Brahmanandam Painting: ನಗಿಸೋಕೆ ಮಾತ್ರವಲ್ಲ ಅದ್ಭುತ ಚಿತ್ರಕಲೆ ಕೂಡಾ ಗೊತ್ತು...ಬ್ರಹ್ಮಾನಂದಂ ಬರೆದಿರುವ ಚಿತ್ರಗಳನ್ನೊಮ್ಮೆ ನೋಡಿ
- ಇವರ ಹೆಸರು ಕೇಳಿದರೆ ಮುಖದಲ್ಲಿ ಒಂದು ಕಿರುನಗೆ ಮೂಡದೆ ಇರದು. ಹಾಗೇ ಇವರ ಕಾಮಿಡಿ ನೋಡಿದರೆ ಹೊಟ್ಟೆ ಹುಣ್ಣಾಗುವಂತೆ ನಗುವುದು ಗ್ಯಾರಂಟಿ. ತೆಲುಗು ನಟ ಬ್ರಹ್ಮಾನಂದಂ, ಅಷ್ಟರ ಮಟ್ಟಿಗೆ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ.
- ಇವರ ಹೆಸರು ಕೇಳಿದರೆ ಮುಖದಲ್ಲಿ ಒಂದು ಕಿರುನಗೆ ಮೂಡದೆ ಇರದು. ಹಾಗೇ ಇವರ ಕಾಮಿಡಿ ನೋಡಿದರೆ ಹೊಟ್ಟೆ ಹುಣ್ಣಾಗುವಂತೆ ನಗುವುದು ಗ್ಯಾರಂಟಿ. ತೆಲುಗು ನಟ ಬ್ರಹ್ಮಾನಂದಂ, ಅಷ್ಟರ ಮಟ್ಟಿಗೆ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ.
(1 / 12)
ಆಂಧ್ರ ಪ್ರದೇಶದ ಗುಂಟೂರಿನವರಾದ ಬ್ರಹ್ಮಾನಂದಂ 1987 ರಲ್ಲಿ 'ಆಹಾ ನಾ ಪೆಳ್ಳಂಟ'ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಬ್ರಹ್ಮಾನಂದಂ ತಮ್ಮ ವೃತ್ತಿಜೀವನದಲ್ಲಿ ಸುಮಾರು 900ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಯಾವ ತೆಲುಗು ಸಿನಿಮಾ ಇರಲಿ, ಅಲ್ಲಿ ಬ್ರಹ್ಮಾನಂದಂ ಇರಲೇಬೇಕು. ಇಲ್ಲದಿದ್ದರೆ ಅಲ್ಲಿ ಹಾಸ್ಯದ ಕೊರತೆ ಇದೆ ಎಂದೇ ಅರ್ಥ. (PC: Goutham)
(2 / 12)
ತಮ್ಮ ಕಾಮಿಡಿ ಪಂಚ್ ಮೂಲಕವೇ ನೋಡುಗರನ್ನು ನಕ್ಕು ನಲಿಸುವ ಈ ಅದ್ಬುತ ನಟನಿಗೆ ನಗಿಸಲು ಮಾತ್ರವಲ್ಲ, ಅಷ್ಟೇ ಅದ್ಭುತವಾಗಿ ಚಿತ್ರಕಲೆ ಬರೆಯೋಕೆ ಕೂಡಾ ಗೊತ್ತು. ತಾವು ಬರೆದ ಚಿತ್ರವನ್ನು ಇವರು ತಮ್ಮ ಆತ್ಮೀಯರಿಗೆ ಗಿಫ್ಟ್ ಆಗಿ ನೀಡಿದ್ದಾರೆ.
(3 / 12)
2 ವರ್ಷಗಳ ಹಿಂದೆ ಬ್ರಹ್ಮಾನಂದಂ ತಾವು ಬರೆದ ಶ್ರೀ ವೆಂಕಟೇಶ್ವರ ಪೆನ್ಸಿಲ್ ಸ್ಕೆಚನ್ನು ನಟ ಅಲ್ಲು ಅರ್ಜುನ್ ಅವರಿಗೆ ಗಿಫ್ಟ್ ಆಗಿ ನೀಡಿದ್ದರು. ಈ ಸ್ಕೆಚ್‌ಗಾಗಿ ಬ್ರಹ್ಮಾನಂದಂ ಅವರು 45 ದಿನಗಳ ಸಮಯ ತೆಗೆದುಕೊಂಡಿದ್ದರು. ಅಲ್ಲು ಅರ್ಜುನ್ ಫೋಟೋ ಸಹಿತ, ಈ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
(6 / 12)
ಪ್ರಭಾಸ್ ಚಿಕ್ಕಪ್ಪ ಕೃಷ್ಣಂ ರಾಜು ಅವರಿಗೆ ತಾವು ಬರೆದಿರುವ ಸಾಯಿ ಬಾಬಾ ಸ್ಕೆಚ್ ಗಿಫ್ಟ್ ನೀಡುತ್ತಿರುವ ಹಾಸ್ಯ ನಟ
(8 / 12)
ಬ್ರಹ್ಮಾನಂದಂ ಅವರಿಗೆ ಪೆನ್ಸಿಲ್ ಸ್ಕೆಚ್, ಪೇಂಟಿಂಗ್ ಮಾತ್ರವಲ್ಲದೆ ಮಣ್ಣಿನ ಮೂರ್ತಿಗಳನ್ನು ತಯಾರಿಸುವುದು ಕೂಡಾ ಗೊತ್ತು.
(10 / 12)
ಬ್ರಹ್ಮಾನಂದಂ ಸುಂದರ ಫ್ಯಾಮಿಲಿ ಫೋಟೋ, ಮೊದಲ ಪುತ್ರ ಗೌತಮ್, ಪತ್ನಿ ಲಕ್ಷ್ಮಿ ಹಾಗೂ ಎರಡನೇ ಪುತ್ರ ಸಿದ್ದಾರ್ಥ್.
(11 / 12)
ಬ್ರಹ್ಮಾನಂದಂ ಹಿರಿಯ ಪುತ್ರ ಗೌತಮ್ ಕೂಡಾ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 2004ರಲ್ಲಿ 'ಪಲ್ಲಕಿಲೋ ಪೆಳ್ಳಿ ಕೂತುರು' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ಇದರೊಂದಿಗೆ 'ಬಸಂತಿ' ಹಾಗೂ 'ಮನು' ಚಿತ್ರದಲ್ಲಿ ನಟಿಸಿದ್ದಾರೆ.
ಇತರ ಗ್ಯಾಲರಿಗಳು