Bangalore News: ಸಿಎಂ ಡಿಸಿಎಂ ಬೆಂಗಳೂರು ರೌಂಡ್ಸ್, ಹೀಗಿತ್ತು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೋಡಿ ಸಂಚಾರ
- ಮಳೆಗಾಲಕ್ಕೂ ಮುನ್ನ ಬೆಂಗಳೂರಿನ ರಾಜಕಾಲುವೆಗಳು, ಕಾಮಗಾರಿಗಳು, ಮೆಟ್ರೋ ಯೋಜನೆ ಸ್ಥಿತಿಗತಿ ಸಹಿತ ಹಲವಾರು ಯೋಜನೆಗಳ ಪರಿಸ್ಥಿತಿಯನ್ನು ಖುದ್ದು ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ರೌಂಡ್ಸ್( CM Siddaramaiah Bangalore Rounds) ಪರಿಶೀಲಿಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಹೀಗಿತ್ತು ಸಿಎಂ ರೌಂಡ್ಸ್ ನೋಟ
- ಮಳೆಗಾಲಕ್ಕೂ ಮುನ್ನ ಬೆಂಗಳೂರಿನ ರಾಜಕಾಲುವೆಗಳು, ಕಾಮಗಾರಿಗಳು, ಮೆಟ್ರೋ ಯೋಜನೆ ಸ್ಥಿತಿಗತಿ ಸಹಿತ ಹಲವಾರು ಯೋಜನೆಗಳ ಪರಿಸ್ಥಿತಿಯನ್ನು ಖುದ್ದು ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ರೌಂಡ್ಸ್( CM Siddaramaiah Bangalore Rounds) ಪರಿಶೀಲಿಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಹೀಗಿತ್ತು ಸಿಎಂ ರೌಂಡ್ಸ್ ನೋಟ
(1 / 10)
ಬೆಂಗಳೂರಿನ ಸಮಸ್ಯೆಗಳನ್ನು ಗಮನಿಸಿ ಪರಿಹಾರ ಸೂಚಿಸಲು ಬಿಎಂಟಿಸಿ ಬಸ್ ಏರಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವರು, ಅಧಿಕಾರಿಗಳ ತಂಡ.
(2 / 10)
ಬೆಂಗಳೂರು ವಿಜಯನಗರದ ಗಾಳಿ ಆಂಜನೇಯ ದೇವಸ್ಥಾನ ಸಮೀಪದ ರಾಜಕಾಲುವೆಯಲ್ಲಿ ಮಳೆಗಾಲದಲ್ಲಿ ಪ್ರವಾಹ ಉಂಟಾಗುತ್ತಿದ್ದು. ಇದನ್ನು ಸರಿಪಡಿಸುವಂತೆ ಸಿಎಂ ಡಿಸಿಎಂ ಸೂಚಿಸಿದರು.
(3 / 10)
ವಿಜಯನಗರ ಗಾಳಿ ಆಂಜನೇಯ ದೇವಸ್ಥಾನ ಸಮೀಪದ ರಾಜಕಾಲುವೆಯಲ್ಲಿ ತುಂಬಿರುವ ಹೂಳು, ಕಸ ತೆಗೆದು ಮಳೆಗಾಲಕ್ಕೆ ಸಿದ್ದತೆ ಈಗಿನಿಂದಲೇ ಮಾಡಿಕೊಳ್ಳಬೇಕು ಎನ್ನುವ ಸೂಚನೆ ಹಿನ್ನೆಲೆಯಲ್ಲಿ ಕೆಲಸ ನಡೆದಿತ್ತು.
(4 / 10)
ಬೆಂಗಳೂರಿನ ನಾಯಂಡಹಳ್ಳಿ ರಾಜಕಾಲುವೆಯಲ್ಲಿ ಮಳೆಗಾಲ ಪ್ರವಾಹ ಉಂಟಾಗುತ್ತಿದೆ. ಫ್ಲೈಓವರ್ ನಿರ್ಮಿಸಿದ್ದರಿಂದ ರಾಜಕಾಲುವೆಯ ವಿಸ್ತಾರ ಕಡಿಮೆ ಆಗಿದೆ. ಈ ಕುರಿತ ದಾಖಲೆಗಳನ್ನು ಸಿಎಂ ವೀಕ್ಷಿಸಿದರು.
