ಜಸ್ಪ್ರೀತ್ ಬುಮ್ರಾ ಅಬ್ಬರಕ್ಕೆ ಆಸ್ಟ್ರೇಲಿಯಾ ಚಿತ್; ಪರ್ತ್ ಟೆಸ್ಟ್‌ನ ಮೊದಲ ದಿನವೇ 17 ವಿಕೆಟ್ ಉಡೀಸ್
- Border-Gavaskar Trophy: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 150 ರನ್ಗಳಿಗೆ ಆಲೌಟ್ ಆಗಿದೆ. ಆಸ್ಟ್ರೇಲಿಯಾ ಮೊದಲ ದಿನದ ಅಂತ್ಯಕ್ಕೆ 67 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿದೆ. ಇದರ ಪರಿಣಾಮ ಮೊದಲ ದಿನ ಪರ್ತ್‌ನಲ್ಲಿ ಒಟ್ಟು 17 ವಿಕೆಟ್ಗಳು ಬಿದ್ದವು.
- Border-Gavaskar Trophy: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 150 ರನ್ಗಳಿಗೆ ಆಲೌಟ್ ಆಗಿದೆ. ಆಸ್ಟ್ರೇಲಿಯಾ ಮೊದಲ ದಿನದ ಅಂತ್ಯಕ್ಕೆ 67 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿದೆ. ಇದರ ಪರಿಣಾಮ ಮೊದಲ ದಿನ ಪರ್ತ್‌ನಲ್ಲಿ ಒಟ್ಟು 17 ವಿಕೆಟ್ಗಳು ಬಿದ್ದವು.
(1 / 8)
India vs Australia Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಟೆಸ್ಟ್ ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಅದ್ಧೂರಿ ಆರಂಭ ಪಡೆದಿದೆ. ಪರ್ತ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಪ್ರಥಮ ದಿನವೇ 17 ವಿಕೆಟ್ ಪತನಗೊಂಡಿರುವುದು ಗಮನಾರ್ಹ.(ICC X)
(2 / 8)
India vs Australia Test: ಪರ್ತ್ ಟೆಸ್ಟ್‌ನಲ್ಲಿ ಸ್ಟ್ಯಾಂಡ್-ಇನ್ ನಾಯಕರಾಗಿದ್ದ ಜಸ್ಪ್ರೀತ್ ಬುಮ್ರಾ ಟಾಸ್ ಗೆದ್ದ ನಂತರ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.(AFP)
(3 / 8)
India vs Australia Test: ಆಸ್ಟ್ರೇಲಿಯಾದ ವೇಗಿಗಳ ಎದುರು ಟೀಂ ಇಂಡಿಯಾ ಮುಗ್ಗರಿಸಿತು. ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್ ಡಕ್ ಆದರೆ, ಕೆಎಲ್ ರಾಹುಲ್ 26, ವಿರಾಟ್ ಕೊಹ್ಲಿ 5 ರನ್ ಗಳಿಸಿ ಔಟಾದರು.(AFP)
(4 / 8)
India vs Australia Test: ಆದರೆ ರಿಷಭ್ ಪಂತ್ 37 ಮತ್ತು ನಿತೀಶ್ ಕುಮಾರ್ 41 ರನ್ ಗಳಿಸಿ 100ರ ಒಳಗೆ ಕುಸಿಯದಂತೆ ನೋಡಿಕೊಂಡರು. ಪರಿಣಾಮ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 150 ರನ್ ಗಳಿಸಿ ಆಲೌಟ್ ಆಯಿತು.(AFP)
(5 / 8)
India vs Australia Test: ಆಸ್ಟ್ರೇಲಿಯದ ವೇಗಿ ಜೋಶ್ ಹೇಜಲ್‌ವುಡ್ 4, ಸ್ಟಾರ್ಕ್, ಕಮಿನ್ಸ್ ಮತ್ತು ಮಾರ್ಷ್ ತಲಾ ಎರಡು ವಿಕೆಟ್ ಪಡೆದರು.(AFP)
(6 / 8)
India vs Australia Test: ಬೃಹತ್ ಮೊತ್ತದ ಲೆಕ್ಕಾಚಾರ ಹೊಂದಿದ್ದ ಆಸೀಸ್ಗೆ ಜಸ್ಪ್ರೀತ್ ಬುಮ್ರಾ ಹೀನಾಯವಾಗಿ ಕಾಡಿದರು. ಅಗ್ರ ಮತ್ತು ಮಧ್ಯಮ ಕ್ರಮಾಂಕದ ಕುಸಿತಕ್ಕೆ ಕಾರಣರಾದರು. ಉಸ್ಮಾನ್ ಖವಾಜಾ (8), ಮೆಕ್‌ಸ್ವೀನಿ (10), ಲಬುಶಾನೆ (20), ಸ್ಟೀವ್ ಸ್ಮಿತ್ (0) ವಿಫಲರಾದರು.(AP)
(7 / 8)
India vs Australia Test: ಮೊದಲ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 7 ವಿಕೆಟ್‌ಗೆ 67 ರನ್ ಗಳಿಸಿದೆ. ಟೀಂ ಇಂಡಿಯಾ ಇನ್ನೂ 83 ರನ್ ಮುನ್ನಡೆಯಲ್ಲಿದೆ.(AFP)
ಇತರ ಗ್ಯಾಲರಿಗಳು