Maruti Cars Discounts: ಆಲ್ಟೋ, ಎಸ್ ಪ್ರೆಸೊ ಕಾರುಗಳ ದರ ಇಳಿಕೆ, ಗ್ರಾಹಕರಿಗೆ ದಸರಾ ಹಬ್ಬದ ಕೊಡುಗೆ ನೀಡಿದ ಮಾರುತಿ ಸುಜುಕಿ
- Maruti Cars Discounts: ಮಾರುತಿ ಸುಜುಕಿ ಕಂಪನಿಯು ಕರ್ನಾಟಕದ ಗ್ರಾಹಕರಿಗೆ ದಸರಾ ಹಬ್ಬದ ಕೊಡುಗೆಯಾಗಿ ಎರಡು ಕಾರುಗಳ ದರ ಇಳಿಕೆ ಮಾಡಿದೆ. ಮಾರುತಿ ಸುಜುಕಿ ಆಲ್ಟೋ K10 (VXi) ಮತ್ತು ಎಸ್-ಪ್ರೆಸ್ಸೊ (LXi) ಕಾರುಗಳಿಗೆ ಹಬ್ಬದ ಋತುವಿನ ಆಫರ್ ಪ್ರಕಟಿಸಿದೆ. ಇವೆರಡು ಕಾರುಗಳಿಗೆ ಎಷ್ಟು ದರ ವಿನಾಯಿತಿ ದೊರಕಿದೆ ತಿಳಿಯೋಣ ಬನ್ನಿ.
- Maruti Cars Discounts: ಮಾರುತಿ ಸುಜುಕಿ ಕಂಪನಿಯು ಕರ್ನಾಟಕದ ಗ್ರಾಹಕರಿಗೆ ದಸರಾ ಹಬ್ಬದ ಕೊಡುಗೆಯಾಗಿ ಎರಡು ಕಾರುಗಳ ದರ ಇಳಿಕೆ ಮಾಡಿದೆ. ಮಾರುತಿ ಸುಜುಕಿ ಆಲ್ಟೋ K10 (VXi) ಮತ್ತು ಎಸ್-ಪ್ರೆಸ್ಸೊ (LXi) ಕಾರುಗಳಿಗೆ ಹಬ್ಬದ ಋತುವಿನ ಆಫರ್ ಪ್ರಕಟಿಸಿದೆ. ಇವೆರಡು ಕಾರುಗಳಿಗೆ ಎಷ್ಟು ದರ ವಿನಾಯಿತಿ ದೊರಕಿದೆ ತಿಳಿಯೋಣ ಬನ್ನಿ.
(1 / 6)
ದಸರಾ ಹಬ್ಬದ ಸಮಯದಲ್ಲಿ ವಿವಿಧ ವಾಹನ ಕಂಪನಿಗಳು ತಮ್ಮ ಕಾರುಗಳ ಬೆಲೆ ಇಳಿಕೆ ಮಾಡುತ್ತಿವೆ. ಮಾರುತಿ ಸುಜುಕಿ ಕಂಪನಿಯು ತನ್ನೆರಡು ಕಾರುಗಳ ದರ ಇಳಿಕೆ ಮಾಡಿದೆ. ಈ ಮೂಲಕ ಕಾರುಗಳ ದರ 5 ಲಕ್ಷ ರೂಪಾಯಿಯೊಳಗೆ ಬರುವಂತೆ ಮಾಡಿದೆ. ಇದರಿಂದ ಗ್ರಾಹಕರಿಗೆ ತೆರಿಗೆಯೂ ಇಳಿಕೆಯಾಗಲಿದೆ. ಮಾರುತಿ ಸುಜುಕಿ ಆಲ್ಟೋ K10 (VXi) ಮತ್ತು ಎಸ್-ಪ್ರೆಸ್ಸೊ (LXi) ಕಾರುಗಳ ದರ ಈಗ ಕರ್ನಾಟಕದಲ್ಲಿ 5 ಲಕ್ಷ ರೂಪಾಯಿಗಿಂತ ಕಡಿಮೆಯಾಗಿದೆ.
