Pink Bangalore: ಬೆಂಗಳೂರು ರಸ್ತೆಗಳೆಲ್ಲಾ ಗುಲಾಬಿಯಾದವೋ, ಟಬೂಬಿಯಾ ರೋಸಿಯಾ ಮರದ ಕಂಪು ಹೇಗಿದೆ ನೋಡಿ Photos
- ಪ್ರೇಮಿಗಳ ದಿನ ಈಗಾಗಲೇ ಮುಗಿದಿದೆ. ಆದರೆ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಈಗಲೂ ಪ್ರೇಮಿಗಳ ದಿನದ ನೆನಪನ್ನು ಸಾರುವಂತೆ ಟಬೂಬಿಯಾ(Tabebuia) ಮರದ ಗುಲಾಬಿ ಬಣ್ಣದ ಹೂವುಗಳು ಮನಮೋಹಕ ವಾತಾವರಣ ಸೃಷ್ಟಿಸಿವೆ. ಹೀಗಿದೆ. ಆ ನೋಟ
- ಚಿತ್ರಗಳು: ಸಂಜಯ್ ಹೊಯ್ಸಳ ಪರಿಸರ ಪರಿವಾರ
- ಪ್ರೇಮಿಗಳ ದಿನ ಈಗಾಗಲೇ ಮುಗಿದಿದೆ. ಆದರೆ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಈಗಲೂ ಪ್ರೇಮಿಗಳ ದಿನದ ನೆನಪನ್ನು ಸಾರುವಂತೆ ಟಬೂಬಿಯಾ(Tabebuia) ಮರದ ಗುಲಾಬಿ ಬಣ್ಣದ ಹೂವುಗಳು ಮನಮೋಹಕ ವಾತಾವರಣ ಸೃಷ್ಟಿಸಿವೆ. ಹೀಗಿದೆ. ಆ ನೋಟ
- ಚಿತ್ರಗಳು: ಸಂಜಯ್ ಹೊಯ್ಸಳ ಪರಿಸರ ಪರಿವಾರ
(1 / 9)
ಬೆಂಗಳೂರಿನ ರಸ್ತೆಗಳಲ್ಲಿ ಬದಲಾವಣೆ ಗಮನಿಸಿದ್ದೀರಾ, ಅದೂ ಹೂವುಗಳ ಲೋಕ. ಎಲ್ಲೆಲ್ಲೂ ಗುಲಾಬಿ ಬಣ್ಣದ ಟಬೂಬಿಯಾದ ಬಣ್ಣವೇ ಕಾಣುತ್ತಿದೆ. ಅಂತಹ ಒಂದು ನೋಟ ಇಲ್ಲಿದೆ.
(3 / 9)
ರಸ್ತೆಯ ಇಕ್ಕೆಲಗಳಲ್ಲಿ ನಾಲ್ಕು ದಶಕದ ಹಿಂದೆ ಅರಣ್ಯ ಇಲಾಖೆ ನೆಟ್ಟಿರುವ ಮರಗಳು ಬಾಗಿ ಈ ರೀತಿಯ ಬಣ್ಣದ ಹೂವುಗಳಿಂದ ಜನರ ಮನಸಿಗೆ ಮುದ ನೀಡುತ್ತವೆ.
(4 / 9)
ಉದ್ಯಾನ ನಗರಿ' ಎಂದು ಜಮಾನದಲ್ಲೆ ಹೆಸರುವಾಸಿಯಾಗಿರುವ ಬೆಂಗಳೂರು ನಗರ, ದೇಶದ ಐಟಿ ರಾಜಧಾನಿಯಾದ ಕಾರಣದಿಂದ ಎನ್ನುವಂತ ಟಬೂಬಿಯಾ ರೋಸಿಯಾದ ಈ ಅರಳಿದ ಹೂಗಳ ರಾಶಿಯ ಸಾಲು ಮರಗಳ ದೃಶ್ಯದಿಂದ ಈಗ ಎಲ್ಲೆಡೆ ಗಮನಸೆಳೆಯುತ್ತಿದೆ.
(6 / 9)
ಬೆಂಗಳೂರು 'ಗಾರ್ಡನ್ ಸಿಟಿ' ಎಂಬ ಖ್ಯಾತಿ ಗಳಿಸುವಲ್ಲಿ, ಈ ರೀತಿ ವಿಶ್ವದ ಪ್ರಮುಖ ಅಲಂಕಾರಿಕ ಹಾಗೂ ಹೂವು ಬಿಡುವ ಗಿಡಗಳನ್ನು ಆ ಕಾಲದಲ್ಲಿಯೇ ತಂದು ಬೆಳಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು 80 ರ ದಶಕದಲ್ಲಿ ಬೆಂಗಳೂರಿನಲ್ಲಿ ಅರಣ್ಯಾಧಿಕಾರಿಗಳಾಗಿದ್ದ ಐಎಫ್‌ಎಸ್ ಅಧಿಕಾರಿ ಎಸ್.ಜಿ. ನೇಗಿನಾಳ್ ಅವರು.
(7 / 9)
ನೇಗಿನಾಳ್ ಅವರು ಇತ್ತೀಚೆಗೆ ತಾನೆ ತಮ್ಮ 90ನೇ ವಯಸ್ಸಿನಲ್ಲಿ ಮೃತರಾದರು. ಭಾರತದ ನಗರ ಮರಗಳ ಕುರಿತು ಇವರು ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ.Tabebuia ಜಾತಿಯ ಬಹುತೇಕ ಎಲ್ಲಾ ಮರಗಳು ಅತ್ಯುತ್ತಮ ಹೂವು ಬಿಡುವ ಮರಗಳೆ ಎಂದೇ ಅವರು ಉಲ್ಲೇಖಿಸಿದ್ದಾರೆ.
(8 / 9)
ಈಗಲೂ ಬೆಂಗಳೂರಿನ ಹಲವಾರು ಬಡಾವಣೆಗಳಲ್ಲಿ ಟಬೂಬಿಯಾ ಮರಗಳನ್ನು ಉಳಿಸಿಕೊಳ್ಳಲಾಗಿದೆ. ಇದರಿಂದ ಫೆಬ್ರವರಿ ಬಂದರೆ ಈ ಹೂವುಗಳ ವೈಭವ ಹೆಚ್ಚುತ್ತದೆ.
ಇತರ ಗ್ಯಾಲರಿಗಳು