Skoda Elroq EV: ಸಂಪೂರ್ಣ ಹೊಸತನದ ವಿನ್ಯಾಸ, 560 ಕಿಲೋಮೀಟರ್ ರೇಂಜ್, ನೂತನ ಸ್ಕೋಡಾ ಎಲ್ರೋಕ್ ಎಲೆಕ್ಟ್ರಿಕ್ ವಾಹನದ ಚಿತ್ರ ವಿಮರ್ಶೆ
- Skoda Elroq EV: ಸ್ಕೋಡಾ ಎಲ್ರೋಕ್ ಜೆಕ್ ಗಣರಾಜ್ಯದ ವಾಹನ ತಯಾರಿಕಾ ಕಂಪನಿ ಸ್ಕೋಡಾದ ಮೊದಲ ಎಲೆಕ್ಟ್ರಿಕ್ ಸಣ್ಣ ಎಸ್‌ಯುವಿಯಾಗಿದೆ. ಸಂಪೂರ್ಣ ಹೊಸ ವಿನ್ಯಾಸದೊಂದಿಗೆ ಬಂದಿರುವ ಈ ಕಾರಿನ ಚಿತ್ರಗಳನ್ನು ನೋಡುತ್ತ ಹೆಚ್ಚಿನ ವಿವರ ಪಡೆಯೋಣ ಬನ್ನಿ.
- Skoda Elroq EV: ಸ್ಕೋಡಾ ಎಲ್ರೋಕ್ ಜೆಕ್ ಗಣರಾಜ್ಯದ ವಾಹನ ತಯಾರಿಕಾ ಕಂಪನಿ ಸ್ಕೋಡಾದ ಮೊದಲ ಎಲೆಕ್ಟ್ರಿಕ್ ಸಣ್ಣ ಎಸ್‌ಯುವಿಯಾಗಿದೆ. ಸಂಪೂರ್ಣ ಹೊಸ ವಿನ್ಯಾಸದೊಂದಿಗೆ ಬಂದಿರುವ ಈ ಕಾರಿನ ಚಿತ್ರಗಳನ್ನು ನೋಡುತ್ತ ಹೆಚ್ಚಿನ ವಿವರ ಪಡೆಯೋಣ ಬನ್ನಿ.
(1 / 5)
ಸ್ಕೋಡಾ ಎಲ್ರೋಕ್ ಇವಿ ಜಾಗತಿಕವಾಗಿ ಬಿಡುಗಡೆಯಾಗಿದೆ. ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಸ್ಕೋಡಾ ಎಲ್ರಾಕ್ ಇವಿ ಬ್ರ್ಯಾಂಡ್ ನ ಮೊದಲ ಆಲ್-ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಎಲ್ರೋಕ್ ಸಂಪೂರ್ಣವಾಗಿ ಹೊಸ ವಿನ್ಯಾಸ ತತ್ವವನ್ನು ಒಳಗೊಂಡಿದೆ. ಈ ಮೂಲಕ ತನ್ನ ಸಾಂಪ್ರದಾಯಿಕ ವಿನ್ಯಾಸವನ್ನು ಈ ಇವಿಗೆ ಅಳವಡಿಸಿಲ್ಲ. ಸಂಪೂರ್ಣ ಹೊಸತನದಿಂದ ಕೂಡಿದೆ.
(2 / 5)
ಕಾರಿನ ಹೊರಗಡೆ ಹೇಗಿದೆ?: ಇತರೆ ಸ್ಕೋಡಾ ಕಾರುಗಳಿಗೆ ಹೋಲಿಸಿದರೆ ನೂತನ ಸ್ಕೋಡಾ ಎಲ್ರಾಕ್ ಇವಿ ಕನಿಷ್ಠ ಲೈನ್ಗಳನ್ನು ಹೊಂದಿದೆ. ಇದು ಆಧುನಿಕ ಸ್ಲೈಡ್ ವಿನ್ಯಾಸ ತತ್ವಶಾಸ್ತ್ರ ಹೊಂದಿದೆ. ಮುಂಭಾಗವು ಟೆಎಕ್ ಡೆಕ್ ಫೇಸ್ ವಿನ್ಯಾಸ ಹೊಂದಿದೆ. ಎಲ್ಲಾ ಇಲ್‌ಇಡಿಯ ಹೆಡ್‌ಲ್ಯಾಂಪ್‌ಗಳಿವೆ. ಸೈಡ್ ಮತ್ತು ಹಿಂಭಾಗದ ಕಪ್ಪು ಕ್ಲಾಡಿಂಗ್‌ನಿಂದ ಈ ಕಾರಿಗೆ ಬೋಲ್ಡ್ ಲುಕ್ ಬಂದಿದೆ. ಸ್ಕೋಡಾ ತನ್ನ ಸಿಗ್ನೇಚರ್ ಶಾರ್ಪ್ ಸ್ಟೈಲಿಂಗ್‌ನಿಂದ ಆಕರ್ಷಕವಾಗಿದೆ.
