ಕರ್ನಾಟಕ ಬಜೆಟ್2024: ಪ್ರತ್ಯೇಕ ಪ್ರವಾಸೋದ್ಯಮ ನೀತಿ, ವಿಜಯಪುರ ಕರೇಜ್, ಗೋಕಾಕ್ ಜಲಪಾತ, ದಾಂಡೇಲಿ-ಕಬಿನಿಯಲ್ಲಿ ಮಾಹಿತಿ ಕೇಂದ್ರ Photos
- ಕರ್ನಾಟಕ ಪ್ರಮುಖ ಪ್ರವಾಸಿ ರಾಜ್ಯವೂ ಹೌದು. ಇಲ್ಲಿ ಸಮುದ್ರ, ಕಾಡು, ಬೆಟ್ಟ, ಜಲಪಾತ, ದೇಗುಲ ಸಹಿತ ಹಲವು ರೀತಿಯ ಪ್ರವಾಸಿ ತಾಣಗಳಿವೆ. ಕರ್ನಾಟಕ ಬಜೆಟ್ 2024 ಮೂಲಕ ಸಿಎಂ ಸಿದ್ದರಾಮಯ್ಯ ಪ್ರವಾಸೋದ್ಯಮಕ್ಕೆ ಒತ್ತು ನೀಡಿದ್ಧಾರೆ. ಕಲಬುರಗಿ, ಬೀದರ್, ಗದಗ, ಗೋಕಾಕ, ಬಂಡೀಪುರ, ನಾಗರಹೊಳೆ ಸಹಿತ ಹಲವು ಕಡೆ ಪ್ರವಾಸಿ ಯೋಜನೆ. ಮೂಲಸೌಕರ್ಯ ಕಾರ್ಯಕ್ರಮ ಪ್ರಕಟಿಸಿದ್ದಾರೆ.
- ಕರ್ನಾಟಕ ಪ್ರಮುಖ ಪ್ರವಾಸಿ ರಾಜ್ಯವೂ ಹೌದು. ಇಲ್ಲಿ ಸಮುದ್ರ, ಕಾಡು, ಬೆಟ್ಟ, ಜಲಪಾತ, ದೇಗುಲ ಸಹಿತ ಹಲವು ರೀತಿಯ ಪ್ರವಾಸಿ ತಾಣಗಳಿವೆ. ಕರ್ನಾಟಕ ಬಜೆಟ್ 2024 ಮೂಲಕ ಸಿಎಂ ಸಿದ್ದರಾಮಯ್ಯ ಪ್ರವಾಸೋದ್ಯಮಕ್ಕೆ ಒತ್ತು ನೀಡಿದ್ಧಾರೆ. ಕಲಬುರಗಿ, ಬೀದರ್, ಗದಗ, ಗೋಕಾಕ, ಬಂಡೀಪುರ, ನಾಗರಹೊಳೆ ಸಹಿತ ಹಲವು ಕಡೆ ಪ್ರವಾಸಿ ಯೋಜನೆ. ಮೂಲಸೌಕರ್ಯ ಕಾರ್ಯಕ್ರಮ ಪ್ರಕಟಿಸಿದ್ದಾರೆ.
(1 / 10)
ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕರ್ನಾಟಕ ಪ್ರವಾಸೋದ್ಯಮ ನೀತಿಯನ್ನು ಮತ್ತಷ್ಟು ಹೂಡಿಕೆದಾರರ ಹಾಗೂ ಪ್ರವಾಸಿಗರ ಸ್ನೇಹಿಯಾಗಿ ಮಾಡಲು, ಪರಿಷ್ಕೃತ ಪ್ರವಾಸೋದ್ಯಮ ನೀತಿ 2024-29 ಅನ್ನು ಜಾರಿಗೆ ತರುವುದು ಪ್ರಮುಖಾಂಶ.
