ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Joe Biden: ಅಮೆರಿಕ ಅಧ್ಯಕ್ಷನ ಫಿಟ್​ನೆಸ್​ ಬಗ್ಗೆ ಟೀಕೆಗಳ ಸುರಿಮಳೆ; ಜೋ ಬೈಡೆನ್​​ ಮುಜುಗರಕ್ಕೊಳಗಾದ 6 ಕ್ಷಣಗಳಿವು Photos

Joe Biden: ಅಮೆರಿಕ ಅಧ್ಯಕ್ಷನ ಫಿಟ್​ನೆಸ್​ ಬಗ್ಗೆ ಟೀಕೆಗಳ ಸುರಿಮಳೆ; ಜೋ ಬೈಡೆನ್​​ ಮುಜುಗರಕ್ಕೊಳಗಾದ 6 ಕ್ಷಣಗಳಿವು PHOTOS

  • Joe Biden fitness: 80 ವರ್ಷ ವಯಸ್ಸಿನ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ನಿನ್ನೆ (ಜೂನ್​ 1, ಗುರುವಾರ) ಯುಎಸ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ನಡೆದ ಪದವಿ ಸಮಾರಂಭದಲ್ಲಿ ಮುಗ್ಗರಿಸಿ ಬಿದ್ದದ್ದರು. ಬೈಡೆನ್​​ ಮುಜುಗರಕ್ಕೊಳಗಾಗಿದ್ದು ಇದೇ ಮೊದಲೇನಲ್ಲ, ಇಂತಹ ಕೆಲವು ಘಟನೆಗಳು ಈ ಹಿಂದೆ ನಡೆದಿವೆ.

 2023ರ ಫೆಬ್ರವರಿಯಲ್ಲಿ ಪೋಲೆಂಡ್‌ನ ವಾರ್ಸಾದಲ್ಲಿ ಏರ್ ಫೋರ್ಸ್ ಒನ್ ವಿಮಾನ ಏರಲು ಮೆಟ್ಟಿಲುಗಳನ್ನು ಹತ್ತುವಾಗ ಜೋ ಬೈಡನ್​ ಮುಗ್ಗರಿಸಿದ್ದರು.  
icon

(1 / 7)

ಮಾರ್ಚ್ 19, 2021 ರಂದು, ಜಾಯಿಂಟ್ ಬೇಸ್ ಆಂಡ್ರ್ಯೂಸ್‌ನಲ್ಲಿ ವಿಮಾನ (ಏರ್ ಫೋರ್ಸ್ ಒನ್) ಏರುವಾಗ ಮೆಟ್ಟಿಲುಗಳ ಬಳಿ ಎರಡು ಬಾರಿ ಎಡವಿ ಬಿದ್ದಿದ್ದರು. ಬಳಿಕ ಜೆಟ್ ಮೆಟ್ಟಿಲುಗಳ ರೇಲಿಂಗ್ ಅನ್ನು ಹಿಡಿದುಕೊಂಡು ಎದ್ದು ನಿಂತಿದ್ದರು. (ಸಂಗ್ರಹ ಚಿತ್ರ)
icon

(2 / 7)

 ಜೂನ್ 18, 2022 ರಂದು,  ಜೋ ಬೈಡನ್‌ ಸೈಕಲ್‌ ಮೇಲಿಂದ ಬಿದ್ದು ಗಾಯ ಮಾಡಿಕೊಂಡಿದ್ದರು.  ನಿತ್ಯ ಎಂದಿನಂತೆ ಕೆಲ ಗಂಟೆಗಳ ಕಾಲ ಸೈಕಲ್‌ ಸವಾರಿ ಮಾಡುವ ಬೈಡನ್‌ ಅಂದು ಸೈಕಲ್‌ ಏರಿದ್ದರು, ಸವಾರಿ ನಿಲ್ಲಿಸಬೇಕೆನ್ನುವಷ್ಟರಲ್ಲಿ ಪೆಡಲ್‌ ಕವರ್‌ಗೆ ಕಾಲು ಸಿಲುಕಿ ಬ್ಯಾಲೆನ್ಸ್‌ ತಪ್ಪಿ ಕೆಳಕ್ಕೆ ಬಿದ್ದಿದ್ದರು. 
icon

(3 / 7)

ಸೆಪ್ಟೆಂಬರ್ 23, 2022 ರಂದು, ನ್ಯೂಯಾರ್ಕ್‌ನಲ್ಲಿ ನಡೆದ ಗ್ಲೋಬಲ್ ಫಂಡ್ ಕಾನ್ಫರೆನ್ಸ್‌ನಲ್ಲಿ ಭಾಷಣ ಮುಗಿಸಿ ವೇದಿಕೆ ಇಳಿಯುವಾಗ ಭದ್ರತಾ ಸಿಬ್ಬಂದಿಯ ಸಹಾಯವನ್ನು ತೆಗೆದುಕೊಳ್ಳಬೇಕಾಯಿತು. 
icon

(4 / 7)

ನಿನ್ನೆ (ಜೂನ್​ 1, ಗುರುವಾರ) ಯುಎಸ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ನಡೆದ ಪದವಿ ಸಮಾರಂಭದಲ್ಲಿ ಮುಗ್ಗರಿಸಿ ಬಿದ್ದಿದ್ದರು.  
icon

(5 / 7)

ಮೇ 19, 2023 ರಂದು G7 ಸಮ್ಮೇಳನಕ್ಕಾಗಿ ಜಪಾನ್‌ಗೆ ಭೇಟಿ ನೀಡುತ್ತಿರುವಾಗ ಬೈಡನ್​ ಅವರು ಮೆಟ್ಟಿಲುಗಳ ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಅವರು ನೆಲದ ಮೇಲೆ ಬೀಳದೆ ಅಪಾಯದಿಂದ ಪಾರಾಗಿದ್ದಾರೆ.  
icon

(6 / 7)

ಬೈಡೆನ್​ ಆಗಾಗ ಕುಸಿದು ಬೀಳಲು ಅವರ ವೃದ್ಧಾಪ್ಯವೇ ಕಾರಣ, ಇವೆಲ್ಲ ಆಕಸ್ಮಿಕ ಘಟನೆಯಲ್ಲ. ದೇಶವನ್ನು ನಡೆಸಲು ಬೈಡೆನ್​​ಗೆ ತುಂಬಾ ವಯಸ್ಸಾಯ್ತು ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.  ಫಿಟ್​ನೆಸ್​ ಕುರಿತ ಟೀಕೆಗಳ ನಡುವೆಯೂ ಬೈಡೆನ್​ ಅವರು 2024 ರಲ್ಲಿ ಮತ್ತೊಮ್ಮೆ ಅಧ್ಯಕ್ಷೀಯ ಹುದ್ದೆಗೆ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. 2020ರ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಬೈಡನ್​ ವಯಸ್ಸನ್ನು ಟೀಕಿಸುವ ಜಾಹೀರಾತುಗಳನ್ನು ನಿರ್ಮಿಸಿದ್ದರು. 
icon

(7 / 7)

IPL_Entry_Point

ಇತರ ಗ್ಯಾಲರಿಗಳು