ABVP Protest in photos: ಎಬಿವಿಪಿ ಪ್ರತಿಭಟನೆ; ಲಘುಲಾಠಿ ಪ್ರಹಾರ ಹೈಡ್ರಾಮಾ ಸೀಕ್ವೆನ್ಸ್!‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Abvp Protest In Photos: ಎಬಿವಿಪಿ ಪ್ರತಿಭಟನೆ; ಲಘುಲಾಠಿ ಪ್ರಹಾರ ಹೈಡ್ರಾಮಾ ಸೀಕ್ವೆನ್ಸ್!‌

ABVP Protest in photos: ಎಬಿವಿಪಿ ಪ್ರತಿಭಟನೆ; ಲಘುಲಾಠಿ ಪ್ರಹಾರ ಹೈಡ್ರಾಮಾ ಸೀಕ್ವೆನ್ಸ್!‌

  • ಬೆಂಗಳೂರಿನ ಜಯಮಾಲ್‌ ಪ್ರದೇಶದಲ್ಲಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನಿವಾಸದ ಎದುರು ಎಬಿವಿಪಿ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು. ಪ್ರವೀಣ್‌ ನೆಟ್ಟಾರು ಹತ್ಯೆ ಖಂಡಿಸಿ, ಪಿಎಫ್‌ಐ, ಎಸ್‌ಡಿಪಿಐ, ಸಿಎಫ್‌ಐ ನಿಷೇಧಿಸಲು ಆಗ್ರಹಿಸಿ ಗೃಹಸಚಿವರಿಗೆ ಮನವಿ ಸಲ್ಲಿಸಲು ಪೊಲೀಸರು ಅವಕಾಶ ನೀಡದ ಕಾರಣ ಹೈಡ್ರಾಮಾ ನಡೆಯಿತು. ಗೃಹ ಸಚಿವರು ಶಿವಮೊಗ್ಗದಲ್ಲಿದ್ದರು. 

ಬೆಂಗಳೂರಿನ ಜಯಮಾಲ್‍ನಲ್ಲಿರುವ ಆರಗ ಜ್ಞಾನೇಂದ್ರ ಅವರ ಸರ್ಕಾರಿ ನಿವಾಸದ ಎದುರು ಈ ಮೊದಲೇ ಕರೆ ನೀಡಿದ ಪ್ರಕಾರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆಗೆ ಆಗಮಿಸಿದ್ದರು. ಅವರನ್ನು ಉದ್ದೇಶಿಸಿ ಎಬಿವಿಪಿ ನಾಯಕರು ಮಾತನಾಡಿದ್ದು, ಬಳಿಕ ಗೃಹಸಚಿವರಿಗೆ ಮನವಿ ಸಲ್ಲಿಸುವ ಸಿದ್ದತೆಯಲ್ಲಿದ್ದರು. 
icon

(1 / 11)

ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನಿವಾಸವಾದ ಕಾರಣ ಪೊಲೀಸ್‌ ಪಹರೆ ಇತ್ತು. ಅರ್ಧಗಂಟೆಗೂ ಹೆಚ್ಚು ಹೊತ್ತು ನಿವಾಸದ ಹೊರಗೆ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. 
icon

(2 / 11)

ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌ನಲ್ಲಿ ಸರ್ಕಾರ ಪಿಎಫ್‌ಐ, ಎಸ್‌ಡಿಪಿಐ ಪಾತ್ರಗಳಿರುವುದನ್ನು ಗಮನಿಸಿದರೂ ಅವುಗಳ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ. ಅವುಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ‌ ಸರ್ಕಾರದ ವಿರುದ್ಧ ಎಬಿವಿಪಿ ಕಾರ್ಯಕರ್ತರು ಘೋಷಣೆ ಕೂಗಿದರು.
icon

(3 / 11)

ಪಿಎಫ್‌ಐ, ಎಸ್‌ಡಿಪಿಐ, ಸಿಎಫ್‌ಐ ಮುಂತಾದ ಸಂಘಟನೆಗಳು ಹಿಂದು ಯುವಕರನ್ನು ಹತ್ಯೆ ಮಾಡುತ್ತಿರುವಾಗ ಪೊಲೀಸ್‌ ವ್ಯವಸ್ಥೆ ನಿಸ್ತೇಜವಾಗಿದೆ ಎಂದು ಆರೋಪಿಸಿದ ಎಬಿವಿಪಿ ಕಾರ್ಯಕರ್ತರು, ಸರ್ಕಾರ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. 
icon

(4 / 11)

ಗೃಹ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಎಬಿವಿಪಿ ಕಾರ್ಯಕರ್ತರು ತಯಾರಿ ನಡೆಸಿದ್ದರು. ಆದರೆ ಗೃಹಸಚಿವರ ಭೇಟಿಗೆ ಮನೆಯ ಒಳಕ್ಕೆ ಹೋಗಲು ಅವಕಾಶ ನಿರಾಕರಿಸಲಾಗಿತ್ತು. ಯಾಕೆಂದರೆ ಗೃಹಸಚಿವರು ಮನೆಯಲ್ಲಿ ಇರಲಿಲ್ಲ. ಅವರು ಶಿವಮೊಗ್ಗಕ್ಕೆ ಹೋಗಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 
icon