(5 / 10)
ಬೆಂಗಳೂರಿನ ಬೊಮ್ಮನಹಳ್ಳಿ ಬಳಿ ಮಟ್ರೋ ಕಾಮಗಾರಿಯಿಂದಾಗಿ ಮಳೆನೀರು ಚರಂಡಿ ವಿಸ್ತೀರ್ಣ ಕಡಿಮೆಯಾಗಿ, ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದ್ದು. ಇದನ್ನು ಸರಿಪಡಿಸುವ ಕುರಿತು ಸ್ಥಳೀಯ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಸಿಎಂ ಗಮನಕ್ಕೆ ತಂದರು.
(6 / 10)
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಬೆಂಗಳೂರು ನಗರ ಸಂಚಾರ, ಸ್ಥಳ ಪರಿಶೀಲನೆ ವೇಳೆಗೆ ಬಿಟಿಎಂ ಮೆಟ್ರೋಸ್ಟೇಷನ್‌ಗೆ ಭೇಟಿ ನೀಡಿ ಮೇಲುಸೇತುವೆ ರಸ್ತೆ ಹಾಗೂ ಮೆಟ್ರೋ ಮಾರ್ಗಗಳೆರಡೂ ಒಂದರ ಮೇಲೊಂದು ಇರುವ ಡಬಲ್ ಡೆಕ್ಕರ್ - 2 ಟಯರ್ ವ್ಯವಸ್ಥೆಯನ್ನು ಮುಖ್ಯಮಂತ್ರಿಗಳು ಪರಿಶೀಲಿಸಿದರು.
(7 / 10)
ಕಳೆದ ಆರು ವರ್ಷಗಳಿಂದ ನೆನೆಗುದಿಗೆ ಬಿದ್ದು ಸಾರ್ವಜನಿಕರಿಗೆ ವಿಪರೀತ ಕಿರಿಕಿರಿ ಆಗುತ್ತಿದೆ. 2.95 ಕಿ.ಮೀ. ಉದ್ದದ ಈಜಿಪುರ ಫ್ಲೈ ಓವರ್ ಕಾಮಗಾರಿ ವೀಕ್ಷಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್. ಸಚಿವರಾ ದ ರಾಮಲಿಂಗಾರೆಡ್ಡಿ, ಬೈರತಿ ಸುರೇಶ್ ಜತೆಗಿದ್ದರು.
(8 / 10)
ಬೆಂಗಳೂರಿನ ಏಕೈಕ ಮತ್ತು ಪ್ರಥಮ ಡಬಲ್ ಡೆಕರ್ 2 ಟಯರ್ ವ್ಯವಸ್ಥೆಯನ್ನು ಪರಿಶೀಲಿಸುತ್ತಿರುವ ಸಿಎಂ. ಆದಷ್ಟು ಬೇಗ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಸೂಚಿಸಿದರು.
(9 / 10)
ಬಿಟಿಎಂ ಮೆಟ್ರೋಸ್ಟೇಷನ್‌ಗೆ ಭೇಟಿ ನೀಡಿ ಮೇಲುಸೇತುವೆ ರಸ್ತೆ ಹಾಗೂ ಮೆಟ್ರೋ ಮಾರ್ಗಗಳೆರಡೂ ಒಂದರ ಮೇಲೊಂದು ಇರುವ ಡಬಲ್ ಡೆಕ್ಕರ್ ವ್ಯವಸ್ಥೆಯನ್ನು ಖುದ್ದು ಸಿಎಂ ಸಿದ್ದರಾಮಯ್ಯ ವೀಕ್ಷಿಸಿದರು.
ಇತರ ಗ್ಯಾಲರಿಗಳು