Bangalore News: ಬಸವನಗುಡಿ ಕಡಲೆಕಾಯಿ ಪರಿಷೆ ಶುರು, ಬೆಂಗಳೂರು ಜಾತ್ರೆಯಲ್ಲಿ ಕುಟುಂಬಗಳು, ಸ್ನೇಹಿತರ ಮಿಲನದ ಖುಷ್ ಖುಷಿ ಕ್ಷಣ
- ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆ ಎಂದರೆ ಅದು ಅಪ್ಪ ದೇಸಿ ಜಾತ್ರೆ. ಶತಮಾನಗಳ ಇತಿಹಾಸ ಇರುವ ಈ ಜಾತ್ರೆಯಲ್ಲಿ ಹಲವರು ಸೇರಿ ಖುಷಿ ಹಂಚಿಕೊಳ್ಳುತ್ತಾರೆ. ಶೇಂಗಾ ಖರೀದಿಸಿ ನೆನಪುಗಳ ಜಾತ್ರೆಯನ್ನೂ ಮಾಡುತ್ತಾರೆ.
- ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆ ಎಂದರೆ ಅದು ಅಪ್ಪ ದೇಸಿ ಜಾತ್ರೆ. ಶತಮಾನಗಳ ಇತಿಹಾಸ ಇರುವ ಈ ಜಾತ್ರೆಯಲ್ಲಿ ಹಲವರು ಸೇರಿ ಖುಷಿ ಹಂಚಿಕೊಳ್ಳುತ್ತಾರೆ. ಶೇಂಗಾ ಖರೀದಿಸಿ ನೆನಪುಗಳ ಜಾತ್ರೆಯನ್ನೂ ಮಾಡುತ್ತಾರೆ.
(1 / 7)
ಬಸವನಗುಡಿ ವಿಧಾನಸಭಾ ಕ್ಷೇತ್ರ ಮತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿ ವರ್ಷ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆ ಉದ್ಘಾಟನೆ ಕಾರ್ಯಕ್ರಮ ನೆರವೇರಿತು. ಡಿಸಿಎಂ ಡಿ.ಕೆ.ಶಿವಕುಮಾರ್, ಸ್ಥಳೀಯ ಶಾಸಕರು, ಅಧಿಕಾರಿಗಳು ಹಾಜರಿದ್ದರು.
(2 / 7)
ಬೆಂಗಳೂರಿನ ಪ್ರಖ್ಯಾತ ಬಸವನಗುಡಿ ಕಡಲೆಕಾಯಿ ಪರಿಷೆಗೆ ಇಂದು ಚಾಲನೆ ನೀಡಿ, ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ನೆರವೇರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್.
(3 / 7)
ಬೆಂಗಳೂರಿನ ಬಸವನಗುಡಿಯ ಕಡಲೆಕಾಯಿ ಪರಿಷೆಯ ಇತಿಹಾಸವು ಆಸಕ್ತಿಕರ ಕಥೆಯಗಳ ಜೊತೆ ಬೆಸೆದುಕೊಂಡಿದೆ. ಕಡಲೆಕಾಯಿ ಖರೀದಿಸಿ ಖುಷಿಪಡುವವರ ಸಂಖ್ಯೆ ಅಧಿಕ. ಈ ಬಾರಿ ಕಡಲೆಕಾಯಿ ತುಲಾಭಾರವೂ ಗಮನ ಸೆಳಯಿತು,
(4 / 7)
ಬಸವನಗುಡಿ ಸುತ್ತಮುತ್ತಲಿನ ಪ್ರದೇಶವು ಈ ಹಿಂದೆ ಕಡಲೆಕಾಯಿ ಹೊಲಗಳಾಗಿತ್ತು. ರೈತರು ಬೆಳೆದ ಕಡಲೆಕಾಯನ್ನು ಬಸವಣ್ಣ ತಿಂದು ಖಾಲಿ ಮಾಡ್ತಿದ್ನಂತೆ. ಇದರಿಂದ ಬೇಸತ್ತ ರೈತರು ಕೊನೆಗೆ ದೊಡ್ಡ ಬಸವಣ್ಣನ ಮೂರ್ತಿಗೆ ಕಡಲೆಕಾಯಿ ಅಭಿಷೇಕ ಮಾಡುವುದಾಗಿ ಹರಕೆ ಕಟ್ಟಿಕೊಂಡರಂತೆ. ಅಲ್ಲಿಂದೀಚೆಗೆ ಕಡಲೆಕಾಯಿ ಪರಷೆ ನಡೆದುಕೊಂಡು ಬಂದಿದೆ ಎನ್ನುವ ನಂಬಿಕೆ ಜನರಲ್ಲಿದೆ.
(5 / 7)
ಬಸವನಗುಡಿಯ ಪ್ರಖ್ಯಾತ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಕಡಲೆಕಾಯಿ ಪರಿಷೆ ವೇಳೆಯೇ ಜಾತ್ರೆ ನಡೆಯುವುದರಿಂದ ಹೆಚ್ಚಿನ ಭಕ್ತಾದಿಗಳು ಭಾಗಿಯಾಗಿದ್ದಾರೆ.
ಇತರ ಗ್ಯಾಲರಿಗಳು