(5 / 11)

ಗೃಹ ಸಚಿವರ ಭೇಟಿಗೆ ಅವರ ಮನೆಯೊಳಗೆ ಪ್ರವೇಶಿಸುವುದಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ಎಬಿವಿಪಿ ಕಾರ್ಯಕರ್ತರ ಅಸಮಾಧಾನ ಹೆಚ್ಚಾಯಿತು. ಕೂಡಲೇ ಪ್ರತಿಭಟಾನ ಸ್ಥಳದಿಂದ ಎದ್ದು ಗೇಟ್‌ ತಳ್ಳಿ ಒಳಗೆ ಪ್ರವೇಶಿಸಲು ಎಲ್ಲರೂ ಓಡಿದರು. ಇದರಿಂದ ಸ್ಥಳದಲ್ಲಿ ಸಂಘರ್ಷಮಯ ಸನ್ನಿವೇಶ ಸೃಷ್ಟಿಯಾಯಿತು. 
icon

(6 / 11)

ಗೃಹ ಸಚಿವರ ಮನೆಯ ಆವರಣ ಪ್ರವೇಶಿಸಿದ ಎಬಿವಿಪಿ ಕಾರ್ಯಕರ್ತರನ್ನು ತಡೆಯಲು ಪೊಲೀಸರೂ ಜತೆಗೇ ಓಡಿದರು. ಆದರೆ ಆಗಲೇ ಎಬಿವಿಪಿ ಕಾರ್ಯಕರ್ತರು ಮನೆಯ ಅಂಗಳದಿಂದ ಬಾಗಿಲ ತನಕ ತಲುಪಿದ್ದರು. 
icon

(7 / 11)

ಗೃಹ ಸಚಿವ ಮನೆಯ ಬಾಗಿಲು ತಲುಪಿದ ಎಬಿವಿಪಿ ಕಾರ್ಯಕರ್ತರು ಮನೆಯ ಒಳಗೆ ಪ್ರವೇಶಿಸದಂತೆ ಪೊಲೀಸರು ತಡೆಯುವಲ್ಲಿ ಪೊಲೀಸರು ಸಫಲರಾದರು. ಪರಿಸ್ಥಿತಿ ಬಿಗುವಾಗಿತ್ತು.
icon

(8 / 11)

ಪೊಲೀಸರು ತಡೆದ ಕಾರಣ, ಗೃಹ ಸಚಿವರ ಮನೆಯ ಬಾಗಿಲಲ್ಲೇ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಅಲ್ಲೇ ಕುಳಿತು ಧರಣಿ ಮುಂದುವರಿಲು ಪ್ರಯತ್ನಿಸಿದರು. 
icon

(9 / 11)

ಗೃಹ ಸಚಿವರ ಮನೆಯ ಬಾಗಿಲ ಎದುರು ಕುಳಿತು ಧರಣಿ ಆರಂಭಿಸಿದ ಎಬಿವಿಪಿ ಕಾರ್ಯಕರ್ತರನ್ನು ಚದುರಿಲು ಪೊಲೀಸರು ಹರಸಾಹಸ ಪಟ್ಟರು. ಕೊನೆಗೆ ಲಘುಲಾಠಿ ಪ್ರಹಾರವನ್ನೂ ಮಾಡಿದರು. 
icon

(10 / 11)

ಧರಣಿ ಕುಳಿತ ಎಬಿವಿಪಿ ಕಾರ್ಯಕರ್ತರು ಯಾವುದಕ್ಕೂ ಜಗ್ಗದ ಕಾರಣ, ಪೊಲೀಸರು ಅವರನ್ನು ಒಬ್ಬೊಬ್ಬರನ್ನೇ ಹೊತ್ತೊಯ್ದು ಪೊಲೀಸ್‌ ಜೀಪಿಗೆ ಏರಿಸಿದರು. ಅಲ್ಲಿಂದ ಬೇರೆಡೆಗೆ ಕರೆದೊಯ್ದಿದ್ದಾರೆ. ಹೆಚ್ಚು ಕಡಿಮೆ ನಲುವತ್ತು ಕಾರ್ಯಕರ್ತರು ಪೊಲೀಸ್‌ ವಶದಲ್ಲಿದ್ದಾರೆ ಎಂದು ಎಬಿವಿಪಿ ಸಂಘಟನಾ ಜವಾಬ್ದಾರಿ ಹೊತ್ತಿರುವ ನಾಯಕರೊಬ್ಬರು ತಿಳಿಸಿದ್ದಾರೆ. 
icon

(11 / 11)

ಇತರ ಗ್ಯಾಲರಿಗಳು