(2 / 10)
ರಾಜ್ಯದ ಪ್ರಮುಖ ಜಲಾಶಯಗಳಲ್ಲಿನ ಹಿನ್ನೀರಿನಲ್ಲಿ ಮತ್ತು ಕಡಲ ತೀರಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಜಲಕ್ರೀಡೆಗಳು ಮತ್ತು ಜಲಸಾಹಸ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ ಹೆಚ್ಚು ಪ್ರವಾಸಿಗರನ್ನು ಸೆಳೆಯಲಾಗುವುದು.
(3 / 10)
ಸಾಹಸ ಪ್ರವಾಸೋದ್ಯವನ್ನು ಉತ್ತೇಜಿಸಲು ರಾಜ್ಯದ ಪ್ರಮುಖ 10 ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೇಬಲ್ ಕಾರ್/ ರೋಪ್ ವೇ ಸೌಲಭ್ಯ ಅಭಿವೃದ್ಧಿಪಡಿಸುವುದನ್ನು ಬಜೆಟ್‌ನಲ್ಲಿ ತಿಳಿಸಲಾಗಿದೆ.
(4 / 10)
ಬೆಂಗಳೂರಿನ ಹೊರವಲಯದಲ್ಲಿರುವ ಐತಿಹಾಸಿಕ ದೇವಿಕಾರಾಣಿ ಎಸ್ಟೇಟ್ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ. ಇದು ಪಾರಂಪರಿಕ, ಪುರಾತತ್ವ ಇಲಾಖೆ ಅಡಿಯಲ್ಲಿರುವ ಪ್ರವಾಸಿ ತಾಣ.
(5 / 10)
ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಗಣಿಗಾರಿಕೆಯನ್ನು ಇಲ್ಲಿ ನಡೆಸದಂತೆ ನಿರಂತರ ಹೋರಾಟ ನಡೆದು ಈಗ ಬೆಟ್ಟವೂ ಹಸುರಿನಿಂದ ಕಂಗೊಳಿಸುತ್ತಿದೆ.
(6 / 10)
ಬಾಗಲಕೋಟೆಯ ಐಹೊಳೆ ಪುರಾತನ ತಾಣ. ಇಲ್ಲಿಗೆ ನಿತ್ಯ ನೂರಾರು ಪ್ರವಾಸಿಗರು ಬರುತ್ತಾರೆ. ಕೆ.ಎಸ್.ಟಿ.ಡಿ.ಸಿ ವತಿಯಿಂದ ಐಹೊಳೆಯಲ್ಲಿ ಸುಸಜ್ಜಿತವಾದ ಹೋಟೆಲ್ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ.
(7 / 10)
ಬೀದರ್ ಹಾಗೂ ವಿಜಯಪುರದಲ್ಲಿ ಕರೇಜ್ ಎಂದು ಪ್ರಸಿದ್ಧವಾಗಿರುವ ಪುರಾತನ ನೀರು ಸರಬರಾಜು ವ್ಯವಸ್ಥೆಯನ್ನು ನುರಿತ ಸಂಸ್ಥೆಗಳ ತಾಂತ್ರಿಕ ನೆರವಿನೊಂದಿಗೆ 15 ಕೋಟಿ ರೂ. ವೆಚ್ಚದಲ್ಲಿ ಪುನಶ್ಚೇತನಕ್ಕೆ ಒತ್ತು.
(8 / 10)
ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸಲು ನಾರಹೊಳೆಯ ಕಬಿನಿ, ಚಾಮರಾಜನಗರ ಜಿಲ್ಲೆಯ ಬಂಡೀಪುರ, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಮತ್ತು 25 ಕೋಟಿ ರೂ. ವೆಚ್ಚದಲ್ಲಿ ಇಂಟರ್‌ಪ್ರಿಟೇಷನ್ ಸೆಂಟರ್‌ಗಳನ್ನು ಜೆ.ಎಲ್.ಆರ್ ಸಂಸ್ಥೆಯ ಮೂಲಕ ನಿರ್ಮಾಣ ಮಾಡಲು ಆದ್ಯತೆ.
ಇತರ ಗ್ಯಾಲರಿಗಳು