ಕನ್ನಡ ಸುದ್ದಿ  /  Nation And-world  /  Rahul Gandhi 1st Reaction Truth Is My God Rahul Gandhi Quotes Mahatma In 1st Reaction After Conviction

Rahul Gandhi 1st reaction: ʻಸತ್ಯವೇ ನನ್ನ ದೇವರುʼ; ಸೂರತ್‌ ಕೋರ್ಟ್‌ ತೀರ್ಪಿನ ಬಳಿಕ ರಾಹುಲ್‌ ಗಾಂಧಿ ಮೊದಲ ಪ್ರತಿಕ್ರಿಯೆ

Rahul Gandhi 1st reaction: ರಾಹುಲ್ ಗಾಂಧಿ ಅವರನ್ನು ಸೂರತ್ ನ್ಯಾಯಾಲಯವು 2019ರ ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಘೋಷಿಸಿದೆ. ಆದರೆ, ಈ ತೀರ್ಪನ್ನು ರಾಹುಲ್ ಗಾಂಧಿ ಪ್ರಶ್ನಿಸಲಿರುವ ಕಾರಣ, ಕೋರ್ಟ್‌ ತಾನು ನೀಡಿದ ಎರಡು ವರ್ಷಗಳ ಶಿಕ್ಷೆಯನ್ನು ಒಂದು ತಿಂಗಳ ಮಟ್ಟಿಗೆ ಅಮಾನತುಗೊಳಿಸಿದೆ.

ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ (HT_PRINT)

ಮೋದಿ ಸರ್‌ನೇಮ್‌ ಹೊಂದಿದವರನ್ನು ಅವಹೇಳನ ಮಾಡಿದ ಪ್ರಕರಣದಲ್ಲಿ ಗುಜರಾತ್‌ನ ಸೂರತ್‌ ಕೋರ್ಟ್‌ ರಾಹುಲ್‌ ಗಾಂಧಿಗೆ ಎರಡು ವರ್ಷ ಸಜೆ ವಿಧಿಸಿದೆ. ಬಳಿಕ ಜಾಮೀನು ಕೂಡ ನೀಡಿದೆ.

ಈ ತೀರ್ಪು ಪ್ರಕಟವಾದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿರುವ ರಾಹುಲ್‌ ಗಾಂಧಿ, ಮಹಾತ್ಮ ಗಾಂಧಿ ಅವರ ಹೇಳಿಕೆಯನ್ನು ಬಳಸಿಕೊಂಡಿದ್ದಾರೆ. ಈ ಹೇಳಿಕೆಯನ್ನು ಅವರು ಟ್ವೀಟ್‌ ಮಾಡಿ ಗಮನಸೆಳೆದಿದ್ದಾರೆ.

2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದಾಗ ಎಲ್ಲ ಕಳ್ಳರಿಗೂ ಮೋದಿ ಎಂಬ ಸರ್‌ನೇಮ್‌ ಹೇಗೆ ಕಾಮನ್‌ ಆಗಿ ಬಂದಿದೆ ಎಂದು ಲೇವಡಿ ಮಾಡಿದ್ದರು.

ಅವರ ಈ ಹೇಳಿಕೆ ಖಂಡಿಸಿ ಗುಜರಾತ್‌ನಲ್ಲಿ ಕೇಸ್‌ ದಾಖಲಾಗಿತ್ತು. ಇದರ ವಿಚಾರಣೆ ನಡೆಸಿದ ಸೂರತ್‌ ಕೋರ್ಟ್‌ ಇಂದು ತೀರ್ಪು ನೀಡಿದೆ. ಈ ತೀರ್ಪು ಬಂದ ನಂತರದಲ್ಲಿ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದು, ಮಹಾತ್ಮ ಗಾಂಧಿಯವರ ಹೇಳಿಕೆ ಉಲ್ಲೇಖಿಸಿದ್ದಾರೆ. "ನನ್ನ ಧರ್ಮವು ಸತ್ಯ ಮತ್ತು ಅಹಿಂಸೆಯ ಮೇಲೆ ಆಧಾರಿತವಾಗಿದೆ, ಸತ್ಯವೇ ನನ್ನ ದೇವರು, ಅಹಿಂಸೆ ಅದನ್ನು ಪಡೆಯುವ ಸಾಧನವಾಗಿದೆ" ಎಂದು ಬರೆದುಕೊಂಡಿದ್ದಾರೆ.

