ಲೋಕಸಭೆ ಚುನಾವಣೆ 2024; ಕರ್ನಾಟಕದಲ್ಲಿ 02 ಹಂತಗಳ ಚುನಾವಣೆ, ಮತದಾನ ದಿನಾಂಕ ವೇಳಾಪಟ್ಟಿಯ ಪೂರ್ಣ ವಿವರ-lok sabha election 2024 karnataka poll dates in 2 phase full schedule 28 constituencies details all you need to know uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಲೋಕಸಭೆ ಚುನಾವಣೆ 2024; ಕರ್ನಾಟಕದಲ್ಲಿ 02 ಹಂತಗಳ ಚುನಾವಣೆ, ಮತದಾನ ದಿನಾಂಕ ವೇಳಾಪಟ್ಟಿಯ ಪೂರ್ಣ ವಿವರ

ಲೋಕಸಭೆ ಚುನಾವಣೆ 2024; ಕರ್ನಾಟಕದಲ್ಲಿ 02 ಹಂತಗಳ ಚುನಾವಣೆ, ಮತದಾನ ದಿನಾಂಕ ವೇಳಾಪಟ್ಟಿಯ ಪೂರ್ಣ ವಿವರ

Lok Sabha Election 2024 Dates: ಲೋಕಸಭೆ ಚುನಾವಣೆ 2024ರ ವೇಳಾಪಟ್ಟಿ ಪ್ರಕಟವಾಗಿದ್ದು, ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಯಾವ್ಯಾವ ಕ್ಷೇತ್ರದಲ್ಲಿ ಯಾವಾಗ ಮತದಾನ ಎಂಬಿತ್ಯಾದಿ ವಿವರ ಇಲ್ಲಿದೆ.

ಲೋಕಸಭಾ ಚುನಾವಣೆ 2024; ಕರ್ನಾಟಕದಲ್ಲಿ  ಹಂತಗಳ ಚುನಾವಣೆಯನ್ನು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಘೋ‍ಷಿಸಿದ್ದಾರೆ.
ಲೋಕಸಭಾ ಚುನಾವಣೆ 2024; ಕರ್ನಾಟಕದಲ್ಲಿ ಹಂತಗಳ ಚುನಾವಣೆಯನ್ನು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಘೋ‍ಷಿಸಿದ್ದಾರೆ.

ನವದೆಹಲಿ/ ಬೆಂಗಳೂರು: ಲೋಕಸಭೆ ಚುನಾವಣೆ 2024 ರ ದಿನಾಂಕ ಮತ್ತು ವೇಳಾಪಟ್ಟಿ ಪ್ರಕಟವಾಗಿದ್ದು, ದೇಶದ 543 ಸ್ಥಾನಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆದರೆ, ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ.

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಒಂದು ಹಂತದಲ್ಲಿ, ಇನ್ನುಳಿದ 14 ಕ್ಷೇತ್ರಗಳಿಗೆ ಇನ್ನೊಂದು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಚುನಾವಣೆ ಏಪ್ರಿಲ್ 26 ರಂದು ನಡೆದರೆ, ಎರಡನೆ ಹಂತದ ಚುನಾವಣೆ ಮೇ 7 ರಂದು ನಡೆಯಲಿದೆ.

ಲೋಕಸಭೆ ಚುನಾವಣೆ 2024ರ ಎರಡನೇ ಹಂತದ ಚುನಾವಣೆ ನಡೆಯುವಾಗ ಕರ್ನಾಟಕದಲ್ಲಿರುವ ಲೋಕಸಭೆ ಕ್ಷೇತ್ರಗಳ ಮೊದಲ ಹಂತದ ಚುನಾವಣೆ ನಡೆಯುತ್ತದೆ.

