Tata Curvv to MG ZS: 25 ಲಕ್ಷಕ್ಕಿಂತ ಕಡಿಮೆ ದರದ ಎಲೆಕ್ಟ್ರಿಕ್‌ ಕಾರು ಬೇಕೆ? ಫುಲ್‌ ಚಾರ್ಜ್‌ಗೆ ಅತ್ಯಧಿಕ ಕಿಮೀ ಸಾಗುವ ಅಗ್ರ 5 ಕಾರುಗಳಿವು-automobile news five electric cars in india under rs 25 lakh with highest range tata curvv ev to mg zs ev pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tata Curvv To Mg Zs: 25 ಲಕ್ಷಕ್ಕಿಂತ ಕಡಿಮೆ ದರದ ಎಲೆಕ್ಟ್ರಿಕ್‌ ಕಾರು ಬೇಕೆ? ಫುಲ್‌ ಚಾರ್ಜ್‌ಗೆ ಅತ್ಯಧಿಕ ಕಿಮೀ ಸಾಗುವ ಅಗ್ರ 5 ಕಾರುಗಳಿವು

Tata Curvv to MG ZS: 25 ಲಕ್ಷಕ್ಕಿಂತ ಕಡಿಮೆ ದರದ ಎಲೆಕ್ಟ್ರಿಕ್‌ ಕಾರು ಬೇಕೆ? ಫುಲ್‌ ಚಾರ್ಜ್‌ಗೆ ಅತ್ಯಧಿಕ ಕಿಮೀ ಸಾಗುವ ಅಗ್ರ 5 ಕಾರುಗಳಿವು

Tata Curvv EV to MG ZS EV: ಈ ತಿಂಗಳ ಆರಂಭದಲ್ಲಿ ಟಾಟಾ ಕರ್ವ್‌ ಬಿಡುಗಡೆಯಾಗಿದೆ. ಈ ಮೂಲಕ ಎಲೆಕ್ಟ್ರಿಕ್‌ ಕಾರು ಲೋಕದಲ್ಲಿ ಹೊಸ ಸಂಚಲನ ಮೂಡಿದೆ. ಟಾಟಾ ಕರ್ವ್‌ ಒಂದು ಫುಲ್‌ ಚಾರ್ಜ್‌ಗೆ 586 ಕಿಮೀ ಓಡುತ್ತದೆ. ಅತ್ಯಧಿಕ ರೇಂಜ್‌ ಇರುವ ಕಾರು ಇದಾಗಿದೆ.

ಟಾಟಾ ಕರ್ವ್ ಇವಿ ಕಾರಿನ ಆರಂಭಿಕ ಬೆಲೆಯು (ಎಕ್ಸ್‌ ಶೋರೂಂ ದರ) 17.49 ಲಕ್ಷ ರೂ. ಇದೆ. ಈ ಎಲೆಕ್ಟ್ರಿಕ್ ಎಸ್ ಯುವಿ ಒಂದು ಬಾರಿ ಚಾರ್ಜ್ ಮಾಡಿದರೆ 585 ಕಿ.ಮೀ ರೇಂಜ್‌ ನೀಡುತ್ತದೆ. ಕಂಪನಿಯ ಪ್ರಕಾರ ಫುಲ್‌ ಚಾರ್ಜ್‌ ಮಾಡಿದ್ರೆ ಸುಮಾರು 425 ಕಿ.ಮಿ.ವರೆಗೆ ಯಾವುದೇ ಆಂತಕವಿಲ್ಲದೆ ಸಾಗಬಹುದು. ಈ ಕಾರು ಇವಿ 45 ಕಿಲೋವ್ಯಾಟ್ ಮತ್ತು  55 ಕಿಲೋವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್‌ಗಳಲ್ಲಿ ಲಭ್ಯ. ಇದು ಲೆವೆಲ್ -2 ಎಡಿಎಎಸ್, ಪನೋರಮಿಕ್ ಸನ್ ರೂಫ್, ವೆಂಟಿಲೇಟೆಡ್ ಸೀಟು ಸೇರಿದಂತೆ ಹಲವು ಫೀಚರ್‌ಗಳನ್ನು ಹೊಂದಿದೆ. ಈ ಕಾರು ಭಾರತದ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್‌ಯುವಿಗಳಲ್ಲಿ ಎಂಜಿ ಝಡ್ ಎಸ್‌ಇವಿಗೆ ಮಾರುಕಟ್ಟೆಯಲ್ಲಿ ಸ್ಪರ್ಧೆ ನೀಡುತ್ತದೆ. 
icon

