Lunar Eclipse 2022: ವರ್ಷದ ಕೊನೆಯ ಚಂದ್ರಗ್ರಹಣ ಯಾವಾಗ? ಎಲ್ಲೆಲ್ಲಿ ಗೋಚರ?
Lunar Eclipse 2022: ಈ ವರ್ಷದ ಎರಡು ಸೂರ್ಯಗ್ರಹಣ ಆಗಿ ಹೋಗಿದೆ. ವರ್ಷದ ಮೊದಲ ಚಂದ್ರಗ್ರಹಣ ಮೇ 15-16ರಂದು ಆಗಿತ್ತು. ಇನ್ನೀಗ ವರ್ಷದ ಕೊನೆಯ ಚಂದ್ರಗ್ರಹಣ ಯಾವಾಗ? ಎಲ್ಲೆಲ್ಲಿ ಗೋಚರಿಸುತ್ತದೆ ಎಂಬಿತ್ಯಾದಿ ವಿವರ ಇಲ್ಲಿದೆ ನೋಡಿ.
ಸೂರ್ಯಗ್ರಹಣ ಆಯಿತು. ಈಗ ಚಂದ್ರಗ್ರಹಣದ ವಿಚಾರ. ಈ ವರ್ಷ ಎರಡೆರಡು ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ. ಎರಡೂ ಸೂರ್ಯಗ್ರಹಣ ಆಗಿ ಹೋಗಿದೆ. ಚಂದ್ರಗ್ರಹಣ ಒಂದು ಆಗಿದೆ. ಇನ್ನೊಂದು ಬಾಕಿ ಇದೆ. ಅದು ಮುಂದಿನ ತಿಂಗಳು ಎರಡನೇ ವಾರದಲ್ಲಿ ಬರಲಿದೆ.
ಈ ವರ್ಷದ ಮೊದಲ ಚಂದ್ರಗ್ರಹಣ ಮೇ 15 ಮತ್ತು 16ರಂದು ನಡೆದಿತ್ತು. ಸಂಪೂರ್ಣ ಚಂದ್ರಗ್ರಹಣ ಅದಾಗಿತ್ತು. ಬ್ಲಡ್ ಮೂನ್ ಎಂಬ ಹೆಸರಿನೊಂದಿಗೆ ಗ್ರಹಣಕಾಲದ ಚಂದ್ರನನ್ನು ಜಗತ್ತು ನೋಡಿತ್ತು.
ಭಾರತದಲ್ಲಿ ಚಂದ್ರಗ್ರಹಣ 2022 ( Lunar Eclipse 2022)ರ ದಿನಾಂಕ, ಸಮಯ ( Chandra Grahan 2022 in India date and time)
ದೀಪಾವಳಿಯ ಒಂದು ದಿನದ ನಂತರ, ಅಕ್ಟೋಬರ್ 25 ರಂದು ಸೂರ್ಯಗ್ರಹಣ ನಡೆಯಿತು. ಈ ವಿದ್ಯಮಾನದ ನಂತರ, ಭಾರತವು ಮತ್ತೊಂದು ಬಾಹ್ಯಾಕಾಶ ವಿದ್ಯಮಾನಕ್ಕೆ ಸಾಕ್ಷಿಯಾಗಲು ಸಿದ್ಧವಾಗಿದೆ. 2022 ರ ಮುಂದಿನ ಮತ್ತು ಕೊನೆಯ ಚಂದ್ರ ಗ್ರಹಣ ನವೆಂಬರ್ ತಿಂಗಳಲ್ಲಿ ಸಂಭವಿಸುತ್ತದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿರಲಿದೆ.
ಈ ಚಂದ್ರ ಗ್ರಹಣವು ಭಾರತ, ಏಷ್ಯಾದ ಇತರ ದೇಶಗಳು, ಆಸ್ಟ್ರೇಲಿಯಾ, ಉತ್ತರ ಅಮೆರಿಕಾ, ಉತ್ತರ ಮತ್ತು ಪೂರ್ವ ಯುರೋಪ್ನ ಭಾಗಗಳು ಮತ್ತು ದಕ್ಷಿಣ ಅಮೆರಿಕಾದ ಹೆಚ್ಚಿನ ಭಾಗಗಳಲ್ಲಿ ಗೋಚರಿಸುತ್ತದೆ.
