅತಿ ಹೆಚ್ಚು ವೋಟಿಂಗ್ ನಡೆದಿದೆ.
ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಶೇಕಡಾ 61 ರಷ್ಟು ಮತದಾನವಾಗಿದೆ. ಈ ಪೈಕಿ ತ್ರಿಪುರಾದಲ್ಲಿ ಅತಿ ಹೆಚ್ಚು ವೋಟಿಂಗ್ ನಡೆದಿದೆ. (AP)

ದೆಹಲಿ: ಲೋಕಸಭಾ ಚುನಾವಣೆ 2024ರ (Lok Sabha Election 2024) ಎರಡನೇ ಹಂತದಲ್ಲಿ (Second Phase Voting) ಶುಕ್ರವಾರ (ಏಪ್ರಿಲ್ 26) ಸಂಜೆ 7 ಗಂಟೆಯವರೆಗೆ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 88 ಕ್ಷೇತ್ರಗಳಲ್ಲಿ ಸುಮಾರು ಶೇಕಡಾ 60 ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ. ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾದ ಸಾರ್ವತ್ರಿಕ ಚುನಾವಣೆಯ ಎರಡನೇ ಹಂತದ ಮತದಾನದ 88 ಲೋಕಸಭಾ ಕ್ಷೇತ್ರಗಳಲ್ಲಿ ಸಂಜೆ 7 ಗಂಟೆಯ ವೇಳೆಗೆ ಅಂದಾಜು 60.96 ರಷ್ಟು ಮತದಾನವನ್ನು ದಾಖಲಿಸಿದೆ" ಎಂದು ಚುನಾವಣಾ ಆಯೋಗ ತಿಳಿಸಿದೆ. ತ್ರಿಪುರಾದ ಗರಿಷ್ಠ ಮತದಾನವಾಗಿದೆ. ಇಲ್ಲಿ ಶೇ. 77.93 ರಷ್ಟು ಮತ ಚಲಾವಣೆಯಾಗಿದೆ. ಛತ್ತೀಸ್‌ಗಢದ ಮೂರು ಕ್ಷೇತ್ರಗಳಲ್ಲಿ ಶೇ.72.13 ಹಾಗೂ ಪಶ್ಚಿಮ ಬಂಗಾಳದ ಮೂರು ಕ್ಷೇತ್ರಗಳಲ್ಲಿ ಶೇ.71.84ರಷ್ಟು ಮತದಾನವಾಗಿದೆ. ಮಣಿಪುರದ 13 ಮತಗಟ್ಟೆಗಳಲ್ಲಿ ಶೇ.76.06ರಷ್ಟು ಮತದಾನವಾಗಿದ್ದರೆ, ಅಸ್ಸಾಂನ ಮತಗಟ್ಟೆಗಳಲ್ಲಿ ಸಂಜೆ 5 ಗಂಟೆಯವರೆಗೆ ಶೇ.70.66ರಷ್ಟು ಮತದಾನವಾಗಿತ್ತು.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕದ ಮಂಡ್ಯದಲ್ಲಿ ಶೇಕಡಾ 81.48 ರಷ್ಟು ಮತದಾನ

ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಉತ್ತಮ ಮತದಾನವಾಗಿದ್ದು, ಮಂಡ್ಯದಲ್ಲಿ ಶೇಕಡಾ 81.48 ರಷ್ಟು ಮತದಾನವಾಗಿದೆ. ಕೋಲಾರದಲ್ಲಿ ಶೇ 78.07, ತುಮಕೂರಿನಲ್ಲಿ ಶೇ 77.70 ಹಾಗೂ ಹಾಸನದಲ್ಲಿ ಶೇಕಡಾ 77.50 ರಷ್ಟು ಮತದಾನವಾಗಿದೆ.

ಮಹಾರಾಷ್ಟ್ರದಲ್ಲಿ ಶೇ.53.51ರಷ್ಟು ಮತದಾನವಾಗಿದೆ. ಬಿಹಾರದಲ್ಲಿ ಮತದಾನದ ಶೇಕಡಾವಾರು ಮೊದಲ ಹಂತಕ್ಕಿಂತ ಹೆಚ್ಚಾಗಿದ್ದರೆ, ಉತ್ತರ ಪ್ರದೇಶದಲ್ಲಿ ಶೇ 53.03 ರಷ್ಟು ಮತದಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯವರೆಗೆ ಶೇ 52.74 ರಷ್ಟು ಮತದಾನ ದಾಖಲಾಗಿತ್ತು.

