ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ 2023: ಪ್ರತಿಯೊಬ್ಬರು ತಿಳಿಯಲೇಬೇಕಾದ ಅಂಶಗಳಿವು; ಫೋಟೊಸ್
ರಕ್ಷಣಾ ಪಡೆಗಳು ದೇಶದ ಗಡಿಯಲ್ಲಿ ಹಗಲಿರುಳು ಧೈರ್ಯ ಮತ್ತು ಸಾಹಸಗಳಿಂದ ರಕ್ಷಣೆ ನೀಡುತ್ತಿವೆ. ಯೋಧರಿಗೆ ಕೃತಜ್ಞತೆ ಸಲ್ಲಿಸಲು, ಅವರಿಗೆ ಸಹಾನುಭೂತಿ, ಬೆಂಬಲ ವ್ಯಕ್ತಪಡಿಸಲು ಧ್ವಜ ದಿನಾಚರಣೆ ಒಂದು ಸದಾವಕಾಶವಾಗಿದೆ.
(1 / 8)
1949 ರಿಂದ ಪ್ರತಿ ಡಿಸೆಂಬರ್ 7 ರಂದು ದೇಶಾದ್ಯಂತ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಹುತಾತ್ಮ ಯೋಧರಿಗೆ ಮತ್ತು ಧೈರ್ಯ ಮತ್ತು ಸಾಹಸಗಳಿಂದ ದೇಶದ ಗಡಿ ಕಾಯುತ್ತಿರುವ ಯೋಧರಿಗೆ ಗೌರವ ಮತ್ತು ಕೃತಜ್ಞತೆಯನ್ನು ಸಲ್ಲಿಸಲು ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತದೆ.
(2 / 8)
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯಂದು ಹುತಾತ್ಮರು, ಗಾಯಗೊಂಡವರು ಹಾಗೂ ಕರ್ತವ್ಯದಲ್ಲಿರುವ ಯೋಧರನ್ನು ಗೌರವಿಸುವುದರ ಜೊತೆಗೆ ಸೇನಾನಿಗಳ ತ್ಯಾಗದಲ್ಲಿ ಅವರ ಕುಟುಂಬಗಳು ನಿರ್ವಹಿಸುತ್ತಿರುವ ನಿರ್ಣಾಯಕ ಪಾತ್ರವನ್ನು ಗುರುತಿಸಿ ಗೌರವಿಸಲಾಗುತ್ತದೆ.(HT Photo)
(3 / 8)
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯಂದು ನಿಧಿಯನ್ನು ಸಂಗ್ರಹಿಸಲಾಗುತ್ತದೆ. ಈ ನಿಧಿಯನ್ನು ದೇಶದ ರಕ್ಷಣೆಯಲ್ಲಿದ್ದಾಗ ಹುತಾತ್ಮರಾದ ಯೋಧರ ಕುಟುಂಬಗಳಿಗೆ, ಗಾಯಗೊಂಡು ವಿಕಲಾಂಗರಾದ ಯೋಧರ ಜೀವನೋಪಾಯಕ್ಕಾಗಿ ವಿನಿಯೋಗಿಸಲಾಗುತ್ತದೆ.(Hindustan Times)
(4 / 8)
1949ರ ಆಗಸ್ಟ್ 28 ರಂದು ಪ್ರತಿ ವರ್ಷ ಡಿಸೆಂಬರ್ 7 ರಂದು ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಆಚರಿಸುವುದಾಗಿ ರಕ್ಷಣಾ ಸಚಿವಾಲಯ ಘೋಷಣೆ ಮಾಡಿತ್ತು. ಈ ದಿನದಂದು ದೇಶ ಸೇವೆ ಸಲ್ಲಿಸಿದ ಪ್ರತಿಯೊಬ್ಬ ಯೋಧರನ್ನು ಗೌರವಿಸಲಾಗುತ್ತದೆ.
(5 / 8)
ಈ ವಿಶೇಷ ದಿನದಂದು ಬ್ಯಾಡ್ಜ್‌ಗಳು ಮತ್ತು ಸ್ಟಿಕ್ಕರ್‌ಗಳನ್ನು ಮಾರಾಟ ಮಾಡುವ ಮೂಲಕ ಅದರಿಂದ ಸಂಗ್ರಹವಾಗಿರುವ ಹಣವನ್ನು ಸಶಸ್ತ್ರ ಪಡೆಗಳ ಸುಧಾರಣೆಗಾಗಿ ಆ ನಿಧಿಯನ್ನು ಉಪಯೋಗಿಸಲಾಗುತ್ತದೆ.(REUTERS)
(6 / 8)
ಡಿಸೆಂಬರ್ 7 ರಂದು ಯುದ್ಧ ಸಂತ್ರಸ್ತರಿಗೆ ಪುನರ್ವಸತಿ ಸೌಲಭ್ಯಗಳು ಸಿಕ್ಕಿವೆಯೇ, ಮಾಜಿ ಸೈನಿಕರ ಯೋಗಕ್ಷೇಮವನ್ನು ಉತ್ತೇಜಿಸುವ ಸಲುವಾಗಿ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯಂದು ಎಲ್ಲರೂ ಒಟ್ಟಾಗಿ ಸೇರುತ್ತಾರೆ.(Hindustan Tiems)
(7 / 8)
ಈ ದಿನದಂದು ಜನರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಸೇನೆಗೆ ಸಂಬಂಧಿಸಿದ ಧ್ವಜ, ಸ್ಟಿಕ್ಕರ್‌ಗಳು ಹಾಗೂ ಇತರೆ ವಸ್ತುಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಸಂಗ್ರಹಿಸಿ ಸೇನಾ ಪಡೆಗಳ ನಿಧಿಗೆ ನೀಡಲಾಗುತ್ತದೆ.(Hindustan Times)
ಇತರ ಗ್ಯಾಲರಿಗಳು