ಕಂಗನಾ ರಣಾವತ್‌, ಲಾರಾ ದತ್ತಾ ಸೇರಿದಂತೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರಕ್ಕಾಗಿ ಬಣ್ಣ ಹಚ್ಚಿದ ನಟಿಯರಿವರು - Photo Gallery-bollywood news actress who played former prime minister indira gandhi role including lara dutta kangana ranaut rsm ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಂಗನಾ ರಣಾವತ್‌, ಲಾರಾ ದತ್ತಾ ಸೇರಿದಂತೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರಕ್ಕಾಗಿ ಬಣ್ಣ ಹಚ್ಚಿದ ನಟಿಯರಿವರು - Photo Gallery

ಕಂಗನಾ ರಣಾವತ್‌, ಲಾರಾ ದತ್ತಾ ಸೇರಿದಂತೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರಕ್ಕಾಗಿ ಬಣ್ಣ ಹಚ್ಚಿದ ನಟಿಯರಿವರು - Photo Gallery

ನೈಜ ಘಟನೆ ಆಧಾರಿತ, ಖ್ಯಾತನಾಮರ ಜೀವನ ಆಧಾರಿತ ಅನೇಕ ಸಿನಿಮಾಗಳು ತಯಾರಾಗಿವೆ. ಈಗ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜೀವನ ಆಧಾರಿತ ಎಮರ್ಜೆನ್ಸಿ ಸಿನಿಮಾ ತೆರೆ ಮೇಲೆ ಬರುತ್ತಿದೆ.

ಎಮರ್ಜೆನ್ಸಿ ಚಿತ್ರದಲ್ಲಿ ಕಂಗನಾ ರಣಾವತ್‌, ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. 2 ವರ್ಷಗಳ ಹಿಂದೆ ಕಂಗನಾ, ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಪಾತ್ರವನ್ನು ನಿಭಾಯಿಸಿದ್ದರು. ಇದಕ್ಕೂ ಮುನ್ನ ಅನೇಕ ನಟಿಯರು ಇಂದಿರಾಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಯಾವೆಲ್ಲಾ ನಟಿಯರು ಇಂದಿರಾಗಾಂಧಿ ಪಾತ್ರ ಮಾಡಿದ್ದರು ನೋಡೋಣ. 
icon

(1 / 9)

ಎಮರ್ಜೆನ್ಸಿ ಚಿತ್ರದಲ್ಲಿ ಕಂಗನಾ ರಣಾವತ್‌, ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. 2 ವರ್ಷಗಳ ಹಿಂದೆ ಕಂಗನಾ, ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಪಾತ್ರವನ್ನು ನಿಭಾಯಿಸಿದ್ದರು. ಇದಕ್ಕೂ ಮುನ್ನ ಅನೇಕ ನಟಿಯರು ಇಂದಿರಾಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಯಾವೆಲ್ಲಾ ನಟಿಯರು ಇಂದಿರಾಗಾಂಧಿ ಪಾತ್ರ ಮಾಡಿದ್ದರು ನೋಡೋಣ. (Instagram)

2021 ರಲ್ಲಿ ತೆರೆ ಕಂಡ  ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಸಿನಿಮಾ ಬಿಡುಗಡೆ ಆಗಿತ್ತು. ಈ ಚಿತ್ರದಲ್ಲಿ ಅಜಯ್‌ ದೇವಗನ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ನವನಿ ಪರಿಹಾರ್ ನಟಿಸಿದ್ದಾರೆ.  ಸೋನಾಕ್ಷಿ ಸಿನ್ಹಾ, ಸಂಜಯ್ ದತ್, ಶರದ್ ಕೇಳ್ಕರ್ ಮತ್ತು ನೋರಾ ಫತೇಹಿ ಹಾಗೂ ಇನ್ನಿತರರು ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ. 
icon

(2 / 9)