(3 / 5)
ಕಾರಿನೊಳಗೆ ನೋಡು: ಸ್ಕೋಡಾ ಎಲ್ರೋಕ್ ನ ಕ್ಯಾಬಿನ್ ಸರಳವಾಗಿ, ವ್ಯವಸ್ಥಿತವಾಗಿ ಕಾಣಿಸುತ್ತದೆ. ಮಧ್ಯದಲ್ಲಿ ದೊಡ್ಡ 13 ಇಂಚಿನ ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ಹೊಂದಿದೆ. ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಲೇಯರ್ಡ್ ಡ್ಯಾಶ್ ಬೋರ್ಡ್‌ನಿಂದ ಇಂಟೀರಿಯರ್ ಆಕರ್ಷಕವಾಗಿ ಕಾಣಿಸುತ್ತದೆ. 1,580-ಲೀಟರ್ ಬೂಟ್ ಸ್ಪೇಸ್ ಇರುವುದರಿಂದ ಸ್ಟೋರೇಜ್ ಸ್ಥಳಾವಕಾಶದ ಕುರಿತು ಚಿಂತೆ ಮಾಡಬೇಕಿಲ್ಲ.
(4 / 5)
ಎಂಜಿನ್ ಮತ್ತು ಇತರೆ ವಿವರ: ಸ್ಕೋಡಾ ಎಲ್ರೋಕ್ ಸ್ಟ್ಯಾಂಡರ್ಡ್ ಮತ್ತು ಸ್ಪೋರ್ಟ್‌ಲೈನ್ ಆವೃತ್ತಿಗಳಲ್ಲಿ ದೊರಕಲಿದೆ. ಸ್ಕೋಡಾ ಈ ಇವಿಯ 'ಫಸ್ಟ್ ಎಡಿಷನ್' ಅವತಾರವನ್ನು ಬಿಡುಗಡೆ ಮಾಡಲಿದೆ. ಫೋಕ್ಸ್ ವ್ಯಾಗನ್ ಗ್ರೂಪ್ ನ ಎಂಇಬಿ ಪ್ಲಾಟ್ ಫಾರ್ಮ್ ಆಧರಿಸಿ ಇದರ ಪವರ್ ಟ್ರೇನ್ ಇರಲಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯ ಮೂರು ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಅಂದರೆ, 55 ಕಿಲೋವ್ಯಾಟ್, 63 ಕಿಲೋವ್ಯಾಟ್ ಮತ್ತು 82 ಕಿಲೋವ್ಯಾಟ್‌ಗಳಲ್ಲಿ ಲಭ್ಯವಿರಲಿದೆ. ಎಂಟ್ರಿ ಲೆವೆಲ್ ಮಾದರಿ ಎಲ್ರಾಕ್ 50 168 ಬಿಎಚ್‌ಪಿ ಮೋಟಾರ್ ಹೊಂದಿದ್ದು, 370 ಕಿ.ಮೀ ರೇಂಜ್ ನೀಡುತ್ತದೆ. ಉನ್ನತ ಶ್ರೇಣಿಯ ಎಲ್ರೋಕ್ 85 282 ಬಿಎಚ್‌ಪಿ ಮೋಟರ್ ಹೊಂದಿದ್ದು, 560 ಕಿ.ಮೀ ರೇಂಜ್ ನೀಡುತ್ತದೆ. ಇದು ಆಲ್ ವೀಲ್ ಡ್ರೈವ್ ಕಾರಾಗಿದೆ.
(5 / 5)
ಸ್ಕೋಡಾ ಎಲ್ರಾಕ್‌ನ ಎಲ್ಲಾ ಮೂರು ಆವೃತ್ತಿಗಳು ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯ ಹೊಂದಿವೆ. ಎಲ್ರಾಕ್ 50 ಮತ್ತು ಎಲ್ರಾಕ್ 60 ಕ್ರಮವಾಗಿ 145 ಕಿಲೋವ್ಯಾಟ್ ಮತ್ತು 165 ಕಿಲೋವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಅವಕಾಶ ನೀಡುತ್ತದೆ. ಎಲ್ರಾಕ್ 85 ಟ್ರಿಮ್ ಅನ್ನು 175 ಕಿಲೋವ್ಯಾಟ್ ಫಾಸ್ಟ್ ಚಾರ್ಜರ್‌ನಲ್ಲಿ ಚಾರ್ಜ್ ಮಾಡಬಹುದು. ಶೇಕಡ 10-80ರವರೆಗೆ ಚಾರ್ಜ್ ಕೇವಲ 28 ನಿಮಿಷ ಸಾಕು. ಮೊಬೈಲ್ ಫೋನ್ ಚಾರ್ಜ್ ಮಾಡಿದಂತೆ ಫಾಸ್ಟ್ ಚಾರ್ಜ್ ಮಾಡಿಕೊಂಡು ನಿರಾಳವಾಗಿ ಪ್ರಯಾಣಿಸಬಹುದು.
ಇತರ ಗ್ಯಾಲರಿಗಳು