ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Modi Means Corruption: ಮೋದಿ ಅರ್ಥ ಭ್ರಷ್ಟಾಚಾರ, ಬಿಜೆಪಿ ನಾಯಕಿ ಖುಷ್ಬು ಸುಂದರ್ ಟ್ವೀಟ್‌ ವೈರಲ್‌

Modi means corruption: ಮೋದಿ ಅರ್ಥ ಭ್ರಷ್ಟಾಚಾರ, ಬಿಜೆಪಿ ನಾಯಕಿ ಖುಷ್ಬು ಸುಂದರ್ ಟ್ವೀಟ್‌ ವೈರಲ್‌

ಬಿಜೆಪಿ ನಾಯಕಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಅವರ ಹಳೆಯ ಟ್ವೀಟ್ ವೈರಲ್ ಆಗಿದೆ. "ಮೋದಿ" ಪದವನ್ನು "ಭ್ರಷ್ಟಾಚಾರ" ಎಂದು ಮರು ವ್ಯಾಖ್ಯಾನಿಸಬೇಕು ಎಂದು ಖುಷ್ಬು ಅವರು 2018ರಲ್ಲಿ ಟ್ವೀಟ್‌ ಮಾಡಿದ್ದರು.

ಪ್ರಧಾನಿ ನರೇಂದ್ರ ಮೋದಿ (ANI Photo)
ಪ್ರಧಾನಿ ನರೇಂದ್ರ ಮೋದಿ (ANI Photo) (ANI/ PIB)

ನವದೆಹಲಿ: ಎಲ್ಲಾ ಕಳ್ಳರಿಗೂ ಮೋದಿ ಎಂಬ ಉಪನಾಮ ಏಕಿದೆ ಎಂದು 2019ರ ಲೋಕಸಭೆ ಚುನಾವಣಾ ಪ್ರಚಾರದಲ್ಲಿ ಹೇಳಿದ ರಾಹುಲ್‌ ಗಾಂಧಿ ಇದೀಗ ಲೋಕಸಭೆಯಿಂದ ಅಮಾನತುಗೊಂಡಿದ್ದಾರೆ. ಇದೀಗ ಬಿಜೆಪಿ ನಾಯಕಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಅವರ ಹಳೆಯ ಟ್ವೀಟ್ ವೈರಲ್ ಆಗಿದೆ. "ಮೋದಿ" ಪದವನ್ನು "ಭ್ರಷ್ಟಾಚಾರ" ಎಂದು ಮರು ವ್ಯಾಖ್ಯಾನಿಸಬೇಕು ಎಂದು ಖುಷ್ಬು ಅವರು 2018ರಲ್ಲಿ ಟ್ವೀಟ್‌ ಮಾಡಿದ್ದರು.

ಇದೀಗ ಖುಷ್ಬು ಅವರ ಟ್ವೀಟ್‌ ಅನ್ನು ಕಾಂಗ್ರೆಸ್‌ನ ಹಲವು ಪ್ರಮುಖರು ಹಂಚಿಕೊಂಡಿದ್ದಾರೆ. ಖುಷ್ಬು ಸುಂದರ್ ವಿರುದ್ಧ ಗುಜರಾತ್ ಸಚಿವ ಪೂರ್ಣೇಶ್ ಮೋದಿ ಕೇಸ್ ಹಾಕುತ್ತಾರಾ? ಎಂದು ಪ್ರಶ್ನಿಸಿದ್ದಾರೆ. ಆದರೆ, ಈ ಟ್ವೀಟ್ ಬಗ್ಗೆ ಖುಷ್ಬು ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಳೆಯ ಟ್ವೀಟ್‌ ಅನ್ನು ಡಿಲೀಟ್‌ ಮಾಡಿಲ್ಲ.

ಸೂರತ್‌ ನ್ಯಾಯಾಲಯವು, ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಪ್ಪಿತಸ್ಥರೆಂದು ಪರಿಗಣಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದಾಗಿ ಸಂಸತ್‌ ಪ್ರಕಟಿಸಿತ್ತು. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಕರ್ನಾಟಕದಲ್ಲಿ ಪ್ರಚಾರ ಸಭೆಯಲ್ಲಿ ಮೋದಿ ಸರ್‌ನೇಮ್‌ ಕುರಿತು ಅವಹೇಳನ ಮಾಡಿದ್ದರು. ಎಲ್ಲ ಕಳ್ಳರಿಗೂ ಮೋದಿ ಎಂಬ ಸರ್‌ನೇಮ್‌ ಹೇಗೆ ಬಂತು ಎಂದು ಲೇವಡಿ ಮಾಡಿದ್ದರು.