2021 ರಲ್ಲಿ ತೆರೆ ಕಂಡ  ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಸಿನಿಮಾ ಬಿಡುಗಡೆ ಆಗಿತ್ತು. ಈ ಚಿತ್ರದಲ್ಲಿ ಅಜಯ್‌ ದೇವಗನ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ನವನಿ ಪರಿಹಾರ್ ನಟಿಸಿದ್ದಾರೆ.  ಸೋನಾಕ್ಷಿ ಸಿನ್ಹಾ, ಸಂಜಯ್ ದತ್, ಶರದ್ ಕೇಳ್ಕರ್ ಮತ್ತು ನೋರಾ ಫತೇಹಿ ಹಾಗೂ ಇನ್ನಿತರರು ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ. (Instagram)

ನಟಿ ಫ್ಲೋರಾ ಜೇಕಬ್‌, ತೆರೆಯ ಮೇಲೆ 2 ಬಾರಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಂಗನಾ ರಣಾವತ್, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪಾತ್ರದಲ್ಲಿ ನಟಿಸಿದ್ದ ತಲೈವಿ 2021 ರಲ್ಲಿ ಬಿಡುಗಡೆಯಾಯಿತು. ಫ್ಲೋರಾ ಜೇಕಬ್ ಈ ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರವನ್ನು ನಿರ್ವಹಿಸಿದ್ದಾರೆ.  2018 ರಲ್ಲಿ, ಅಜಯ್ ದೇವಗನ್ ಅವರ ರೈಡ್ ಚಿತ್ರದಲ್ಲಿ ಕೂಡಾ  ಫ್ಲೋರಾ ಇಂದಿರಾ ಗಾಂಧಿ ಪಾತ್ರವನ್ನು ನಿರ್ವಹಿಸಿದ್ದಾರೆ.
icon

(3 / 9)

ನಟಿ ಫ್ಲೋರಾ ಜೇಕಬ್‌, ತೆರೆಯ ಮೇಲೆ 2 ಬಾರಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಂಗನಾ ರಣಾವತ್, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪಾತ್ರದಲ್ಲಿ ನಟಿಸಿದ್ದ ತಲೈವಿ 2021 ರಲ್ಲಿ ಬಿಡುಗಡೆಯಾಯಿತು. ಫ್ಲೋರಾ ಜೇಕಬ್ ಈ ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರವನ್ನು ನಿರ್ವಹಿಸಿದ್ದಾರೆ.  2018 ರಲ್ಲಿ, ಅಜಯ್ ದೇವಗನ್ ಅವರ ರೈಡ್ ಚಿತ್ರದಲ್ಲಿ ಕೂಡಾ  ಫ್ಲೋರಾ ಇಂದಿರಾ ಗಾಂಧಿ ಪಾತ್ರವನ್ನು ನಿರ್ವಹಿಸಿದ್ದಾರೆ.(Instagram)

2019 ರಲ್ಲಿ ತೆರೆ ಕಂಡ ನವಾಜುದ್ದೀನ್ ಸಿದ್ದಿಕಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಠಾಕ್ರೆ ಚಿತ್ರದಲ್ಲಿ ಆವಂತಿಕಾ ಅಕೇರ್ಕರ್ ಇಂದಿರಾ ಗಾಂಧಿ ಪಾತ್ರವನ್ನು ನಿರ್ವಹಿಸಿದ್ದಾರೆ.
icon

(4 / 9)

2019 ರಲ್ಲಿ ತೆರೆ ಕಂಡ ನವಾಜುದ್ದೀನ್ ಸಿದ್ದಿಕಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಠಾಕ್ರೆ ಚಿತ್ರದಲ್ಲಿ ಆವಂತಿಕಾ ಅಕೇರ್ಕರ್ ಇಂದಿರಾ ಗಾಂಧಿ ಪಾತ್ರವನ್ನು ನಿರ್ವಹಿಸಿದ್ದಾರೆ.(Instagram)

2017 ರಲ್ಲಿ ಬಿಡುಗಡೆ ಆದ ಮಧುರ್ ಭಂಡಾರ್ಕರ್ ನಿರ್ದೇಶನದ ಸರ್ಕಾರ್ ಸಿನಿಮಾದಲ್ಲಿ ಸುಪ್ರಿಯಾ ವಿನೋದ್ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. 
icon

(5 / 9)

2017 ರಲ್ಲಿ ಬಿಡುಗಡೆ ಆದ ಮಧುರ್ ಭಂಡಾರ್ಕರ್ ನಿರ್ದೇಶನದ ಸರ್ಕಾರ್ ಸಿನಿಮಾದಲ್ಲಿ ಸುಪ್ರಿಯಾ ವಿನೋದ್ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. 