ಎರಡನೇ ಹಂತದಲ್ಲಿ ಮತದಾನ ನಡೆದ ರಾಜಸ್ಥಾನದ 13 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯವರೆಗೆ ಸರಾಸರಿ ಶೇಕಡಾ 59.19 ರಷ್ಟು ಮತದಾನವಾಗಿದೆ. ಕೆಲವು ಘಟನೆಗಳ ಹೊರತಾಗಿಯೂ, ಮತದಾನವು ಶಾಂತಿಯುತವಾಗಿ ನಡೆಯಿತು, ಬಾರ್ಮರ್-ಜೈಸಲ್ಮೇರ್ ಮತ್ತು ಬನ್‌ಸ್ವಾರಾ-ಡುಂಗರಪುರದಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಒಟ್ಟಾರೆ ಮತದಾನವು ಮೊದಲ ಹಂತದ ಮತದಾನವನ್ನು ಮೀರಿಸಿದೆ.

ಮಧ್ಯಪ್ರದೇಶದ ಆರು ಕ್ಷೇತ್ರಗಳಲ್ಲಿ ಎರಡನೇ ಹಂತದಲ್ಲಿ ಕನಿಷ್ಠ 54.83 ರಷ್ಟು ಮತದಾನವಾಗಿದೆ. ಸಂಜೆ 5 ಗಂಟೆಯವರೆಗೆ ಹೋಶಂಗಾಬಾದ್‌ನಲ್ಲಿ ಶೇ.63.44, ಟಿಕಾಮ್‌ಗಢದಲ್ಲಿ ಶೇ.57.19, ಸತ್ನಾದಲ್ಲಿ ಶೇ.57.18, ದಾಮೋಹ್‌ನಲ್ಲಿ ಶೇ.53.66, ಖಜುರಾಹೊದಲ್ಲಿ ಶೇ.52.91 ಮತ್ತು ರೇವಾದಲ್ಲಿ ಶೇ.45.02ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇರಳದ ಎಲ್ಲಾ 20 ಲೋಕಸಭಾ ಕ್ಷೇತ್ರಗಳಿಗೆ ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಿದ್ದು, ರಾಜ್ಯದಲ್ಲಿ ತಾತ್ಕಾಲಿಕ ಮತದಾನವು ಶೇಕಡಾ 67.27 ಕ್ಕಿಂತ ಹೆಚ್ಚಾಗಿದೆ. ಮತದಾನದ ಅಧಿಕೃತ ಸಮಯ ಸಂಜೆ 6 ಗಂಟೆಗೆ ಕೊನೆಗೊಂಡರೂ, ರಾಜ್ಯದಾದ್ಯಂತ ಮತಗಟ್ಟೆಗಳ ಹೊರಗೆ ಭಾರಿ ಸರತಿ ಸಾಲುಗಳು ಕಂಡುಬಂದಿದೆ. ಆದ್ದರಿಂದ, ಅಂತಿಮ ಮತದಾನದ ಶೇಕಡಾವಾರು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪಿಟಿಐ ವರದಿ ಮಾಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಶೇ.77.84ರಷ್ಟು ಮತದಾನವಾಗಿತ್ತು.

18ನೇ ಲೋಕಸಭಾ ಚುನಾವಣೆ ಒಟ್ಟು 7 ಹಂತಗಳಲ್ಲಿ ನಡೆಯಲಿದೆ. ಏಪ್ರಿಲ್ 19 ಮತ್ತು ಏಪ್ರಿಲ್ 26ರ ಎರಡು ಹಂತದ ಮತದಾನಗಳು ಮುಕ್ತಾಯವಾಗಿವೆ. ಇನ್ನ ಮೇ 7 ರಂದ 3ನೇ ಹಂತದ ಮತದಾನ, ಮೇ 13 ರಂದು 4ನೇ ಹಂತ, ಮೇ 20 5ನೇ ಹಂತ, ಮೇ 25 6ನೇ ಹಂತ ಹಾಗೂ ಜೂನ್ 1 ರಂದು 7ನೇ ಹಂತದ ಮತದಾನ ನಡೆಯಲಿದೆ.

IPL_Entry_Point