ಇದರ ವಿರುದ್ದ ಗುಜರಾತ್‌ನ ಸೂರತ್‌ನಲ್ಲಿ ಕೇಸ್‌ ದಾಖಲಾಗಿತ್ತು. ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ರಾಹುಲ್‌ ಗಾಂಧಿ ವಿರುದ್ಧ ಕ್ರಿಮಿನಲ್‌ ಮಾನಹಾನಿ ದಾವೆ ಹೂಡಿದ್ದರು. ಸೂರತ್‌ ಕೋರ್ಟ್‌ ಇದರ ವಿಚಾರಣೆ ನಡೆಸಿ ಇಂದು ತೀರ್ಪು ಪ್ರಕಟಿಸಿತು. ಆದರೆ, ಈ ತೀರ್ಪನ್ನು ರಾಹುಲ್ ಗಾಂಧಿ ಪ್ರಶ್ನಿಸಲಿರುವ ಕಾರಣ, ಕೋರ್ಟ್‌ ತಾನು ನೀಡಿದ ಎರಡು ವರ್ಷಗಳ ಶಿಕ್ಷೆಯನ್ನು ಒಂದು ತಿಂಗಳ ಮಟ್ಟಿಗೆ ಅಮಾನತುಗೊಳಿಸಿತ್ತು.

ಇದೀಗ ಖುಷ್ಬು ಟ್ವೀಟ್‌ ಕುರಿತು ಪೂರ್ಣೇಶ್ ಮೋದಿ ಅವರು ದೂರು ಸಲ್ಲಿಸುತ್ತಾರ? ಎಂದು ವಿರೋಧಪಕ್ಷಗಳು ಪ್ರಶ್ನಿಸಿವೆ. ರಾಹುಲ್‌ ಗಾಂಧಿ ಅನರ್ಹತೆ ಕುರಿತು ಖುಷ್ಬು ಅವರು ಕೆಲವು ದಿನಗಳ ಹಿಂದೆ ಪ್ರತಿಕ್ರಿಯೆ ನೀಡಿದ್ದರು. "ರಾಹುಲ್‌ ಗಾಂಧಿಯವರು ಕೆಲವು ದಿನಗಳ ಹಿಂದೆ ತಾನು ದುರದೃಷ್ಟವಶಾತ್ ಸಂಸದನಾಗಿದ್ದೇನೆ ಎಂದಿದ್ದರು. ಈ ಕತೆಯ ನೀತಿ ಏನೆಂದರೆ, ಯಾವಾಗಲೂ ಪಾಸಿಟೀವ್‌ ಆಗಿ ಯೋಚಿಸಿ, ನಕಾರಾತ್ಮಕತೆಯು ನಿಮ್ಮನ್ನು ಎಲ್ಲಿಗೂ ಕರೆದೊಯ್ಯುವುದಿಲ್ಲ" ಎಂದು ಖುಷ್ಬು ಹೇಳಿದ್ದರು. 2013 ರಲ್ಲಿ ಮನಮೋಹನ್ ಸಿಂಗ್ ಅವರು ಸುಗ್ರೀವಾಜ್ಞೆಯನ್ನು ಜಾರಿಗೊಳಿಸಲು ಮುಂದಾದಗ ರಾಹುಲ್‌ ಗಾಂಧಿಯವರು ಅದನ್ನು ಹರಿದು ಹಾಕಿದ್ದರು ಎಂದು ಖುಷ್ಬು ವ್ಯಂಗ್ಯವಾಡಿದ್ದಾರೆ.

ರಾಹುಲ್‌ ಗಾಂಧಿ ಅವರ ಲೋಕಸಭೆ ಸದಸ್ಯತ್ವ ರದ್ದಾಗಿದ್ದು, ಪ್ರಮುಖ ವಿಪಕ್ಷ ನಾಯಕರು ಈ ನಿರ್ಧಾರವನ್ನು ಖಂಡಿಸಿದ್ದಾರೆ. ರಾಹುಲ್‌ ಗಾಂಧಿ ಅವರ ಲೋಕಸಭೆ ಸದಸ್ಯತ್ವನ್ನು ರದ್ದುಗೊಳಿಸಿರುವುದು ನಿಜಕ್ಕೂ ಖಂಡನೀಯ ಎಂದು ಶಿವಸೇನೆ(ಉದ್ಧವ್‌ ಠಾಕ್ರೆ ಬಣ) ನಾಯಕ ಮತ್ತು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿದ್ದರು. ನೀವು ರಾಹುಲ್ ಗಾಂಧಿ ಅವರನ್ನು ಸಂಸತ್ತಿನ ಸ್ಥಾನದಿಂದ ಕೆಳಗಿಳಿಸಬಹುದು. ಆದರೆ ಕೋಟಿಗಟ್ಟಲೆ ಭಾರತೀಯರ ಹೃದಯದಲ್ಲಿರುವ ಸ್ಥಾನದಿಂದ ಅವರನ್ನು ಕೆಳಗಿಳಿಸುವುದು ಅಸಾಧ್ಯ. ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಡಿ.ಕೆ. ಶಿವಕುಮಾರ್ ಟ್ವೀಟ್‌ ಮಾಡಿದ್ದರು.

IPL_Entry_Point