Kannada News  /  Nation And-world  /  Tirumala Tirupati Devasthanams Chennai T Nagar Goddess Padmavathi Ammavaru Gets Ready
TTD News: ತಿರುಮಲ ತಿರುಪತಿ ದೇವಸ್ಥಾನಂನ ಪದ್ಮಾವತಿ ಅಮ್ಮನಿಗೆ ಮೀಸಲಿಟ್ಟ ಹೊಸ ದೇಗುಲ ಮುಂದಿನ ತಿಂಗಳು ಓಪನ್‌
TTD News: ತಿರುಮಲ ತಿರುಪತಿ ದೇವಸ್ಥಾನಂನ ಪದ್ಮಾವತಿ ಅಮ್ಮನಿಗೆ ಮೀಸಲಿಟ್ಟ ಹೊಸ ದೇಗುಲ ಮುಂದಿನ ತಿಂಗಳು ಓಪನ್‌

TTD News: ತಿರುಮಲ ತಿರುಪತಿ ದೇವಸ್ಥಾನಂನ ಪದ್ಮಾವತಿ ಅಮ್ಮನಿಗೆ ಮೀಸಲಿಟ್ಟ ಹೊಸ ದೇಗುಲ ಮುಂದಿನ ತಿಂಗಳು ಓಪನ್‌

24 February 2023, 6:04 ISTPraveen Chandra B
24 February 2023, 6:04 IST

ಟಿ ನಗರದ ಜಿಎನ್ ಚೆಟ್ಟಿ ರಸ್ತೆಯಲ್ಲಿ 14880 ಚದರ ಅಡಿ ಜಾಗದಲ್ಲಿ ಹೊಸ ದೇವಸ್ಥಾನ ನಿರ್ಮಿಸಲಾಗಿದೆ. ಈ ಭೂಮಿಯನ್ನು ದಕ್ಷಿಣ ಭಾರತದ ಖ್ಯಾತ ನಟಿ ಪಿ ಕಾಂಚನಾ ಅವರು ಟಿಟಿಡಿಗೆ ದಾನ ಮಾಡಿದ್ದರು.

ಚೆನ್ನೈ: ತಿರುಮಲ ತಿರುಪತಿ ದೇವಸ್ಥಾನಂನ ಹೊಸ ದೇಗುಲವೊಂದು ಚೆನ್ನೈನ ಟಿ ನಗರದಲ್ಲಿ ಸಿದ್ಧವಾಗಿದೆ. ವೆಂಕಟೇಶ್ವರ ದೇವರ ದೇವಿ ಪದ್ಮಾವತಿ ಅಮ್ಮವರಿಗೆ ವಿಶೇಷವಾಗಿ ಮೀಸಲಾಗಿಟ್ಟ ಈ ದೇಗುಲದಲ್ಲಿ ಮುಂದಿನ ತಿಂಗಳು ಮಹಾ ಕುಂಭಾಭಿಷೇಕಂ ನಡೆಯಲಿದೆ.

ಚೆನ್ನೈನ ಟಿ ನಗರದ ದೇವಾಲಯದ ಸಂಕೀರ್ಣದಲ್ಲಿ ನಿನ್ನೆ ನೂತನ ಧ್ವಜಸ್ತಂಭ ಸ್ಥಾಪನೆ ಕಾರ್ಯವನ್ನು ದೇಗುಲದ ಆರ್ಚಕರು ವಿಧ್ಯುಕ್ತವಾಗಿ ನೆರವೇರಿಸಿದ್ದಾರೆ.

ಟಿ ನಗರದ ಜಿಎನ್ ಚೆಟ್ಟಿ ರಸ್ತೆಯಲ್ಲಿ 14880 ಚದರ ಅಡಿ ಜಾಗದಲ್ಲಿ ಹೊಸ ದೇವಸ್ಥಾನ ನಿರ್ಮಿಸಲಾಗಿದೆ. ಈ ಭೂಮಿಯನ್ನು ದಕ್ಷಿಣ ಭಾರತದ ಖ್ಯಾತ ನಟಿ ಪಿ ಕಾಂಚನಾ ಅವರು ಟಿಟಿಡಿಗೆ ದಾನ ಮಾಡಿದ್ದರು.

7 ಕೋಟಿ ವೆಚ್ಚದಲ್ಲಿ ದೇವಾಲಯದ ಕಾಮಗಾರಿ ನಡೆಯುತ್ತಿದೆ. ಟಿಟಿಡಿ ವಿಶ್ವಸ್ಥ ಮಂಡಳಿಗೆ ವಿಶೇಷ ಆಹ್ವಾನಿತರಾದ ಎ.ಜೆ.ಶೇಖರ್ ರೆಡ್ಡಿ ಅವರು ನೀಡಿದ ಸುಮಾರು 1.1 ಕೋಟಿ ರೂ. ದೇಣಿಗೆಯ ನೆರವಿನಿಂದ ರಾಜಗೋಪುರ ಕಾಮಗಾರಿ ನಡೆಯುತ್ತಿದೆ.

ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಹೊಸ ಬದಲಾವಣೆ

ಹಿರಿಯ ನಾಗರಿಕರಿಗೆ ಉಚಿತ ದರ್ಶನ: ಹಿರಿಯ ನಾಗರಿಕರಿಗೆ ಉಚಿತವಾಗಿ ತಿರುಪತಿ ತಿಮ್ಮಪ್ಪನ ದರ್ಶನ ಮಾಡುವ ಅವಕಾಶವನ್ನು ಟಿಟಿಡಿ ನೀಡಲಿದೆ. ಹಿರಿಯ ನಾಗರಿಕರು ಮತ್ತು ಅನಾರೋಗ್ಯ ಪೀಡಿತರು ಉಚಿತ ದರ್ಶನ ಟಿಕೆಟ್‌ ಪಡೆಯಬಹುದಾದು. ಇದಕ್ಕಾಗಿ ಭಕ್ತರು ಆನ್‌ಲೈನ್‌ನಲ್ಲಿ ನೋಂದಾಯಿಸಬೇಕು ಎಂದು ಟಿಟಿಡಿ ತಿಳಿಸಿದೆ.

ಫೇಶಿಯಲ್‌ ರೆಕಾಗ್ನಿಷನ್‌ ಸಿಸ್ಟಮ್‌: ಆಂಧ್ರದ ತಿರುಪತಿ ವೆಂಕಟೇಶ್ವರ ದೇಗುಲದಲ್ಲಿ ಮಾರ್ಚ್‌ 1, 2023ರಿಂದ ಟೋಕನ್‌ ರಹಿತ ದರ್ಶನ ಇರಲಿದೆ. ವಿಶೇಷವಾಗಿ ಭಕ್ತರ ಮುಖ ಗುರುತಿಸುವ ಫೇಶಿಯಲ್‌ ರೆಕಾಗ್ನಿಷನ್‌ ಸಿಸ್ಟಮ್‌ ಅನ್ನು ಅಳವಡಿಸಲಾಗುತ್ತಿದೆ. ಟಿಟಿಡಿ ವೈಕುಂಠಂ 2 ಮತ್ತು ಎಎಂಎಸ್ ಸಿಸ್ಟಮ್‌ಗಳಲ್ಲಿ ಮಾರ್ಚ್ 1 ರಿಂದ ಪ್ರಾಯೋಗಿಕ ಆಧಾರದ ಮೇಲೆ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಪರಿಚಯಿಸಲು ನಿರ್ಧರಿಸಿದೆ. ಟೋಕನ್‌ ರಹಿತ ಸೇವೆ ಮತ್ತು ವಸತಿ ಹಂಚಿಕೆ ವ್ಯವಸ್ಥೆಯಲ್ಲಿ ಪಾರದರ್ಶಕತೆಗಾಗಿ ಈ ಹೊಸ ವಿಧಾನ ಅಳವಡಿಸಲಾಗುತ್ತಿದೆ ಎಂದು ಟಿಟಿಡಿ ತಿಳಿಸಿದೆ.

"ಟಿಟಿಡಿ ಪ್ರಾಯೋಗಿಕ ಆಧಾರದ ಮೇಲೆ ವೈಕುಂಟಂ 2 ಮತ್ತು ಎಎಂಎಸ್ ಸಿಸ್ಟಮ್‌ಗಳಲ್ಲಿ ಮಾರ್ಚ್ 1 ರಿಂದ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಪರಿಚಯಿಸಲು ಸಜ್ಜಾಗಿದೆ ಎಂದು ಮುಖ್ಯ ವಿಜಿಲೆನ್ಸ್ ಮತ್ತು ಭದ್ರತಾ ಅಧಿಕಾರಿ (ಸಿವಿಎಸ್‌ಒ) ಡಿ ನರಸಿಂಹ ಕಿಶೋರ್ ಮಾಹಿತಿ ನೀಡಿದ್ದಾರೆ. ಫೇಶಿಯಲ್‌ ರೆಕಾಗ್ನಿಷನ್‌ ಸಿಸ್ಟಮ್‌ ಹೇಗೆ ಕೆಲಸ ಮಾಡುತ್ತದೆ ಎಂಬ ಮಾಹಿತಿ ಇಲ್ಲಿದೆ.

ಚಿನ್ನದ ಲೇಪನ ಮುಂದೂಡಿಕೆ

ತಿರುಮಲ ದೇಗುಲಕ್ಕೆ ಚಿನ್ನದ ಲೇಪನ ಮಾಡುವ ಕೆಲಸವನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅನಿರ್ದಿಷ್ಟ ಅವಧಿಗೆ ಮುಂದೂಡಿದೆ. "ಚಿನ್ನದ ಲೇಪನದ ಕೆಲಸಕ್ಕಾಗಿ ಜಾಗತಿಕ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ. ನಿರ್ದಿಷ್ಟ ಸಮಯದೊಳಗೆ ಚಿನ್ನದ ಲೇಪನ ಕಾರ್ಯ ಮುಗಿಯುವಂತಾಗಲು ಮತ್ತು ಯಾವುದೇ ವಿಳಂಬ ತಪ್ಪಿಸುವ ಸಲುವಾಗಿ ಜಾಗತಿಕ ಟೆಂಡರ್‌ ಕರೆಯಲಾಗುತ್ತದೆʼʼ ಎಂದು ಟಿಟಿಡಿ ಆಡಳಿತವು ಮಾಹಿತಿ ನೀಡಿದೆ. ಈ ಕುರಿತ ವರದಿ ಇಲ್ಲಿದೆ.