ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Make In India: ಭಾರತದಲ್ಲಿ ಸೇನಾ ಜೆಟ್‌ ಇಂಜಿನ್‌ ತಯಾರಿಸಲು ಅಮೆರಿಕ ಕಂಪನಿ ಉತ್ಸುಕ; ಕುತೂಹಲ ಕೆರಳಿಸಿದೆ ಪ್ರಧಾನಿ ಮೋದಿ ಅಮೆರಿಕ ಪ್ರವಾಸ

Make In India: ಭಾರತದಲ್ಲಿ ಸೇನಾ ಜೆಟ್‌ ಇಂಜಿನ್‌ ತಯಾರಿಸಲು ಅಮೆರಿಕ ಕಂಪನಿ ಉತ್ಸುಕ; ಕುತೂಹಲ ಕೆರಳಿಸಿದೆ ಪ್ರಧಾನಿ ಮೋದಿ ಅಮೆರಿಕ ಪ್ರವಾಸ

Make In India: ಭಾರತದಲ್ಲಿ ಜೆಟ್ ಎಂಜಿನ್ ಕಾರ್ಖಾನೆ ಸ್ಥಾಪಿಸುವ ಜನರಲ್ ಎಲೆಕ್ಟ್ರಿಕ್ (ಜಿಇ) (General Electric Co) ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ವೇಳೆ ಅಮೆರಿಕ ಸರ್ಕಾರದಿಂದ ಅನುಮೋದನೆ ದೊರೆಯುವ ಸಾಧ್ಯತೆ ಇದೆ. ಇದು ಮೇಕ್‌ ಇನ್‌ ಇಂಡಿಯಾ ಉಪಕ್ರಮಕ್ಕೆ ದೊಡ್ಡ ಉತ್ತೇಜನವಾಗಲಿದೆ ಎಂದು ವರದಿ ಹೇಳಿದೆ.

ಜೆಟ್‌ ವಿಮಾನ (ಸಾಂಕೇತಿಕ ಚಿತ್ರ)
ಜೆಟ್‌ ವಿಮಾನ (ಸಾಂಕೇತಿಕ ಚಿತ್ರ) (Live Hindustan)

ಭಾರತದಲ್ಲಿ ಕಾರ್ಖಾನೆ ಸ್ಥಾಪಿಸಲು ಸಿದ್ಧವಾಗಿರುವ ಅಮೆರಿಕದ ಜೆಟ್ ಕಂಪನಿ, ಪ್ರಧಾನಿ ಮೋದಿ (Prime Minister Modi) ಯವರ ಅಮೆರಿಕ ಪ್ರವಾಸ (US Tour) ಕ್ಕಾಗಿ ಕಾಯುತ್ತಿದೆ

ಭಾರತದಲ್ಲಿ ಜೆಟ್ ಎಂಜಿನ್ ಕಾರ್ಖಾನೆ ಸ್ಥಾಪಿಸುವ ಜನರಲ್ ಎಲೆಕ್ಟ್ರಿಕ್ (ಜಿಇ) (General Electric Co) ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ವೇಳೆ ಅಮೆರಿಕ ಸರ್ಕಾರದಿಂದ ಅನುಮೋದನೆ ದೊರೆಯುವ ಸಾಧ್ಯತೆ ಇದೆ. ಈ ಬಗ್ಗೆ ತಾತ್ವಿಕ ಒಪ್ಪಂದ ಏರ್ಪಟ್ಟಿದೆ.