(2 / 6)
"ನಮ್ಮ ಎಲ್ಲಾ ಗ್ರಾಹಕರಿಗೆ ನಾವು ಅತ್ಯಂತ ಸಂತೋಷದಾಯಕ ಮತ್ತು ಮಂಗಳಕರವಾದ ಹಬ್ಬದ ಋತುವನ್ನು ಬಯಸುತ್ತೇವೆ. ಹಬ್ಬಗಳಿಗೆ ಹೆಚ್ಚುವರಿ ಸಂತೋಷವನ್ನು ಸೇರಿಸಲು, ನಾವು ನಮ್ಮ ಆಲ್ಟೋ K10 (VXi) ಮತ್ತು ಎಸ್-ಪ್ರೆಸ್ಸೊ (LXi) ಮಾದರಿಗಳ ಬೆಲೆಗಳನ್ನು ಕಡಿಮೆ ಮಾಡಿದ್ದೇವೆ" ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‍ನ ಮಾರ್ಕೆಟಿಂಗ್ ಮತ್ತು ಸೇಲ್ಸ್ ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಪಾರ್ಥೋ ಬ್ಯಾನರ್ಜಿ ಹೇಳಿದ್ದಾರೆ.
(3 / 6)
"ಈ ಬೆಲೆ ಕಡಿತವು ರಸ್ತೆ ತೆರಿಗೆ ಸ್ಲ್ಯಾಬ್ ಅನ್ನು ಕಡಿಮೆ ಮಾಡುವ ಮೂಲಕ ಕರ್ನಾಟಕದಲ್ಲಿನ ನಮ್ಮ ಗ್ರಾಹಕರಿಗೆ ಹೆಚ್ಚುವರಿ ಪ್ರಯೋಜನಗಳನ್ನು ತರುತ್ತದೆ ಮತ್ತು ಅವರಿಗೆ ಹೆಚ್ಚು ಉಳಿತಾಯವನ್ನು ನೀಡುತ್ತದೆ. ಈ ಹೆಚ್ಚುವರಿ ಪ್ರಯೋಜನವು ಈ ಹಬ್ಬದ ಋತುವಿನಲ್ಲಿ ವಿಶೇಷವಾಗಿ ಸಣ್ಣ ಕಾರನ್ನು ಹೊಂದಲು ಯೋಜಿಸುವ ಗ್ರಾಹಕರಿಗೆ ಸುಲಭವಾಗಿಸುತ್ತದೆ" ಎಂದು ಅವರು ಹೇಳಿದ್ದಾರೆ.
(4 / 6)
ಕರ್ನಾಟಕದಲ್ಲಿ, ಹೆಚ್ಚಿನ ಬೆಲೆಯ ವಾಹನಗಳಿಗೆ ಶೇಕಡ 15.54 ತೆರಿಗೆ ಇರುತ್ತದೆ. 5 ಲಕ್ಷಕ್ಕಿಂತ ಕಡಿಮೆ ಎಕ್ಸ್ ಶೋರೂಂ ಬೆಲೆಯ ಕಾರುಗಳಿಗೆ ಶೇಕಡ 14.43 ರಸ್ತೆ ತೆರಿಗೆ ಇರುತ್ತದೆ. ಮಾರುತಿಯ ಈ ಎರಡು ಕಾರು ಖರೀದಿಸಿದವರಿಗೆ ಈ ಹಬ್ಬದ ಋತುವಿನಲ್ಲಿ ತೆರಿಗೆ ಕಡಿಮೆಯಾಗಲಿದೆ.
(5 / 6)
ಮಾರುತಿ ಸುಜುಕಿ ಆಲ್ಟೊ: ಇದು ಕಂಪನಿಯ ಬಹುಬೇಡಿಕೆಯ, ಬಹುಮಾರಾಟದ ಹ್ಯಾಚ್‌ಬ್ಯಾಕ್ ಕಾರು. ಅತ್ಯಧಿಕ ಮೈಲೇಜ್ ನೀಡುವ ಈ ಕಾರು ಪುಟ್ಟ ಕುಟುಂಬ ಪ್ರಯಾಣಕ್ಕೆ ಸೂಕ್ತವಾಗಿದೆ. ಒಟ್ಟು ಹತ್ತು ಆವೃತ್ತಿಗಳಲ್ಲಿ ಲಭ್ಯವಿದೆ. ಸದ್ಯ ಕಂಪನಿಯು ವಿಎಕ್ಸ್‌ಐ ಮಾದರಿಗೆ ದರ ಕಡಿತ ಮಾಡಿದೆ.
ಇತರ ಗ್ಯಾಲರಿಗಳು