Bangalore Groundnut Festival: ಬೆಂಗಳೂರಿನಲ್ಲಿ ಕಡಲೆಕಾಯಿ ಪರಿಷೆ ಘಮಲು ಆಗಲೇ ಶುರು; ಬಸವನಗುಡಿಯಲ್ಲಿ ಜಾತ್ರೆಯ ನೋಟ ಬಲು ಜೋರು
- Bangalore Basavanagudi Ground Nut Festival: ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆ ಹಾಗೂ ದೊಡ್ಡಬಸವಣ್ಣ ಹಾಗೂ ದೊಡ್ಡ ಗಣಪತಿ ಜಾತ್ರೆ ಸೋಮವಾರದಿಂದ ಎರಡು ದಿನ ನಡೆಯಲಿವೆ. ಭಾನುವಾರವೂ ಹಬ್ಬದ ವಾತಾವರಣ, ಕಡಲೆಕಾಯಿ ಮಾರಾಟ ಅಲ್ಲಿ ಕಂಡು ಬಂದಿತು. ಇದರ ಚಿತ್ರಣ ಇಲ್ಲಿದೆ.
- Bangalore Basavanagudi Ground Nut Festival: ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆ ಹಾಗೂ ದೊಡ್ಡಬಸವಣ್ಣ ಹಾಗೂ ದೊಡ್ಡ ಗಣಪತಿ ಜಾತ್ರೆ ಸೋಮವಾರದಿಂದ ಎರಡು ದಿನ ನಡೆಯಲಿವೆ. ಭಾನುವಾರವೂ ಹಬ್ಬದ ವಾತಾವರಣ, ಕಡಲೆಕಾಯಿ ಮಾರಾಟ ಅಲ್ಲಿ ಕಂಡು ಬಂದಿತು. ಇದರ ಚಿತ್ರಣ ಇಲ್ಲಿದೆ.
(2 / 10)
ಪ್ರತಿವರ್ಷವೂ ಕಾರ್ತೀಕ ಮಾಸದ ಕೊನೆಯ ಸೋಮವಾರ ಕಡಲೆಕಾಯಿ ಪರಿಷೆ ಬೆಂಗಳೂರು ಮಾತ್ರವಲ್ಲದೇ ಹಲವೆಡೆ ನಡೆಯುತ್ತದೆ. ಈ ಬಾರಿ ನವೆಂಬರ್ 25ರಂದು ಕಾರ್ತೀಕ ಮಾಸದ ಸೋಮವಾರವಾಗಿರುವುದರಿಂದ ಬೆಂಗಳೂರಿನ ಇತಿಹಾಸ ಪ್ರಸಿದ್ದ ಕಡಲೆಕಾಯಿ ಪರಿಷೆ ಶುರುವಾಗಲಿದೆ. ಆದರೆ ಹಿಂದಿನ ದಿನಗಳು ಭಾನುವಾರ, ಶನಿವಾರವಾಗಿರುವುದರಿಂದ ಬಸವನಗುಡಿ ಬೀದಿಗಳಲ್ಲಿ ನವೆಂಬರ್ 23ರಿಂದಲೇ ಹಬ್ಬದ ಸಡಗರ ಶುರುವಾಗಿದೆ.
(3 / 10)
ಬೆಂಗಳೂರಿನ ಪಾರಂಪರಿಕ ಕಡಲೆಕಾಯಿ ಪರಿಷೆಗೆ ಸುಮಾರು 500 ವರ್ಷಗಳ ಇತಿಹಾಸವಿದೆ. ಇದನ್ನು ನೋಡಲು ಬೆಂಗಳೂರು ನಗರ, ಗ್ರಾಮೀಣ ಹಾಗೂ ಇತರೆ ರಾಜ್ಯಗಳಿಂದ ಲಕ್ಷಾಂತರ ಜನ ಬರುತ್ತಾರೆ. ಈ ಬಾರಿಯೂ ಬಸವನಗುಡಿಯಲ್ಲಿ ಭಾರೀ ಸಿದ್ದತೆಗಳೇ ಆಗಿವೆ.