(1 / 6)

ಬಿವೈಡಿ ಇಂಡಿಯಾ ಈ ವರ್ಷದ ಆರಂಭದಲ್ಲಿ ಅಟೊ 3 ಎಲೆಕ್ಟ್ರಿಕ್ ಎಸ್ ಯುವಿಯ ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಇವಿಯ ಬೆಲೆ ಈಗ 25 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಈ ಎಲೆಕ್ಟ್ರಿಕ್ ಎಸ್ ಯುವಿಯ ಹೊಸ ರೂಪಾಂತರವು ಇತರೆ ವರ್ಷನ್‌ಗಳಿಗೆ  ಸಣ್ಣ 49.92 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಎಂಟ್ರಿ ಲೆವೆಲ್ ಡೈನಾಮಿಕ್ ಟ್ರಿಮ್ 468 ಕಿ.ಮೀ ವರೆಗೆ ರೇಂಜ್‌ ನೀಡುತ್ತದೆ (ಎಆರ್‌ಎಐ ಪ್ರಮಾಣೀಕೃತ ಮೈಲೇಜ್‌). ಇಲ್ಲಿ ರೇಂಜ್‌ ಎಂಬ ಪದವನ್ನು ಒಂದು ಫುಲ್‌ ಚಾರ್ಜ್‌ಗೆ ಕಾರು ಚಲಿಸುವ ಒಟ್ಟು ದೂರ ಎಂದು ಓದಿಕೊಳ್ಳಬೇಕಾಗಿ ಆತ್ಮೀಯ ವಾಹನ ಸುದ್ದಿ ಓದುಗರಲ್ಲಿ ವಿನಂತಿ.
icon

(2 / 6)

ಡ್ರೈವಿಂಗ್ ರೇಂಜ್ ಆಧಾರದಲ್ಲಿ ದೇಶದ ಅಗ್ರ ಮೂರನೇ ಕಾರಾಗಿ  ನೆಕ್ಸಾನ್ ಇವಿಯನ್ನು ಪರಿಗಣಿಸಬಹುದು. ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಕಳೆದ ವರ್ಷ ಬಿಡುಗಡೆ ಮಾಡಿತ್ತು. ಇದರ ದರ (ಎಕ್ಸ್ ಶೋರೂಂ)14.49 ಲಕ್ಷದಿಂದ 19.29 ಲಕ್ಷ ರೂ.ವರೆಗೆ ಇದೆ.  30 ಕಿಲೋವ್ಯಾಟ್ ಪ್ಯಾಕ್ ಮತ್ತು 40.5 ಕಿಲೋವ್ಯಾಟ್ ಪ್ಯಾಕ್ ಸೇರಿದಂತೆ ಎರಡು ವಿಭಿನ್ನ ಬ್ಯಾಟರಿ ಪ್ಯಾಕ್ ಆಯ್ಕೆಗಳಲ್ಲಿ ಈ ಕಾರು ಲಭ್ಯವಿದೆ. ಈ ಎಲೆಕ್ಟ್ರಿಕ್ ಎಸ್ ಯುವಿ ದೊಡ್ಡ ಬ್ಯಾಟರಿಯ ಪ್ಯಾಕ್‌ ಖರೀದಿಸಿದರೆ ಒಂದು ಫುಲ್‌ ಚಾರ್ಜ್‌ನಲ್ಲಿ  465 ಕಿ.ಮೀ ರೇಂಜ್‌ ದೊರಕುತ್ತದೆ.
icon

