Nikhil Kumaraswamy: ನಿಖಿಲ್‌ ಕುಮಾರ್‌ಸ್ವಾಮಿಗೆ ಚುನಾವಣೆಯಲ್ಲಿ ಸತತ ಮೂರನೇ ಸೋಲು, ಮುಂದೇನು: ಯದುವೀರ ಚಿತ್ರದತ್ತ ಚಿತ್ತ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Nikhil Kumaraswamy: ನಿಖಿಲ್‌ ಕುಮಾರ್‌ಸ್ವಾಮಿಗೆ ಚುನಾವಣೆಯಲ್ಲಿ ಸತತ ಮೂರನೇ ಸೋಲು, ಮುಂದೇನು: ಯದುವೀರ ಚಿತ್ರದತ್ತ ಚಿತ್ತ

Nikhil Kumaraswamy: ನಿಖಿಲ್‌ ಕುಮಾರ್‌ಸ್ವಾಮಿಗೆ ಚುನಾವಣೆಯಲ್ಲಿ ಸತತ ಮೂರನೇ ಸೋಲು, ಮುಂದೇನು: ಯದುವೀರ ಚಿತ್ರದತ್ತ ಚಿತ್ತ

  • Nikhil Kumaraswamy: ಜೆಡಿಎಸ್‌ ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ ಸತತ ಮೂರು ಚುನಾವಣೆ ಸೋತಿದ್ದಾರೆ. ಮುಂದೇನು ಎನ್ನುವ ಪ್ರಶ್ನೆಯಿದೆ. ಅವರು ಚನ್ನಪಟ್ಟಣ- ರಾಮನಗರ ಕ್ಷೇತ್ರದಲ್ಲೇ ಇರುವೆ ಎನ್ನುವುದನ್ನು ಹೇಳಿದ್ದಾರೆ. ಜತೆಗೆ ಚಿತ್ರ ನಿರ್ಮಾಣಕ್ಕೂ ಮರಳಬಹುದು ಎನ್ನಲಾಗುತ್ತಿದೆ.

ನಿಖಿಲ್‌ ಕುಮಾರಸ್ವಾಮಿ, ಕರ್ನಾಟಕದ ರಾಜ್ಯ ರಾಜಕಾರಣದ ಹಾಲಿ ಅಭಿಮನ್ಯು. ಮಂಡ್ಯ, ರಾಮನಗರ, ಚನ್ನಪಟ್ಟಣ ಚುನಾವಣೆಯಲ್ಲಿ ಸತತ ಮೂರು ಚುನಾವಣೆ ಸೋತು ಸುದ್ದಿಯಲ್ಲಿದ್ದಾರೆ.
icon

(1 / 10)

ಸತತ ಮೂರನೇ ಚುನಾವಣೆಯಲ್ಲಿ ಸೋತರೂ ದೃತಿಗೆಡದೇ ರಾಮನಗರ ಜಿಲ್ಲೆ ಬಿಟ್ಟು ಹೋಗೊಲ್ಲ. ಅದೇ ನನ್ನ ಕರ್ಮ ಭೂಮಿ ಎಂದು ಘೋಷಿಸಿದ್ದಾರೆ ನಿಖಿಲ್‌ ಕುಮಾರಸ್ವಾಮಿ.
icon

(2 / 10)

ಚುನಾವಣೆಯಲ್ಲಿ ಸೋಲು-ಗೆಲುವು  ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಸ್ವಭಾವಿಕ. ನನ್ನ ಮೇಲೆ ನಂಬಿಕೆಯನ್ನಿಟ್ಟು ಮತ ಚಲಾಯಿಸಿದ ಚನ್ನಪಟ್ಟಣ ಕ್ಷೇತ್ರದ ಮತದಾರರಿಗೆ ಹೃದಯಪೂರ್ವಕ ಧನ್ಯವಾದಗಳು. ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಎದೆಗುಂದುವುದಿಲ್ಲ ನಾನು ತಾಲ್ಲೂಕಿನ ಜನತೆಗೆ ನನ್ನ ಸೇವೆಯನ್ನು ಮುಂದುವರೆಸುತ್ತೇನೆ ಎಂದು ನಿಖಿಲ್‌ ಹೇಳಿದ್ದಾರೆ. 
icon