ಭಾರತದಲ್ಲಿ ಜೆಟ್ ಎಂಜಿನ್ ಕಾರ್ಖಾನೆ ಸ್ಥಾಪಿಸುವ ಜನರಲ್ ಎಲೆಕ್ಟ್ರಿಕ್ (ಜಿಇ) ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ವೇಳೆ ಅನುಮೋದನೆ ದೊರೆಯುವ ಸಾಧ್ಯತೆ ಇದೆ. ಈ ಹಿಂದೆ ಅಮೆರಿಕ ಈ ಬಗ್ಗೆ ತಾತ್ವಿಕ ಒಪ್ಪಿಗೆ ನೀಡಿದ್ದರೂ ಇದಕ್ಕೆ ಅಗತ್ಯ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಅಮೆರಿಕ ಸರ್ಕಾರದ ಅನುಮೋದನೆಯಿಲ್ಲದೆ ಅಮೆರಿಕದ ರಕ್ಷಣಾ ಕಂಪನಿಗಳು ವಿದೇಶದಲ್ಲಿ ಜಂಟಿ ಉದ್ಯಮಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ.

ಉದ್ಯೋಗ ಸೃಷ್ಟಿ ಮತ್ತು ಕಡಿಮೆ ವೆಚ್ಚ

ಭಾರತವು ತನ್ನ ಲಘು ಯುದ್ಧ ವಿಮಾನದಲ್ಲಿ ಜಿಇಯಿಂದ ಖರೀದಿಸಿದ ಎಂಜಿನ್‌ಗಳನ್ನು ಮಾತ್ರ ಬಳಸುತ್ತಿದೆ. ಮುಂಬರುವ 10-15 ವರ್ಷಗಳಲ್ಲಿ ಭಾರತವು 400 ಹೊಸ ಪೀಳಿಗೆಯ ಯುದ್ಧ ವಿಮಾನಗಳನ್ನು ಉತ್ಪಾದಿಸಲು ಯೋಜಿಸಿದೆ. ಅದಕ್ಕಾಗಿಯೇ ಭಾರತದಲ್ಲಿ GE ಮತ್ತು HAL ನಡುವೆ ಜಂಟಿ ಉದ್ಯಮವನ್ನು ಸ್ಥಾಪಿಸುವುದು ಭಾರತದ ಪ್ರಯತ್ನವಾಗಿದೆ. ಅದರ ಮೂಲಕ ಭಾರತದಲ್ಲಿಯೇ ವಿಮಾನ ಎಂಜಿನ್‌ಗಳನ್ನು ತಯಾರಿಸಬಹುದು. ಇದರಿಂದ ವೆಚ್ಚ ಕಡಿಮೆಯಾಗುತ್ತದೆ. ದೇಶದಲ್ಲಿ ಉದ್ಯೋಗ ಸೃಷ್ಟಿಯೂ ಆಗಲಿದೆ.

ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದ ಮೂಲಗಳನ್ನು ನಂಬುವುದಾದರೆ, ಜೂನ್ 22 ರಂದು ಮೋದಿಯವರ ಅಮೇರಿಕ ಭೇಟಿಯ ಸಂದರ್ಭದಲ್ಲಿ ಬಿಡೆನ್ ಆಡಳಿತವು GE-HAL ಜಂಟಿ ಉದ್ಯಮಗಳ ಸ್ಥಾಪನೆಯನ್ನು ಅನುಮೋದಿಸಬಹುದು. ಇದು ಮಹತ್ವದ ವಿದ್ಯಮಾನವಾಗಿರಲಿದ್ದು, ಅದಕ್ಕಾಗಿ ಎಲ್ಲರೂ ಎದುರುನೋಡುತ್ತಿದ್ದಾರೆ.