(3 / 6)

ಬಿಎಸ್‌ಡಬ್ಲ್ಯು ಎಂಜಿ ಮೋಟಾರ್ ಇಂಡಿಯಾವು ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಝಡ್ಎಸ್ ಇವಿ ಪರಿಚಯಿಸಿದೆ. ಇದು 25 ಲಕ್ಷ ರೂ.ಗಿಂತ ಕಡಿಮೆ ದರದ ಎಲೆಕ್ಟ್ರಿಕ್‌ ವಾಹನಗಳಲ್ಲಿ ಅತ್ಯುತ್ತಮವಾಗಿದೆ. ಈ ಎಲೆಕ್ಟ್ರಿಕ್ ಎಸ್ ಯುವಿ 50.3 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, 174 ಬಿಎಚ್‌ಪಿ ಮತ್ತು 280 ಎನ್ಎಂ ಟಾರ್ಕ್‌ ನೀಡುತ್ತದೆ.  ಒಂದು ಬಾರಿ ಚಾರ್ಜ್ ಮಾಡಿದರೆ 461 ಕಿ.ಮೀ ಚಲಿಸುತ್ತದೆ. ಇದರ ಎಕ್ಸ್‌ ಶೋರೂಂ ದರ 18.98  ಲಕ್ಷ ರೂ.ನಿಂದ 25.23 ಲಕ್ಷ ರೂ.ವರೆಗಿದೆ.
icon

(4 / 6)

ಈ ವರ್ಷದ ಜನವರಿಯಲ್ಲಿ ಮಹೀಂದ್ರಾ ಕಂಪನಿಯು ಎಕ್ಸ್ ಯುವಿ 400 ಎಲೆಕ್ಟ್ರಿಕ್ ಎಸ್ ಯುವಿಯ ನವೀಕೃತ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಮೂರು ಟ್ರಿಮ್‌ಗಳಲ್ಲಿ ಲಭ್ಯ. 34.5 ಕಿಲೋವ್ಯಾಟ್ ಯುನಿಟ್ ಮತ್ತು 39.4 ಕಿಲೋವ್ಯಾಟ್ ಯುನಿಟ್ ಎಂಬ ಎರಡು ರೀತಿಯ ಬ್ಯಾಟರಿ ಆಯ್ಕೆಗಳಲ್ಲಿ ಈ ಕಾರು ದೊರಕುತ್ತದೆ. ದೊಡ್ಡ ಬ್ಯಾಟರಿಯು ಫುಲ್‌ ಚಾರ್ಜ್‌ ಮಾಡಿದರೆ  456 ಕಿ.ಮೀ. ಮತ್ತು  ಚಿಕ್ಕ ಬ್ಯಾಟರಿಯು ಫುಲ್‌ ಚಾರ್ಜ್‌ಗೆ 375 ಕಿ.ಮೀ. ಚಲಿಸುತ್ತದೆ.
icon

(5 / 6)

ಕನ್ನಡದಲ್ಲಿ ವಾಹನ ಸುದ್ದಿಗಳನ್ನು ಓದಲು ಹಿಂದೂಸ್ಥಾನ್‌ ಟೈಮ್ಸ್‌ ಕನ್ನಡದ https://kannada.hindustantimes.com/topic/automobiles ವಿಭಾಗಕ್ಕೆ ಭೇಟಿ ನೀಡಿ.
icon

(6 / 6)

ಕನ್ನಡದಲ್ಲಿ ವಾಹನ ಸುದ್ದಿಗಳನ್ನು ಓದಲು ಹಿಂದೂಸ್ಥಾನ್‌ ಟೈಮ್ಸ್‌ ಕನ್ನಡದ https://kannada.hindustantimes.com/topic/automobiles ವಿಭಾಗಕ್ಕೆ ಭೇಟಿ ನೀಡಿ.(Bloomberg)

ಇತರ ಗ್ಯಾಲರಿಗಳು