ಸಂಪೂರ್ಣ ಚಂದ್ರಗ್ರಹಣ ನವೆಂಬರ್ 2022 (Total Lunar Eclipse 2022 November) ಏನಿದು ಸಂಪೂರ್ಣ ಚಂದ್ರಗ್ರಹಣ (What is total lunar eclipse)
ಈ ಸಲ ನಡೆಯುವಂಥದ್ದು ಸಂಪುರ್ಣ ಚಂದ್ರಗ್ರಹಣ. ಸೂರ್ಯ, ಭೂಮಿ ಮತ್ತು ಚಂದ್ರರು ಒಟ್ಟು ಒಂದೇ ರೇಖೆಯಲ್ಲಿ ಬಂದಾಗ, ಚಂದ್ರನು ಭೂಮಿಯ ನೆರಳಿನಲ್ಲಿ ಹಾದು ಹೋಗುತ್ತಾನೆ. ಆಗ ಸಂಪೂರ್ಣಚಂದ್ರಗ್ರಹಣ ಸಂಭವಿಸುತ್ತದೆ. ಸಂಪೂರ್ಣ ಚಂದ್ರಗ್ರಹಣದಲ್ಲಿ, ಪೂರ್ಣ ಚಂದ್ರನು ಭೂಮಿಯ ನೆರಳಿನ ಗಾಢವಾದ ಭಾಗದೊಳಗೆ ಬೀಳುತ್ತಾನೆ. ಇದನ್ನು ಅಂಬ್ರಾ ಎಂದು ಕರೆಯಲಾಗುತ್ತದೆ.
ಚಂದ್ರಗ್ರಹಣ (Chandra Grahan 2022)ದ ದಿನಾಂಕ ಮತ್ತು ಸಮಯ (Lunar Eclipse 2022 in India date and time)
ಭಾರತದಲ್ಲಿ ಚಂದ್ರಗ್ರಹಣದ ದಿನಾಂಕ ಮತ್ತು ಸಮಯವು timeanddate.com ವೆಬ್‌ಸೈಟ್ ಪ್ರಕಾರ, ನವೆಂಬರ್ 8, ಮಂಗಳವಾರ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರಗ್ರಹಣವು ನವೆಂಬರ್ 8 ರಂದು ಸಂಜೆ 5:32 ಕ್ಕೆ ಪ್ರಾರಂಭವಾಗುತ್ತದೆ ಮತ್ತು 6:18 ಕ್ಕೆ ಕೊನೆಗೊಳ್ಳುತ್ತದೆ
ಚಂದ್ರಗ್ರಹಣ 2022 (Chandra Grahan 2022) ಭಾರತದಲ್ಲಿ ಗೋಚರವೇ (Lunar Eclipse 2022 visible in India) ? ಎಲ್ಲೆಲ್ಲಿ ಗೋಚರ?
ಭಾರತದಲ್ಲಿ, ಸಂಪೂರ್ಣ ಚಂದ್ರಗ್ರಹಣವು ಪೂರ್ವ ಭಾಗದಲ್ಲಿ ಮಾತ್ರ ಗೋಚರಿಸುತ್ತದೆ. ಆದರೆ ದೇಶದ ಇತರ ಭಾಗಗಳಲ್ಲಿ ಭಾಗಶಃ ಗ್ರಹಣವು ಗೋಚರಿಸುತ್ತದೆ.
ಕೋಲ್ಕತ್ತಾ, ಸಿಲಿಗುರಿ, ಪಟನಾ, ರಾಂಚಿ ಮತ್ತು ಗುವಾಹಟಿಯಲ್ಲಿರುವವರು ನವೆಂಬರ್ 8 ರಂದು ಚಂದ್ರ ಗ್ರಹಣವನ್ನು ವೀಕ್ಷಿಸಬಹುದು. ಅಲ್ಲದೆ, ಕಠ್ಮಂಡು, ಟೋಕಿಯೊ, ಮನಿಲಾ, ಬೀಜಿಂಗ್, ಸಿಡ್ನಿ, ಜಕಾರ್ತಾ, ಮೆಲ್ಬೋರ್ನ್, ಸ್ಯಾನ್ ಫ್ರಾನ್ಸಿಸ್ಕೋ, ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್ ಸಿಟಿ, ಲಾಸ್ ಏಂಜಲೀಸ್, ಚಿಕಾಗೋ ಮತ್ತು ಮೆಕ್ಸಿಕೋ ಸಿಟಿಯಲ್ಲಿ ವಾಸಿಸುವವರು ಸಹ 2022 ರ ಪೂರ್ಣ ಚಂದ್ರಗ್ರಹಣವನ್ನು ವೀಕ್ಷಿಸಬಹುದು.
ಕಳೆದ ಚಂದ್ರಗ್ರಹಣ ಹೇಗಿತ್ತು?
ಗ್ರಹಣದ ಸಮಯದಲ್ಲಿ ಚಂದ್ರನು ಕೆಂಪಗೆ ಕಾಣುವುದರಿಂದ ಇದನ್ನು 'ಬ್ಲಡ್ ಮೂನ್' ಎಂದು ಕರೆಯಲಾಗುತ್ತದೆ. ಸೂರ್ಯನ ಕೆಂಪು ತರಂಗಾಂತರಗಳು ಭೂಮಿಯ ವಾತಾವರಣದ ಮೂಲಕ ಚದುರುವುದರಿಂದ ಚಂದ್ರಗ್ರಹ ಕೆಂಪಗೆ ಕಾಣುತ್ತದೆ. ಸಂಪೂರ್ಣ ಚಂದ್ರಗ್ರಹಣ 2022: ವಿಶ್ವದ ವಿವಿಧೆಡೆ ಕಂಡುಬಂದ ಸುಂದರ ದೃಶ್ಯಗಳಿವು