(4 / 10)
ಹೊಸ ಪೀಳಿಗೆಗೆ ಸಾಂಪ್ರದಾಯಿಕ ಕಡೆಲೆಕಾಯಿ ಪರಿಷೆಯನ್ನು ಪರಿಚಯಿಸುವ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿನೂತನ ಚಟುವಟಿಕೆಗಳನ್ನು ಕೈಗೊಳ್ಳಲು ಬಿಬಿಎಂಪಿ ಮತ್ತು ಮುಜರಾಯಿ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿವೆ. ಭಾನುವಾರವೂ ಹಲವರು ಆಗಮಿಸಿ ಶೇಂಗಾ ಖರೀದಿಸಿದ್ದು ಕಂಡು ಬಂದಿತು.
(5 / 10)
ದೊಡ್ಡಗಣಪ ಹಾಗೂ ದೊಡ್ಡ ಬಸವನ ಸನ್ನಿಧಾನದಲ್ಲಿ ನಡೆಯುವ ಐತಿಹಾಸಿಕ ಜಾತ್ರೆ. ಪ್ರತೀ ವರ್ಷಕ್ಕಿಂತಲೂ ಈ ಬಾರಿ ತುಂಬಾ ಮಿಗಿಲು ಎಂಬಂತೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಬಸವನಗುಡಿ ಹಾಗೂ ಅಕ್ಕಪಕ್ಕದ ಪ್ರದೇಶದಲ್ಲಿ ಕಡಲೆಕಾಯಿ ಜಮಾವಣೆಗೊಂಡಿದೆ.
(6 / 10)
ಬೆಂಗಳೂರು ಹಾಗೂ ಸುತ್ತಮುತ್ತಲ ಭಾಗದಿಂದ ಬಸವನಗುಡಿ ಪರಿಷೆಗೆಂದೇ ಈಗಷ್ಟೇ ಬಂದಿರುವ ಕಡಲೆಕಾಯಿಯನ್ನು ತಂದು ಇಲ್ಲಿ ಮಾರಾಟ ಮಾಡಲಾಗುತ್ತದೆ. ಕಡಲೆಕಾಯಿ ರುಚಿಯೇ ಬೇರೆ. ಅದೂ ಜಾತ್ರೆಯಲ್ಲಿ -ಸುತ್ತು ಹಾಕಿ ಕಡಲೆಕಾಯಿ ಖರೀದಿಸುವ ಸಂಭ್ರಮಕ್ಕೆ ಎಣೆಯೇ ಇಲ್ಲ.
(7 / 10)
ಹಿರಿಯರು, ಮಕ್ಕಳು, ಯುವಕರೂ ಬಸವನಗುಡಿ ಕಡಲೆಕಾಯಿ ಪರಿಷೆಗೆ ಆಗಮಿಸಿ ಕಡಲೆಕಾಯಿ ಘಮಲು, ರುಚಿ ಸವಿದು ಹೋಗುತ್ತಾರೆ. ಕಡಲೆಕಾಯಿ ಪರಿಷೆಯಲ್ಲಿ ಪ್ಲಾಸ್ಟಿಕ್ ಬಳಸದಂತೆ ಈ ಬಾರಿಯೂ ಮುನ್ನೆಚ್ಚರಿಕೆ ವಹಿಸಲಾಗಿದೆ.
(8 / 10)
ಶತಮಾನಗಳ ಇತಿಹಾಸ ಇರುವ ಬೆಂಗಳೂರು ಬಸವನಗುಡಿ ದೊಡ್ಡ ಬಸವಣ್ಣ ಜಾತ್ರೆ ಎಂದರೆ ಅಲ್ಲಿ ಏನೆಲ್ಲಾ ಇರುತ್ತದೆ ಎನ್ನುವುದನ್ನು ಇದು ಹೇಳಲಿದೆ.
(9 / 10)
ಜಾತ್ರೆ ಎಂದರೆ ಆಯಿತು. ಅಲ್ಲಿ ಖರೀದಿಸಲು ಏನುಂಟು ಏನಿಲ್ಲ. ಎಲ್ಲಾ ರೀತಿಯ ಆಟದ ಸಾಮಾನು. ಬಲೂನುಗಳ ಲೋಕವೇ ತೆರೆದುಕೊಳ್ಳುತ್ತದೆ.
ಇತರ ಗ್ಯಾಲರಿಗಳು