(3 / 10)

ಈಗಾಗಲೇ ಚಿತ್ರರಂಗವನ್ನೂ ಎಂಟು ವರ್ಷದ ಹಿಂದೆ ಪ್ರವೇಶಿಸಿ  ಜಾಗ್ವರ್‌, ರೈಡರ್‌, ಕುರುಕ್ಷೇತ್ರ, ಸೀತಾರಾಮಕಲ್ಯಾಣ ಸಹಿತ ನಾಲ್ಕು ಚಿತ್ರ ಮಾಡಿರುವ ನಿಖಿಲ್‌ ಅವರ ಯದುವೀರ್‌ ಚಿತ್ರ ಇನ್ನೂ ಚಿತ್ರೀಕರಣ ಬಾಕಿಯಿದೆ. ಅಲ್ಲಿ ಅವರು ತೊಡಗಿಸಿಕೊಳ್ಳುವ ಸಾಧ್ಯತೆಗಳಿವೆ. 
icon

(4 / 10)

ಚುನಾವಣೆಯಲ್ಲಿ ಸೋಲಾಗಿದ್ದರೂ ರಾಜಕೀಯದಿಂದ ದೂರ ಸರಿಯುವ ಪ್ರಶ್ನೆಯೇ ಇಲ್ಲ. ನಾನು ರಾಮನಗರ ಜಿಲ್ಲೆ, ಚನ್ನಪಟ್ಟಣ ಕ್ಷೇತ್ರದ ಜತೆಗೆ ಜೆಡಿಎಸ್‌ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವೆ ಎಂದಿದ್ಧಾರೆ ನಿಖಿಲ್‌ ಕುಮಾರಸ್ವಾಮಿ.
icon

(5 / 10)

ಕರ್ನಾಟಕದಲ್ಲಿ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ಗೆ ಭಾರೀ ಹಿನ್ನಡೆ ಆಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ ಜತೆಗೆ ಬಿಜೆಪಿಯೊಂದಿಗೂ ಸೋಲಿನ ಪರಾಮರ್ಶೆ ಮಾಡಬಹುದು,
icon

(6 / 10)

ನಿಖಿಲ್‌ ಹಲವಾರು ಸಾಮಾಜಿಕ ಚಟುವಟಿಕೆ. ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು. ಈಗಲೂ ಅದನ್ನು ಮುಂದುವರೆಸಿಕೊಂಡು ಹೋಗುವ ಸಾಧ್ಯತೆಗಳಿವೆ. 
icon

(7 / 10)

ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರದ ನಗರ, ಗ್ರಾಮಾಂತರ ಪ್ರದೇಶದಲ್ಲಿ ನಿಖಿಲ್‌ ಕುಮಾರಸ್ವಾಮಿ ಒಡನಾಟ ಇಟ್ಟುಕೊಂಡಿದ್ದು, ಜನ ಇಷ್ಟ ಪಡುವ ಯುವ ರಾಜಕಾರಣಿ. ಸೋಲೇ ಗೆಲುವಿನ ಸೋಪಾನ ಎಂದುಕೊಂಡು ಕ್ಷೇತ್ರದ ನಂಟು ಗಟ್ಟಿ ಮಾಡಿಕೊಳ್ಳಬಹುದು.
icon

(8 / 10)

ನಿಖಿಲ್‌ ದೈವಭಕ್ತ. ದೇಗುಲಗಳಿಗೆ ಭೇಟಿ ಮಾಡುವುದು ಮೊದಲಿನಿಂದಲೂ ಅವರಿಗೆ ಇಷ್ಟವೇ. ಈಗ ಇನ್ನಷ್ಟು ದೇಗುಲಗಳಿಗೂ ಭೇಟಿ ನೀಡಬಹುದು.
icon

(9 / 10)

ನಿಖಿಲ್‌ ರಾಜಕೀಯ ಕಾರಣಗಳಿಂದಾಗಿ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಆಗಿರಲಿಲ್ಲ. ಈಗ ಕೊಂಚ ಸಮಯವನ್ನು ಕುಟುಂಬಕ್ಕೂ ನೀಡಬಹುದು.
icon

(10 / 10)

ಇತರ ಗ್ಯಾಲರಿಗಳು