ಮೇಕ್‌ ಇನ್‌ ಇಂಡಿಯಾಕ್ಕೆ ಉತ್ತೇಜನ

ವೈಟ್ ಹೌಸ್ ಅಥವಾ ಜಿಇಯಿಂದ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಲಾಗಿಲ್ಲ. ಮೂಲಗಳ ಪ್ರಕಾರ, ಈ ವಿಷಯದಲ್ಲಿ ಭಾರತವೂ ಪ್ಲಾನ್ ಬಿಯಲ್ಲಿ ಕೆಲಸ ಮಾಡುತ್ತಿದೆ. ಇದು ಜೆಟ್ ಎಂಜಿನ್‌ಗಳನ್ನು ತಯಾರಿಸುವ ಇತರ ಕೆಲವು ಜಾಗತಿಕ ಕಂಪನಿಗಳೊಂದಿಗೆ ಸಂಪರ್ಕದಲ್ಲಿದೆ. ಇವುಗಳಲ್ಲಿ ರೋಲ್ಸ್ ರಾಯ್ಸ್, ಪ್ರಾಟ್ & ವಿಂಟ್ಲಿ, ಯುರೋಜೆಟ್ ಸೇರಿವೆ, ಆದರೆ ಅದರ ಎಂಜಿನ್ ಅನ್ನು ಈಗಾಗಲೇ ತೇಜಸ್‌ನಲ್ಲಿ ಬಳಸಲಾಗುತ್ತಿರುವುದರಿಂದ ಜಿಇಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.

GE ಕೆಲವು ತಂತ್ರಜ್ಞಾನದ ವರ್ಗಾವಣೆಯನ್ನು HAL ಗೆ ಮಾಡಿದೆ. ಅದು ಎಂಜಿನ್‌ಗಳನ್ನು ಪರವಾನಗಿ ಪಡೆದ ತಯಾರಕರಾಗಿ ಈಗ ಎಂಜಿನ್‌ ಉತ್ಪಾದಿಸುತ್ತದೆ. ಈ ಕುರಿತ ವಿದ್ಯಮಾನದ ಅರಿವು ಇರುವಂಥ ವ್ಯಕ್ತಿಯೊಬ್ಬರು ಹಂಚಿಕೊಂಡ ಮಾಹಿತಿ ಪ್ರಕಾರ, ಭಾರತವು ಹೆಚ್ಚಿನ ತಂತ್ರಜ್ಞಾನವನ್ನು ಹಂಚಿಕೊಳ್ಳುವಂತೆ ಅಮೆರಿಕದ ಕಂಪನಿಯನ್ನು ಒತ್ತಾಯಿಸುತ್ತಿದೆ. ಅಮೆರಿಕ ಕೂಡ ಈ ಕುರಿತು ಪಾಸಿಟಿವ್‌ ಆಗಿ ಪ್ರತಿಸ್ಪಂದಿಸಿದೆ.

ವಿಮಾನ ಎಂಜಿನ್‌ಗಳನ್ನು ಹೇಗೆ ತಯಾರಿಸುವುದು

ದೇಶೀಯವಾಗಿ ಫೈಟರ್ ಜೆಟ್‌ಗಳನ್ನು ತಯಾರಿಸಬಹುದಾದರೂ ಅವುಗಳಿಗೆ ಶಕ್ತಿ ನೀಡಲು ಎಂಜಿನ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯದ ಕೊರತೆಯಿದೆ. HAL ಭಾರತೀಯ ವಾಯುಪಡೆಗಾಗಿ ತಯಾರಿಸುತ್ತಿರುವ 83 ಲಘು ಯುದ್ಧ ವಿಮಾನಗಳಿಗೆ ಹಗುರವಾದ GE ಎಂಜಿನ್ ಅನ್ನು ಬಳಸುತ್ತಿದೆ. ಆದಾಗ್ಯೂ, ಭಾರತವು ಮುಂದಿನ ಎರಡು ದಶಕಗಳಲ್ಲಿ ತನ್ನ ವಾಯುಪಡೆ ಮತ್ತು ನೌಕಾಪಡೆಗಾಗಿ 350 ಕ್ಕೂ ಹೆಚ್ಚು ಯುದ್ಧವಿಮಾನಗಳನ್ನು ಉತ್ಪಾದಿಸಲು ಉದ್ದೇಶಿಸಿದೆ. ಇದು GE 414 ನಿಂದ ಚಾಲಿತವಾಗುವ ನಿರೀಕ್ಷೆ ಇದೆ.

IPL_Entry_Point