ಕೊಡದೇ ಕಿತ್ತುಕೊಳ್ತಿದೆ ಪಾಕಿಸ್ತಾನ ಸರ್ಕಾರ; ಚಿನ್ನ ಗೆದ್ದ ಅರ್ಷದ್ ನದೀಮ್ಗೆ ಕೋಟಿ ಕೋಟಿ ಟ್ಯಾಕ್ಸ್ ಕಟ್ಟು ಎಂದ ಪಾಕ್
- Arshad Nadeem: ಪಾಕಿಸ್ತಾನ ಸರ್ಕಾರ ಕೊಡದೇನೇ ಕಿತ್ತುಕೊಳ್ತಿದೆ. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದುಕೊಟ್ಟಿದ್ದ ಅರ್ಷದ್ ನದೀಮ್ಗೆ ಕೋಟಿಗಟ್ಟಲೆ ತೆರಿಗೆ ಕಟ್ಟುವಂತೆ ಸೂಚಿಸಿದೆ.
- Arshad Nadeem: ಪಾಕಿಸ್ತಾನ ಸರ್ಕಾರ ಕೊಡದೇನೇ ಕಿತ್ತುಕೊಳ್ತಿದೆ. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದುಕೊಟ್ಟಿದ್ದ ಅರ್ಷದ್ ನದೀಮ್ಗೆ ಕೋಟಿಗಟ್ಟಲೆ ತೆರಿಗೆ ಕಟ್ಟುವಂತೆ ಸೂಚಿಸಿದೆ.
(1 / 7)
ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದ ಜಾವೆಲಿನ್ ಥ್ರೋ ಫೈನಲ್ನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಅವರು ಚೊಚ್ಚಲ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ.(AFP)
(2 / 7)
1984ರ ನಂತರ ಪಾಕಿಸ್ತಾನಕ್ಕೆ ಚಿನ್ನ ಗೆದ್ದುಕೊಟ್ಟ ಅರ್ಷದ್ಗೆ ಬಹುಮಾನಗಳ ಸುರಿಮಳೆ ಹರಿದು ಬಂದಿದೆ. ಕೋಟಿಗಟ್ಟಲೇ ಬಹುಮಾನ ನೀಡಲಾಗಿದೆ.(PTI)
(3 / 7)
ನದೀಮ್ಗೆ ವಿವಿಧ ರಾಜ್ಯ ಸರ್ಕಾರಗಳು 150 ಮಿಲಿಯನ್ ಪಾಕಿಸ್ತಾನಿ ರೂಪಾಯಿಗಳನ್ನು (ರೂ. 4.5 ಕೋಟಿ) ಘೋಷಿಸಿವೆ ಎಂದು ವರದಿಗಳು ಹೇಳಿವೆ. ಪಾಕಿಸ್ತಾನ ಒಂದೂ ರೂಪಾಯಿ ಕೊಟ್ಟಿಲ್ಲ.(REUTERS)
(4 / 7)
ಆದರೆ, ಒಂದೇ ಒಂದು ರೂಪಾಯಿ ಬಿಡಿಗಾಸು ನೀಡದಿದ್ದರೂ ಕೋಟಿ ಕೋಟಿ ರೂಪಾಯಿ ತೆರಿಗೆ ಕಟ್ಟುವಂತೆ ಅರ್ಷದ್ಗೆ ಪಾಕಿಸ್ತಾನ ಸೂಚಿಸಿದೆ ಎಂದು ವರದಿಯಾಗಿದೆ.(REUTERS)
(5 / 7)
ಸುಮಾರು 3 ರಿಂದ 6 ಕೋಟಿ ರೂ. ತೆರಿಗೆ ಪಾವತಿಸುವಂತೆ ನದೀಮ್ಗೆ ಸೂಚಿಸುವ ಮೂಲಕ ಶಾಕ್ ಕೊಟ್ಟಿದೆ. ನದೀಮ್ಗೆ ಸುಮಾರು 20 ಕೋಟಿ ರೂಪಾಯಿಗೂ ಅಧಿಕ ಬಹುಮಾನ ಸ್ವೀಕರಿಸಿದ್ದಾರೆ. (AFP)
(6 / 7)
ಆದರೆ ಫೆಡರಲ್ ಬೋರ್ಡ್ ಆಫ್ ರೆವೆನ್ಯೂ ನಿಯಮದಂತೆ, ಯಾವುದೇ ಆಟಗಾರ ಪಡೆಯುವ ಬಹುಮಾನದ ಮೊತ್ತಕ್ಕೆ ತೆರಿಗೆ ಕಟ್ಟಬೇಕಿದೆ. ಟ್ಯಾಕ್ಸ್ ಫೈಲ್ ಮಾಡುವವರಿಗೆ ಅಥವಾ ಟ್ಯಾಕ್ಸ್ ಫೈಲ್ ಮಾಡದವರಿಗೆ ಒಂದೊಂದು ತೆರಿಗೆ ದರ ಇರಲಿದೆ.(AFP)
ಇತರ ಗ್ಯಾಲರಿಗಳು