ಲೋಕಸಭೆ ಚುನಾವಣೆ 2024; ಕರ್ನಾಟಕದಲ್ಲಿ 1ನೇ ಹಂತದ ಚುನಾವಣೆ ಪ್ರಕ್ರಿಯೆ

ಅಧಿಸೂಚನೆ - ಮಾರ್ಚ್‌ 28.2024 (ಗುರುವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ - ಏಪ್ರಿಲ್‌ 04.2024 (ಗುರುವಾರ)

ನಾಮಪತ್ರ ಪರಿಶೀಲನೆ - ಏಪ್ರಿಲ್‌ 05.2024 (ಶುಕ್ರವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ - ಏಪ್ರಿಲ್‌ 08.2024 (ಸೋಮವಾರ)

ಮತದಾನ ದಿನಾಂಕ - ಏಪ್ರಿಲ್‌ 26.2024 (ಶುಕ್ರವಾರ)

ಮತ ಎಣಿಕೆ ದಿನ/ ಫಲಿತಾಂಶ - ಜೂನ್‌ 04.2024 (ಮಂಗಳವಾರ)

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ - ಜೂನ್‌ 06.2024 (ಗುರುವಾರ)

ಇದರಂತೆ, ಕರ್ನಾಟಕದ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್‌, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.

ಲೋಕಸಭೆ ಚುನಾವಣೆ 2024; ಕರ್ನಾಟಕದಲ್ಲಿ 2ನೇ ಹಂತದ ಚುನಾವಣೆ

ಅಧಿಸೂಚನೆ - ಏಪ್ರಿಲ್‌ 12.2024 (ಶುಕ್ರವಾರ)

ನಾಮಪತ್ರ ಸಲ್ಲಿಕೆಗೆ ಕೊನೇ ದಿನ - ಏಪ್ರಿಲ್‌19.2024 (ಶುಕ್ರವಾರ)

ನಾಮಪತ್ರ ಪರಿಶೀಲನೆ - ಏಪ್ರಿಲ್‌ 20.2024 (ಶನಿವಾರ)

ನಾಮಪತ್ರ ಹಿಂಪಡೆಯಲು ಕೊನೆದಿನ -ಏಪ್ರಿಲ್‌ 22.2024 (ಸೋಮವಾರ)

ಮತದಾನ ದಿನಾಂಕ - ಮೇ 07.2024 (ಶನಿವಾರ)

ಮತ ಎಣಿಕೆ ದಿನ/ ಫಲಿತಾಂಶ - ಜೂನ್‌ 04.2024 (ಮಂಗಳವಾರ)

ಚುನಾವಣೆ ಪ್ರಕ್ರಿಯೆ ಮುಗಿಯಬೇಕಾದ ದಿನಾಂಕ - ಜೂನ್‌ 06.2024 (ಗುರುವಾರ)

ಇದರಂತೆ, ಕರ್ನಾಟಕದಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್‌, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಎರಡನೆ ಹಂತದಲ್ಲಿ ಮತದಾನ ನಡೆಯಲಿದೆ.

ಕರ್ನಾಟಕದ ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ

ಲೋಕಸಭೆ ಚುನಾವಣೆಯ ಮೂರನೇ ಹಂತ ನಡೆಯುವಾಗ, ಕರ್ನಾಟಕದ ಸುರಪುರ ವಿಧಾಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದೆ.

ಇದಕ್ಕೆ ಅಧಿಸೂಚನೆ ಏಪ್ರಿಲ್ 12ಕ್ಕೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ ಕೊನೇ ದಿನ ಏಪ್ರಿಲ್ 19. ನಾಮಪತ್ರ ಪರಿಶೀಲನೆ ಏಪ್ರಿಲ್ 20ರಂದು ನಡೆಯಲಿದ್ದು, ಏಪ್ರಿಲ್ 22ಕ್ಕೆ ನಾಮಪತ್ರ ಹಿಂಪಡೆಯಲು ಕೊನೇದಿನ.

ಮತದಾನ ದಿನಾಂಕ - ಮೇ 07.2024 (ಶನಿವಾರ)

ಮತ ಎಣಿಕೆ ದಿನ/ ಫಲಿತಾಂಶ - ಜೂನ್‌ 04.2024 (ಮಂಗಳವಾರ)

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

mysore-dasara_Entry_Point