ಮಾಜಿ ಭುವನ ಸುಂದರಿ ಲಾರಾ ದತ್ತಾ 2021 ರಲ್ಲಿ ತೆರೆ ಕಂಡ ಬೆಲ್‌ ಬಾಟಮ್‌ ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದರು. ನಟನೆಗಾಗಿ ಲಾರಾಗೆ ಪ್ರಶಂಸೆ ವ್ಯಕ್ತವಾಗಿತ್ತು.  
icon

(6 / 9)

ಮಾಜಿ ಭುವನ ಸುಂದರಿ ಲಾರಾ ದತ್ತಾ 2021 ರಲ್ಲಿ ತೆರೆ ಕಂಡ ಬೆಲ್‌ ಬಾಟಮ್‌ ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದರು. ನಟನೆಗಾಗಿ ಲಾರಾಗೆ ಪ್ರಶಂಸೆ ವ್ಯಕ್ತವಾಗಿತ್ತು.  (Instagram)

 ದೀಪಾ ಮೆಹ್ತಾ ನಿರ್ದೇಶನದ ಮಿಡ್‌ ನೈಟ್‌ ಚಿಲ್ಡ್ರನ್ 2012ರಲ್ಲಿ ತೆರೆ ಕಂಡಿತ್ತು. ಈ ಚಿತ್ರದಲ್ಲಿ ಸರಿತಾ ಚೌಧರಿ ಇಂದಿರಾ ಗಾಂಧಿ ಆಗಿ ಕಾಣಿಸಿಕೊಂಡಿದ್ದರು.  ಚಿತ್ರದಲ್ಲಿ ಶಬಾನಾ ಅಜ್ಮಿ, ಶ್ರಿಯಾ ಸರನ್ ಮತ್ತು ಅನುಪಮ್ ಖೇರ್ ಅವರಂತಹ ಕಲಾವಿದರು ಕೂಡಾ ನಟಿಸಿದ್ದಾರೆ.
icon

(7 / 9)

 ದೀಪಾ ಮೆಹ್ತಾ ನಿರ್ದೇಶನದ ಮಿಡ್‌ ನೈಟ್‌ ಚಿಲ್ಡ್ರನ್ 2012ರಲ್ಲಿ ತೆರೆ ಕಂಡಿತ್ತು. ಈ ಚಿತ್ರದಲ್ಲಿ ಸರಿತಾ ಚೌಧರಿ ಇಂದಿರಾ ಗಾಂಧಿ ಆಗಿ ಕಾಣಿಸಿಕೊಂಡಿದ್ದರು.  ಚಿತ್ರದಲ್ಲಿ ಶಬಾನಾ ಅಜ್ಮಿ, ಶ್ರಿಯಾ ಸರನ್ ಮತ್ತು ಅನುಪಮ್ ಖೇರ್ ಅವರಂತಹ ಕಲಾವಿದರು ಕೂಡಾ ನಟಿಸಿದ್ದಾರೆ.(Instagram)

ನಟಿ ಕಿಶೋರಿ ರಹಾನೆ, 209 ರಲ್ಲಿ ತೆರೆ ಕಂಡ ಪಿಎಂ ನರೇಂದ್ರ ಮೋದಿ ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ವಿವೇಕ್ ಒಬೆರಾಯ್ ಪ್ರಮುಖ ಪಾತ್ರದಲ್ಲಿದ್ದಾರೆ. 
icon

(8 / 9)

ನಟಿ ಕಿಶೋರಿ ರಹಾನೆ, 209 ರಲ್ಲಿ ತೆರೆ ಕಂಡ ಪಿಎಂ ನರೇಂದ್ರ ಮೋದಿ ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ವಿವೇಕ್ ಒಬೆರಾಯ್ ಪ್ರಮುಖ ಪಾತ್ರದಲ್ಲಿದ್ದಾರೆ. 

Kangana Ranaut, Lara Dutta 
icon

(9 / 9)

Kangana Ranaut, Lara Dutta (PC: Twitter)


ಇತರ ಗ್ಯಾಲರಿಗಳು