ಯುನೈಟೆಡ್ ಕಿಂಗ್‌ಡಂನಲ್ಲಿ ರಾಹುಲ್ ಗಾಂಧಿ ಅವರ ಇತ್ತೀಚಿನ ಹೇಳಿಕೆಗಳಿಗಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿರುವ ಬಿಜೆಪಿ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದೆ. ರಾಹುಲ್ ಗಾಂಧಿ ಏನು ಹೇಳಿದರೂ ಅದು ಅವರ ಪಕ್ಷಕ್ಕೆ ಮತ್ತು ದೇಶಕ್ಕೆ ಅಪಾಯಕಾರಿ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಗಮನಿಸಬಹುದಾದ ಸುದ್ದಿಗಳು

ವಿಜಯ್‌ ಮಲ್ಯ ಬಳಿ ಸಾಲಮರುಪಾವತಿಗೆ ಹಣ ಇತ್ತು; ಸಿಬಿಐ ಪೂರಕ ಚಾರ್ಜ್‌ಶೀಟಲ್ಲಿ ಉಲ್ಲೇಖ

Vijay Mallya case: ಕಿಂಗ್‌ ಫಿಶರ್‌ ವಿಮಾನ ಯಾನ ಸಂಸ್ಥೆಯ ಸಾಲ ಮರುಪಾವತಿ ಮಾಡುವುದಕ್ಕೆ ಸಾಕಾಗುವಷ್ಟು ಹಣ ಅವರ ಬಳಿ ಇತ್ತು ಎಂದು ಕೇಂದ್ರೀಯ ತನಿಖಾ ದಳ ಉಲ್ಲೇಖಿಸಿದೆ. ಕಿಂಗ್‌ಫಿಷರ್ ಏರ್‌ಲೈನ್ಸ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರೀಯ ತನಿಖಾ ದಳ ಸಿಬಿಐ ಮೂರನೇ ಪೂರಕ ಚಾರ್ಜ್‌ಶೀಟ್‌ ಸಲ್ಲಿಸಿದೆ. ಇದರಲ್ಲಿ ಆ ಉಲ್ಲೇಖವಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

ಹಿಂದುಗಳ ಆರಾಧ್ಯ ದೇವ ಆಂಜನೇಯನಿಗೆ ಅವಮಾನ; ಸೆರೆಮನೆ ಸೇರಿದ ಮುಸ್ಲಿಂ ಪತ್ರಕರ್ತ- ಇದು ಪಾಕ್‌ ವಿದ್ಯಮಾನ

Pak Muslim journalist arrested:́ ಹಿಂದುಗಳ ಆರಾಧ್ಯ ದೇವರಾದ ಆಂಜನೇಯನನ್ನು ಅವಹೇಳನ ಮಾಡಿದ ಮುಸ್ಲಿಂ ಪತ್ರಕರ್ತನೊಬ್ಬ ಸೆರೆಮನೆ ಸೇರಿದ್ದಾನೆ. ಇದು ನಡೆದಿರುವುದು ಭಾರತದಲ್ಲಿ ಅಲ್ಲ. ಪಾಕಿಸ್ತಾನದಲ್ಲಿ! ಇದರ ಹಿಂದೆ ಒಂದು ಹೋರಾಟವೂ ಇದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ವೈವಾಹಿಕ ಅತ್ಯಾಚಾರ ಪ್ರಕರಣ ಕ್ರಿಮಿನಲ್‌ ಅಪರಾಧವೇ? ಕೇಂದ್ರ ಮತ್ತು ಕರ್ನಾಟಕದ ನಿಲುವೇನು? ಮೇ 9ರಂದು ನಡೆಯಲಿದೆ ವಿಚಾರಣೆ

ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಲು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಒಂದು ವಾರದ ಸಮಯವನ್ನು ಕೋರಿದೆ. ಕಾನೂನಾತ್ಮಕ ವ್ಯವಸ್ಥೆಯಲ್ಲಿ ಬದಲಾವಣೆಗೆ ಆಗ್ರಹಿಸಿ ಸಲ್ಲಿಸಲಾಗಿರುವ ಅರ್ಜಿಗಳ ಮೇಲೆ ವ್ಯಾಪಕ ವಾದವನ್ನು ಪ್ರಾರಂಭಿಸಲು ಸುಪ್ರೀಂ ಕೋರ್ಟ್ ಮೇ 9 ರಂದು ದಿನಾಂಕವನ್ನು ನಿಗದಿಪಡಿಸಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point