ತೀವ್ರ ಕುತೂಹಲ ಕೆರಳಿಸಿದ್ದ ಚನ್ನಪಟ್ಟಣದಲ್ಲಿ ಹೇಗಿತ್ತು ಮತ ಪ್ರಚಾರ: ಇಂದಿನ ಮತ ಎಣಿಕೆಯಲ್ಲಿ ಗೆಲ್ಲೋದು ಸೈನಿಕನೋ, ಸೀತಾರಾಮನೋ
- ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ಅಖಾಡ ಈ ಬಾರಿ ಜೋರಾಗಿಯೇ ಇತ್ತು. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್‌ಡಿಕುಮಾರಸ್ವಾಮಿ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪ್ರತಿಷ್ಠೆಯ ಕಣವೇ ಆಗಿತ್ತು. ಈ ಬಾರಿ ಚುನಾವಣೆ ಚಿತ್ರಣ ಹೀಗಿತ್ತು.
- ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ಅಖಾಡ ಈ ಬಾರಿ ಜೋರಾಗಿಯೇ ಇತ್ತು. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್‌ಡಿಕುಮಾರಸ್ವಾಮಿ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪ್ರತಿಷ್ಠೆಯ ಕಣವೇ ಆಗಿತ್ತು. ಈ ಬಾರಿ ಚುನಾವಣೆ ಚಿತ್ರಣ ಹೀಗಿತ್ತು.
(1 / 7)
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣೆಯು ಒಂದು ರೀತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಮತ್ತು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ಪ್ರತಿಷ್ಠೆಯ ಕಣವೇ ಆಗಿತ್ತು.
(2 / 7)
ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಇಳಿ ವಯಸ್ಸಿನಲ್ಲೂ ಚನ್ನಪಟ್ಟಣ ಕ್ಷೇತ್ರಾದ್ಯಂತ ಸಂಚರಿಸಿ ರಾಜಕೀಯ ಸಂಚಲನ ಮೂಡಿಸಿದರು.
(3 / 7)
ನಿಖಿಲ್ ಕುಮಾರಸ್ವಾಮಿ ಅವರು ಸತತ ಎರಡು ಸೋಲಿನ ಬಳಿಕ ಮೂರನೇ ಚುನಾವಣೆಯಲ್ಲಿ ಆತ್ಮವಿಶ್ವಾಸದಿಂದಲೇ ಚನ್ನಪಟ್ಟಣ ಕ್ಷೇತ್ರದಲ್ಲಿ ಮತ ಯಾಚಿಸಿದರು.
(4 / 7)
ಕೇಂದ್ರ ಸಚಿವರೂ ಆಗಿರುವ ಮಾಜಿ ಸಿಎಂ ಎಚ್‌ಡಿಕುಮಾರಸ್ವಾಮಿ ಅವರು ಮಗನನ್ನು ರಾಜಕೀಯವಾಗಿ ದಡ ಸೇರಿಸಲೇಬೇಕು ಎನ್ನುವಂತೆ ಚನ್ನಪಟ್ಟಣದಲ್ಲೇ ಬೀಡುಬಿಟ್ಟು ಹದಿನೈದು ದಿನ ಪ್ರಚಾರ ನಡೆಸಿದರು.
(5 / 7)
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೂ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡು ಅವರನ್ನು ಗೆಲ್ಲಿಸಬೇಕು ಎಂದು ಮೂರು ಬಾರಿ ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡರು.
(6 / 7)
ಪಕ್ಷಕ್ಕೆ ಕರೆ ತರುವುದರಿಂದ ಹಿಡಿದು ಯೋಗೇಶ್ವರ್ ಅವರು ಅಭ್ಯರ್ಥಿಯಾಗುವವರೆಗೂ ಗಟ್ಟಿಯಾಗಿ ನಿಂತು ನಂತರ ಚುನಾವಣೆಯಲ್ಲೂ ಮೂರ್ನಾಲ್ಕು ಬಾರಿ ಚನ್ನಪಟ್ಟಣ ಕ್ಷೇತ್ರದಲ್ಲಿ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಚಾರ ಕೈಗೊಂಡರು,
ಇತರ ಗ್ಯಾಲರಿಗಳು